AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಹಣವು ಯಾವ ನಕ್ಷತ್ರದಲ್ಲಿ ಆದರೆ ಏನಾಗುತ್ತದೆ…? ಸೂರ್ಯ, ಚಂದ್ರ ಯಾವ ನಕ್ಷತ್ರದಲ್ಲಿ ಇರುತ್ತಾರೆ?

ಅಶ್ವಿನೀ ನಕ್ಷತ್ರದಲ್ಲಿ ಗ್ರಹಣವಾದರೆ ಅಶ್ವಗಳು ಹಾಗೂ ಆಶ್ವಪಾಲಕರು, ಭರಣಿಯಲ್ಲಿ ಆದರೆ ಕಳಿಂಗ ಅಂದರೆ ಒರಿಸ್ಸಾ ಹಾಗೂ ಆಂಧ್ರಪ್ರದೇಶದ ಭಾಗಗಳು, ಕೃತ್ತಿಕಾ ನಕ್ಷದಲ್ಲಿ ಆದರೆ ಕಳಿಂಗದ ನಾಯಕರು, ರೋಹಿಣಿಯಲ್ಲಿ ಆದರೆ ಶಸ್ತ್ರಗಳಿಂದ ಹಾಗೂ ಕೋಪದಿಂದ ಪ್ರಜೆಗಳು ಪೀಡಿತರಾಗುವರು.

ಗ್ರಹಣವು ಯಾವ ನಕ್ಷತ್ರದಲ್ಲಿ ಆದರೆ ಏನಾಗುತ್ತದೆ...? ಸೂರ್ಯ, ಚಂದ್ರ ಯಾವ ನಕ್ಷತ್ರದಲ್ಲಿ ಇರುತ್ತಾರೆ?
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: May 11, 2023 | 11:23 AM

Share

ರಾಹುಗ್ರಸ್ತದಿಂದ ಆದ ಸೂರ್ಯ ಹಾಗೂ ಚಂದ್ರನ ಗ್ರಹಣಗಳು ಯಾವ ರಾಶಿಯಲ್ಲಿ ಆಗುತ್ತವೆ, ಆ ರಾಶಿಯಿಂದ ನಾವು ತಿಳಿಯಬೇಕಾದುದೇನು ಎಂಬುದು ಒಂದು ಕಡೆಯಾದರೆ, ಯಾವ ನಕ್ಷತ್ರದಲ್ಲಿ ಸೂರ್ಯ ಹಾಗು ಚಂದ್ರರು ಇರುತ್ತಾರೆ ಎನ್ನುವುದರ ಆಧಾರದ ಮೇಲೂ ಆಗಿನ ಕಾಲದ ರಾಜ್ಯದ ಮೇಲಾಗುವ ಪರಿಣಾಮವನ್ನು, ಪ್ರಕೃತಿಯ ಮೇಲಾಗುವ ಬದಲಾಣೆಗಳನ್ನು ಊಹಿಸುತ್ತಿದ್ದರು. ಅಶ್ವಿನೀ ನಕ್ಷತ್ರದಲ್ಲಿ ಗ್ರಹಣವಾದರೆ ಅಶ್ವಗಳು ಹಾಗೂ ಆಶ್ವಪಾಲಕರು, ಭರಣಿಯಲ್ಲಿ ಆದರೆ ಕಳಿಂಗ ಅಂದರೆ ಒರಿಸ್ಸಾ ಹಾಗೂ ಆಂಧ್ರಪ್ರದೇಶದ ಭಾಗಗಳು, ಕೃತ್ತಿಕಾ ನಕ್ಷದಲ್ಲಿ ಆದರೆ ಕಳಿಂಗದ ನಾಯಕರು, ರೋಹಿಣಿಯಲ್ಲಿ ಆದರೆ ಶಸ್ತ್ರಗಳಿಂದ ಹಾಗೂ ಕೋಪದಿಂದ ಪ್ರಜೆಗಳು ಪೀಡಿತರಾಗುವರು.

