Sign In

By signing in or creating an account, you agree with Associated Broadcasting Company's Terms & Conditions and Privacy Policy.

Woman Scientist: ನಿಮ್ಮ ಟೈಮ್​ಲೈನ್; ‘ನಾನು ಎನ್ನುವ ಈ ಚೈತನ್ಯಪಯಣದೊಳಗೆ’ ಮೂಷಕ ತಜ್ಞೆ ಡಾ. ಶಕುಂತಲಾ ಶ್ರೀಧರ

Dr. Shakuntala Shridhara : ಎಪ್ಪತ್ತರ ದಶಕದ ಹಸಿರು ಕ್ರಾಂತಿಯ ನಂತರ ನನ್ನ ಸಂಶೋಧನೆಯ ಫಲಿತಾಂಶಗಳನ್ನು ರೈತರು ಅನುಸರಿಸುವುದನ್ನು ನೋಡಿ ನನಗೆ ಅಪ್ರತಿಮ ಸಂತೋಷವಾಯಿತು. ನನ್ನ ಮೂರು ವರ್ಷದ ಮಗಳೊಂದಿಗೆ ರಾಜ್ಯದೆಲ್ಲೆಡೆ ಸಂಚರಿಸಿದಾಗ ನನ್ನ ದೃಷ್ಟಿಕೋನವೇ ಬದಲಾಯಿತು.

Woman Scientist: ನಿಮ್ಮ ಟೈಮ್​ಲೈನ್; ‘ನಾನು ಎನ್ನುವ ಈ ಚೈತನ್ಯಪಯಣದೊಳಗೆ’ ಮೂಷಕ ತಜ್ಞೆ ಡಾ. ಶಕುಂತಲಾ ಶ್ರೀಧರ
ಮೂಷಕ ತಜ್ಞೆ ಡಾ. ಶಕುಂತಲಾ ಶ್ರೀಧರ
Follow us
ಶ್ರೀದೇವಿ ಕಳಸದ
|

Updated on:Apr 15, 2022 | 9:36 AM

ನಿಮ್ಮ ಟೈಮ್​ಲೈನ್ | Nimma Timeline :ನನ್ನ ತಂದೆ ಎಪ್ಪತ್ತೆರಡು ವರ್ಷ ಬದುಕಿದ್ದರು, ಅದೂ ಕ್ಯಾನ್ಸರ್​ನಂಥ ಮಾರಕ ರೋಗವನ್ನು ಗೆದ್ದು. ಆದರೆ ತಾಯಿ ನತದೃಷ್ಟೆ. ಜೀವನ ಪೂರಾ ಮಕ್ಕಳಿಗೋಸ್ಕರ ಜೀವ ತೇದು, ಡಯಾಬಿಟೀಸ್, ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಿ ಅರವತ್ತೆರಡು ವರ್ಷಕ್ಕೆ ಕೈಚೆಲ್ಲಿ ದೇವರ ಪಾದ ಸೇರಿದಳು. ಅವರಿಬ್ಬರ ಹಿರಿಯ ಮಗಳಾದ ನಾನು ಮೊನ್ನೆ ಏಪ್ರಿಲ್ 10 ಕ್ಕೆ 75 ವಸಂತಗಳನ್ನು ಕಂಡೆ. ಮುಕ್ಕಾಲು ಶತಮಾನ ಜೀವಿಸುವುದು ಅದೂ ಊಹಿಸಲಾಗದ ಏರುಪೇರುಗಳನ್ನು ಬಾಳಲ್ಲಿ ಕಂಡು, ಮುಳುಗದೆ ದೋಣಿಯಲ್ಲಿ ತೇಲುವ ಹಂತಕ್ಕೆ ಬಂದು ನಿಂತಾಗ ನನ್ನ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಾಸೆ. ಇದರಲ್ಲಿ ಯಾವುದೇ ಹಮ್ಮಿಲ್ಲ. ಜೀವನ ಹೀಗೂ ಇರಬಲ್ಲದೆ ಎಂದು ನನಗೂ ಅನ್ನಿಸುವ ಮಟ್ಟಿಗೆ ನನ್ನ ಬಾಳಪ್ರಯಾಣ ಸಾಗುತ್ತಾ ಇದೆ. ಅಷ್ಟೆಲ್ಲಾ ಕಾರ್ಪಣ್ಯಗಳ ನಡುವೆಯೂ 75 ವರ್ಷ ಬದುಕಿದ್ದು ಒಂದು ವಿಸ್ಮಯವೇ ಸರಿ.’ ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಮೂಷಕ ತಜ್ಞೆಯಾಗಿದ್ದ ಡಾ. ಶಕುಂತಲಾ ಶ್ರೀಧರ್ (Shakuntala Shridhara), ಎಪ್ಪತ್ತೈದರ ಹೊಸ್ತಿಲಲ್ಲಿ ನಿಂತಾಗ ಪಡದದ್ದೇನು ಕಳೆದದ್ದೇನು, ಗೆದ್ದಿದೆಷ್ಟು, ಸೋತಿದ್ದೆಷ್ಟು, ಅತ್ತಿದೆಷ್ಟು, ಸಂಭ್ರಮಿಸಿದೆಷ್ಟು ಎಂಬುದನ್ನಿಲ್ಲಿ ಹಂಚಿಕೊಂಡಿದ್ದಾರೆ.

