ಆಹಾರ ಸೇವಿಸಿದ ಅನಂತರ ಏನು ಮಾಡಬೇಕು, ಏನು ಮಾಡಬಾರದು?

| Updated By: ಗಂಗಾಧರ​ ಬ. ಸಾಬೋಜಿ

Updated on: Jul 13, 2023 | 6:10 AM

ಆಹಾರದಲ್ಲಿಯೂ ಲಘು ಆಹಾರ, ಗುರು ಆಹಾರ ಎಂಬುದಾಗಿ ವಿಭಾವನ್ನು ಮಾಡುತ್ತಾರೆ. ಯಾವ ಆಹಾರವು ವೇಗವಾಗಿ ಜೀರ್ಣವಾಗುವುದೋ ಅದು ಲಘು ಆಹಾರ. ನಿಧಾನವಾಗಿ ಜೀರ್ಣವಾಗುವುದೋ ಅದು ಗುರು ಆಹಾರವಾಗುತ್ತದೆ.

ಆಹಾರ ಸೇವಿಸಿದ ಅನಂತರ ಏನು ಮಾಡಬೇಕು, ಏನು ಮಾಡಬಾರದು?
ಪ್ರಾತಿನಿಧಿಕ ಚಿತ್ರ
Follow us on

ಆಹಾರ ಎಷ್ಟು ಮುಖ್ಯವೋ ಅದರ ಜೀರ್ಣಕ್ರಿಯೆಯೂ ಅಷ್ಟೇ ಮುಖ್ಯ. ತಿಂದ ಆಹಾರ (food) ವು ಜೀರ್ಣವಾಗಬೇಕು.‌ ಜೀರ್ಣ ಅಂದರೆ ಹೇಗೆ? ಸುಮ್ನೇ ಹಸಿವಾಗುವುದಲ್ಲ. ಚೆನ್ನಾಗಿ ಹಸಿವಾದರೆ ಮಾತ್ರ ಜೀರ್ಣವು ಸರಿಯಾಗಿ ಆಗಿದೆ ಎಂದರ್ಥ. ಆಹಾರದಲ್ಲಿಯೂ ಲಘು ಆಹಾರ, ಗುರು ಆಹಾರ ಎಂಬುದಾಗಿ ವಿಭಾವನ್ನು ಮಾಡುತ್ತಾರೆ. ಯಾವ ಆಹಾರವು ವೇಗವಾಗಿ ಜೀರ್ಣವಾಗುವುದೋ ಅದು ಲಘು ಆಹಾರ. ನಿಧಾನವಾಗಿ ಜೀರ್ಣವಾಗುವುದೋ ಅದು ಗುರು ಆಹಾರವಾಗುತ್ತದೆ.

ಎರಡೂ ಆಹಾರದಲ್ಲಿ ಪ್ರಮಾಣ ಒಂದೇ ಇದ್ದರೂ ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸವಾಗುವುದು. ಹಾಗಿದ್ದಾಗ ಲಘು ಆಹಾರವನ್ನು ಸ್ವೀಕರಿಸಿದಾಗಲೂ ಗುರು ಆಹಾರವನ್ನು ಸ್ವೀಕರಿಸಿದಾಗಲೂ ಆಹಾರ ಜೀರ್ಣವಾಗುವುದು ಒಂದೇ ರೀತಿ ಇರಬೇಕೆಂದಿಲ್ಲ. ಇರುವುದೂ ಇಲ್ಲ. ಸಮಯ ವ್ಯತ್ಯಾಸವಾಗಬಹುದು. ಬೆಳಗಿನ ಆಹಾರ ಲಘುವಾಗಿದ್ದರೆ, ಮಧ್ಯಾಹ್ನದ ಒಳಗೇ ಜೀರ್ಣವಾಗಬಹುದು. ಗುರು ಆಹಾರವಾದರೆ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಒಂದೇ ಸಮಯಕ್ಕೆ ಆಹಾರವನ್ನು ಸ್ವೀಕರಿಸಲು ಸಾಧ್ಯವಿಲ್ಲ. ನಾವು ಸ್ವೀಕರಿಸಿದ ಆಹಾರದ ಆಧಾರದ ಮೇಲೆ ಮೇಲೆ ಜೀರ್ಣ ಮತ್ತು ಅಜೀರ್ಣವಾಗಲಿದೆ. ಅಜೀರ್ಣವಾದಾಗ ಆಹಾರವನ್ನು ಸ್ವೀಕರಿಸಿದರೂ ರೋಗದ ಉತ್ಪತ್ತಿಯಾಗಲಿದೆ.

