AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಚಡ್ಡಿ ಕೊಳ್ಳಿರಿ, ರಾಶಿರಾಶಿ ವಾಹನ ಗೆಲ್ಲಿರಿ’: ವಿಐಪಿ ಕ್ಲೋಥಿಂಗ್​ನಿಂದ 1 ಕಾರು, 100 ಸ್ಕೂಟರ್, 1000 ಸರ್​ಪ್ರೈಸ್ ಗಿಫ್ಟ್ ಆಫರ್

VIP Chaddi pe Gaddi Returns: ವಿಐಪಿ ಕ್ಲೋಥಿಂಗ್ ಸಂಸ್ಥೆ ರಾಷ್ಟ್ರದಾದ್ಯಂತ ‘ಚಡ್ಡಿ ಪೆ ಗಾಡ್ಡಿ’ ಅಥವಾ ‘ಚಡ್ಡಿ ಕೊಳ್ಳಿರಿ, ವಾಹನಗಳನ್ನು ಗೆಲ್ಲಿರಿ’ ಎನ್ನುವ ಆಫರ್ ಅನ್ನು ತನ್ನ ಗ್ರಾಹಕರಿಗೆ ನೀಡಿದೆ. ಇದರಲ್ಲಿ ವಿಐಪಿಯ ಒಳ-ಉಡುಪು ಮತ್ತು ಹೊರ-ಉಡುಪುಗಳನ್ನು ಖರೀದಿಸುವ ಗ್ರಾಹಕರಿಗೆ ಒಂದು ಕಾರು, ನೂರು ಸ್ಕೂಟರ್ ಮತ್ತು ಸಾವಿರ ಅಚ್ಚರಿ ಬಹುಮಾನಗಳನ್ನು ಗೆಲ್ಲುವ ಅವಕಾಶ ಸಿಗಲಿದೆ. 2024ರ ಡಿಸೆಂಬರ್ 31ರವರೆಗೆ ಈ ಆಫರ್ ಇದೆ.

‘ಚಡ್ಡಿ ಕೊಳ್ಳಿರಿ, ರಾಶಿರಾಶಿ ವಾಹನ ಗೆಲ್ಲಿರಿ’: ವಿಐಪಿ ಕ್ಲೋಥಿಂಗ್​ನಿಂದ 1 ಕಾರು, 100 ಸ್ಕೂಟರ್, 1000 ಸರ್​ಪ್ರೈಸ್ ಗಿಫ್ಟ್ ಆಫರ್
ವಿಐಪಿ ಕ್ಲೋಥಿಂಗ್​
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 06, 2024 | 12:10 PM

ಮುಂಬೈ: ಪ್ರಖ್ಯಾತ ಒಳ ಉಡುಪುಗಳ ಬ್ರ್ಯಾಂಡ್ ಹೊಂದಿರುವ ವಿಐಪಿ ಕ್ಲೋಥಿಂಗ್ ಸಂಸ್ಥೆ ತನ್ನ ಬಹುನಿರೀಕ್ಷಿತ ‘ಚಡ್ಡಿ ಕೊಳ್ಳಿರಿ, ರಾಶಿರಾಶಿ ವಾಹನಗಳನ್ನು ಗೆಲ್ಲಿರಿ’ ಎನ್ನುವ ಪ್ರಚಾರ ಅಭಿಯಾನ ಆರಂಭಿಸಿದೆ. ವಿಐಪಿ ಬ್ರ್ಯಾಂಡ್​ನ ಅಭಿಯಾನದಲ್ಲಿ ಗ್ರಾಹಕರಿಗೆ ಆಕರ್ಷಕ ಗಿಫ್ಟ್​ಗಳ ಆಫರ್ ಇದೆ. ಒಂದು ಕಾರು, ನೂರು ಸ್ಕೂಟರ್ ಮತ್ತು ಸಾವಿರ ಅಚ್ಚರಿ ಉಡುಗೊರೆಗಳು ಕಾದಿವೆ. 2024ರ ಆಗಸ್ಟ್ 1ರಂದು ಆರಂಭವಾಗಿರುವ ಈ ಆಫರ್ 2024ರ ಡಿಸೆಂಬರ್ 31ರವರೆಗೂ ಇದೆ.