ಮೃಗಶಿರಾ ನಕ್ಷತ್ರದಲ್ಲಿ ಗ್ರಹಣವಾದರೆ ಸಾಲ, ನಿಷಾದ, ಕೇಕಯ ರಾಜ್ಯಕ್ಕೆ ತೊಂದರೆ, ಆರ್ದ್ರಾ ನಕ್ಷತ್ರದಲ್ಲಿ ಗ್ರಹಣವಾದರೆ ಗಿಳಿಗಳಿಗೆ, ನಾಯಿಗಳಿಗೆ, ಜಲಾಶಯವನ್ನು ನಂಬಿ ಬದುಕುವವರಿಗೆ ತೊಂದರೆಯಾಗಲಿದೆ. ಪುನರ್ವಸು ನಕ್ಷತ್ರದಲ್ಲಿ ಗ್ರಹಣವಾದರೆ ಅಂಗಡಿಗಳಿಗೆ, ಜಿಂಕೆ, ಕೃಷ್ಣಮೃಗದಂತಹ ಪ್ರಾಣಿಗಳಿಗೆ ಸಮಸ್ಯೆ ಆಗಬಹುದು. ಪುಷ್ಯ ನಕ್ಷತ್ರದಲ್ಲಿ ಗೋಮತಿ, ಸಿಂಧು ನದಿ ಪ್ರದೇಶದ ಜನರಿಗೆ ಹಾಗೆಯೇ ಸೌವೀರ, ಕುರು, ಪಾಂಚಲ ರಾಜ್ಯದಲ್ಲಿ ವಾಸಿಸುವ ಜನರಿಗೆ, ಆಶ್ಲೇಷಾ ನಕ್ಷತ್ರದಲ್ಲಿ ಆದರೆ ಕಾಶಿ, ಕಲಿಂಗ, ಸಿಂಹಲ ದೇಶದ ರಾಜರಿಗೆ, ಮಘಾ ನಕ್ಷತ್ರದಲ್ಲಿ ಆದರೆ ಅರಣ್ಯದಲ್ಲಿ ವಾಸಿಸುವ ಜನಾಂಗಗಳಿಗೆ, ಪೂರ್ವಾಫಲ್ಗುಣೀ ನಕ್ಷತ್ರದಲ್ಲಿ ಆದರೆ ಉತ್ತಮ ಸ್ತ್ರೀಯರಿಗೆ, ಕಾಂಭೋಜ, ಸೌರಾಷ್ಟ್ರ ದೇಶಗಳ ರಾಜರುಗಳಿಗೆ, ಉತ್ತರಾಫಲ್ಗುಣೀ ನಕ್ಷತ್ರದಲ್ಲಿ ಗ್ರಹಣವಾದರೆ ಮಗಧ ದೇಶಕ್ಕೂ ಹಾಗೂ ಯವನರಿಗೂ ಪೀಡೆ ಉಂಟಾಗಲಿದೆ.

