ಹಾವಿನ ಆಹಾರ ಕಿತ್ತುಕೊಂಡ ವ್ಯಕ್ತಿ.. ನೆಟ್ಟಿಗರು ಕೆಂಡಾಮಂಡಲ! ಯಾಕೆ?
ಮೈಸೂರು: ಮಾನವ ತನ್ನ ಉಳಿವಿಗಾಗಿ ಇತರೆ ಪ್ರಾಣಿ ಅಥವ ಸಸ್ಯಗಳನ್ನು ತಿಂದು ಜೀವಿಸುತ್ತಾನೆ. ಅದೇ ರೀತಿ ಪ್ರಾಣಿಗಳೂ ಅಷ್ಟೆ ಒಂದು ಪ್ರಾಣಿ ಇನ್ನೊಂದು ಪ್ರಾಣಿಯನ್ನು ತಿಂದು ಜೀವಿಸುತ್ತೆ. ಆದ್ರೆ ಇಲ್ಲೊಂದು ವಿಡಿಯೋ ವೈರಲ್ಲಾಗಿದ್ದು ಹೆಬ್ಬಾವು ಜಿಂಕೆ ಬೇಟೆಯಾಡಿರುತ್ತೆ. ವ್ಯಕ್ತಿಯೊಬ್ಬ ಬಂದು ಹೆಬ್ಬಾವಿಗೆ ಡಿಸ್ಟರ್ಬ್ ಮಾಡಿ, ಬೇಟೆ ಬಿಡಿಸುತ್ತಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದ್ದು ಆ ವ್ಯಕ್ತಿಯ ಕಾರ್ಯಕ್ಕೆ ಬಹಳಷ್ಟು ಟೀಕೆಗಳು ವ್ಯಕ್ತವಾಗಿವೆ. ಇದು ಸಾಮಾನ್ಯವಾಗಿ ಕಾಡಿನಲ್ಲಿ ನಡೆಯುವಂತಹ ಸಹಜವಾದ ಪ್ರಕ್ರಿಯೆ. ಹುಲ್ಲನ್ನು ಸಸ್ಯ ಹಾರಿ […]
ಮೈಸೂರು: ಮಾನವ ತನ್ನ ಉಳಿವಿಗಾಗಿ ಇತರೆ ಪ್ರಾಣಿ ಅಥವ ಸಸ್ಯಗಳನ್ನು ತಿಂದು ಜೀವಿಸುತ್ತಾನೆ. ಅದೇ ರೀತಿ ಪ್ರಾಣಿಗಳೂ ಅಷ್ಟೆ ಒಂದು ಪ್ರಾಣಿ ಇನ್ನೊಂದು ಪ್ರಾಣಿಯನ್ನು ತಿಂದು ಜೀವಿಸುತ್ತೆ. ಆದ್ರೆ ಇಲ್ಲೊಂದು ವಿಡಿಯೋ ವೈರಲ್ಲಾಗಿದ್ದು ಹೆಬ್ಬಾವು ಜಿಂಕೆ ಬೇಟೆಯಾಡಿರುತ್ತೆ. ವ್ಯಕ್ತಿಯೊಬ್ಬ ಬಂದು ಹೆಬ್ಬಾವಿಗೆ ಡಿಸ್ಟರ್ಬ್ ಮಾಡಿ, ಬೇಟೆ ಬಿಡಿಸುತ್ತಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದ್ದು ಆ ವ್ಯಕ್ತಿಯ ಕಾರ್ಯಕ್ಕೆ ಬಹಳಷ್ಟು ಟೀಕೆಗಳು ವ್ಯಕ್ತವಾಗಿವೆ.