(ಭಾಗ 1) 

ನನ್ನ 74 ನೇ ವರ್ಷದಲ್ಲಿ ನಾನು ಬೈಪಾಸ್ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದೆ, ಅದಾದ ಎರಡೇ ತಿಂಗಳಿಗೆ ನ್ಯುಮೋನಿಯಾ ಅಡರಿಕೊಂಡಿತು. ಇನ್ನೇನು ಶರೀರ ಸ್ವಲ್ಪ ಚೇತರಿಸಿಕೊಳ್ಳುತ್ತಿದೆ ಅಂದು ಕೊಳ್ಳುವಷ್ಟರಲ್ಲಿ ಕೋವಿಡ್​ನ ಒಮಿಕ್ರಾನ್ ರೂಪಾoತರಕ್ಕೆ ನನ್ನ ಬಲಹೀನ ಶ್ವಾಸಕೋಶಗಳು ಬಲಿಯಾದವು. ಇದೀಗ 6 ವಾರಗಳ ಹಿಂದೆ 7 ದಿನಗಳ ಆಸ್ಪತ್ರೆಯ ವಾಸದಿಂದ ಬಿಡುಗಡೆ ಹೊಂದಿ ಮನೆಗೆ ಬಂದಿದ್ದೇನೆ. ಇದು 50 ವರ್ಷಗಳ ಮಧುಮೇಹ ಮತ್ತು ರಕ್ತದೊತ್ತಡದ ಹೊರತಾಗಿಯೂ 74 ವರ್ಷದಲ್ಲೂ ದೃಢವಾಗಿ ಆರೋಗ್ಯವಾಗಿದ್ದ ನನ್ನ ಅಹಂಕಾರದ ಭಾವನೆಯನ್ನು ಸ್ವಲ್ಪ ಮಟ್ಟಿಗೆ ತಣ್ಣಗೆ ಮಾಡಿದವು. ಆದರೂ ಈ ಎರಡು ಕಾಯಿಲೆಗಳು ಎಂದಿಗೂ ನನ್ನ ಮೇಲೆ ಪರಿಣಾಮ ಬೀರಲಿಲ್ಲ. ನನ್ನ ಸಂಶೋಧನೆಯಲ್ಲಿ ಉತ್ಕೃಷ್ಟ ಸಾಧನೆಗೊಳಿಸುವ ಉತ್ಸಾಹ, ಭಾರತದಾದ್ಯಂತ ಮಾತ್ರವಲ್ಲದೆ ಪ್ರಪಂಚದಾದ್ಯಂತ ಪ್ರಯಾಣಿಸಿ ಎಲ್ಲೆಡೆ ಹೆಸರುಗಳಿಸಿದ ಸಾಧನೆ ನನ್ನದಾಗಿತ್ತು ನಾನು ನನ್ನ ಬದುಕು ಅಥವಾ ವೃತ್ತಿ ಜೀವನವನ್ನು ಎಂದಿಗೂ ಯೋಜಿಸಲಿಲ್ಲ. ನಾನು ಸಾಕಷ್ಟು ಬುದ್ಧಿವಂತೆ, ನಾನು ಮಾಡುತ್ತಿರುವ ಕೆಲಸ ನನ್ನ ಹೃದಯಕ್ಕೆ ಹತ್ತಿರವಾದರೆ, (ಇದು ಸಂಶೋಧನೆಯಲ್ಲಿ ಸಾಮಾನ್ಯ ) ಕಷ್ಟಪಟ್ಟು, ದಿನ ರಾತ್ರಿ, ಊಟ ನಿದ್ರೆಗಳಿಲ್ಲದೆ ಕೆಲಸ ಮಾಡಿದ್ದೇನೆ. ಇವುಗಳು ಭರಪೂರ ಫಲ ನೀಡಿವೆ. ನನ್ನ ಜೀವನದಲ್ಲಿ ನಾನು ಇಂದು ಎತ್ತರದ ಸ್ಥಳದಲ್ಲಿ ನಿಂತಿರುವ ಅತ್ಯಂತ ಅದೃಷ್ಟಶಾಲಿ.