ಇದನ್ನೂ ಓದಿ:Chandra Grahan 2023: ಗ್ರಹಣದ ಸಮಯದಲ್ಲಿ ಈ ಕೆಲಸಗಳನ್ನು ಮಾಡದಿರಿ

ಹಸ್ತಾ ನಕ್ಷತ್ರದಲ್ಲಿ ಗ್ರಹಣವಾದರೆ ವಿಂಧ್ಯ ಪರ್ವತ ದಕ್ಷಿಣ ಭಾಗಕ್ಕೆ, ಚಿತ್ರಾ ನಕ್ಷತ್ರದಲ್ಲಿ ಮದ್ರ ಹಾಗೂ ಕುರುಕ್ಷೇತ್ರದ ಭಾಗಗಳಿಗೆ, ಸ್ವಾತಿ ನಕ್ಷತ್ರದಲ್ಲಿ ಆದರೆ ಕಾಶ್ಮೀರ ಹಾಗೂ ಗಾಂಧಾರ ಮೊದಲಾದ ಪ್ರದೇಶಗಳಿಗೆ, ವಿಶಾಖಾ ನಕ್ಷತ್ರದಲ್ಲಿ ಆದರೆ ಕಲ್ಲು, ವೃಕ್ಷಗಳಿಗೆ, ಅನುರಾಧಾ ನಕ್ಷತ್ರದಲ್ಲಿ ಕಾಶಿ ಹಾಗೂ ಕೋಸಲಪ್ರದೇಶದ ಜನರಿಗೆ, ಜ್ಯೇಷ್ಠಾ ನಕ್ಷತ್ರದಲ್ಲಿ ಹಿರಿಯರಿಗೆ ಹಾಗೂ ಅವರ ಹೆಂಡತಿಯರಿಗೆ, ಮೂಲಾದಲ್ಲಿ ಆದರೆ ಕ್ಷುದ್ರ, ಮಾಲವಕ ಹಾಗೂ ಸೈನಿಕರಿಗೆ, ಪೂರ್ವಾಷಾಢ ನಕ್ಷತ್ರದಲ್ಲಿ ಆದರೆ ಬಹ್ಮಪುತ್ರ, ಶೋಣಾ ಮೊದಲಾದ ಐದು ಗಂಡು ನದಿಗಳಿಗೆ, ಸೌವೀರದ ರಾಜನಿಗೆ, ಉತ್ತರಾಷಾಢ ನಕ್ಷತ್ರದಲ್ಲಿ ಆದರೆ ಶಿಬಿ, ಮಾಲವರಾಜ್ಯಗಳಿಗೆ, ಶ್ರವಣ ನಕ್ಷತ್ರದಲ್ಲಿ ಆದರೆ ಸಜ್ಜನರಿಗೆ, ಧನಿಷ್ಠದಲ್ಲಿ ಆದರೆ ಶ್ರೀಮಂತರಿಗೆ, ಶಕ ವಾಸಿಗಳಿಗೆ, ಅಂಡಜ ಪ್ರಾಣಿಗಳಿಗೆ, ಶತಭಿಷಾ ನಕ್ಷತ್ರದಲ್ಲಿ ಆದರೆ ಕೇಕಯ ಹಾಗೂ ಪಾಂಚಾಲ ರಾಜ್ಯಗಳಿಗೆ, ಪೂರ್ವಾಭಾದ್ರ ನಕ್ಷತ್ರದಲ್ಲಿ ಆದರೆ ವಂಗ ಹಾಗೂ ಮಗಧ ದೇಶವಾಸಿಗಳಿಗೆ, ಉತ್ತರಾಭಾದ್ರದಲ್ಲಿ ಆದರೆ ತ್ರಿಗರ್ತ ಭಾಗದ ಜನರಿಗೆ, ರೇವತಿಯಲ್ಲಿ ಆದರೆ ವಿದೇಹ ಮೊದಲಾದ ಭಾಗದ ಜನರಿಗೆ ತೊಂದರೆಯಾಗುವುದು.

ಇದು ಸಾಮನ್ಯವಾದ ನಿಯಮ. ಗ್ರಹಣ ಕಾಲದ ರಾಶಿ ಹಾಗೂ ನಕ್ಷತ್ರಗಳನ್ನು ಕಂಡುಕೊಂಡು ಕೂರ್ಮವಿಭಾಗದ ಮೂಲಕ ಫಲವನ್ನು ಹೇಳಬೇಕು ಎಂಬುದು ಮಹರ್ಷಿ ಪರಾಶರ ಅಭಿಪ್ರಾಯವಾಗಿದೆ.

ಕೂರ್ಮವಿಭಾಗೇನ ವದೇತ್ ಪೀಡಾಂ ದೇಶಸ್ಯ ವೀಕ್ಷ್ಯ ನಕ್ಷತ್ರಮ್ |

ಸಹಿತಂ ಗ್ರಹಣಂ ಯೇನ ತದ್ದೇಶಶ್ಚಾಪ್ನುಯಾತ್ ಪೀಡಾಮ್ ||

ಒಂದು ದೇಶದ ಬಗ್ಗೆ ಆಗಿನ ಕಾಲದ ಶೋಧನೆ ಏನು ಸಾಮನ್ಯದ್ದಲ್ಲ. ಸೃಷ್ಟಿಯ ಪ್ರತಿ ಅಂಶವನ್ನೂ ಹುಡುಕಿ ತೆಗದು ಅದನ್ನು ದಾಖಲಿಸುತ್ತಿದ್ದರು. ಈ ಗ್ರಹಣದ ಕುರಿತಾಗಿ ಇನ್ನಷ್ಟು ಮಾಹಿತಿಗಳಿವೆ. ಈ ಪ್ರಾಚೀನರ ಸಂಶೋಧನೆಯ ಆಳ, ಆಗಲಗಳನ್ನು ತಿಳಿಯುವುದು ಸುಲಭವಲ್ಲ‌

ಲೇಖನ: ಲೋಹಿತಶರ್ಮಾ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?