Guru Nanak Jayanti 2021: ಗುರು ನಾನಕ್ ಜಯಂತಿ ಯಾವಾಗ? ಈ ಪವಿತ್ರ ದಿನದಂದು ಸಿಖ್ ಧರ್ಮದ ಆದಿ ಗುರು ಬಗ್ಗೆ ತಿಳಿಯೋಣ
ಗುರು ನಾನಕ್ ದೇವ್ ಅವರು ಮೂರ್ತಿ ಪೂಜೆಯನ್ನು ನಿರರ್ಥಕ ಎಂದು ಬೋಧಿಸಿದರು. ಗುರು ನಾನಕ್ ದೇವ್ ರೂಢಿಗತ ಪದ್ಧತಿಗಳು ಮತ್ತು ಕುಸಂಸ್ಕಾರಗಳನ್ನು ಕಟುವಾಗಿ ವಿರೋಧಿಸಿದರು. ಸಿಖ್ ಧರ್ಮಕ್ಕೆ ಗುರು ನಾನಕ್ ದೇವ್ ಅವರ ಇಂತಹ ಮಹತ್ವದ ಬೋಧನೆಗಳೇ ಅಡಿಪಾಯ ಹಾಕಿವೆ.
ಸಿಖ್ ಧರ್ಮದ ಪ್ರಮುಖ ಗುರು ಗುರು ನಾನಕ್ ದೇವ್. ಧರ್ಮ ಸಂಸ್ಥಾಪನೆಗಾಗಿ ಅವರ ಕೊಡುಗೆ ಅಪಾರವಾಗಿದೆ. ಗುರು ನಾನಕ್ ಜಯಂತಿಯಂದು (Guru Nanak Jayanti 2021) ಸಿಖ್ಖರು ಬೆಳಗ್ಗೆಯೇ ಪ್ರಭಾತ್ ಪೇರಿ ನಡೆಸುತ್ತಾರೆ. ಗುರುದ್ವಾರಕ್ಕೆ ತೆರಳಿ ಶಿರ ಬಾಗಿ ನಮಸ್ಕರಿಸುತ್ತಾರೆ. ಅಲ್ಲಿ ಗುರು ನಾನಕ್ ದೇವರ ಜಪ, ಭಜನೆ ಮಾಡುತ್ತಾರೆ. ಕೀರ್ತನೆಗಳನ್ನು ಹಾಡುತ್ತಾರೆ. ಸಿಖ್ಖರಿಗೆ ಗುರು ನಾನಕ್ ಜಯಂತಿ ಅತ್ಯಂತ ಮಹತ್ವದ ಹಬ್ಬವಾಗಿದೆ. ಈ ವರ್ಷ ನವೆಂಬರ್ 19ರಂದು (ಇದೇ ಶುಕ್ರವಾರ) ಭಕ್ತ ಭಾವದಿಂದ ಆಚರಿಸುತ್ತಾರೆ. ಸಿಖ್ಖರು ಅತ್ಯಂತ ಸಂಭ್ರಮದಿಂದ ಆಚರಿಸುವ ಹಬ್ಬ ಇದಾಗಿದೆ. ಕಾರ್ತಿಕ ಮಾಸದಲ್ಲಿ ಅಮಾವಾಸ್ಯೆಯ ದಿನ ದೀಪಾವಳಿ ಆಚರಿಸುತ್ತಾರೆ. ಸರಿಯಾಗಿ 15 ದಿನಕ್ಕೆ ಅಂದರೆ ಕಾರ್ತಿಕ ಹುಣ್ಣಿಮೆಯ ದಿನ (Kartik Purnima) ಸಿಖ್ಖರು ಗುರು ನಾನಕ್ ಜಯಂತಿಯನ್ನು ಆಚರಿಸುತ್ತಾರೆ. ದೀಪಾವಳಿಯಷ್ಟೇ ಸಂಭ್ರಮದಿಂದ ಈ ಹಬ್ಬ ಆಚರಿಸುತ್ತಾರೆ. ತಿಂಗಳು ಮುಂಚೆಯೇ ಸಿಖ್ಖರು ಗುರು ನಾನಕ್ ಜಯಂತಿ ಆಚರಣೆಗೆ ಸಿದ್ಧತೆ ನಡೆಸುತ್ತಾರೆ.
ಸಿಖ್ಖರು ಗುರು ನಾನಕ್ ಜಯಂತಿಯಯನ್ನು ಬೆಳಕಿನ ಹಬ್ಬ ಎಂದೂ ಕರೆಯುತ್ತಾರೆ. ಅಂದು ಮನೆಯ ಮುಂದೆ ದೀಪಗಳನ್ನು ಹಚ್ಚುತ್ತಾರೆ. ಗುರು ನಾನಕ್ ಹುಟ್ಟಿದ್ದು ಇದೇ ದಿನ.
