September Festivals List 2026: ಸೆಪ್ಟೆಂಬರ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
ತಿಂಗಳು ದಿನಗಳಂತೆ ಉರುಳುತ್ತಿದೆ. ಇದೀಗ ಆಗಸ್ಟ್ ತಿಂಗಳು ಕಳೆದು ಸೆಪ್ಟೆಂಬರ್ ತಿಂಗಳನ್ನು ಬರ ಮಾಡಿಕೊಳ್ಳಲು ಸಜ್ಜಾಗಿದ್ದೇವೆ. ನಿಮಗೆ ತಿಳಿದಿರುವಂತೆ ಪ್ರತಿ ತಿಂಗಳಲ್ಲೂ ವಿಶೇಷ ಹಬ್ಬಗಳಿವೆ. ಈ ವರ್ಷದ ಒಂಭತ್ತನೇ ತಿಂಗಳಲ್ಲಿ ಹತ್ತು ಹಲವು ಹಬ್ಬಗಳು, ವ್ರತಾಚರಣೆಗಳಿವೆ. ಹಾಗಾದ್ರೆ ಸೆಪ್ಟೆಂಬರ್ ತಿಂಗಳಲ್ಲಿ ಆಚರಿಸಲಾಗುವ ಹಬ್ಬ ಹರಿದಿನಗಳ ಕುರಿತಾದ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರImage Credit source: Getty Images
ಹಿಂದೂ ಧರ್ಮದಲ್ಲಿ ವರ್ಷವಿಡೀ ಹಬ್ಬ ಹರಿದಿನಗಳು (festivals) , ಧಾರ್ಮಿಕ ಆಚರಣೆಗಳಿವೆ. ಇದೀಗ ಈ ವರ್ಷದ ಒಂಭತ್ತನೇ ತಿಂಗಳಾದ ಸೆಪ್ಟೆಂಬರನ್ನು ಬರಮಾಡಿಕೊಳ್ಳಲು ಒಂದೆರಡು ದಿನಗಳಷ್ಟೇ ಬಾಕಿಯಿದೆ. ಈ ತಿಂಗಳಲ್ಲಿ ಬಲರಾಮ ಜಯಂತಿ, ಗೌರಿ ಹಬ್ಬ, ಗಣೇಶ ಚತುರ್ಥಿ ಹೀಗೆ ಹತ್ತು ಹಲವು ಹಬ್ಬಗಳು, ಆಚರಣೆಗಳಿವೆ. ಹಾಗಾದ್ರೆ ಈ ತಿಂಗಳಲ್ಲಿ ಯಾವೆಲ್ಲಾ ಹಬ್ಬಗಳು, ವ್ರತಾಚರಣೆಗಳಿವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
- ಸೆಪ್ಟೆಂಬರ್ 2- ಬಲರಾಮ ಜಯಂತಿ
- ಸೆಪ್ಟೆಂಬರ್ 7 – ಸರ್ವೈಕಾದಶಿ ಅಜಾ
- ಸೆಪ್ಟೆಂಬರ್ 8 – ಪ್ರದೋಷ
- ಸೆಪ್ಟೆಂಬರ್ 9 – ಮಾಸ ಶಿವರಾತ್ರಿ
- ಸೆಪ್ಟೆಂಬರ್ 11- ಅಮಾವಾಸ್ಯಾ
- ಸೆಪ್ಟೆಂಬರ್ 11- ಕುಸೋತ್ಪತ್ತಿನಿ
- ಸೆಪ್ಟೆಂಬರ್ 11- ದರ್ಭಾಹರಣಮ್
- ಸೆಪ್ಟೆಂಬರ್ 12- ಭಾದ್ರಪದ ಶುಕ್ಲ ಪಕ್ಷ
- ಸೆಪ್ಟೆಂಬರ್ 13- ವರಹಾ ಜಯಂತಿ
- ಸೆಪ್ಟೆಂಬರ್ 13- ಸಾಮೋಪಕರ್ಮ
- ಸೆಪ್ಟೆಂಬರ್ 13- ಮಹಾನಕ್ಷತ್ರ ಉತ್ತರಾ
- ಸೆಪ್ಟೆಂಬರ್ 14- ಗೌರಿ ತೃತೀಯ
- ಸೆಪ್ಟೆಂಬರ್ 14- ಗೌರಿನೋಂಪಿ ವ್ರತ
- ಸೆಪ್ಟೆಂಬರ್ 14-ಗಣೇಶ ಚತುರ್ಥಿ
- ಸೆಪ್ಟೆಂಬರ್ 14- ಹರಿತಾಲಿಕ ವ್ರತ
- ಸೆಪ್ಟೆಂಬರ್ 15- ಖುಷಿ ಪಂಚಮಿ
- ಸೆಪ್ಟೆಂಬರ್ 16- ದಶಲಕ್ಷಣ ಪರ್ವಾರಂಭ
- ಸೆಪ್ಟೆಂಬರ್ 17- ವಿಶ್ವ ಕರ್ಮ ಪೂಜಾ
- ಸೆಪ್ಟೆಂಬರ್ 17- ಕನ್ಯಾ ಸಂಕ್ರಮಣ
- ಸೆಪ್ಟೆಂಬರ್ 17- ಸೂರ್ಯ ಷಷ್ಠಿ
- ಸೆಪ್ಟೆಂಬರ್ 18- ನಿರ್ದೋಷ ಸಪ್ತಮಿ ವ್ರತ
- ಸೆಪ್ಟೆಂಬರ್ 19- ದೂರ್ವಾಷ್ಟಮಿ
- ಸೆಪ್ಟೆಂಬರ್ 20- ಕೇದರಾವ್ರತ
- ಸೆಪ್ಟೆಂಬರ್ 21- ಉತ್ತರಾಷಾಢಾ ಅಹೋರಾತ್ರ
- ಸೆಪ್ಟೆಂಬರ್ 21- ಸುಗಂಧ ದಶಮಿ ವ್ರತ
- ಸೆಪ್ಟೆಂಬರ್ 21- ನಾರಾಯಣ ಗುರು ಪುಣ್ಯ ದಿನ
- ಸೆಪ್ಟೆಂಬರ್ 22- ಸರ್ವೈಕಾದಶಿ ಪರಿವರ್ತಿನಿ
- ಸೆಪ್ಟೆಂಬರ್ 23- ದಧಿವಾಮನ ಜಯಂತಿ
- ಸೆಪ್ಟೆಂಬರ್ 24- ರತ್ನತ್ರಯ ವ್ರತ
- ಸೆಪ್ಟೆಂಬರ್ 24- ಪ್ರದೋಷ
- ಸೆಪ್ಟೆಂಬರ್ 25- ಅನಂತ ಚತುರ್ದಶಿ
- ಸೆಪ್ಟೆಂಬರ್ 26- ಹುಣ್ಣಿಮೆ
- ಸೆಪ್ಟೆಂಬರ್ 27- ಮಹಾಲಯಾರಂಭ ಅಥವಾ ಪಿತೃಪಕ್ಷಾರಂಭ
- ಸೆಪ್ಟೆಂಬರ್ 28- ಶಾರದಾಪ್ರತಿಷ್ಠಾ
- ಸೆಪ್ಟೆಂಬರ್ 29- ಸಂಕಷ್ಟಹರ ಚತುರ್ಥೀ
ಇನ್ನಷ್ಟು ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:49 pm, Sun, 30 August 26
Follow Us




