Spiritual: ಛಾಯಾಗ್ರಹರು ಯಾರು? ಅವರ ಆರಾಧನೆ ಹೇಗೆ?

ರಾಹು ಮತ್ತು ಕೇತು ಗ್ರಹರು ಇಬ್ಬರೂ ಪಾಪತ್ವವುಳ್ಳ ಗ್ರಹರು. ಹಾಗಂತ ಅವರುಗಳು ನಮ್ಮ ಕುಂಡಲಿಯಲ್ಲಿ ಉತ್ತಮ ಸ್ಥಾನದಲ್ಲಿದ್ದರೆ ಶುಭಫಲವನ್ನು ಕೊಡುತ್ತಾರೆ. ಮೊದಲಿಗೆ ಎಂಟನೇ ಗ್ರಹವಾದ ರಾಹುವಿನ ಬಗ್ಗೆ ಚಿಂತನೆ ಮಾಡೋಣ – ರಾಹುವಿಗೆ ಅಧಿದೇವತೆ ಸರ್ಪ. ಅಂದರೆ ಸುಬ್ರಹ್ಮಣ್ಯನೆಂದು ಹೇಳಿದರೆ ತಪ್ಪಲ್ಲ.

Spiritual: ಛಾಯಾಗ್ರಹರು ಯಾರು? ಅವರ ಆರಾಧನೆ ಹೇಗೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 08, 2022 | 8:10 AM

ನಭೋಮಂಡಲದಲ್ಲಿ ಸಂಚರಿಸುವ ಗ್ರಹರು ನಮ್ಮ ಜನ್ಮಕಾಲದಲ್ಲಿ ಯಾವ ಸ್ಥಾನದಲ್ಲಿ ಇರುತ್ತಾರೋ ಅದರ ಆಧಾರದ ಮೇಲೆ ನಮ್ಮ ಜೀವನಚಕ್ರದ ಸ್ವರೂಪ ಜಾತಕ / ಕುಂಡಲಿಯ ರೂಪದಲ್ಲಿ ನಿರ್ಣಯವಾಗುತ್ತದೆ. ಅದರಲ್ಲಿ ಪ್ರಧಾನವಾಗಿ ಏಳು ಗ್ರಹರು ಗ್ರಾಹ್ಯ. ಉಳಿದ ರಾಹು ಮತ್ತು ಕೇತು ಎನ್ನುವ ಗ್ರಹಗಳೇನಿವೆ ಅವುಗಳು ಉಳಿದ ಗ್ರಹರಂತೆ ಅಲ್ಲ. ಅವರನ್ನು ಛಾಯಾಗ್ರಹರು ಎಂದು ಕರೆಯುತ್ತಾರೆ. ಸಮುದ್ರಮಥನ ಸಂದರ್ಭದಲ್ಲಿ ಅಮೃತ ಉದ್ಭವವಾದಾಗ ಸಿಂಹಿಕಾ ಎಂಬ ರಾಕ್ಷಸಿಯ ಮಗನು ಕಪಟದಿಂದ ಅದರ ಅಮೃತಪಾನ ಮಾಡುತ್ತಾನೆ. ಅದನ್ನು ಗಮನಿಸಿದ ಸೂರ್ಯ ಮತ್ತು ಚಂದ್ರರು ಅದನ್ನು ಭಗವಾನ್ ವಿಷ್ಣುವಿಗೆ ಹೇಳುತ್ತಾರೆ. ಅದರಿಂದ ಕುಪಿತನಾದ ವಿಷ್ಣುವು ಅವನ ಶಿರಚ್ಛೇದ ಮಾಡುತ್ತಾನೆ. ಆದರೆ ಅವನ ರುಂಡ ಮತ್ತು ಮುಂಡ ಬೇರೆಯಾದರೂ ಅಮೃತಪಾನದ ಫಲದಿಂದ ಜೀವವು ಹೋಗುವುದಿಲ್ಲ. ಅಂದಿನಿಂದ ಅವನು ರಾಹು ಕೇತು ಎಂದು ಎರಡು ಭಾಗವಾಗಿ ಗೋಚರವಾಗುತ್ತಾನೆ ಮತ್ತು ಛಾಯಾ ಗ್ರಹತ್ವವನ್ನು ಪಡೆಯುತ್ತಾನೆ. ಅಲ್ಲದೆ ಸೂರ್ಯ ಚಂದ್ರರ ಪರಮಶತ್ರುವಾಗುತ್ತಾನೆ.

ರಾಹು ಮತ್ತು ಕೇತು ಗ್ರಹರು ಇಬ್ಬರೂ ಪಾಪತ್ವವುಳ್ಳ ಗ್ರಹರು. ಹಾಗಂತ ಅವರುಗಳು ನಮ್ಮ ಕುಂಡಲಿಯಲ್ಲಿ ಉತ್ತಮ ಸ್ಥಾನದಲ್ಲಿದ್ದರೆ ಶುಭಫಲವನ್ನು ಕೊಡುತ್ತಾರೆ. ಮೊದಲಿಗೆ ಎಂಟನೇ ಗ್ರಹವಾದ ರಾಹುವಿನ ಬಗ್ಗೆ ಚಿಂತನೆ ಮಾಡೋಣ – ರಾಹುವಿಗೆ ಅಧಿದೇವತೆ ಸರ್ಪ. ಅಂದರೆ ಸುಬ್ರಹ್ಮಣ್ಯನೆಂದು ಹೇಳಿದರೆ ತಪ್ಪಲ್ಲ. ರಾಹುವು ನವಗ್ರಹ ಮಂಡಲದಲ್ಲಿ ಸೂರ್ಯನಿಂದ ನೈಋತ್ಯಭಾಗದಲ್ಲಿ ಶೂರ್ಪಾಕಾರದ (ಗೆರೆಸೆಯ ಆಕಾರದ) ಮಂಡಲದಲ್ಲಿ ಕಪ್ಪುಬಣ್ಣದಿಂದ ಕೂಡಿದವನಾಗಿ ಸಾನ್ನಿಧ್ಯವನ್ನು ಹೊಂದಿರುತ್ತಾನೆ. ಇವನಿಗೆ ಕಪ್ಪು ಅತ್ಯಂತ ಪ್ರಿಯ ಬಣ್ಣ. ಇವನಿಗೆ ಉದ್ದು ಪ್ರೀತಿಯ ಧಾನ್ಯ. ಇವನು ಅನೂಕೂಲವಾಗಿಲ್ಲದಿದ್ದಲ್ಲಿ ಚರ್ಮ ಸಂಬಂಧ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತದೆ ಮತ್ತು ಇವನ ದಶಾಕಾಲದಲ್ಲಿ ಆಪತ್ತುಗಳು ಹೆಚ್ಚು. ರಾಹು ಮತ್ತು ಬೃಹಸ್ಪತಿ ಜೊತೆಯಾಗಿರುವ ಕಾಲದಲ್ಲಿ ಶುಭಕಾರ್ಯಗಳನ್ನು ಮಾಡುವುದು ಉತ್ತಮವಲ್ಲ.

ರಾಹು ಬೃಹಸ್ಪತಿಯರು ವಿರುದ್ಧವಾದ ಗುಣವುಳ್ಳ ಗ್ರಹರಾದ್ದರಿಂದ ಅವರ ದಶಾ ಬದಲಾವಣೆಯ ಸಮಯದಲ್ಲಿ ಸಂಧಿದೋಷವುಂಟಾಗುತ್ತದೆ. ಆ ಕಾಲದಲ್ಲಿ ಶಾಂತಿಯನ್ನು ಮಾಡುವುದು ತುಂಬಾ ಅನಿವಾರ್ಯ. ಪ್ರಾಣಾಪಾಯ ಸಂಭವಿಸುವ ಸಾಧ್ಯತೆಯೂ ಇದೆ. ರಾಹುವಿನ ದಶಾಕಾಲ ಹದಿನೆಂಟು ವರ್ಷ. ರಾಹುವು ನಮ್ಮ ಕುಂಡಲಿಯ ಲಗ್ನದಿಂದ 3ನೇ 6ನೇ ಮತ್ತು 11ನೇ ಮನೆಯಲ್ಲಿದ್ದರೆ ಸಾಮಾನ್ಯವಾಗಿ ಶುಭಫಲವನ್ನು ನೀಡುತ್ತಾನೆ. ರಾಹುವಿಗೆ ಕನ್ಯಾರಾಶಿ ಸ್ವಂತ ಕ್ಷೇತ್ರ. ಮಿಥುನ ರಾಶಿಯು ಉಚ್ಚಕ್ಷೇತ್ರ. ಧನುರಾಶಿಯು ನೀಚಕ್ಷೇತ್ರವಾಗಿದೆ.

