AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಳಸಿ ಕಟ್ಟೆಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು? ಪ್ರತೀ ಸುತ್ತಿನ ಹಿಂದಿನ ಮಹತ್ವ ಇಲ್ಲಿ ತಿಳಿಯಿರಿ

ಹಿಂದೂ ಸಂಪ್ರದಾಯದ ಪ್ರಕಾರ, ತುಳಸಿ ಗಿಡವು ಪ್ರತಿ ಮನೆಯಲ್ಲಿ ಇರಲೇಬೇಕು. ತುಳಸಿ ಪ್ರದಕ್ಷಿಣೆಯು ಅತಿ ವಿಶೇಷವಾದ ತಂತ್ರವಾಗಿದೆ. ಪ್ರತಿದಿನ ಬೆಳಿಗ್ಗೆ ಒಂದು ನಿರ್ದಿಷ್ಟ ಸಂಖ್ಯೆಯ ಪ್ರದಕ್ಷಿಣೆಗಳನ್ನು ಮಾಡುವುದರಿಂದ ಹಲವಾರು ಶುಭ ಫಲಗಳು ಪ್ರಾಪ್ತವಾಗುತ್ತವೆ. ಒಂದರಿಂದ ಹನ್ನೊಂದು ಪ್ರದಕ್ಷಿಣೆಗಳಿಗೆ ವಿಭಿನ್ನ ಫಲಗಳಿದ್ದು, ಇದರಿಂದ ಮನಸ್ಸಿನ ಶುದ್ಧಿ, ಸಂಪತ್ತು, ದೀರ್ಘಾಯುಷ್ಯ, ಏಕಾಗ್ರತೆ, ರೋಗ ನಿವಾರಣೆ ಮತ್ತು ಅಭೀಷ್ಟಗಳು ಈಡೇರುತ್ತವೆ ಎಂದು ಡಾ. ಬಸವರಾಜ್ ಗುರೂಜಿ ತಿಳಿಸಿದ್ದಾರೆ.

ತುಳಸಿ ಕಟ್ಟೆಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು? ಪ್ರತೀ ಸುತ್ತಿನ ಹಿಂದಿನ ಮಹತ್ವ ಇಲ್ಲಿ ತಿಳಿಯಿರಿ
ತುಳಸಿ ಕಟ್ಟೆಗೆ ಪ್ರದಕ್ಷಿಣೆImage Credit source: Pinterest
ಅಕ್ಷತಾ ವರ್ಕಾಡಿ
|

Updated on:Mar 27, 2026 | 9:36 AM

Share

ಭಾರತೀಯ ಸಂಸ್ಕೃತಿಯಲ್ಲಿ ವೃಕ್ಷಗಳಿಗೆ ವಿಶೇಷ ಸ್ಥಾನಮಾನವಿದೆ. ವೃಕ್ಷೋ ರಕ್ಷತಿ ರಕ್ಷಿತಃ ಎಂಬ ಮಾತು ಮರಗಳ ಸಂರಕ್ಷಣೆ ಮತ್ತು ಅದರ ಪ್ರಯೋಜನಗಳನ್ನು ಸಾರುತ್ತದೆ. ಆಹಾರ, ನೆರಳು, ವಾಸಕ್ಕೆ ಸಹಕಾರಿ ಹಾಗೂ ಔಷಧೀಯ ಗುಣಗಳನ್ನು ಹೊಂದಿರುವ ವೃಕ್ಷಗಳ ಜೊತೆಗೆ, ಕೆಲವು ವೃಕ್ಷಗಳನ್ನು ಪೂಜನೀಯ ಭಾವದಿಂದ ಕಾಣಲಾಗುತ್ತದೆ. ಅವುಗಳಲ್ಲಿ ಅರಳೀ ಮರದ ಜೊತೆಗೆ ತುಳಸಿ ಗಿಡವು ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತದೆ. ಪ್ರತಿಯೊಂದು ಮನೆಯಲ್ಲೂ ತುಳಸಿ ಗಿಡ ಇರಲೇಬೇಕು ಎಂಬ ನಂಬಿಕೆಯಿದೆ. ತುಳಸಿ ಗಿಡವನ್ನು ಕೇವಲ ಬೆಳೆಸುವುದು, ನೀರು ಹಾಕುವುದು, ಅಥವಾ ವಿವಾಹ ಮಾಡಿಸುವುದು ಮಾತ್ರವಲ್ಲದೆ, ಅದರ ಸುತ್ತ ಪ್ರದಕ್ಷಿಣೆ ಮಾಡುವ ವಿಶೇಷ ತಂತ್ರವೂ ಇದೆ ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಬೆಳಗಿನ ಜಾವ ಕೇವಲ ಐದು ನಿಮಿಷಗಳ ಕಾಲ ತುಳಸಿ ಗಿಡಕ್ಕೆ ಪ್ರದಕ್ಷಿಣೆ ಮಾಡುವುದರಿಂದ ಅಪಾರ ಫಲಗಳು ಲಭಿಸುತ್ತವೆ. ಆದಾಗ್ಯೂ, 11 ಪ್ರದಕ್ಷಿಣೆಗಳ ಮಿತಿಯನ್ನು ಕಾಯ್ದುಕೊಳ್ಳಬೇಕು. ಪ್ರತಿಯೊಂದು ಪ್ರದಕ್ಷಿಣೆಯು ವಿಭಿನ್ನ ಹಾಗೂ ಗಹನವಾದ ಪ್ರಯೋಜನಗಳನ್ನು ನೀಡುತ್ತದೆ.