ಈ ಯಶಸ್ಸಿನ ಪಯಣದ ಏರಿಳಿತಗಳು ಸಂತೋಷ ಮತ್ತು ಸಂಕಟಗಳು ನನ್ನಿಂದ ಮಾತ್ರವಲ್ಲದೆ ಬಹಳಷ್ಟು ಜನರಿಂದ, ನನ್ನ ಕುಟುಂಬದಿಂದ, ನನ್ನ ವೃತ್ತಿಯಿಂದ, ನನ್ನ ಸ್ನೇಹಿತರು ಮತ್ತು ಗೆಳೆಯರಿಂದ ರೂಪುಗೊಂಡವು. ಪ್ರಾಥಮಿಕ ಹಂತದಲ್ಲಿ ನನ್ನ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದ. ಸರ್ಕಾರಿ ನೌಕರನ ಮಗಳಾಗಿರುವುದರಿಂದ, ನನ್ನ ತಂದೆ ಕರ್ನಾಟಕದ ವಿವಿಧ ಜಿಲ್ಲಾ ಕೇಂದ್ರಗಳಿಗೆ ವರ್ಗಾವಣೆಗೊಳ್ಳುತಿದ್ದುದರಿಂದ ನಾನು ಆಗಾಗ್ಗೆ ವಿವಿಧ ಶಾಲೆಗಳಲ್ಲಿ ಓದಬೇಕಾಗಿತ್ತು. 1950 ಮತ್ತು 1960 ರ ದಶಕಗಳಲ್ಲಿ ಸುಮಾರು 13-14 ವರ್ಷ ವಯಸ್ಸಿನ ಹುಡುಗಿಯರಿಗೆ ಮದುವೆ ಮಾಡುವುದು ರೂಢಿಯಾಗಿತ್ತು. ಈ ದೃಷ್ಟಿಯಿಂದ ನನ್ನ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಕರು ನನ್ನ ತಂದೆಯನ್ನು ಯಾವುದೇ ಕಾರಣಕ್ಕೂ ನನ್ನ ಶಿಕ್ಷಣವನ್ನು ಮೊಟಕುಗೊಳಿಸಬಾರದೆಂದು ಟಿಸಿ ಕೊಡುವ ಮೊದಲು ಹೇಳುತಿದ್ದರು. ಅಂದರೆ ಮದುವೆ ಮಾಡಿ ನನ್ನ ಓದಿಗೆ ಕಡಿವಾಣ ಹಾಕಬಾರದೆಂದು ಅವರ ಕಳಿಕಳಿ.

ಇದನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ; ನಮ್ಮ ಕನಸುಗಳನ್ನು ತ್ಯಜಿಸುವುದೆಂದರೆ ನಮ್ಮನ್ನು ನಾವೇ ದಿವಾಳಿಗೆಬ್ಬಿಸಿಕೊಂಡಂತೆ

