ದರ್ಭೆ ಹುಲ್ಲು ಧಾರ್ಮಿಕವಾಗಿಯಷ್ಟೇ ಅಲ್ಲ ದೈಹಿಕವಾಗಿಯೂ ಆರೋಗ್ಯಕ್ಕೆ ಉಪಯುಕ್ತ, ಇದರ ಪ್ರಾಮುಖ್ಯತೆ ತಿಳಿಯೋಣ ಬನ್ನೀ

Sacred Darbha: ದರ್ಭೆಯ ಸ್ಪರ್ಶ ಮಾತ್ರದಿಂದಲೇ ಅನೇಕ ಚರ್ಮ ವ್ಯಾಧಿಗಳು ದೂರವಾಗುತ್ತವೆ. ಮೂತ್ರದಲ್ಲಿ ಉರಿ, ರಕ್ತ ದೋಷ, ರಕ್ತ ಪಿತ್ತ, ಕಫ ಮುಂತಾದ ರೋಗಗಳು ದೂರವಾಗುತ್ತವೆ. ಶರೀರ ಶುದ್ಧಿ ಮಾಡಲು ಸಹ ಇದು ಶಕ್ತವಾಗಿದೆ. ದರ್ಭೆಯೊಡನೆ ಸಂಪರ್ಕಕ್ಕೆ ಬಂದ ನೀರನ್ನು ಕುಡಿಯುವುದರಿಂದ ಮುಖದಲ್ಲಿ ವಿಶಿಷ್ಟವಾದ ತೇಜಸ್ಸು ಓಜಸ್ಸು ಮೂಡುವುದು. ರಕ್ತದ ಏರೊತ್ತಡ ಉಂಟಾಗುವುದಿಲ್ಲ.

ದರ್ಭೆ ಹುಲ್ಲು ಧಾರ್ಮಿಕವಾಗಿಯಷ್ಟೇ ಅಲ್ಲ ದೈಹಿಕವಾಗಿಯೂ ಆರೋಗ್ಯಕ್ಕೆ ಉಪಯುಕ್ತ, ಇದರ ಪ್ರಾಮುಖ್ಯತೆ ತಿಳಿಯೋಣ ಬನ್ನೀ
ದರ್ಭೆ ಹುಲ್ಲು ಧಾರ್ಮಿಕವಾಗಿಯಷ್ಟೇ ಅಲ್ಲ ದೈಹಿಕವಾಗಿ ಆರೋಗ್ಯಕ್ಕೂ ಉಪಯುಕ್ತ. ಇದರ ಪವಿತ್ರ-ಅಪವಿತ್ರ, ಪ್ರಾಮುಖ್ಯತೆ ತಿಳಿಯೋಣ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Dec 31, 2021 | 6:06 AM

ಹಿಂದೂ ಧರ್ಮದಲ್ಲಿ ದರ್ಭೆ (ಕುಶಂ) ಹುಲ್ಲಿಗೆ (Sacred Darbha Grass) ಬಹಳ ಮಹತ್ವದ ಸ್ಥಾನವಿದೆ. ದೇವ ಹುಲ್ಲು ದರ್ಭೆಯ ಪ್ರಭಾವ, ಇದರ ಪವಿತ್ರ-ಅಪವಿತ್ರ, ಪ್ರಾಮುಖ್ಯತೆ ತಿಳಿಯೋಣ ಬನ್ನೀ ( Pavitram). ಆರೋಗ್ಯದಲ್ಲಿಯೂ ದರ್ಭೆ ಉಪಯುಕ್ತ(Darbha Traditional medicines). ದರ್ಭೆಯನ್ನು ನಲ, ರಂದ್ರಿ, ಪುಷ್ಪ, ಮೃತ್ಯ, ದಮನ, ನರ್ತಕ, ಅಗ್ನಿಗರ್ಭಂ, ದರ್ಭಗಡ್ಡಿ, ದರ್ಭೆ ಪಿಲ್ಲಿ, ಕುಸೈ ಎಂಬ ಹೆಸರುಗಳಿಂದ ಕರೆಯುತ್ತಾರೆ. ನದಿ ಪಾತ್ರದ ಭೂಮಿಯಲ್ಲಿ, ಹುಲ್ಲುಗಾವಲು ಅರಣ್ಯ, ಕೆರೆಕಟ್ಟೆ, ಕುಂಟೆಗಳ ಸುತ್ತ, ಹುತ್ತದ ಮೇಲೆ ಬೆಳೆಯುವ ಒಂದು ರೀತಿಯ ಪವಿತ್ರವಾದ ಹುಲ್ಲು ಇದು. ಕೆಲವು ಹಳೆಯ ಗ್ರಂಥಗಳ ಪ್ರಕಾರ ದರ್ಭೆ ಹುಲ್ಲಿನಲ್ಲಿ 7 ರೀತಿಯ ಪ್ರಭೇದಗಳಿವೆ ಎಂದು ಉಲ್ಲೇಖವಿದ್ದರೆ, ಮತ್ತೆ ಕೆಲವು ಗ್ರಂಥಗಳಲ್ಲಿ 9 ಪ್ರಭೇದಗಳಿವೆ ಎಂದೂ ಉಲ್ಲೇಖಿಸಲಾಗಿದೆ. ಅವುಗಳಲ್ಲಿ ಉದ್ದವಾಗಿ ಬೆಳೆಯುವ ವಿಶಾಮಿತ್ರ ಹಾಗೂ ಗಿಡ್ಡವಾಗಿ ಬೆಳೆಯುವ ವಶಿಷ್ಠ ತುಂಬಾ ಶ್ರೇಷ್ಠವಾಗಿವೆ.

ನವಗ್ರಹಗಳಲ್ಲಿ ಒಂದಾದ ಕೇತು ಗ್ರಹವನ್ನು ಪ್ರತಿನಿಧಿಸುವ ದರ್ಭೆ ಹುಲ್ಲು ಹೋಮ, ಯಜ್ಞ, ಯಾಗಾದಿಗಳ ಆಚರಣೆಗೆ ಇರಲೇಬೇಕು. ಹೋಮ, ಯಜ್ಞ, ಯಾಗಾದಿಗಳನ್ನು ಮಾಡಲು ಸಿದ್ಧವಾಗುವಾಗ, ಯಜ್ಞ ದೀಕ್ಷೆ ಪಡೆಯಲು ಉಂಗುರದ ಬೆರಳಿಗೆ ದರ್ಭೆಯನ್ನು ಉಂಗುರದಂತೆ ಧರಿಸುತ್ತಾರೆ. ಇದಕ್ಕೆ ಪವಿತ್ರ ಎಂದು ಕರೆಯುತ್ತಾರೆ. ದರ್ಭೆಯನ್ನು ಶುಭ-ಅಶುಭ ಕಾರ್ಯಗಳೆರಡಕ್ಕೂ ಪುರಾತನ ಕಾಲದಿಂದಲೂ ಹಿಂದೂ ಸಂಪ್ರಾಯದಲ್ಲಿ ಉಪಯೋಗಿಸುತ್ತಾ ಬಂದಿದ್ದಾರೆ. ಇದನ್ನು ಪರಮ ಪವಿತ್ರವೆಂದು ಭಾವಿಸುತ್ತಾರೆ.

ರಾಮಾಯಣ, ಮಹಾಭಾರತ ಕಾಲದಲ್ಲೂ ದರ್ಭೆಯ ಪ್ರಸ್ತಾಪ ಇರುವುದು ಪುರಾಣ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಋಷಿ ಮುನಿಗಳು ಆಶ್ರಮ ನಿರ್ಮಿಸಲು ದರ್ಭೆ ಹುಲ್ಲನ್ನು, ಜಪತಪ ಮಾಡಲು ದರ್ಭಾಸನಗಳನ್ನು ಉಪಯೋಗಿಸುತ್ತಿದ್ದರು. ದರ್ಭೆಯನ್ನು ಬೆರಳಿಗೆ ಧಾರಣೆ ಮಾಡುವುದರಿಂದ ಶರೀರದ ಎಲ್ಲಾ ಭಾಗಗಳಿಗೂ ಒಂದು ವಿಧವಾದ ಆಯಾಸ್ಕಾಂತ ಶಕ್ತಿಯು ಪಸರಿಸುವುದು.

ಇದರಿಂದ ಮನೋವಿಕಲ್ಪಗಳು ದೂರವಾಗಿ ಜಿತೇಂದ್ರಯತ್ವ ಲಭಿಸುವುದು. ಮನಸ್ಸಿನ ಮೇಲೆ ಹತೋಟಿ ಸಾಧಿಸಿದ ನಂತರ ಲೋಕ ಕಲ್ಯಾಣಾರ್ಥ ಕಾರ್ಯಗಳಾದ ಹೋಮ, ಯಜ್ಞ, ಯಾಗಾದಿಗಳನ್ನು ಮಾಡುವಾಗ ಇರಬೇಕಾದದ್ದು ಅತ್ಯಗತ್ಯವಾಗಿದೆ. ಪವಿತ್ರವು ಜ್ಞಾನವಾಹಿನಿ ಮತ್ತು ಕ್ರಿಯವಾಹಿನಿ. ನರಗಳ ಮೂಲಕ ಮಹಾಮಸ್ತಿಷ್ಕ ಹಾಗೂ ಅನು ಮಸ್ತಿಷ್ಕಗಳಿಗೆ ನೇರವಾದ ಸಂಪರ್ಕವನ್ನು ಉಂಟುಮಾಡುವುದರಿಂದ ಇಂತಹ ಅದ್ಭುತ ಪರಿಣಾಮ ಉಂಟಾಗುವುದು.

ದರ್ಭೆಯ ಸ್ಪರ್ಶ ಮಾತ್ರದಿಂದಲೇ ಅನೇಕ ಚರ್ಮ ವ್ಯಾಧಿಗಳು ದೂರವಾಗುತ್ತವೆ. ಮೂತ್ರದಲ್ಲಿ ಉರಿ, ರಕ್ತ ದೋಷ, ರಕ್ತ ಪಿತ್ತ, ಕಫ ಮುಂತಾದ ರೋಗಗಳು ದೂರವಾಗುತ್ತವೆ. ಶರೀರ ಶುದ್ಧಿ ಮಾಡಲು ಸಹ ಇದು ಶಕ್ತವಾಗಿದೆ. ದರ್ಭೆಯೊಡನೆ ಸಂಪರ್ಕಕ್ಕೆ ಬಂದ ನೀರನ್ನು ಕುಡಿಯುವುದರಿಂದ ಮುಖದಲ್ಲಿ ವಿಶಿಷ್ಟವಾದ ತೇಜಸ್ಸು ಓಜಸ್ಸು ಮೂಡುವುದು. ರಕ್ತದ ಏರೊತ್ತಡ ಉಂಟಾಗುವುದಿಲ್ಲ. ಆದ್ದರಿಂದಲೇ ತಾಮ್ರದ ಹೋಮ ಪಾತ್ರೆಯ ಮೇಲೆ ದರ್ಭೆಯನ್ನು ಇಡುತ್ತಾರೆ.