‘ಚಡ್ಡಿ ಕೊಳ್ಳಿರಿ, ರಾಶಿರಾಶಿ ವಾಹನಗಳನ್ನು ಗೆಲ್ಲಿರಿ’ ಆಫರ್​ನಲ್ಲಿ ವಿಐಪಿ ಕ್ಲೋಥಿಂಗ್​ನ ಯಾವುದೇ ಬ್ರ್ಯಾಂಡ್​ಗಳಿಂದ ಒಳ-ಉಡುಪು ಅಥವಾ ಹೊರ-ಉಡುಪಿನ ಯಾವುದೇ ಎರಡು ಬಟ್ಟೆಗಳನ್ನು ಖರೀದಿಸುವ ಗ್ರಾಹಕರಿಗೆ ಒಂದು ಸ್ಕ್ರ್ಯಾಚ್ ಕೂಪನ್ ಸಿಗುತ್ತದೆ. ಆ ತತ್​ಕ್ಷಣದಲ್ಲಿ ಅಚ್ಚರಿ ಬಹುಮಾನಗಳನ್ನು ಗೆಲ್ಲುವ ಅವಕಾಶ ಈ ಕೂಪನ್​ನಿಂದ ಸಿಗುತ್ತದೆ. ನೂರು ಮಂದಿ ಅದೃಷ್ಟವಂತರಿಗೆ ಹೊಸ ಸ್ಕೂಟರ್ ಸಿಗುತ್ತದೆ. ಈ ಅಭಿಯಾನದ ಕೊನೆಯಲ್ಲಿ ಬಂಪರ್ ಲಕ್ಕಿ ಡ್ರಾ ನಡೆಯಲಿದೆ. ಆಗ ಒಬ್ಬ ಅದೃಷ್ಟಶಾಲಿಗೆ ಕಾರು ಗೆಲ್ಲುವ ಅವಕಾಶ ಸಿಗಲಿದೆ. ಕಾರು ಮತ್ತು ಸ್ಕೂಟರ್​ಗಳು ಸಿಗದಿರುವ ಗ್ರಾಹಕರಿಗೆ 1,000 ಸರ್​ಪ್ರೈಸ್ ಗಿಫ್ಟ್​ಗಳನ್ನು ಗೆಲ್ಲುವ ಅವಕಾಶ ಇರುತ್ತದೆ.

ಇದರಲ್ಲಿ ಭಾಗವಹಿಸುವುದಕ್ಕೆ ಗ್ರಾಹಕರು ರೀಟೇಲ್ ಸ್ಟೋರ್ ಮತ್ತು ಇ-ಕಾಮರ್ಸ್ ಪ್ಲಾಟ್​ಫಾರ್ಮ್​ಗಳ ಮೂಲಕ, ಅಥವಾ ನೇರವಾಗಿ ಕಂಪನಿಯ ವೆಬ್​ಸೈಟ್​ನಿಂದ ವಿಐಪಿಯ ಪ್ರಾಡಕ್ಟ್​ಗಳನ್ನು ಖರೀದಿಸಿದರೆ ಕೂಪನ್ ಸಿಗುತ್ತದೆ. ಅದನ್ನು ಸ್ಕ್ರ್ಯಾಚ್ ಮಾಡಿದಾಗ ಆ ಕ್ಷಣವೇ ಇನ್ಸ್​ಟೆಂಟ್ ಬಹುಮಾನ ಸಿಕ್ಕಿದೆಯಾ ಇಲ್ಲವಾ ಎಂಬುದು ಗೊತ್ತಾಗುತ್ತದೆ. ಬಹುಮಾನ ಗೆಲ್ಲದವರು ಕಂಪನಿಯ ವೆಬ್​ಸೈಟ್​ಗೆ ಹೋಗಿ ಬಂಪರ್ ಲಕ್ಕಿ ಡ್ರಾಗೆ ರಿಜಿಸ್ಟರ್ ಮಾಡಬಹುದು. ಅವರಿಗೆ ಕಾರು ಗೆಲ್ಲುವ ಅದೃಷ್ಟ ಇದ್ದರೂ ಇದ್ದೀತು ಎಂದು ವಿಐಪಿ ಕ್ಲೋಥಿಂಗ್ ಲಿ ಸಂಸ್ಥೆ ಮಾಹಿತಿ ನೀಡಿದೆ.

‘ಚಡ್ಡಿ ಕೊಳ್ಳಿರಿ, ರಾಶಿರಾಶಿ ವಾಹನಗಳನ್ನು ಗೆಲ್ಲಿರಿ’ ಎಂಬುದು ವಿಐಪಿ ಕ್ಲೋಥಿಂಗ್ ಸಂಸ್ಥೆಯ ರಾಷ್ಟ್ರಮಟ್ಟದ ಪ್ರಚಾರದ ಭಾಗವಾಗಿದೆ. ಇಂಥ ಆಫರ್​ಗಳನ್ನು ಕಾನೂನಾತ್ಮಕವಾಗಿ ನಿಷೇಧಿಸಿರುವ ತಮಿಳುನಾಡಿನಂತಹ ಕೆಲ ರಾಜ್ಯಗಳನ್ನು ಬಿಟ್ಟು ಭಾರತದ ಉಳಿದೆಡೆ ಈ ಆಫರ್ ಲಭ್ಯ ಇದೆ.

