ಭೀಮ ನಿಟ್ಟುಪವಾಸ ಮಾಡಿದ ದಿನ ಇಂದು! ಇದರ ಮಹತ್ವ ಏನು ಗೊತ್ತಾ?
ಮಹಾಭಾರತದಲ್ಲಿ ಅತ್ಯಂತ ಪ್ರಮುಖ ಪಾತ್ರಧಾರಿ ಭೀಮ ಹೊಟ್ಟೆಬಿರಿಯೇ ಊಟ ಮಾಡುವುದಕ್ಕೆ ಫೇಮಸ್ ಅಲ್ವಾ!? ಅಂತಹ ಭೀಮನೇ ಒಂದು ದಿನ ನಿಟ್ಟುಪವಾಸ ಮಾಡಿದ! ಅಂದ್ರೆ ಸಂಪೂರ್ಣವಾಗಿ ಉಪವಾಸ ಮಾಡುವುದು ಎಂದರ್ಥ. ಇನ್ನೂ ಹೇಳಬೇಕೆಂದ್ರೆ ಒಂದು ತೊಟ್ಟು ನೀರು ಸಹ ಸೇವಿಸದೆ 24 ಗಂಟೆಯೂ ಖಾಲಿ ಉದರದಲ್ಲಿ ಇರುವುದು ಎಂದರ್ಥ. ಅದು ಯಾವತ್ತು? ಮತ್ತು ಆ ದಿನದ ಮಹತ್ವ ಏನು ಗೊತ್ತಾ? ಭೀಮ ಏಕಾದಶಿ ಅಥವಾ ನಿರ್ಜಲ ಏಕಾದಶಿ! ಇದಕ್ಕೆ ನಿರ್ಜಲ ಏಕಾದಶಿ ಅಥವಾ ಭೀಮ ಏಕಾದಶಿ ಎಂಬ ಹೆಸರೂ […]
ಮಹಾಭಾರತದಲ್ಲಿ ಅತ್ಯಂತ ಪ್ರಮುಖ ಪಾತ್ರಧಾರಿ ಭೀಮ ಹೊಟ್ಟೆಬಿರಿಯೇ ಊಟ ಮಾಡುವುದಕ್ಕೆ ಫೇಮಸ್ ಅಲ್ವಾ!? ಅಂತಹ ಭೀಮನೇ ಒಂದು ದಿನ ನಿಟ್ಟುಪವಾಸ ಮಾಡಿದ! ಅಂದ್ರೆ ಸಂಪೂರ್ಣವಾಗಿ ಉಪವಾಸ ಮಾಡುವುದು ಎಂದರ್ಥ. ಇನ್ನೂ ಹೇಳಬೇಕೆಂದ್ರೆ ಒಂದು ತೊಟ್ಟು ನೀರು ಸಹ ಸೇವಿಸದೆ 24 ಗಂಟೆಯೂ ಖಾಲಿ ಉದರದಲ್ಲಿ ಇರುವುದು ಎಂದರ್ಥ. ಅದು ಯಾವತ್ತು? ಮತ್ತು ಆ ದಿನದ ಮಹತ್ವ ಏನು ಗೊತ್ತಾ?
ಭೀಮ ಏಕಾದಶಿ ಅಥವಾ ನಿರ್ಜಲ ಏಕಾದಶಿ! ಇದಕ್ಕೆ ನಿರ್ಜಲ ಏಕಾದಶಿ ಅಥವಾ ಭೀಮ ಏಕಾದಶಿ ಎಂಬ ಹೆಸರೂ ಇದೆ. ಇದು ಜ್ಯೇಷ್ಠ ಮಾಸದ 11ನೆಯ ದಿನ ಬರುತ್ತದೆ. ಇದಕ್ಕೆ ಶುಕ್ಲ ಏಕಾದಶಿ ಎಂದು ಕರೆಯುತ್ತಾರೆ. ಅಂದ್ರೆ ಈ ಬಾರಿ ಜೂನ್ 2 ರಂದು ಅಂದ್ರೆ ಇವತ್ತು ಮಂಗಳವಾರ ಬಂದಿದೆ. ಹಾಗಾಗಿ ಸಂಪ್ರದಾಯ ಆಚರಿಸುವವರು ಇಂದು ಒಂದು ತೊಟ್ಟು ನೀರು ಸಹ ಕುಡಿಯದೆ ಇಡೀ ದಿನ ವಿಷ್ಣುವಿನ ಉಪಾಸನೆ ಮಾಡುತ್ತಾ, ಉಪವಾಸ ಮಾಡುತ್ತಾರೆ. ಹೀಗೆ ಮಾಡುವುದರಿಂದ ಈ ವರ್ಷದುದ್ದಕ್ಕೂ ಆಚರಿಸುವ ಉಪವಾಸಗಳ ಅಷ್ಟೂ ಒಳಿತು ಮತ್ತು ಪ್ರಯೋಜನಗಳು ಈ ಒಂದು ದಿನದಿಂದಲೇ ಸಂಪಾದಿಸಬಹುದು ಎಂಬ ನಂಬಿಕೆಯೂ ಇದೆ.
Published On - 5:04 pm, Tue, 2 June 20