ಪ್ರತೀ ಸುತ್ತಿನ ಹಿಂದಿನ ಮಹತ್ವ ಇಲ್ಲಿ ತಿಳಿಯಿರಿ

  • ಒಂದು ಪ್ರದಕ್ಷಿಣೆ (ಗೋಪ ಪ್ರದಕ್ಷಿಣೆ): ತುಳಸಿಗೆ ಒಂದು ಪ್ರದಕ್ಷಿಣೆ ಮಾಡಿ ನಮಸ್ಕರಿಸಿದರೆ, ಸಾಕ್ಷಾತ್ ಸ್ಥಿತಿಕಾರಕನಾದ ವಿಷ್ಣುವು ನಮ್ಮ ಕಡೆ ಕಣ್ಬಿಡುತ್ತಾನೆ, ಗೋವಿಂದನು ನಮ್ಮ ಮೇಲೆ ಅನುಗ್ರಹವನ್ನು ತೋರುತ್ತಾನೆ ಎಂದು ಹೇಳಲಾಗುತ್ತದೆ.
  • ಎರಡು ಪ್ರದಕ್ಷಿಣೆಗಳು: ಈ ಪ್ರದಕ್ಷಿಣೆಗಳು ವೈಕುಂಠದ ಹಾದಿಯನ್ನು ಸ್ಪಷ್ಟಪಡಿಸುತ್ತವೆ, ಭಕ್ತರಿಗೆ ಮೋಕ್ಷ ಮಾರ್ಗವನ್ನು ತೋರಿಸುತ್ತವೆ ಎಂದು ನಂಬಲಾಗಿದೆ.
  • ಮೂರು ಪ್ರದಕ್ಷಿಣೆಗಳು: ಮನಸ್ಸಿನ ಶುದ್ಧಿಗೆ ಇದು ಅತ್ಯಂತ ಪರಿಣಾಮಕಾರಿ. ದೈವಿಕ ಬಲ ಹೊಂದಿರುವವರ ಮುಖ, ಚಟುವಟಿಕೆಗಳು ಮತ್ತು ಮಾತುಗಳು ವಿಶೇಷವಾಗಿರುವಂತೆ, ಮೂರು ಪ್ರದಕ್ಷಿಣೆಗಳು ಮನಸ್ಸನ್ನು ನಿರ್ಮಲಗೊಳಿಸುತ್ತವೆ.
  • ನಾಲ್ಕು ಪ್ರದಕ್ಷಿಣೆಗಳು: ಸಂಪತ್ತಿನ ಅನುಗ್ರಹಕ್ಕೆ ಇದು ಸಹಕಾರಿ. ಆರ್ಥಿಕ ಅಡೆತಡೆಗಳು ನಿವಾರಣೆಯಾಗಿ ಸಂಪತ್ತು ಹರಿದು ಬರಲು ಮಾರ್ಗವಾಗುತ್ತದೆ.
  • ಐದು ಪ್ರದಕ್ಷಿಣೆಗಳು: ಸಂತಾನದೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಲು ಐದು ಪ್ರದಕ್ಷಿಣೆಗಳು ನೆರವಾಗುತ್ತವೆ. ಕುಟುಂಬದಲ್ಲಿ ಸಾಮರಸ್ಯ ಹೆಚ್ಚುತ್ತದೆ.
  • ಆರು ಪ್ರದಕ್ಷಿಣೆಗಳು: ದೀರ್ಘಾಯುಷ್ಯ ಪ್ರಾಪ್ತಿಗಾಗಿ ಆರು ಪ್ರದಕ್ಷಿಣೆಗಳನ್ನು ಮಾಡಲಾಗುತ್ತದೆ. ಆರೋಗ್ಯ ಮತ್ತು ದೀರ್ಘ ಜೀವನಕ್ಕೆ ಇದು ಶುಭಕಾರಿ.
