ಮನೆ ಮುಂದೆ ಕಾಗೆ ಕೂಗಿದ್ರೆ ಮನೆಗೆ ನೆಂಟರು ಬರ್ತಾರಾ?
ಹಿಂದೂ ಸಂಪ್ರದಾಯದ ಪ್ರಕಾರ, ಕಾಗೆಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಶನಿ ಪುರಾಣದ ಪ್ರಕಾರ, ಕಾಗೆ ದಂಡಕಾರಕ ಶನಿಮಹಾತ್ಮನ ವಾಹನ. ಪಕ್ಷಿ ಜಾತಿಗೆ ಸೇರಿದ ಕಾಗೆಯನ್ನು ಹಿಂದಿನ ಕಾಲದಲ್ಲಿ ಸಂಪರ್ಕ ಸಾಧನವಾಗಿ ಬಳಸಲಾಗಿತ್ತು ಎನ್ನಲಾಗುತ್ತೆ. ಯಾಕಂದ್ರೆ ಯಾವುದೇ ರೀತಿಯ ತಂತ್ರಜ್ಞಾನ, ದೂರವಾಣಿ ಇಲ್ಲದಂತಹ ಕಾಲದಲ್ಲಿ ಕಾಗೆಯನ್ನೇ ಸಂದೇಶ ರವಾನಿಸಲು ಬಳಸಲಾಗ್ತಿತ್ತು. ನಮ್ಮ ಹಿರಿಯರ ಪ್ರಕಾರ, ಕಾಗೆಗೂ ಹಾಗೂ ಮನುಷ್ಯನಿಗೂ ಅವಿನಾಭಾವ ಸಂಬಂಧವಿದೆ ಎನ್ನಲಾಗುತ್ತೆ. ಎಲ್ಲರಿಗೂ ತಿಳಿದಿರುವ ಹಾಗೆ, ಒಂದೊಂದು ಪಕ್ಷಿಯೂ ಒಂದೊಂದು ತರಹದ ವಿಶಿಷ್ಟ ಧ್ವನಿಯನ್ನು ಹೊಂದಿರುತ್ತೆ. ಆ […]
ಹಿಂದೂ ಸಂಪ್ರದಾಯದ ಪ್ರಕಾರ, ಕಾಗೆಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಶನಿ ಪುರಾಣದ ಪ್ರಕಾರ, ಕಾಗೆ ದಂಡಕಾರಕ ಶನಿಮಹಾತ್ಮನ ವಾಹನ. ಪಕ್ಷಿ ಜಾತಿಗೆ ಸೇರಿದ ಕಾಗೆಯನ್ನು ಹಿಂದಿನ ಕಾಲದಲ್ಲಿ ಸಂಪರ್ಕ ಸಾಧನವಾಗಿ ಬಳಸಲಾಗಿತ್ತು ಎನ್ನಲಾಗುತ್ತೆ.
ಯಾಕಂದ್ರೆ ಯಾವುದೇ ರೀತಿಯ ತಂತ್ರಜ್ಞಾನ, ದೂರವಾಣಿ ಇಲ್ಲದಂತಹ ಕಾಲದಲ್ಲಿ ಕಾಗೆಯನ್ನೇ ಸಂದೇಶ ರವಾನಿಸಲು ಬಳಸಲಾಗ್ತಿತ್ತು. ನಮ್ಮ ಹಿರಿಯರ ಪ್ರಕಾರ, ಕಾಗೆಗೂ ಹಾಗೂ ಮನುಷ್ಯನಿಗೂ ಅವಿನಾಭಾವ ಸಂಬಂಧವಿದೆ ಎನ್ನಲಾಗುತ್ತೆ. ಎಲ್ಲರಿಗೂ ತಿಳಿದಿರುವ ಹಾಗೆ, ಒಂದೊಂದು ಪಕ್ಷಿಯೂ ಒಂದೊಂದು ತರಹದ ವಿಶಿಷ್ಟ ಧ್ವನಿಯನ್ನು ಹೊಂದಿರುತ್ತೆ.