ಗುರು ನಾನಕ್ ಜಯಂತಿಯ ಇತಿಹಾಸ ಸಿಖ್ ಧರ್ಮದ ಮೊದಲು ಮತ್ತು ಪ್ರಮುಖ ಗುರುವೇ ಗುರು ನಾನಕ್. ಗುರು ನಾನಕ್ ದೇವ್ ಜನ್ಮವೆತ್ತಿದ್ದು 1469ರಲ್ಲಿ. ಕಾರ್ತಿಕ ಹುಣ್ಣಿಮೆಯ ದಿನ ಪಂಜಾಬ್ನಲ್ಲಿ ಇಂದಿನ ಪಾಕಿಸ್ತಾನದಲ್ಲಿ ರಾವಿ ನದಿ ಕಿನಾರೆಯಲ್ಲಿ ಇರುವ ತಳವಂಡಿ ಎಂಬ ಗ್ರಾಮದಲ್ಲಿ ಗುರು ನಾನಕ್ ಹುಟ್ಟಿದ್ದು.
ಗುರುದ್ವಾರ ನನಕಾನ ಸಾಹಿಬ್ (Gurdwara Nankana Sahib) ದರ್ಶನಕ್ಕೆ ದೇಶ ವಿದೇಶಗಳಿಂದ ಅನೇಕ ಜನರು ಪಾಕಿಸ್ತಾನಕ್ಕೆ ತೆರಳುತ್ತಾರೆ. ಸಿಖ್ ಸಾಮ್ರಾಜ್ಯದ ರಾಜ ರಣಜೀತ್ ಸಿಂಹ (Maharaja Ranjit Singh) gಉರುದ್ವಾರದ ಬಳಿ ಈ ನನಕಾನ ಸಾಹಿಬ್ ಅನ್ನು ರಚಿಸಿದರು.
ಗುರು ನಾನಕ್ ಯಾರು? ಗುರು ನಾನಕ್ ದೇವ್ ಅವರು ಮೂರ್ತಿ ಪೂಜೆಯನ್ನು ನಿರರ್ಥಕ ಎಂದು ಬೋಧಿಸಿದರು. ಗುರು ನಾನಕ್ ದೇವ್ ರೂಢಿಗತ ಪದ್ಧತಿಗಳು ಮತ್ತು ಕುಸಂಸ್ಕಾರಗಳನ್ನು ಕಟುವಾಗಿ ವಿರೋಧಿಸಿದರು. ಸಿಖ್ ಧರ್ಮಕ್ಕೆ ಗುರು ನಾನಕ್ ದೇವ್ ಅವರ ಇಂತಹ ಮಹತ್ವದ ಬೋಧನೆಗಳೇ ಅಡಿಪಾಯ ಹಾಕಿವೆ. ಹಾಗಾಗಿಯೇ ಗುರು ನಾನಕ್ ಅವರನ್ನು ಸಿಖ್ ಧರ್ಮದ ಆದಿ ಗುರು ಎಂದು ಕರೆಯುತ್ತಾರೆ.
ಲಡಾಖ್ ಮತ್ತು ಟಿಬೆಟ್ ಪ್ರಾಂತ್ಯಗಳಲ್ಲಿ ಗುರು ನಾನಕ್ ಅವರನ್ನು ನಾನಕ್ ಲಾಮಾ ಎಂದೂ ಸಂಬೋಧಿಸುತ್ತಾರೆ. ಗುರು ನಾನಕ್ ಅವರು 1539 ರ ಡಿಸೆಂಬರ್ 22 ರಂದು ಕೊನೆಯುಸಿರೆಳೆದರು. ಗುರು ನಾನಕ್ ಅವರು ಸಾವಿಗೂ ಮುನ್ನ ತಮ್ಮ ಶಿಷ್ಯ ನಹನಾ ಭಾಯ್ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿದ್ದರು. ಮುಂದೆ ಅವರು ಗುರು ಅಂಗದ್ ದೇವ್ ಹೆಸರಿನಲ್ಲಿ ಪ್ರಚಲಿತರಾದರು. ಅಂಗದ್ ದೇವ್ ಸಹ ತಮ್ಮ ಗುರುವಿನ ಹಾಗೆ ತಮ್ಮ ಜೀವನವನ್ನು ಮಾನವ ಕಲ್ಯಾಣದಲ್ಲಿ ತೊಡಗಿಸಿಕೊಂಡರು.
(guru nanak jayanti in kannada guru nanak jayanti date and history of guru nanak jayanti)