ಇದು ಸಾಮಾನ್ಯವಾಗಿ ಕಾಡಿನಲ್ಲಿ ನಡೆಯುವಂತಹ ಸಹಜವಾದ ಪ್ರಕ್ರಿಯೆ. ಹುಲ್ಲನ್ನು ಸಸ್ಯ ಹಾರಿ ಪ್ರಾಣಿ ತಿನ್ನುತ್ತೆ. ಮಾಂಸಾಹಾರಿ ಪ್ರಾಣಿ ಸಸ್ಯಹಾರಿ ಪ್ರಾಣಿಯನ್ನು ತಿನ್ನುತ್ತೆ. ಇದಕ್ಕೆ ಯಾರೂ ಕೂಡ ಜಿಂಕೆಯನ್ನು ಹುಲಿ ತಿಂದಿದೆ ಎಂದು ಮರುಕ ಪಡಬೇಕಾಗಿಲ್ಲ. ಆಯಾ ಪ್ರಾಣಿಗಳು ತನ್ನ ಆಹಾರ ಸಂಪಾದನೆ ಮಾಡಿಕೊಂಡು ಜೀವನ ನಡೆಸುತ್ತೆ ಎಂದು ನೆಟ್ಟಿಗರ ಆಕ್ರೋಶ ಹೊರಹಾಕಿದ್ದಾರೆ. ಅದೇ ರೀತಿ ವೈರಲ್ಲಾದ ಈ ವಿಡಿಯೋದಲ್ಲಿಯೂ ಕೂಡ ಇದೇ ರೀತಿ ಸಾಕಷ್ಟು ಸಮಯದಿಂದ ಹೊಂಚು ಹಾಕಿ ಜಿಂಕೆಯನ್ನು ಹೆಬ್ಬಾವು ಬೇಟೆಯಾಡಿ ತನ್ನ ಆಹಾರ ಸಂಪಾದನೆ ಮಾಡಿರುತ್ತೆ. ಆದ್ರೆ ವ್ಯಕ್ತಿ ಬಂದು ಹೆಬ್ಬಾವನ್ನು ಡಿಸ್ಟರ್ಬ್ ಮಾಡುತ್ತಾನೆ. ಈ ವೇಳೆ ಜಿಂಕೆ ಹೆಬ್ಬಾವಿನಿಂದ ಬಿಡಿಸಿಕೊಂಡಿ ಓಡಿಹೋಗುತ್ತೆ. ಈ ಮೂಲಕ ಆ ವ್ಯಕ್ತಿ, ಹೆಬ್ಬಾವಿನ ಆಹಾರವನ್ನೇ ಕಿತ್ತುಕೊಂಡಂತಾಗಿದೆ ಎಂದು ವ್ಯಕ್ತಿಯ ಈ ಕಾರ್ಯಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ.
ಆಹಾರ ಸರಪಳಿಯ ಅರಿವು..!? ಇನ್ನು ಎಷ್ಟೋ ಜನ ಈ ವ್ಯಕಿಯ ಕಾರ್ಯಕ್ಕೆ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ. ಆದ್ರೆ ಇದು ಪ್ರಾಣಿಗಳ ಸಹಜ ಪ್ರಕ್ರಿಯೆ ಎಂಬುದು ತಿಳಿವಳಿಕೆ ಇರುವುದಿಲ್ಲ. ಜಿಂಕೆಯನ್ನು ಹುಲಿ ಬೇಟೆಯಾಡಿದ್ರೆ ಸಾಧು ಪ್ರಾಣಿಯನ್ನು ಹುಲಿ ಕೊಂದಿತು ಎಂಬ ರೀತಿ ಚಿಂತನೆ ಮಾಡುತ್ತಾರೆ. ಆದ್ರೆ ಆ ಸ್ಥಳದಲ್ಲಿ ಹುಲಿ ಇಲ್ಲದೆ ಕೇವಲ ಜಿಂಕೆಗಳಿದ್ದರೆ ಪರಿಸರ ಯಾವ ರೀತಿ ಅಸಮತೋಲನವಾಗುತ್ತೆ ಎಂಬುದರ ಬಗ್ಗೆ ಅರಿವಿರಬೇಕಾಗಿದೆ. ಇದರಿಂದ ವನ್ಯಪ್ರಾಣಿಗಳ ಸಹಜ ಕ್ರಿಯೆಗೆ ಯಾರೂ ಕೂಡ ಮರುಕಪಡಬಾರದು. ಜೊತೆಗೆ ಈ ರೀತಿ ಕಾಪಾಡುವುದು ಸಹ ಕಾನೂನು ರೀತಿಯ ಅಪರಾಧವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ವಿಶೇಷ ಬರಹ: ದಿಲೀಪ್ ಚೌಡಹಳ್ಳಿ)
Published On - 2:48 pm, Wed, 3 June 20