ಇದನ್ನೂ ಓದಿ: ಜಗತ್ತಿನಲ್ಲಿ ದುಃಖಕ್ಕೆ ನಿಜವಾದ ಕಾರಣವೇನು? ಈ ವಿಚಾರ ತಿಳಿದು ಬದುಕಿದರೆ ನಿರ್ಮಲ ಮನಸ್ಸಿಂದ ಜೀವಿಸಬಹುದು

ಇವಿಷ್ಟು ಆಹಾರಸೇವನೆಯ ವಿಚಾರವಾದರೆ, ಇನ್ನು ಆಹಾರವನ್ನು ಸೇವಿಸಿ ಏನು ಮಾಡಬೇಕು, ಮಾಡಬಾರದು ಎನ್ನುವುದನ್ನು ನೋಡೋಣ.

ಆಹಾರವನ್ನು ಸೇವಿಸಿದ ಕೂಡಲೆ ನಿದ್ರಿಸಿಬಾರದು. ಮಧ್ಯಾಹ್ನ ಭೋಜನದ ಅನಂತರ ಸ್ವಲ್ಪ ಕಾಲ ಎಡಕ್ಕೆ ಹೊರಳಿ ವಿಶ್ರಾಂತಿಯನ್ನು ಪಡೆಯಬೇಕು, ನಿದ್ರೆಯನ್ನು ಮಾಡಬಾರದು. ರಾತ್ರಿ ಭೋಜನದ ಅನಂತರ ನೂರು ಹೆಜ್ಜೆಗಳಷ್ಟಾದರೂ ಓಡಾಡಬೇಕು. ಊಟ ಮಾಡಿ ಓಡಬಾರದು, ಆಟವಾಡಬಾರದು. ಓಟ ಮಾಡಿ ವೇಗವಾಗಿ ಏನನ್ನಾದರು ಮಾಡಿದರೆ ಮೃತ್ಯುವು ಬರುತ್ತದೆ ಎನ್ನುತ್ತದೆ.

ಮೃತ್ಯುರ್ಧಾವತಿ ಪಂಚಮ ಇತಿ. ಮೃತ್ಯುವೂ ನಿಮ್ಮ ಹಿಂದೆ ವೇಗವಾಗಿ ಓಡಿ ಬರುವುದು. ಹಾಗಾಗಿ ಊಟದ ಅನಂತರ ಓಡುವುದು, ಆಟವಾಡುವುದನ್ನು ಮಾಡಬಾರದು. ಊಟ ಮಾಡಿ ಅಥವಾ ಆಹಾರವನ್ನು ಸ್ವೀಕರಿಸಿ ಸ್ನಾನ ಮಾಡಬಾರದು. ಆಹಾರವನ್ನು ಸ್ವೀಕರಿಸುವ ಮೊದಲೇ ಸ್ನಾನವನ್ನು ಮಾಡಬೇಕು.

ಇದನ್ನೂ ಓದಿ: ಪತಿಯನ್ನು ಪತ್ನಿ “ರೀ” ಎಂಬ ಶಬ್ದದಿಂದ ಕರೆಯುವುದು ಸರಿಯೇ?

ಸ್ನಾನವು ನಮ್ಮ ಜೀರ್ಣಕ್ರಿಯೆಯ ಮೇಲೆ ಹೆಚ್ಚು ಪರಿಣಾಮವನ್ನು ಉಂಟುಮಾಡುತ್ತದೆ. ಸ್ನಾನದಿಂದ ನಮ್ಮ ಜೀರ್ಣಶಕ್ತಿಯೂ ಪ್ರಬಲವಾಗುವುದು. ಆಗ ಆಹಾರವನ್ನು ಕೊಟ್ಟಾಗ ಅದು ಸರಿಯಾಗಿ ಜೀರ್ಣವಾಗುತ್ತದೆ. ಭೋಜನದ ಅನಂತರ ಆಹಾರವನ್ನು ಸ್ವೀಕರಿಸಿದರೆ ಜಠರಾಗ್ನಿಯು ಅಕಾಲದಲ್ಲಿ ವೃದ್ಧಿಯಾಗುವುದು. ಅಗ್ನಿಯನ್ನು ಹೆಚ್ಚು ಮಾಡಿಕೊಂಡು ಅದಕ್ಕೆ ಏನನ್ನಾದರೂ ಕೊಡಬೇಕೇ ಹೊರತು, ಏನ್ನಾದರೂ ಹಾಕಿ ಆಮೇಲೆ ಅಗ್ನಿಯನ್ನು ವರ್ಧಿಸಬಾರದು. ಹಾಗೇನಾದರೂ ಆದರೆ ಆರೋಗ್ಯವು ಕೆಡುವುದು.

ಮತ್ತಷ್ಟು ಅಧ್ಯಾತ್ಮ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.