Swapna Shastra: ಕನಸಿನಲ್ಲಿ ಶಿವ ಕಾಣಿಸಿಕೊಂಡರೆ ಏನರ್ಥ? ಸ್ವಪ್ನ ಶಾಸ್ತ್ರ ಹೇಳುವುದೇನು?

ನಿದ್ರೆಯಲ್ಲಿ ಕಾಣುವ ಕನಸುಗಳು ಸಾಮಾನ್ಯವಾದರೂ, ಸ್ವಪ್ನ ಶಾಸ್ತ್ರದ ಪ್ರಕಾರ ಶಿವನಿಗೆ ಸಂಬಂಧಿಸಿದ ಕನಸುಗಳು ವಿಶೇಷ ಅರ್ಥ ಹೊಂದಿವೆ. ಶ್ರಾವಣ ಮಾಸದಲ್ಲಿ ಮಹಾದೇವನ ದರ್ಶನ ಅತ್ಯಂತ ಶುಭ ಸಂಕೇತ. ಶಿವನ ರೂಪ, ಶಿವಲಿಂಗ ಅಥವಾ ಹಾವು ಕನಸಿನಲ್ಲಿ ಕಂಡರೆ ಜೀವನದಲ್ಲಿ ಪ್ರಮುಖ ಬದಲಾವಣೆ, ಕಾರ್ಯಗಳಲ್ಲಿ ಯಶಸ್ಸು, ಅಡೆತಡೆ ನಿವಾರಣೆ ಮತ್ತು ಆಧ್ಯಾತ್ಮಿಕ ಏಳಿಗೆ ಸೂಚಿಸುತ್ತದೆ. ಇದು ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ ಎಂದು ನಂಬಲಾಗಿದೆ.

Swapna Shastra: ಕನಸಿನಲ್ಲಿ ಶಿವ ಕಾಣಿಸಿಕೊಂಡರೆ ಏನರ್ಥ? ಸ್ವಪ್ನ ಶಾಸ್ತ್ರ ಹೇಳುವುದೇನು?
ಕನಸಿನಲ್ಲಿ ಶಿವ ಕಾಣಿಸಿಕೊಂಡರೆ ಏನರ್ಥ?
Image Credit source: Getty Images

Updated on: Aug 23, 2026 | 8:09 AM

ನಿದ್ರೆಯ ಸಮಯದಲ್ಲಿ ಕನಸುಗಳು ಬೀಳುವುದು ಸಹಜ ಪ್ರಕ್ರಿಯೆ. ದಿನವಿಡೀ ನಾವು ನೋಡಿದ, ಕೇಳಿದ ಮತ್ತು ಯೋಚಿಸಿದ ವಿಷಯಗಳು ಕೆಲವೊಮ್ಮೆ ಕನಸಿನ ರೂಪದಲ್ಲಿ ಬರುತ್ತವೆ. ಆದರೆ ಆಧ್ಯಾತ್ಮಿಕ ಹಾಗೂ ಸ್ವಪ್ನ ಶಾಸ್ತ್ರದ ನಂಬಿಕೆಗಳ ಪ್ರಕಾರ, ದೇವರು, ದೇವಾಲಯ ಮತ್ತು ಪ್ರಕೃತಿಗೆ ಸಂಬಂಧಿಸಿದ ಕನಸುಗಳಿಗೆ ವಿಶೇಷ ಅರ್ಥಗಳಿವೆ. ವಿಶೇಷವಾಗಿ ಶ್ರಾವಣ ಮಾಸದಲ್ಲಿ ಮಹಾದೇವ ಶಿವನಿಗೆ ಸಂಬಂಧಿಸಿದ ದೃಶ್ಯಗಳು ಕನಸಿನಲ್ಲಿ ಕಾಣಿಸಿಕೊಂಡರೆ ಅವುಗಳನ್ನು ಅತ್ಯಂತ ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಕನಸಿನಲ್ಲಿ ಶಿವನ ರೂಪ ಕಂಡರೆ ಸಿಗುವ ಫಲಗಳು:

ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಮಹಾದೇವನ ದರ್ಶನವಾಗುವುದು ಜೀವನದ ಪ್ರಮುಖ ಬದಲಾವಣೆಯ ಸಂಕೇತವಾಗಿದೆ. ಶಿವನು ಸದ್ಗುಣ, ಶಕ್ತಿ ಮತ್ತು ಪರಿವರ್ತನೆಯ ಸಂಕೇತವಾಗಿರುವುದರಿಂದ, ಈ ಕನಸು ನಿಮ್ಮ ಜೀವನದಲ್ಲಿನ ನಕಾರಾತ್ಮಕ ಪರಿಸ್ಥಿತಿಗಳು ದೂರವಾಗಿ, ಯೋಜಿತ ಕಾರ್ಯಗಳಲ್ಲಿ ಯಶಸ್ಸು ಮತ್ತು ಹೊಸ ಉತ್ತಮ ಅವಕಾಶಗಳು ಲಭಿಸಲಿವೆ ಎಂಬುದನ್ನು ಸೂಚಿಸುತ್ತದೆ.

ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ಅಷ್ಟಲಕ್ಷ್ಮಿ ರಾಜಯೋಗ; ಈ 4 ರಾಶಿಗೆ ಒಲಿಯಲಿದೆ ಅಪಾರ ಧನಸಂಪತ್ತು!

ಶಿವಲಿಂಗದ ದರ್ಶನ ಮತ್ತು ದೇವಾಲಯದ ಕನಸು:

ಕನಸಿನಲ್ಲಿ ಶಿವಲಿಂಗವನ್ನು ನೋಡುವುದು ಅತ್ಯಂತ ಪವಿತ್ರ ಎಂದು ಭಾವಿಸಲಾಗುತ್ತದೆ. ಇದು ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳುವುದನ್ನು ಮತ್ತು ಅಡೆತಡೆಗಳು ನಿವಾರಣೆಯಾಗುವುದನ್ನು ತೋರಿಸುತ್ತದೆ. ಹಾಗೆಯೇ, ಶಿವನ ದೇವಾಲಯ ಕನಸಿನಲ್ಲಿ ಕಂಡರೆ ಮನಸ್ಸಿಗೆ ಅಪಾರ ಶಾಂತಿ, ಆಧ್ಯಾತ್ಮಿಕ ಜಾಗೃತಿ ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಪರಿಹಾರ ಸಿಗಲಿದೆ ಎಂಬ ಭರವಸೆಯ ಸಂಕೇತವಾಗಿದೆ.

ಶಿವನ ಅಭರಣ ಹಾವಿನ ಕನಸು ಹಾಗೂ ಗರ್ಭಿಣಿಯರ ನಂಬಿಕೆಗಳು:

ಹಿಂದೂ ಸಂಪ್ರದಾಯದಲ್ಲಿ ಹಾವನ್ನು ಶಿವನ ಕೊರಳ ಅಭೂಷಣವಾಗಿ ಪೂಜಿಸಲಾಗುತ್ತದೆ. ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಅದು ಆಧ್ಯಾತ್ಮಿಕ ಏಳಿಗೆ ಅಥವಾ ಜೀವನದ ಪ್ರಮುಖ ಬೆಳವಣಿಗೆಯನ್ನು ಸೂಚಿಸುತ್ತದೆ. ಇನ್ನು ಗರ್ಭಿಣಿ ಮಹಿಳೆಯ ಕನಸಿನಲ್ಲಿ ಶಿವಲಿಂಗ ಕಂಡರೆ ಗಂಡು ಮಗು ಜನಿಸುತ್ತದೆ ಎಂಬ ಸಾಂಪ್ರದಾಯಿಕ ನಂಬಿಕೆಯಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us