ಈ ಸರ್​ಪ್ರೈಸ್ ಗಿಫ್ಟ್​ಗಳ ಆಫರ್ ವಿಐಪಿ ಉತ್ಪನ್ನಗಳ ಪ್ರಚಾರ ಮಾತ್ರವಲ್ಲ, ತನ್ನ ಗ್ರಾಹಕರಿಗೆ ತೋರಿಸುವ ಕೃತಜ್ಞತೆಯೂ ಹೌದು ಎಂದು ಸಂಸ್ಥೆ ಹೇಳಿಕೊಂಡಿದೆ. ‘ಚಡ್ಡಿ ಕೊಳ್ಳಿರಿ, ರಾಶಿರಾಶಿ ವಾಹನಗಳನ್ನು ಗೆಲ್ಲಿರಿ’ ಎನ್ನುವ ಆಫರ್ ಅನ್ನು ಇನ್ನೂ ಹೆಚ್ಚು ರೋಚಕ ಬಹುಮಾನಗಳೊಂದಿಗೆ ಮರಳಿ ತರಲು ಹರ್ಷಿಸುತ್ತೇವೆ,’ ಎಂದು ವಿಐಪಿ ಕ್ಲೋಥಿಂಗ್​ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಚೇರ್ಮನ್ ಆದ ಸುನೀಲ್ ಪಠಾರೆ ಹೇಳಿದ್ದಾರೆ.

ಪ್ರಖ್ಯಾತ ಬ್ರ್ಯಾಂಡ್ ಆದ ವಿಐಪಿಯ ಒಳ ಉಡುಪು ಮತ್ತು ಹೊರ ಉಡುಪನ್ನು ಖರೀದಿಸಿದಾಗ ದೊಡ್ಡ ಬಹುಮಾನಗಳನ್ನು ಗೆಲ್ಲುವ ಅವಕಾಶ ಡಿಸೆಂಬರ್ 31ರವರೆಗೆ ಮಾತ್ರ ಇದೆ. ಈ ಆಫರ್​ನ ನಿಯಮ ಮತ್ತು ಷರತ್ತುಗಳ ಬಗ್ಗೆ ಪೂರ್ಣ ಮಾಹಿತಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡುವಂತೆ ಕೋರಲಾಗಿದೆ:

vipinners.com/pages/chaddi-pe-gaddi-terms-condition

ಇನ್ನಷ್ಟು ಮಾಹಿತಿಯನ್ನು vipinners.com/ ವೆಬ್​ಸೈಟ್​ನಲ್ಲಿ ಕಾಣಬಹುದು. ಅಥವಾ ವಿಐಪಿಯ ಕಸ್ಟಮರ್ ಸರ್ವಿಸ್ ಟೀಮ್ ಅನ್ನು ಸಂಪರ್ಕಿಸಬಹುದು.

(ಗಮನಿಸಿ: ಇದು ಪ್ರಾಯೋಜಿತ ಲೇಖನ)

ಮಂಗಳೂರು: ರಹಿಮಾನ್ ಶವಯಾತ್ರೆಯ ವೇಳೆ ಯುವಕರ ದಾಂಧಲೆ, ವೀಡಿಯೋ ವೈರಲ್
ಮಂಗಳೂರು: ರಹಿಮಾನ್ ಶವಯಾತ್ರೆಯ ವೇಳೆ ಯುವಕರ ದಾಂಧಲೆ, ವೀಡಿಯೋ ವೈರಲ್
VIDEO: ಇಲ್ಲಿ ಏನ್ ನಡೀತಿದೆ... ಗೊಂದಲದಲ್ಲೇ ಕೂತ RCB ಆಟಗಾರ
VIDEO: ಇಲ್ಲಿ ಏನ್ ನಡೀತಿದೆ... ಗೊಂದಲದಲ್ಲೇ ಕೂತ RCB ಆಟಗಾರ
ಷಷ್ಠಿಪೂರ್ತಿ ಯಾಕೆ ಆಚರಿಸಬೇಕು ಹಾಗೂ ಇದರ ಮಹತ್ವವೇನು?
ಷಷ್ಠಿಪೂರ್ತಿ ಯಾಕೆ ಆಚರಿಸಬೇಕು ಹಾಗೂ ಇದರ ಮಹತ್ವವೇನು?
ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ
ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್