AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Spiritual Remedies: ಸಾಲದ ಸುಳಿಯಿಂದ ಹೊರಬರಲು ಈ ಆಧ್ಯಾತ್ಮಿಕ ತಂತ್ರ ಅನುಸರಿಸಿ

ಪ್ರತಿಯೊಬ್ಬರ ಜೀವನದಲ್ಲಿ ಸಾಲ ತೀರಿಸುವುದು ಒಂದು ದೊಡ್ಡ ಸವಾಲು. ಈ ಸವಾಲನ್ನು ಎದುರಿಸಲು ಕೆಲವು ಆಧ್ಯಾತ್ಮಿಕ ಮತ್ತು ಜ್ಯೋತಿಷ್ಯ ತಂತ್ರಗಳನ್ನು ವಿವರಿಸಲಾಗಿದೆ. ಸಾಲ ಪಡೆಯುವಾಗ ಕುಬೇರನ ಸ್ಮರಣೆ, ಸಾಲ ತೀರಿಸುವಾಗ ದಕ್ಷಿಣಾಮೂರ್ತಿಯ ಪ್ರಾರ್ಥನೆ, ಮಂಗಳವಾರದಂದು ಸಾಲ ಮರುಪಾವತಿ ಮತ್ತು ಸೋಮವಾರ-ಗುರುವಾರ ಸಾಲ ಪಡೆಯುವ ಮೂಲಕ ಶೀಘ್ರ ಪರಿಹಾರ ಪಡೆಯಬಹುದು. ಶನಿವಾರದ ವಹಿವಾಟುಗಳನ್ನು ತಪ್ಪಿಸುವುದು ಉತ್ತಮ ಎಂದು ಡಾ. ಬಸವರಾಜ್ ಗುರೂಜಿ ಸಲಹೆ ನೀಡಿದ್ದಾರೆ.

Spiritual Remedies: ಸಾಲದ ಸುಳಿಯಿಂದ ಹೊರಬರಲು ಈ ಆಧ್ಯಾತ್ಮಿಕ ತಂತ್ರ ಅನುಸರಿಸಿ
ಸಾಲದ ಸುಳಿಯಿಂದ ಹೊರಬರಲುImage Credit source: Pinterest
ಅಕ್ಷತಾ ವರ್ಕಾಡಿ
|

Updated on: Apr 26, 2026 | 10:19 AM

Share

ಸಾಲ ಹೆಚ್ಚಾದಾಗ ಅದನ್ನು ತೀರಿಸಿಕೊಳ್ಳಲು ನಾವು ಪಡುವ ಕಷ್ಟ ಅಷ್ಟಿಷ್ಟಲ್ಲ. ಬ್ಯಾಂಕ್ ಸಾಲವಿರಲಿ, ಕೈಸಾಲವಿರಲಿ ಅಥವಾ ಯಾವುದೇ ಸಾಲವಿರಲಿ, ಆದಾಯ ಸಾಲಕ್ಕೆ ಸರಿಹೊಂದುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಆಧ್ಯಾತ್ಮಿಕ ತಂತ್ರಗಳನ್ನು ಅಳವಡಿಸಿಕೊಂಡರೆ ಸಾಲ ಬೇಗ ತೀರುವ ಸಾಧ್ಯತೆಗಳು ಹೆಚ್ಚಿರುತ್ತವೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಸಾಲ ಪಡೆಯಬೇಕಾದ ಸಂದರ್ಭದಲ್ಲಿ, ಬ್ಯಾಂಕ್‌ಗೆ ಅಥವಾ ಯಾವುದೇ ವ್ಯಕ್ತಿಯ ಬಳಿ ಹಣ ಪಡೆಯಲು ಹೋಗುವಾಗ, ಕುಬೇರನನ್ನು ಸ್ಮರಣೆ ಮಾಡಿಕೊಳ್ಳುವುದು ಅತ್ಯಂತ ಮುಖ್ಯ. ಮನೆಯಲ್ಲಿ ಒಂದು ರೂಪಾಯಿ ಕಾಯನ್ನು ಅರಿಶಿನ ಬಟ್ಟೆಯಲ್ಲಿ ಕಟ್ಟಿ ದೇವರ ಬಳಿ ಇಟ್ಟು, ಕುಬೇರ ಅಥವಾ ಲಕ್ಷ್ಮಿ ಕುಬೇರರಿಗೆ ಪ್ರಾರ್ಥನೆ ಸಲ್ಲಿಸಿ. “ನಾನು ಸಾಲಕ್ಕೆ ಹೋಗುತ್ತಿದ್ದೇನೆ, ಅದನ್ನು ಸರಿಯಾಗಿ ತೀರಿಸಲು ನೀನು ವ್ಯವಸ್ಥೆ ಮಾಡಿಕೊಡು” ಎಂದು ಪ್ರಾರ್ಥಿಸಿ ಹೊರಟರೆ, ಆ ಸಾಲ ಬೇಗ ತೀರುತ್ತದೆ.

ಸಾಲ ತೀರಿಸುವಾಗ:

ಸಾಲವನ್ನು ಮರುಪಾವತಿಸುವಾಗ ದಕ್ಷಿಣಾಮೂರ್ತಿಯನ್ನು ಸ್ಮರಣೆ ಮಾಡಿಕೊಳ್ಳಬೇಕು. ಬೇರೆಯವರಿಗೆ ಹಣ ನೀಡುವಾಗ ಒಮ್ಮೆ ದಕ್ಷಿಣಾಮೂರ್ತಿಯನ್ನು ನೆನೆದು ಆ ಹಣವನ್ನು ಕೊಡಬೇಕು. ಧನಮೂಲಂ ಇದಂ ಜಗತ್ತು ಎಂಬಂತೆ ಹಣವಿದ್ದರೆ ಮಾತ್ರ ಜೀವನ ಮಾಡಲು ಸಾಧ್ಯ. ಹಣವಿಲ್ಲದವನು ಹೆಣಕ್ಕೆ ಸಮಾನ ಎಂಬ ಮಾತು ಸುಳ್ಳಲ್ಲ. ಸಾಲ ತೀರಿಸಲಾಗದೆ ಕಷ್ಟಪಡುತ್ತಿರುವಾಗ, ಅನಾಥೋ ದೈವರಕ್ಷಕ ಎಂಬಂತೆ, ನಮಗೆ ಶಕ್ತಿ ಇಲ್ಲದಾಗ ಭಗವಂತನನ್ನು ಪ್ರಾರ್ಥಿಸುವುದು ಅಗತ್ಯ.

ಶುಭ ದಿನಗಳು ಮತ್ತು ಅಶುಭ ದಿನಗಳು:

ಸಾಲವನ್ನು ತೀರಿಸಲು ಮಂಗಳವಾರದ ದಿನವನ್ನು ಆಯ್ದುಕೊಳ್ಳಿ. ಮಂಗಳವಾರದಂದು ಸಾಲವನ್ನು ಮರುಪಾವತಿಸಲು ಪ್ರಾರಂಭಿಸಿದರೆ, ಮೂರು ಮಂಗಳವಾರಗಳು ತಪ್ಪಿಸದೆ ಹಣವನ್ನು ನೀಡಿದರೆ, ನಿಮ್ಮ ಸಾಲ ಬೇಗ ತೀರಹೋಗುತ್ತದೆ. ಸಾಲಗಾರರು ಮಂಗಳವಾರದಂದು ಹಣ ತೆಗೆದುಕೊಳ್ಳಲು ಇಷ್ಟಪಡುತ್ತಾರೆ ಏಕೆಂದರೆ ಇದು ಶುಭ ದಿನವೆಂದು ನಂಬಲಾಗಿದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಸಾಲವನ್ನು ಪಡೆಯಲು ಸೋಮವಾರ ಮತ್ತು ಗುರುವಾರಗಳು ಶುಭ ದಿನಗಳಾಗಿವೆ. ಈ ದಿನಗಳಲ್ಲಿ ಸಾಲವನ್ನು ಪಡೆದರೆ ಅದನ್ನು ಬೇಗ ತೀರಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಸಾಲ ಕೊಡುವವರನ್ನು ಸೋಮವಾರ ಅಥವಾ ಗುರುವಾರ ಹಣ ನೀಡಲು ಕೇಳಬಹುದು. ಆದರೆ, ಶನಿವಾರದ ದಿನ ಯಾವುದೇ ಹಣಕಾಸಿನ ವಹಿವಾಟು ಮಾಡದಿರುವುದು ಉತ್ತಮ. ಶನಿವಾರದಂದು ಹಣವನ್ನು ಕೊಡುವುದು ಅಥವಾ ಪಡೆಯುವುದು ಒಳ್ಳೆಯ ರೀತಿಯಲ್ಲಿ ಸಫಲವಾಗುವುದಿಲ್ಲ ಎಂದು ನಂಬಲಾಗಿದೆ.

ಈ ಎಲ್ಲಾ ಸಣ್ಣ ಸಣ್ಣ ತಂತ್ರಗಳನ್ನು ಅಳವಡಿಸಿಕೊಂಡಿದ್ದೆ ಆದರೆ, ಸಾಲದ ಸಂಕಷ್ಟದಿಂದ ಹೊರಬಂದು ಸುಖಮಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us