ಕೇಂದ್ರ ಸರ್ಕಾರದ ಉದ್ಯೋಗಿಯಾಗಿದ್ದ ನನ್ನ ತಂದೆ, ಇಂಗ್ಲಿಷ್ ಮಾಧ್ಯಮದ ಶಿಕ್ಷಣದ ಮೌಲ್ಯವನ್ನು ತಿಳಿದಿದ್ದರು ಮತ್ತು ಹೊಸ ನಗರಗಳಲ್ಲಿ ಮನೆಯನ್ನು ಸ್ಥಾಪಿಸಿದ ತಕ್ಷಣ ಅವರು ನಮ್ಮನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸೇರಿಸುತಿದ್ದರು. ಇದರ ಹೊರತಾಗಿ, ಓದಿನ ಮಹತ್ವದ ಬಗ್ಗೆ ಅರಿವು ಮೂಡಿಸುವಲ್ಲಿ ನನ್ನ ಅಜ್ಜಿ ಮತ್ತು ತಾಯಿಯ ಪ್ರಭಾವ ಅತ್ಯಮೂಲ್ಯ. ಶಿಕ್ಷಣದಿಂದ ಮಾತ್ರ ಉತ್ತಮ ಜೀವನ, ಜೀವನ ಮೌಲ್ಯಗಳು ಸಾಧ್ಯ ಎಂಬುದನ್ನು ಅವರಿಬ್ಬರೂ ಹಗಲೂ ರಾತ್ರಿ ನಮ್ಮ ತಲೆ ತುಂಬುತಿದ್ದರು. ಬಡತನವನ್ನು ಅನುಭವಿಸಿದವರು ಮಾತ್ರ ಈ ಸಲಹೆಯ ಮೌಲ್ಯವನ್ನು ಅರ್ಥಮಾಡಿಕೊಳ್ಳುತ್ತಾರೆ.

ಮಲ್ಲೇಶ್ವರದ ಬಾಲಕಿಯರ ಪ್ರೌಢಶಾಲೆ ಮತ್ತು ಮಹಾರಾಣಿ ಕಾಲೇಜಿನಲ್ಲಿ ನನ್ನ ಪದವಿ ಮುಗಿಯುವವರೆಗೂ ಶಿಕ್ಷಕರ ವೈಯಕ್ತಿಕ ಪ್ರೋತ್ಸಾಹವಿರಲಿಲ್ಲ, ಏಕೆಂದರೆ ಈ ಸಂಸ್ಥೆಗಳಲ್ಲಿ ನೂರಾರು ವಿದ್ಯಾರ್ಥಿಗಳು ಓದುತ್ತಿರುವಾಗ ಶಿಕ್ಷಕರಿಗೆ ವೈಯಕ್ತಿಕ ಗಮನವನ್ನು ನೀಡುವ ಪ್ರೇರಣೆ ಅಥವಾ ಸಮಯ ಇರುತ್ತಿರಲಿಲ್ಲ. ಆದರೆ ನನ್ನ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಸಂಶೋಧನೆಯ ಸಮಯದಲ್ಲಿ, ಮೆರಿಟೆಡ್ ವಿದ್ಯಾರ್ಥಿಗಳ ಮುಂದಿನ ಶಿಕ್ಷಣ ಅಥವಾ ಎಂಎಸ್ಸಿ ಮುಗಿಸುವವರಿಗೆ ಉದ್ಯೋಗವನ್ನು ಕಲ್ಪಿಸುವಲ್ಲಿ ಅಥವಾ ಸಂಶೋಧನೆಯಲ್ಲಿ ನಿಜವಾದ ಆಸಕ್ತಿ ಇದ್ದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಪ್ರಾಧ್ಯಾಪಕರು ಇದ್ದರು. ನನ್ನಂತಹ ಕೆಲವೇ ಕೆಲವು ಅಪ್ರಾಯೋಗಿಕ ಮೂರ್ಖರು ಭವಿಷ್ಯದ ಬಗ್ಗೆ ಯಾವುದೇ ಖಚಿತತೆಯಿಲ್ಲದೆ, ಸಂಶೋಧನೆ ಎಂಬ ಮಾಯಾಕುದುರೆಯ ಬೆನ್ನು ಹತ್ತಿದೆವು.

ಇದನ್ನೂ ಓದಿ : Feminism; ನಾನೆಂಬ ಪರಿಮಳದ ಹಾದಿಯಲಿ: ನಿರ್ದಿಷ್ಟ ಸಾಮಾಜಿಕ ಪ್ರಕ್ರಿಯೆಗಳಿಂದ ಆಕೆ ಹೆಣ್ಣಾಗುತ್ತಾಳೆ ವಿನಾ ಹುಟ್ಟಿನಿಂದಲ್ಲ