ಆ ಧ್ವನಿಗಳಲ್ಲಿ ಕೆಲವು ಇಂಪಾಗಿದ್ದರೆ ಮತ್ತೆ ಕೆಲವು ಕರ್ಕಶವಾಗಿರುತ್ತೆ. ಹೀಗೆ ಕಾಗೆಯೂ ಸಹ ಒಂದು ವಿಶೇಷ ಧ್ವನಿಯನ್ನು ಹೊಂದಿದೆ. ಮರದ ಮೇಲೆ ಕುಳಿತಾಗ, ಆಕಾಶದಲ್ಲಿ ಹಾರುತ್ತಿರುವಾಗ, ಕಟ್ಟಡಗಳ ಮೇಲೆ ಕುಳಿತಾಗ ಕಾಗೆ ಕೂಗುವುದನ್ನು ನೋಡಿರ್ತೀವಿ. ಕೇಳಿರ್ತೀವಿ. ಹೀಗೆ ಕಾಗೆ ಪದೇಪದೆ ಕೂಗುತ್ತಿದ್ದರೆ ಅದನ್ನು ಮುಂದಾಗುವ ಘಟನೆಗಳ ಸೂಚನೆ ಅಂತಾ ಕೆಲವರು ಭಾವಿಸ್ತಾರೆ. ಹೀಗೆ ಕಾಗೆಯ ಚಟುವಟಿಕೆ ಹಾಗೂ ಕಾಗೆ ಕೂಗುವುದರ ಬಗ್ಗೆ ಕೆಲ ಪುರಾಣಗಳು ಏನು ಹೇಳುತ್ತವೆ? ಬನ್ನಿ ಆ ಬಗ್ಗೆ ಈಗ ತಿಳಿಯೋಣ.
ಕಾಗೆಯ ಬಗ್ಗೆ ಇರುವ ಶಕುನಗಳು: 1)ಕಾಗೆ ಮನೆಯ ಮುಂದೆ ಪದೇಪದೆ ಕೂಗುತ್ತಿದ್ದರೆ ಯಾರಾದರೂ ಅಥಿತಿಗಳು ಬರುತ್ತಾರೆ ಅನ್ನೋ ನಂಬಿಕೆ ಇದೆ. 2)ಮನೆಯಿಂದ ಹೊರಗೆ ಹೋಗುವಾಗ ಕಾಗೆ ಕೂಗುತ್ತಾ ಎದುರಿಗೆ ಬಂದರೆ ಅದನ್ನು ಅಪಶಕುನ ಅಂತಾ ಕೆಲವೊಮ್ಮೆ ಹೇಳಲಾಗುತ್ತೆ. 3)ಮನೆಯಿಂದ ಹೊರಗೆ ಹೋಗುವಾಗ ಕಾಗೆ ಕೂಗಿದರೆ ನಾವು ಹೋಗುತ್ತಿರುವ ಕೆಲಸದಲ್ಲಿ ಯಶಸ್ಸು ಉಂಟಾಗುತ್ತೆ ಎನ್ನಲಾಗುತ್ತೆ. 4)ಮನೆಯಿಂದಲೇ ಕಾಗೆ ಕೂಗುತ್ತಿರುವುದನ್ನು ನೋಡಿದರೆ ಅವರು ಸಿರಿವಂತರಾಗ್ತಾರೆ, ಶುಭಶಕುನಗಳು ನಡೆಯುತ್ತವೆ ಎನ್ನಲಾಗುತ್ತೆ. 5)ಕಾಗೆ ತನ್ನ ಬಾಯಿಯಲ್ಲಿ ಏನಾದರೂ ಕಚ್ಚಿಕೊಂಡು ಬಂದು ನಿಮ್ಮ ಮೈ ಮೇಲೆ ಹಾಕಿದರೆ ಅದು ಅಶುಭ ಎನ್ನಲಾಗುತ್ತೆ. 6)ಕಾಗೆ ಬಾಯಲ್ಲಿರೋ ಮಾಂಸವೇನಾದ್ರೂ ಮೈ ಮೇಲೆ ಬಿದ್ದರೆ ಅವರಿಗೆ ಅನಾರೋಗ್ಯ ಉಂಟಾಗುತ್ತೆ ಎನ್ನಲಾಗುತ್ತೆ. 