ದರ್ಭೆಯು ದಗ್ದವಾಗಿ ಬರುವ ಹೋಮ ಧೂಮವು ಕಣ್ಣಿನ ಕಾಂತಿಯನ್ನು ವೃದ್ಧಿಸಿ, ಕಣ್ಣಿನ ವ್ಯಾಧಿಗಳನ್ನು ದೂರಮಾಡಬಲ್ಲದು. ಸಾಮಾನ್ಯವಾಗಿ ಗ್ರಹಣದ ಸಮಯದಲ್ಲಿ ನೀರು, ಆಹಾರ ವಸ್ತುಗಳನ್ನು ಭದ್ರ ಪಡಿಸಿರುವ, ಹಂಡೆ, ಕೊಳಗ, ಡಬ್ಬಿಗಳ ಮೇಲೆ ದರ್ಭೆಯನ್ನು ಇಡುವರು. ಗ್ರಹಣ ಸಂಭವಿಸುವ ಪ್ರದೇಶದ ಸುತ್ತಲೂ ಒಂದು ವಿಧವಾದ ವಿಷವರ್ತುಲ ರೂಪಗೊಳ್ಳುತ್ತದೆ. ದರ್ಭೆ ಇಡುವ ಕಡೆ ಒಂದು ಮೀಟರ್ ಪ್ರದೇಶದಷ್ಟು ದೂರ ವಿಷವರ್ತುಲವನ್ನು ತಡೆದು ನೀರು, ಆಹಾರ ಪಾದರ್ಥಗಳ ಮೇಲುಂಟಾಗುವ ದುಷ್ಪರಿಣಾಮವನ್ನು ಭೇದಿಸಿ ರಕ್ಷಿಸುವ ಶಕ್ತಿ ದರ್ಭೆಯಲ್ಲಿದೆ.

ದರ್ಭೆ ಬೇರಿನ ಕಷಾಯ ಸೇವನೆಯಿಂದ ದೇಹದಲ್ಲಿನ ಉಷ್ಣತೆ ಕಡಿಮೆಯಾಗಿ, ದೇಹ ತಂಪಾಗುತ್ತದೆ. ಮೂತ್ರ ಸಮಸ್ಯೆಗಳಾದ ಮೂತ್ರ ಬಂಧ, ಮೂತ್ರದಲ್ಲಿ ಉರಿ, ಮೂತ್ರದಲ್ಲಿ ರಕ್ತ ಬೀಳುವುದು ದೂರವಾಗುತ್ತದೆ. ಅತಿಸಾರ ಭೇದಿ ನಿವಾರಣೆಯಾಗುತ್ತೆ.

ಬೇರನ್ನು ಜಜ್ಜಿ ಹಸುವಿನ ಹಾಲಲ್ಲಿ ಹಾಕಿ ಕುದಿಸಿ, ಕಲ್ಲುಸಕ್ಕರೆ ಬೆರೆಸಿ ಕುಡಿಯುತ್ತಾ ಬಂದರೆ ಬಾಣಂತಿಯರಲ್ಲಿ ಎದೆ ಹಾಲು ಹೆಚ್ಚೆಚ್ಚು ಉತ್ಪತ್ತಿಯಾಗುತ್ತದೆ. ದರ್ಭೆ ಗರಿಯ ರಸ ಅಥವಾ ಕಷಾಯ ಸೇವಿಸುತ್ತಾ ಬಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹತೋಟಿಗೆ ಬರುತ್ತೆ. ಮೂಲವ್ಯಾಧಿ ವಾಸಿಯಾಗುತ್ತೆ. ದಿನವೂ ದರ್ಭಾಸನದಲ್ಲಿ ಕುಳಿತುಕೊಳ್ಳುವ ಅಭ್ಯಾಸ ಮಾಡಿಕೊಂಡರೆ ದೇಹವು ತಂಪಾಗುತ್ತೆ. ಮೆದುಳು ಚುರುಕಾಗುತ್ತೆ. ಜ್ಞಾನಶಕ್ತಿ, ಜ್ಞಾಪಕಶಕ್ತಿ ಹೆಚ್ಚುತ್ತದೆ.