  • ಏಳು ಪ್ರದಕ್ಷಿಣೆಗಳು: ಜ್ಯೋತಿಷ್ಯದಲ್ಲಿ ಕಳತ್ರ ಭಾವ ಎಂದು ಕರೆಯಲ್ಪಡುವ ಕುಟುಂಬ ನಿರ್ವಹಣೆಗೆ ಏಳು ಪ್ರದಕ್ಷಿಣೆಗಳು ಶಕ್ತಿ ನೀಡುತ್ತವೆ. ಕುಟುಂಬದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ.
  • ಎಂಟು ಪ್ರದಕ್ಷಿಣೆಗಳು: ಏಕಾಗ್ರತೆ ಹೆಚ್ಚಾಗಿ, ಮನಸ್ಸಿನಲ್ಲಿ ಸಾವಿನ ಕುರಿತ ಆತಂಕಗಳು ದೂರವಾಗುತ್ತವೆ. ಜೀವನದ ಬಗ್ಗೆ ಧನಾತ್ಮಕ ದೃಷ್ಟಿಕೋನ ಮೂಡುತ್ತದೆ.
  • ಒಂಬತ್ತು ಪ್ರದಕ್ಷಿಣೆಗಳು: ಎಲ್ಲಾ ರೀತಿಯ ರೋಗರುಜಿನಗಳು ದೂರವಾಗಿ, ಹಿಂದಿನ ಜನ್ಮಗಳ ಕರ್ಮಫಲದ ಪ್ರಭಾವ ಕಡಿಮೆಯಾಗುತ್ತದೆ. ಆರೋಗ್ಯ ಮತ್ತು ಶಾಂತಿಗೆ ಇದು ಸಹಕಾರಿ.
  • ಹತ್ತು ಪ್ರದಕ್ಷಿಣೆಗಳು: ಸತ್ಕರ್ಮಗಳನ್ನು, ಧರ್ಮ ಕಾರ್ಯಗಳನ್ನು ಮಾಡಲು ಮನಸ್ಸನ್ನು ಪ್ರೇರೇಪಿಸುತ್ತದೆ. ಸಮಾಜ ಮತ್ತು ವೈಯಕ್ತಿಕ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುತ್ತದೆ.
  • ಹನ್ನೊಂದು ಪ್ರದಕ್ಷಿಣೆಗಳು: ವಿವಾಹ, ಮನೆ ಕಟ್ಟಿಸುವಿಕೆ, ಸಾಲ ಮುಕ್ತಿ ಮುಂತಾದ ನಿಮ್ಮ ಅಭೀಷ್ಟಗಳು ಈಡೇರುತ್ತವೆ. ಇದು ಇಷ್ಟಾರ್ಥ ಸಿದ್ಧಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಈ ಪ್ರದಕ್ಷಿಣೆಯನ್ನು ಪ್ರತಿದಿನ ಕನಿಷ್ಠ 48 ದಿನಗಳ ಕಾಲ ನಿರಂತರವಾಗಿ ಮಾಡಿದರೆ ಸಾಕಷ್ಟು ಶುಭ ಫಲಗಳು ದೊರೆಯುತ್ತವೆ ಎಂದು ನಂಬಲಾಗಿದೆ. ನಿಮ್ಮ ಮನೆಯಲ್ಲಿರುವ ತುಳಸಿ ಗಿಡವು ದೇವಸ್ಥಾನವಿದ್ದಂತೆ, ಅಲ್ಲಿ ದೇವರೇ ನೆಲೆಸಿರುತ್ತಾನೆ ಎಂಬ ಭಾವನೆಯಿಂದ ಈ ಆಚರಣೆಯನ್ನು ಕೈಗೊಳ್ಳಬೇಕು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:31 am, Fri, 27 March 26