7)ಕಾಗೆ, ಕುಳಿತ ಸ್ಥಳದಿಂದಲೇ ಒಂದೇ ಸಮನೆ ಕಿರುಚುತ್ತಿದ್ದರೆ ಹತ್ತಿರದ ಮನೆಯ ಯಜಮಾನ ಅಥವಾ ಅಕ್ಕಪಕ್ಕದ ಮನೆಯವರಿಗೆ ತೊಂದರೆಯಾಗುತ್ತೆ ಎನ್ನಲಾಗುತ್ತೆ. 8)ಕಾಗೆ ಒಂದೇ ಸಮನೆ ಜೋರಾಗಿ ರೆಕ್ಕೆ ಬಡಿಯುತ್ತಾ ಯಾವುದಾದರೂ ವ್ಯಕ್ತಿಯ ಸುತ್ತ ಸುತ್ತುತ್ತಿದ್ರೆ ಆತನಿಗೆ ಅಪಾಯವಾಗಲಿದೆ ಎನ್ನಲಾಗುತ್ತೆ. 9)ಕಾಗೆಯು ತಲೆಯನ್ನು ಮುಟ್ಟಿದರೆ ಅದನ್ನ ದೋಷ ಎಂದು ಪರಿಗಣಿಸಲಾಗುತ್ತೆ. 10)ಹೆಣ್ಣುಮಕ್ಕಳ ತಲೆಯನ್ನು ಕಾಗೆ ಬಂದು ಮುಟ್ಟಿದರೆ ಅವರಿಗೆ ಪತಿಯಿಂದ ವಿಯೋಗ ಉಂಟಾಗುತ್ತೆ ಎನ್ನಲಾಗುತ್ತೆ. 11)ಆಗ್ನೇಯ ದಿಕ್ಕಿನಿಂದ ಕಾಗೆ ಬರುವುದನ್ನು ಯಾರಾದರೂ ನೋಡಿದರೆ ಅವರಿಗೆ ಧನಲಾಭವಾಗುತ್ತೆ ಅನ್ನೋ ನಂಬಿಕೆ ಇದೆ.
ಹೀಗೆ ಕಾಗೆಯ ಒಂದೊಂದು ಚಟುವಟಿಕೆಯ ಬಗ್ಗೆಯೂ ಒಂದೊಂದು ಶಕುನಗಳನ್ನು ಕೆಲ ಪುರಾಣಗಳು ಹೇಳುತ್ತವೆ. ಇದಿಷ್ಟೇ ಅಲ್ಲದೇ, ಕಾಗೆಗೆ ಗತಿಸಿ ಹೋದ ನಮ್ಮ ಪೂರ್ವಿಕರ ಸ್ಥಾನವನ್ನು ನೀಡಲಾಗಿದೆ. ಇದೇ ಕಾರಣಕ್ಕೆ ಪಕ್ಷದ ಸಮಯದಲ್ಲಿ ಕಾಗೆಗಳಿಗೆ ಮನೆಯಲ್ಲಿ ತಯಾರಿಸಿದ ಭಕ್ಷ್ಯ ಭೋಜನಗಳನ್ನು ನೀಡಲಾಗುತ್ತೆ.
ನ್ನು ಹಿರಿಯರು ಕಾಗೆಗಳು ನಮ್ಮ ಜೀವನದ ಭವಿಷ್ಯವನ್ನು ಕೆಲ ಚಟುವಟಿಕೆಗಳಿಂದ ತಿಳಿಸುತ್ತವೆ ಎನ್ನುತ್ತಾರೆ. ಅದೇನೇ ಇರಲಿ, ಕಾಗೆಯೂ ಒಂದು ಜೀವಿ. ಕಾಗೆಗೆ ಊಟ ನೀಡೋದು, ಬೇಸಿಗೆಯ ಸಂದರ್ಭದಲ್ಲಿ ನೀರು ಇಡುವುದರಿಂದ ಅವುಗಳ ಸಂತತಿ ಬೆಳೆಯುತ್ತೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಾಗೆಗಳು ಸಹ ಅಳಿವಿನಂಚನ್ನು ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ.