Vastu Shastra: ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆಯ ಮೇಲೆ ಕುಳಿತು ಊಟ ಮಾಡುವುದು ಏಕೆ ಅಶುಭ?
ಊಟ ಮಾಡುವ ಸ್ಥಳ ಮತ್ತು ವಿಧಾನ ಮನೆಯ ಶಕ್ತಿ, ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಹಾಸಿಗೆಯ ಮೇಲೆ, ಮುಖ್ಯ ದ್ವಾರದ ಬಳಿ, ಮುರಿದ ಪಾತ್ರೆಗಳಲ್ಲಿ ಅಥವಾ ಕತ್ತಲೆಯಲ್ಲಿ ಊಟ ಮಾಡುವುದು ನಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ. ಸಕಾರಾತ್ಮಕ ವಾತಾವರಣಕ್ಕಾಗಿ ಯಾವಾಗಲೂ ಸ್ವಚ್ಛ, ಬೆಳಕಿರುವ ಸ್ಥಳದಲ್ಲಿ, ಮುರಿಯದ ಪಾತ್ರೆಗಳಲ್ಲಿ ಊಟ ಮಾಡಬೇಕು. ಇದು ಕುಟುಂಬದ ನೆಮ್ಮದಿ ಮತ್ತು ಸಮೃದ್ಧಿಗೆ ಅಗತ್ಯ.

ಆಹಾರ ಸೇವಿಸುವ ಸ್ಥಳ ಮತ್ತು ವಿಧಾನವು ಮನೆಯ ಶಕ್ತಿ ಹಾಗೂ ಕುಟುಂಬದ ಸದಸ್ಯರ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ತಪ್ಪಾದ ಸ್ಥಳಗಳಲ್ಲಿ ಕುಳಿತು ಊಟ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಹೀಗಾಗಿ, ಸಕಾರಾತ್ಮಕ ವಾತಾವರಣ ಮತ್ತು ನೆಮ್ಮದಿಗಾಗಿ ಊಟ ಮಾಡುವಾಗ ವಾಸ್ತು ಶಾಸ್ತ್ರದ ಕೆಲವು ಪ್ರಮುಖ ನಿಯಮಗಳನ್ನು ಪಾಲಿಸುವುದು ಅಗತ್ಯ.
ಹಾಸಿಗೆಯ ಮೇಲೆ ಕುಳಿತು ಊಟ ಮಾಡುವುದನ್ನು ತಪ್ಪಿಸಿ:
ವಾಸ್ತು ಶಾಸ್ತ್ರದಲ್ಲಿ ಹಾಸಿಗೆಯ ಮೇಲೆ ಕುಳಿತು ಊಟ ಮಾಡುವುದು ಅತ್ಯಂತ ಅಶುಭವೆಂದು ಪರಿಗಣಿಸಲಾಗಿದೆ. ಈ ಅಭ್ಯಾಸವು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ನಿದ್ರಾಹೀನತೆ ಮತ್ತು ಮನಸ್ಸಿನ ಶಾಂತಿ ಹಾಳಾಗಲು ಕಾರಣವಾಗುತ್ತದೆ. ಆದ್ದರಿಂದ ಮಲಗುವ ಕೋಣೆ ಅಥವಾ ಹಾಸಿಗೆಯ ಮೇಲೆ ಆಹಾರ ಸೇವಿಸಬಾರದು.
ಮನೆಯ ಮುಖ್ಯ ದ್ವಾರದ ಬಳಿ ಊಟ ಮಾಡಬೇಡಿ:
ಮನೆಯ ಮುಖ್ಯ ದ್ವಾರವು (Main Door) ಧನಾತ್ಮಕ ಶಕ್ತಿಯ ಪ್ರವೇಶ ದ್ವಾರವಾಗಿರುತ್ತದೆ. ವಾಸ್ತು ತತ್ವಗಳ ಪ್ರಕಾರ, ಈ ಸ್ಥಳದ ಬಳಿ ಕುಳಿತು ಊಟ ಮಾಡುವುದರಿಂದ ಮನೆಯ ಸಕಾರಾತ್ಮಕ ಶಕ್ತಿಗೆ ಭಂಗ ಉಂಟಾಗುತ್ತದೆ. ಇದು ಕುಟುಂಬದ ಸಂತೋಷ, ಸಮೃದ್ಧಿ ಮತ್ತು ಅಭಿವೃದ್ಧಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ 2026: ಒಂದೇ ದಿನದಲ್ಲಿ ಬೆಂಗಳೂರಿನ 4 ಪ್ರಸಿದ್ಧ ಕೃಷ್ಣ ದೇವಾಲಯಗಳ ದರ್ಶನ ಪಡೆಯಿರಿ
ಮುರಿದ ಅಥವಾ ಕೊಳಕು ಪಾತ್ರೆಗಳನ್ನು ಬಳಸಬೇಡಿ:
ಊಟ ಮಾಡುವಾಗ ಯಾವಾಗಲೂ ಸ್ವಚ್ಛವಾದ ಹಾಗೂ ಮುರಿಯದ ಪಾತ್ರೆಗಳನ್ನು ಬಳಸಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಮುರಿದ ಪಾತ್ರೆಗಳಲ್ಲಿ ಊಟ ಮಾಡುವುದು ಅಥವಾ ಅಶುದ್ಧ ಸ್ಥಳದಲ್ಲಿ ಆಹಾರ ಸೇವಿಸುವುದು ಅಶುಭ. ಇಂತಹ ಅಭ್ಯಾಸಗಳು ಮನೆಯಲ್ಲಿದ್ದ ಶಾಂತಿ ಮತ್ತು ನೆಮ್ಮದಿಯನ್ನು ಭಂಗಗೊಳಿಸುತ್ತವೆ.
ಕತ್ತಲೆಯಲ್ಲಿ ಅಥವಾ ಮಂದ ಬೆಳಕಿನಲ್ಲಿ ಊಟ ಮಾಡಬೇಡಿ:
ಕೋಣೆಯಲ್ಲಿ ಸರಿಯಾದ ಬೆಳಕಿಲ್ಲದೆ ಕತ್ತಲೆಯಲ್ಲಿ ಅಥವಾ ಮಂದ ಬೆಳಕಿನಲ್ಲಿ ಊಟ ಮಾಡುವುದನ್ನು ವಾಸ್ತು ಶಾಸ್ತ್ರ ನಿರಾಕರಿಸುತ್ತದೆ. ಯಾವಾಗಲೂ ಚೆನ್ನಾಗಿ ಬೆಳಕು ಬರುವ ಹಾಗೂ ಸ್ವಚ್ಛವಾಗಿರುವ ಪ್ರದೇಶದಲ್ಲೇ ಊಟ ಮಾಡಬೇಕು. ಸರಿಯಾದ ಬೆಳಕು ಮತ್ತು ಶುಚಿತ್ವವು ಮನೆಯಲ್ಲಿ ಆರೋಗ್ಯಕರ ಹಾಗೂ ಸಕಾರಾತ್ಮಕ ವಾತಾವರಣವನ್ನು ಕಾಪಾಡಲು ನೆರವಾಗುತ್ತದೆ ಎಂದು ನಂಬಲಾಗಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