ಇದನ್ನೂ ಓದಿ
Image
One Day Trip:ಒತ್ತಡ ಬದಿಗಿಟ್ಟು, ಬೆಂಗಳೂರಿನಿಂದ ಈ ಸ್ಥಳಗಳಿಗೆ ಒಂದು ದಿನದ ಟ್ರಿಪ್​ ಹೋಗಿ
Image
World Milk Day 2022: ಹಾಲಿನ ಸೇವನೆಯಿಂದ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಹೇಗೆ ಇಲ್ಲಿದೆ ಓದಿ
Image
World No Tobacco Day 2022: ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ; ವಿಶ್ವ ಧೂಮಪಾನ ರಹಿತ ದಿನವನ್ನು ಏಕೆ ಆಚರಿಸುತ್ತಾರೆ ಇಲ್ಲಿದೆ ಓದಿ
Image
Travel: ಬೇಸಿಗೆ ರಜೆಯಲ್ಲಿ ಅಗ್ಗದ ಕುಟುಂಬ ಪ್ರವಾಸ ಮಾಡಲು ಈ ಸ್ಥಳಗಳಿಗೆ ಭೇಟಿ ನೀಡಿ..!

ರಾಹುವಿನ ಕುರಿತಾಗಿ ಆಶ್ಲೇಷಬಲಿ,ನಾಗಾರಾಧನೆ,ನಾಗಕ್ಷೇತ್ರ ದರ್ಶನ ರುದ್ರಾಭಿಷೇಕ ಮತ್ತು ಸತ್ಪಾತ್ರರಿಗೆ ಕಪ್ಪು ಬಟ್ಟೆಯಲ್ಲಿ ಉದ್ದಿನಬೇಳೆಯನ್ನಿರಿಸಿ ದಾನ ಮಾಡುವುದು ಮತ್ತು ಗರಿಕೆಯಿಂದ ರಾಹುವಿನ ಪ್ರೀತಿಗಾಗಿ ಹವನ ಮಾಡಿಸುವುದು ಇವುಗಳಲ್ಲಿ ಒಂದನ್ನು ಶ್ರದ್ಧೆಯಿಂದ ಮಾಡಿದರೆ ಅವನ್ನಿಂದಾಗುವ ವಿಪತ್ತುಗಳಿದ್ದಲ್ಲಿ ಶಮನವಾಗುವುದು. ಇನ್ನು ಇಲ್ಲೇ ಒಂದು ಭಾಗವಾಗಿರುವ ಮತ್ತು ಒಂಭತ್ತನೇ ಗ್ರಹವಾದ ಕೇತುವಿನ ಕುರಿತು ಹೇಳುವುದಾದರೆ “ಕೇತುಃ ಯಶಃ ಸುಪ್ರದಃ” ಕೇತುವು ಯಶಸ್ಸನ್ನು ಮತ್ತು ಒಳ್ಳೆಯ ದಾರಿಯನ್ನು ತೋರಿಸುವಾತ ಎಂದರ್ಥ. ಇವನೂ ಪಾಪತ್ವವುಳ್ಳ ಗ್ರಹ. ಆದರೆ ಹಿಂದೆ ಹೇಳಿದಂತೆ ಯಾವ ಗ್ರಹರಾದರೂ ಉತ್ತಮಸ್ಥಾನದಲ್ಲಿದ್ದರೆ ಸತ್ಫಲವನ್ನೇ ನೀಡುತ್ತಾರೆ. ಕೇತುವಿಗೆ ಬ್ರಹ್ಮ ಅಧಿದೇವತೆಯಾಗಿದ್ದರೂ ಇವನ ಕುರಿತಾಗಿ ಗಣಪತಿಯನ್ನು ಆರಾಧಿಸುವುದು ರೂಢಿ.

