AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysuru Dasara: ಸರ್ಕಾರ ಉರುಳಿಸುವ ಕೆಲಸಕ್ಕೆ ಮುಂದಾಗಬಾರದು, ದಸರಾ ಉದ್ಘಾಟನೆ ವೇಳೆ ಹಂಪ ನಾಗರಾಜಯ್ಯ ಪಾಠ

ಮೈಸೂರು ದಸರಾ: ವಿಶ್ವವಿಖ್ಯಾತ ಮೈಸೂರು ದಸರಾವಗೆ ಗುರುವಾರ ಚಾಲನೆ ದೊರೆಯಿತು. ಖ್ಯಾತ ಸಾಹಿತಿ ಹಂಪ ನಾಗರಾಜಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಪ್ರತಿಪಕ್ಷಗಳಿಗೆ ಪಾಠ ಹೇಳಿದರು! ಜೀವನವೇ ದೊಡ್ಡ ಅಖಾಡ, ಧೃತಿಗೆಡದೆ ತೊಡೆತಟ್ಟಿ ನಿಲ್ಲಲೇಬೇಕು ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರನ್ನುದ್ದೇಶಿಸಿ ಹೇಳಿದರು.

Mysuru Dasara: ಸರ್ಕಾರ ಉರುಳಿಸುವ ಕೆಲಸಕ್ಕೆ ಮುಂದಾಗಬಾರದು, ದಸರಾ ಉದ್ಘಾಟನೆ ವೇಳೆ ಹಂಪ ನಾಗರಾಜಯ್ಯ ಪಾಠ
ಮೈಸೂರು ದಸರಾಗೆ ಗುರುವಾರ ಚಾಲನೆ ನೀಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಾಹಿತಿ ಹಂಪ ನಾಗರಾಜಯ್ಯ ಇತರರು ಇದ್ದಾರೆ.
ಸೂರಜ್ ಪ್ರಸಾದ್ ಎಸ್.ಎನ್
| Updated By: Ganapathi Sharma|

Updated on: Oct 03, 2024 | 10:30 AM

Share

ಮೈಸೂರು, ಅಕ್ಟೋಬರ್ 3: ಸೋತ ಪಕ್ಷವೂ ಮತ್ತೆ ಅಧಿಕಾರಕ್ಕೆ ಬರಲು 5 ವರ್ಷಗಳ ನಂತರ ಅವಕಾಶವಿದೆ. ಪ್ರತಿಪಕ್ಷಗಳು ಸರ್ಕಾರ ಉರುಳಿಸುವ ಕೆಲಸಕ್ಕೆ ಮುಂದಾಗಬಾರದು ಎಂದು ಸಾಹಿತಿ ಹಂಪ ನಾಗರಾಜಯ್ಯ ಹೇಳಿದರು. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಯುವಕರು ಮೋದಿ ಮೋದಿ ಎಂದು ಮುಂದುವರಿಯುತ್ತಿದ್ದಾರೆ. ಹಾಗೆಂದು ಸರ್ಕಾರ ಅಸ್ಥಿರಗೊಳಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದರು.

ದಸರಾ ಎಂಬುದು ಮತ ಧರ್ಮಗಳ ತಾರತಮ್ಯ ಇಲ್ಲದ ಸರ್ವ ಜನಾಂಗದ ಹಬ್ಬ. ಆಸ್ತಿಕತೆ, ನಾಸ್ತಿಕತೆ ಎಂಬುದು ದಸರಾದಲ್ಲಿ ಅಪ್ರಸ್ತುತ. ದಸರಾ ಅರಮನೆ ಹಬ್ಬವಲ್ಲ, ಜನ ಆರಿಸಿದ ಸರ್ಕಾರ ನಡೆಸುವ ಹಬ್ಬ ಎಂದು ನಾಗರಾಜಯ್ಯ ಹೇಳಿದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಎಷ್ಟೇ ಅಡ್ಡಿ ಆತಂಕಗಳು ಎದುರಾಗುತ್ತಿದ್ದರೂ ಎದೆಗುಂದದೆ ಸೆಡ್ಡು ಹೊಡೆದು ಗಟ್ಟಿಯಾಗಿ ನಿಂತಿದ್ದಾರೆ. ಜೀವನವೇ ದೊಡ್ಡ ಅಖಾಡ, ಧೃತಿಗೆಡದೆ ತೊಡೆತಟ್ಟಿ ನಿಲ್ಲಲೇಬೇಕು. ಸಜ್ಜನಿಕೆ, ಸೌಮ್ಯ ಸ್ವಭಾವ ದೌರ್ಬಲ್ಯವಲ್ಲ ಎಂದರು. ಆ ಮೂಲಕ ಹಂಪ ನಾಗರಾಜಯ್ಯ ಪರೋಕ್ಷವಾಗಿ ಸಿದ್ದರಾಮಯ್ಯಗೆ ಧೈರ್ಯ ತುಂಬಿದರು. ಜತೆಗೆ, ಸಿಎಂ, ಡಿಸಿಎಂ ಒಂದು ರೀತಿಯಲ್ಲಿ ಗರಡಿ ಮನೆ ಆಳಿನಂತೆ ಜಟ್ಟಿಗಳು ಬಣ್ಣಿಸಿದರು.

ಮೈಸೂರು ಅಂದರೆ ದಸರಾ, ದಸರಾ ಅಂದರೆ ಮೈಸೂರು ಎಂದು ನಾಗರಾಜಯ್ಯ ಬಣ್ಣಿಸಿದರು.

ಪತ್ನಿ ನೆನೆದು ಭಾವುಕರಾದ ನಾಗರಾಜಯ್ಯ

ಹಂಪ ನಾಗರಾಜಯ್ಯ ಹೆಂಡತಿ ದಿ. ಕಮಲಾ‌ ಹಂಪನಾ ಅವರಿಗೆ ನಮನ ಸಲ್ಲಿಕೆ ಮಾಡಲಾಯಿತು. ಇದೇ ವೇಳೆ, 88 ವರ್ಷದ ಧೀರ್ಘ ಜೀವನದ ನೆನಪು ಮಾಡಿಕೊಂಡ ಹಂಪನಾ ಭಾವುಕರಾದರು.

ಇದನ್ನೂ ಓದಿ: ಮೈಸೂರು ದಸರಾ: ಮಹಿಷಾಸುರ ಮರ್ದಿನಿ ವಿಗ್ರಹದ ವಿಶೇಷಗಳ ಬಗ್ಗೆ ಅರ್ಚಕ ಶಶಿಶೇಖರ ದೀಕ್ಷಿತ್ ಮಾತು ಇಲ್ಲಿದೆ

71 ವರ್ಷದ ಸ್ನೇಹದ ಸುಖ ನೀಡಿದೆ. 63 ವರ್ಷ ಮಡದಿಯಾಗಿ ಜೊತೆಯಾಗಿದ್ದೆ. ಆರು ವರ್ಷಗಳ ಕಾಲ ಸಹಪಾಠಿಯಾಗಿದ್ದೆ. ನಿನ್ನ ದಿವ್ಯ ನೆನಪಿಗೆ ಈ ಗೌರವ ಸಮರ್ಪಣೆ ಎಂದು ನಾಗರಾಜಯ್ಯ ಭಾವುಕರಾಗಿ ನೆನೆದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