ಆದರೆ ನಾನು ಅದೃಷ್ಟಶಾಲಿಯಾಗಿದ್ದೆ. ಏಕೆಂದರೆ ನನ್ನ ಪಿ.ಎಚ್‌ಡಿ ಮುಗಿದ ಕೂಡಲೇ ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಫೋರ್ಡ್ ಫೌಂಡೇಶನ್ ಯೋಜನೆಯಡಿ ಸಹಾಯಕ ಸಂಶೋಧಕಿಯಾಗಿ ಆಯ್ಕೆಯಾದೆ. ಇಂಗ್ಲಿಷ್​ನಲ್ಲಿ ಹೇಳುವ ಹಾಗೆ Icing on the cake ನನಗೊಲಿಯಿತು. ನನ್ನ ಸಂಶೋಧನ ಕ್ಷೇತ್ರವಾದ ಕೃಷಿಯಲ್ಲಿ ಇಲಿ ಹೆಗ್ಗಣಗಳ ನಿಯಂತ್ರಣದ ಬಗ್ಗೆ ತರಬೇತಿ ನೀಡಲು ಇಬ್ಬರು ಹೆಸರಾಂತ ಮೂಷಕಶಾಸ್ತ್ರಜ್ಞರುಗಳಾಗಿದ್ದ ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿಯ ಬಾರ್ನೆಟ್ ಮತ್ತು ಬೌಲಿಂಗ್ ಗ್ರೀನ್ ಯೂನಿವರ್ಸಿಟಿಯ ಜಾಕ್ಸನ್ ಎರೆಡೆರೆಡು ವರ್ಷಗಳಂತೆ ನಮಗೆ ತರಬೇತಿ ನೀಡಿದರು. ಇದರೊಟ್ಟಿಗೆ ಭಾರತದಲ್ಲಿ ಮೂಷಕಗಳ ಸಂಶೋಧನೆಯ ಪಿತಾಮಹರಾದ ಡಾ. ಈಶ್ವರ್ ಪ್ರಕಾಶ್ ಅವರಿಂದ ರಾಷ್ಟ್ರೀಯ ಮಟ್ಟದಲ್ಲಿ ಮಾರ್ಗದರ್ಶನವಿತ್ತು. ಹೊಸದಿಲ್ಲಿಯ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್‌ನಿಂದ ಡಾ. ಶ್ರೀವಾಸ್ತವ, ದುಬೆ ಮತ್ತು ತಿವಾರಿ ಅವರಿಂದ ಪ್ರೋತ್ಸಾಹ ಮತ್ತು ಮಾರ್ಗದರ್ಶನ ದೊರೆಯಿತು.

ಎಪ್ಪತ್ತರ ದಶಕದ ಹಸಿರು ಕ್ರಾಂತಿಯ ನಂತರ ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನಗಳ ಸಂಶೋಧನೆ ಮತ್ತು ರೈತರಿಗೆ ಅವುಗಳ ವರ್ಗಾವಣೆಯ ವಾತಾವರಣವು ಪೂರ್ಣ ಪ್ರಮಾಣದಲ್ಲಿ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಆವರಿಸಿತ್ತು. ಪ್ರತಿಯೊಬ್ಬ ವಿಜ್ಞಾನಿಯೂ ಆಹಾರ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಕೀಟಗಳು ಮತ್ತು ರೋಗಕಾರಕಗಳಿಂದ ಸುರಕ್ಷಿತವಾಗಿ ಬೆಳೆದದ್ದನ್ನು ಸಂಗ್ರಹಿಸಲು ಹೊಸ ತಂತ್ರಗಳನ್ನು ಕಂಡುಹಿಡಿಯಲು ಪ್ರೋತ್ಸಾಹಿಸಲಾಯಿತು. ನನ್ನ ಜೀವನದಲ್ಲಿ ಮೊದಲ ಬಾರಿಗೆ ನನ್ನ ಸಂಶೋಧನೆಯ ಫಲಿತಾಂಶಗಳನ್ನು ರೈತರು ಅನುಸರಿಸುವುದನ್ನು ನೋಡಿ ನನಗೆ ಅಪ್ರತಿಮ ಸಂತೋಷವಾಯಿತು. ರೈತರನ್ನು ಉದ್ದೇಶಿಸಿ, ಹೊಲದಲ್ಲಿ ಮತ್ತು ಮನೆಗಳಲ್ಲಿ ಮೂಷಕಗಳ ಹಾನಿಯಿಂದ ತಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂದು ಹೇಳುವುದು ತುಂಬಾ ಸಂತೋಷಕರ ಅನುಭವವಾಗಿತ್ತು . ರೈತರಿಗೆ ಶಿಕ್ಷಣ ನೀಡುವ ಈ ಪ್ರಕ್ರಿಯೆಯಲ್ಲ ನನ್ನ ಹುಟ್ಟುಗುಣವಾದ ಸಂಕೋಚ ಪ್ರವೃತ್ತಿ ಅವರ ಮುಗ್ದತೆಯ ಮುಂದೆ, ನಮಗೆ ನೀಡುತ್ತಿದ್ದ ಅಪಾರ ಗೌರವದ ಮುಂದೆ ಮಾಯವಾಯಿತು.