ವಿಘ್ನಹರ್ತನಾದ ಗಣಪತಿಯ ಸೇವೆಯಿಂದ ಸಂಪ್ರೀತನಾಗಿ ಇವನು ಶುಭಾನುಗ್ರಹವನ್ನು ಮಾಡುತ್ತಾನೆ. ಜನ್ಮ ರಾಶಿಯಿಂದ 3 ,6, 10, 11 ನೇ ಮನೆ ಇವುಗಳಲ್ಲಿ ಕೇತುವು ಇದ್ದರೆ ಶುಭಪ್ರದವಾಗಿರುತ್ತಾನೆ. ಮೀನರಾಶಿಯು ಇವನ ಸ್ವಕ್ಷೇತ್ರ. ಧನೂರಾಶಿಯು ಉಚ್ಚಕ್ಷೇತ್ರ. ಮಿಥುನ ರಾಶಿಯು ನೀಚಕ್ಷೇತ್ರವಾಗಿದೆ. ಸೂರ್ಯ, ಚಂದ್ರ,ಕುಜರು ಇವನ ಮಿತ್ರಗ್ರಹರು. ಇವನ ದಶಾಕಾಲವು ಏಳು ವರ್ಷ. ಇವನು ನವಗ್ರಹ ಮಂಡಲದಲ್ಲಿ ಸೂರ್ಯನಿಂದ ವಾಯವ್ಯ ದಿಕ್ಕಿನಲ್ಲಿ ಧ್ವಜಾಕಾರ ಮಂಡಲದಲ್ಲಿ ಚಿತ್ರಬಣ್ಣದಲ್ಲಿ (ಬಣ್ಣಬಣ್ಣದಿಂದ) ಸಾನ್ನಿಧ್ಯವನ್ನು ಹೊಂದಿರುತ್ತಾನೆ. ಇವನಿಗೆ ಹುರುಳಿ ಕಾಳು ಪ್ರಿಯಧಾನ್ಯ ಹಾಗೂ ಚಿತ್ರಬಣ್ಣದ ವಸ್ತ್ರ ಅತ್ಯಂತಪ್ರಿಯ. ಇವನ ಸಂಪ್ರೀತಿಗಾಗಿ ದರ್ಭೆಯಿಂದ ಹವನ ಮಾಡುತ್ತಾರೆ. ಎಲ್ಲಾ ಸಮಸ್ಯೆಗೂ ಪರಿಹಾರ ಇದ್ದೇ ಇದೆ ಮತ್ತು ಸದ್ಭಾವನೆಯಿಂದ / ಶುದ್ದಾಂತಃಕರಣದಿಂದ ಯಾವುದೇ ಕಾರ್ಯ ಮಾಡಿದರೂ ಅದು ಭಗವಂತನಿಗೆ ಪ್ರಿಯವಾಗುತ್ತದೆ ಹಾಗಯೇ ನಮ್ಮ ಲೌಕಿಕ ಮತ್ತು ಅಲೌಕಿಕ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡೋಣ ಎಂದು ಮತ್ತೊಮ್ಮೆ ಹೇಳುತ್ತಾ ನವಗ್ರಹರ ಕುರಿತಾದ ಚಿಂತನೆ ಮುಗಿಸುತ್ತಿದ್ದೇನೆ.

ರಾಹುವಿನ ಮಂತ್ರ 

ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯವಿಮರ್ದನಂ |

ಸಿಂಹಿಕಾಗರ್ಭಸಂಭೂತಂ ತಂ ರಾಹುಂ ಪ್ರಣಮಾಮ್ಯಹಂ ||

ಕೇತುವಿನ ಮಂತ್ರ 

ಪಲಾಲಧೂಮ್ರಸಂಕಾಶಾನ್ ತಾರಕಾಗ್ರಹಮಸ್ತಕಾನ್ |

ರುದ್ರಾನ್ ರೌದ್ರಾತ್ಮಕಾನ್ ಘೋರಾನ್ ತಾನ್ ಕೇತೂನ್ ಪ್ರಣಮಾಮ್ಯಹಂ ||

ಡಾ.ಕೇಶವ ಕಿರಣ ಬಿ

ಪ್ರಾಧ್ಯಾಪಕರು

S.R.B.S.S College ಹೊನ್ನಾವರ

kkmanasvi@gamail.com

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?