ಬೇರಿನ ಕಷಾಯ ನಿಯಮಿತವಾಗಿ ಸೇವಿಸುತ್ತಾ ಬಂದರೆ ಮಹಿಳೆಯರಲ್ಲಿ ಅತಿ ಋತುಸ್ರಾವ ಸಮಸ್ಯೆ ನಿವಾರಣೆಯಾಗುತ್ತೆ. ಎಳ್ಳೆಣ್ಣೆಯಲ್ಲಿ ದರ್ಭೆಯನ್ನು ಹಾಕಿ ಚೆನ್ನಾಗಿ ಕುದಿಸಿ, ಚರ್ಮ ರೋಗಗಳಾದ ಬಿಳಿ ಮಚ್ಚೆ(ತೊನ್ನು) ಕುಷ್ಠದ ಮೇಲೆ ಲೇಪಿಸುತ್ತಾರೆ. ದದ್ದು, ನವೆ, ಕಜ್ಜಿ, ಹುಳುಕಡ್ಡಿ ಸಹ ನಿವಾರಣೆಯಾಗುತ್ತದೆ. ಚೇಳು, ವಿಷಜಂತುಗಳು ಕಚ್ಚಿದಾಗ ದರ್ಭೆ ಬೇರಿನ ರಸಕ್ಕೆ ಕಾಳುಮೆಣಸಿನ ಚೂರ್ಣ ಬೆರೆಸಿ ಕುಡಿಸಿದರೆ, ವಿಷ ನಿವಾರಣೆಯಾಗುತ್ತದೆ.

ದರ್ಭೆ ಬೇರನ್ನು ಜಜ್ಜಿ ರಸ ತೆಗೆದು, ಅಕ್ಕಿ ತೊಳೆದ ನೀರಲ್ಲಿ ಕಲಸಿ 3-4 ದಿನ ಕುಡಿದರೆ ಮಹಿಳೆಯರಲ್ಲಿ ಶ್ವೇತಪ್ರದರ, ರಕ್ತಪ್ರದರ ವ್ಯಾಧಿಗಳು ಗುಣವಾಗುತ್ತವೆ. ದೇಹದಲ್ಲಿ ಗಾಯದಿಂದ ರಕ್ತಸ್ರಾವವಾಗುತ್ತಿದ್ದರೆ ದರ್ಭೆ ಬೇರನ್ನು ಜಜ್ಜಿ ಗಾಯದ ಮೇಲಿಟ್ಟರೆ ತಕ್ಷಣ ರಕ್ತಸ್ರಾವ ನಿಂತು, ಗಾಯ ಬೇಗನೆ ಗುಣವಾಗುತ್ತದೆ. ಬೇರನ್ನು ಜಜ್ಜಿ ರಸ ತೆಗೆದು, ಮಜ್ಜಿಗೆಯಲ್ಲಿ ಕಲಸಿ ಕುಡಿಯುತ್ತಾ ಬಂದು, ಬೇರಿನ ಗಂಧವನ್ನು ಲೇಪಿಸುತ್ತಾ ಬಂದರೆ ಮೂಲವ್ಯಾಧಿ, ರಕ್ತ ಮೂಲವ್ಯಾಧಿ ನಿವಾರಣೆಯಾಗುತ್ತದೆ.

ಪುರಾತನ ಕಾಲದಿಂದಲೂ ದರ್ಭೆಗೆ ಪ್ರಾಮುಖ್ಯತೆ ನೀಡಲಾಗಿದೆ. ವೈದಿಕ ಸಂಪ್ರದಾಯದಲ್ಲಿ ತುಂಬಾ ಪವಿತ್ರವಾಗಿ ಭಾವಿಸುತ್ತಾರೆ. ದೇವತಾ ಕಾರ್ಯ, ಮದುವೆ, ಉಪನಯನ ಮುಂತಾದ ಕಾರ್ಯಗಳಲ್ಲಿ ದರ್ಭೆಗೆ ವಿಶಿಷ್ಟ ಸ್ಥಾನಮಾನವಿದೆ. ಪಿತೃಕಾರ್ಯದಲ್ಲೂ ಸಹ ಉಪಯೋಗಿಸುತ್ತಾರೆ. ದರ್ಭೆಗೆ ಶುಭ-ಅಶುಭ ಕಾರ್ಯಗಳೆರಡರಲ್ಲೂ ಸ್ಥಾನ ನೀಡಲಾಗಿದೆ. (ಸಂಗ್ರಹ: ನಿತ್ಯಸತ್ಯ)

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್