ಇದನ್ನೂ ಓದಿ : Women Empowerment; ನಾನೆಂಬ ಪರಿಮಳದ ಹಾದಿಯಲಿ: ಇನ್ನಾದರೂ ನಿಲ್ಲಿಸುವಿರೇ ಹೂ ಅರಳಿದ್ದಕ್ಕೆ ಸಾಕ್ಷಿ ಹುಡುಕುವುದನ್ನು

ಹಳ್ಳಿಯ ಜನರೊಂದಿಗೆ ಬೆರೆತು, ಅವರ ಸಮಸ್ಯೆಗಳನ್ನು ಅರಿತಾಗ ಉಂಟಾದ ಸಹಾನುಭೂತಿ ನನ್ನ ಜೀವನ ದೃಷ್ಟಿಯನ್ನೇ ಬದಲಾಯಿಸಿದೆ. ಅವರು ಎದುರಿಸಿದ ಅನೇಕ ಸಮಸ್ಯೆಗಳನ್ನು ಅರಿತುಕೊಂಡಿದ್ದೇನೆ, ಅವರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗದಿರುವುದು ತುಂಬಾ ದುಃಖದಾಯಕ. ಧಾರವಾಡ, ಚಿತ್ರದುರ್ಗ, ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ನಗರ, ರಾಮನಗರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ನಮ್ಮ ಸಂಶೋಧನೆ ಹರಡಿತ್ತು ಈ ಎಲ್ಲಾ ಹಳ್ಳಿಗಳಿಗೆ ನಾನು ನನ್ನ ಮೂರು ವರ್ಷದ ಮಗಳನ್ನು ಕರೆದುಕೊಂಡು ಹೋಗುತ್ತಿದ್ದೆ.

ನನ್ನ ಸೇವೆಯ ಅವಧಿಯಲ್ಲಿ ನಾನು ಭಾರತದ ಮೂಲೆಮೂಲೆಗಳಲ್ಲಿ ಪ್ರಯಾಣಿಸಿದ್ದೇನೆ ಏಕೆಂದರೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯು ದೇಶದ ವಿವಿಧ ಭಾಗಗಳಲ್ಲಿ ನಿರ್ದಿಷ್ಟ ವಿಷಯದಲ್ಲಿ ಕೆಲಸ ಮಾಡುವ ಎಲ್ಲಾ ವಿಜ್ಞಾನಿಗಳ ದ್ವೈವಾರ್ಷಿಕ ಕಾರ್ಯಾಗಾರಗಳನ್ನು ನಡೆಸುವ ಅದ್ಭುತ ಯೋಜನೆಗಳನ್ನು ಹೊಂದಿದೆ. ಈ ಕಾರ್ಯಾಗಾರಗಳಲ್ಲಿ ನಾವು ಕಳೆದ ಎರಡು ವರ್ಷಗಳ ಸಂಶೋಧನಾ ಫಲಿತಾಂಶಗಳನ್ನು ಪ್ರಸ್ತುತಪಡಿಸಿದೆವು. ಮುಂದಿನ ಎರಡು ವರ್ಷಗಳ ಕೆಲಸವನ್ನು ಯೋಜಿಸಿದೆವು. ಇದರಿಂದ ಸಹವಿಜ್ಞಾನಿಗಳೊಂದಿಗೆ ಸಂವಹನವನ್ನು ಸುಗಮಗೊಳಿಸಿತು. ಸ್ನೇಹವನ್ನು ಅಭಿವೃದ್ಧಿಪಡಿಸಿತು. ಜೊತೆಗೆ ಆಕರ್ಷಣೀಯ ಸ್ಥಳೀಯ ಸ್ಥಳಗಳನ್ನು ನೋಡಲು ಪ್ರವಾಸಗಳನ್ನು ಏರ್ಪಡಿಸಿತು. ವಿಮಾನ ಪ್ರಯಾಣವು ನಿಷೇಧಿತವಾದ ಕಾರಣ ನಮಗೆ ಮೊದಲ ದರ್ಜೆಯ ರೈಲು ದರವನ್ನು ಅನುಮತಿಸಲಾಗುತ್ತಿತ್ತು. ಆದರೆ ನಾನು ನನ್ನ ಪತಿಯೊಂದಿಗೆ ಸೆಕೆಂಡ್ ಎಸಿ ಸ್ಲೀಪರ್‌ನಲ್ಲಿ ಪ್ರಯಾಣಿಸಿ (ಆ ದಿನಗಳಲ್ಲಿ ರೈಲುಗಳಲ್ಲಿ ಎಸಿಅನ್ನು ಹೊಸದಾಗಿ ಪರಿಚಯಿಸಲಾಯಿತು) ಮೊದಲ ದರ್ಜೆಯ ದರವನ್ನು ಪಡೆದುಕೊಳ್ಳಬಹುದಾಗಿತ್ತು . ಈ ಎಲ್ಲಾ ಕಾರ್ಯಗಾರಗಳಿಗೆ ನನ್ನ ಪತಿ ಮತ್ತು ಮಗಳೊಂದಿಗೆ ರೈಲಿನಲ್ಲಿ ಪ್ರಯಾಣಿಸಿದ್ದರಿಂದ ಜೀವನದಲ್ಲಿ ನನ್ನ ದೃಷ್ಟಿಕೋನ ಬಹುವಾಗಿ ವಿಸ್ತರಿಸಿತು.