Follow Us
ಅಪಾರ್ಟ್​ಮೆಂಟ್ ನಿವಾಸಿಗಳ ಮೇಲೆ ಕಾರು ಹತ್ತಿಸಿದ ವ್ಯಕ್ತಿ, ಮಹಿಳೆ ಸಾವು
ಅಪಾರ್ಟ್​ಮೆಂಟ್ ನಿವಾಸಿಗಳ ಮೇಲೆ ಕಾರು ಹತ್ತಿಸಿದ ವ್ಯಕ್ತಿ, ಮಹಿಳೆ ಸಾವು
ಹಳೆಯ ಟಿವಿಯೊಳಗಿತ್ತು 8 ಅಡಿ ಉದ್ದದ ಬೃಹತ್ ಹಾವು! ವಿಡಿಯೋ ನೋಡಿ
ಹಳೆಯ ಟಿವಿಯೊಳಗಿತ್ತು 8 ಅಡಿ ಉದ್ದದ ಬೃಹತ್ ಹಾವು! ವಿಡಿಯೋ ನೋಡಿ
ಇಂದು ಈ ರಾಶಿಯವರು ತಮ್ಮ ಖರ್ಚುಗಳ ಬಗ್ಗೆ ಎಚ್ಚರ ವಹಿಸಿ!
ಇಂದು ಈ ರಾಶಿಯವರು ತಮ್ಮ ಖರ್ಚುಗಳ ಬಗ್ಗೆ ಎಚ್ಚರ ವಹಿಸಿ!
‘ಡೆವಿಲ್’ ಎದುರು ‘ಕರ್ನಾಟಕದ ಅಳಿಯ’ ತೆರೆ ಕಾಣಲಿಲ್ಲ: ಕಾರಣ ತಿಳಿಸಿದ ಪ್ರಥಮ್
‘ಡೆವಿಲ್’ ಎದುರು ‘ಕರ್ನಾಟಕದ ಅಳಿಯ’ ತೆರೆ ಕಾಣಲಿಲ್ಲ: ಕಾರಣ ತಿಳಿಸಿದ ಪ್ರಥಮ್
ದಾವಣಗೆರೆ: ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸುವಂತೆ ಶ್ರೀಶೈಲ ಜಗದ್ಗುರು ಕರೆ
ದಾವಣಗೆರೆ: ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸುವಂತೆ ಶ್ರೀಶೈಲ ಜಗದ್ಗುರು ಕರೆ
ಶಾಲಾ ಬಸ್ ನಿಲ್ಲಿಸಿ ಕಬ್ಬಿಣದ ರಾಡ್ ಹಿಡಿದು ಬೆದರಿಸಿದ ಯುವಕರು
ಶಾಲಾ ಬಸ್ ನಿಲ್ಲಿಸಿ ಕಬ್ಬಿಣದ ರಾಡ್ ಹಿಡಿದು ಬೆದರಿಸಿದ ಯುವಕರು
1ನೇ ತರಗತಿ ಪ್ರವೇಶ: ವಯಸ್ಸಿನ ಗೊಂದಲಕ್ಕೆ ಕೊನೆಗೂ ತೆರೆ ಎಳೆದ ರಾಜ್ಯ ಸರ್ಕಾರ
1ನೇ ತರಗತಿ ಪ್ರವೇಶ: ವಯಸ್ಸಿನ ಗೊಂದಲಕ್ಕೆ ಕೊನೆಗೂ ತೆರೆ ಎಳೆದ ರಾಜ್ಯ ಸರ್ಕಾರ
ಸುಬ್ಬ, ಸುಬ್ಬಿ ಕಥೆ ಅಂತ ಹೇಳಿದ್ದು ಯಾಕೆ? ಅನುಮಾನ ಪರಿಹರಿಸಿದ ಪ್ರಥಮ್
ಸುಬ್ಬ, ಸುಬ್ಬಿ ಕಥೆ ಅಂತ ಹೇಳಿದ್ದು ಯಾಕೆ? ಅನುಮಾನ ಪರಿಹರಿಸಿದ ಪ್ರಥಮ್
1000 ಲೀಟರ್ ಟ್ಯಾಂಕ್ ಹಿಡಿದು ಪೆಟ್ರೋಲ್​ ಬಂಕ್​ಗೆ ಬಂದ ‘ಬಾಹುಬಲಿ’
1000 ಲೀಟರ್ ಟ್ಯಾಂಕ್ ಹಿಡಿದು ಪೆಟ್ರೋಲ್​ ಬಂಕ್​ಗೆ ಬಂದ ‘ಬಾಹುಬಲಿ’
ಅಮ್ಮನ ಲವ್‌ ಮಾಡ್ತಿದ್ದ ವ್ಯಕ್ತಿಯ ಪತ್ನಿ, ತಮ್ಮನನ್ನ ಕೊಂದ ಬಾಲಕ!
ಅಮ್ಮನ ಲವ್‌ ಮಾಡ್ತಿದ್ದ ವ್ಯಕ್ತಿಯ ಪತ್ನಿ, ತಮ್ಮನನ್ನ ಕೊಂದ ಬಾಲಕ!