ಭಾಗ 2 : Woman Scientist: ನಿಮ್ಮ ಟೈಮ್​ಲೈನ್; ‘ಕೋಪ, ರೋಷ ನನ್ನನ್ನು ಬಡಿದೆಬ್ಬಿಸಿತು’ ಮೂಷಕ ತಜ್ಞೆ ಡಾ. ಶಕುಂತಲಾ ಶ್ರೀಧರ

ಪ್ರತಿಕ್ರಿಯೆಗಾಗಿ : tv9kannadadigital@gmail.com

ಗಮನಿಸಿ: ನಿಮ್ಮ ಟೈಮ್​ಲೈನ್ ಆಗಾಗ ಪ್ರಕಟವಾಗುವ ಈ ಅಂಕಣದಲ್ಲಿ ನಿಮ್ಮ ಫೇಸ್​ಬುಕ್​ ಬರಹಗಳು ಪ್ರಕಟವಾಗುತ್ತವೆ; ಯಾವುದೇ ವಿಚಾರ, ವಿಷಯ, ಆಶಯ, ಅಭಿಪ್ರಾಯ, ಪ್ರಸಂಗ, ಘಟನೆ, ಮಾಹಿತಿ, ನೆನಪು ಹೀಗೆ ಯಾವುದೂ, ಏನೂ. ನಿಮ್ಮ ಹೆಸರು, ವೃತ್ತಿ, ಊರು, ಮೊಬೈಲ್ ನಂಬರ್, ನಿಮ್ಮ ಫೋಟೋ ಸಮೇತ ಮೇಲ್ ಮಾಡಿ. ಜೊತೆಗೆ ‘ನಿಮ್ಮ ಟೈಮ್​ಲೈನ್’ ಅಂಕಣಕ್ಕೆ ಎನ್ನುವುದನ್ನು ಬರೆಯಲು ಮರೆಯದಿರಿ. ಆಯ್ಕೆಯಾದ ಬರಹಗಳನ್ನು ಪ್ರಕಟಿಸಲಾಗುವುದು. tv9kannadadigital@gmail.com

Published On - 8:51 am, Fri, 15 April 22

ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ
ಹೆಂಡತಿ, ಮಕ್ಕಳೊಂದಿಗೆ ಮಧುಸೂದನ್ ಭಾನುವಾರ ಕಾಶ್ಮೀರ ಪ್ರವಾಸ ತೆರಳಿದ್ದರು
ಹೆಂಡತಿ, ಮಕ್ಕಳೊಂದಿಗೆ ಮಧುಸೂದನ್ ಭಾನುವಾರ ಕಾಶ್ಮೀರ ಪ್ರವಾಸ ತೆರಳಿದ್ದರು