ffreedom App: ಜೀವನೋಪಾಯ ಶಿಕ್ಷಣದೊಂದಿಗೆ 1 ಕೋಟಿ ಭಾರತೀಯರನ್ನು ಸಬಲೀಕರಣಗೊಳಿಸಿದೆ

Ffreedom App ಎಂಬುದು ಭಾರತದಲ್ಲಿ ರೈತರು ಮತ್ತು ಸಣ್ಣ ವ್ಯಾಪಾರ ಮಾಲೀಕರು ತಮ್ಮ ಆದಾಯವನ್ನು ಹೆಚ್ಚಿಕೊಳ್ಳಲು ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಲು ನೆರವಾಗತ್ತಿರುವ ಕ್ರಾಂತಿಕಾರಿ ವೇದಿಕೆಯಾಗಿದೆ.

ffreedom App: ಜೀವನೋಪಾಯ ಶಿಕ್ಷಣದೊಂದಿಗೆ 1 ಕೋಟಿ ಭಾರತೀಯರನ್ನು ಸಬಲೀಕರಣಗೊಳಿಸಿದೆ
ffreedom App
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 31, 2023 | 4:14 PM

ffreedom App ಎಂಬುದು ಭಾರತದಲ್ಲಿ ರೈತರು ಮತ್ತು ಸಣ್ಣ ವ್ಯಾಪಾರ ಮಾಲೀಕರು ತಮ್ಮ ಆದಾಯವನ್ನು ಹೆಚ್ಚಿಕೊಳ್ಳಲು ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಲು ನೆರವಾಗತ್ತಿರುವ ಕ್ರಾಂತಿಕಾರಿ ವೇದಿಕೆಯಾಗಿದೆ. ಇದು ಈಗ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 10 ಮಿಲಿಯನ್ ಡೌನ್‌ಲೋಡ್‌ಗಳನ್ನು ಹೊಂದುವ ಮೂಲಕ ಪ್ರಮುಖ ಮೈಲಿಗಲ್ಲನ್ನು ತಲುಪಿದೆ. ಭಾರತದ ಆರ್ಥಿಕತೆಯ ಬೆಳವಣಿಗೆಗೆ ಮತ್ತು ಅಭಿವೃದ್ಧಿಗೆ ನಿರ್ಣಾಯಕವಾಗಿರುವ ವ್ಯಕ್ತಿಗಳಿಗೆ ಜೀವನೋಪಾಯದ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಈ ಸಾಧನೆಯು ffreedom App ಈ ವಲಯದ ಮಾರ್ಕೆಟ್ ಲೀಡರ್ ಆಗಿ ಅದರ ಸ್ಥಾನವನ್ನು ಇನ್ನೂ ಗಟ್ಟಿಗೊಳಿಸುತ್ತಿದೆ. ಬಳಕೆದಾರ ಸ್ನೇಹಿ ಇಂಟರ್ಫೇಸ್ ಮತ್ತು ಸಮಗ್ರ ಕೋರ್ಸ್​​ಗಳೊಂದಿಗೆ, ದೇಶದಾದ್ಯಂತ ಲಕ್ಷಾಂತರ ಜನರ ಜೀವನವನ್ನು ಸುಧಾರಿಸುವಲ್ಲಿ ffreedom App ಗಮನಾರ್ಹ ಪರಿಣಾಮ ಬೀರುತ್ತಿದೆ.

33 ತಿಂಗಳ ಹಿಂದೆ ಪ್ರಾರಂಭವಾದಾಗಿನಿಂದ ಕೇಂದ್ರೀಕೃತವಾಗಿ ಕೆಲಸ ಮಾಡಿರುವುದೇ ffreedom ಅಪ್ಲಿಕೇಶನ್‌ನ ಈ ಪ್ರಭಾವಶಾಲಿ ಬೆಳವಣಿಗೆಗೆ ಕಾರಣವಾಗಿದೆ. ವೈವಿಧ್ಯಮಯ ಜನಸಮೂಹವನ್ನು ತಲುಪುವ ಉದ್ದೇಶದಿಂದ ಈ ಅಪ್ಲಿಕೇಶನ್ ಇಂಗ್ಲಿಷ್ ಜೊತೆಗೆ ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಂತಹ ಸ್ಥಳೀಯ ಭಾಷೆಗಳಲ್ಲಿ ಸಹ ಕೋರ್ಸ್ ಗಳನ್ನು ನಿರ್ಮಿಸುವ ಬಗ್ಗೆ ಆದ್ಯತೆ ನೀಡಿದೆ. ಈ ವಿಧಾನದಿಂದ ಬಳಕೆದಾರರು ತಮಗೆ ಅರ್ಥವಾಗುವ ಭಾಷೆಯಲ್ಲೇ ಜೀವನೋಪಾಯ ಶಿಕ್ಷಣವನ್ನು ಪಡೆದುಕೊಳ್ಳಬಹುದಾಗಿದೆ.

ಈ ಅಪ್ಲಿಕೇಶನ್ ಪ್ರಸ್ತುತ ಕೃಷಿ, ವ್ಯಾಪಾರ ಮತ್ತು ವೈಯಕ್ತಿಕ ಹಣಕಾಸುಗಳ ವಿಷಯದಲ್ಲಿ 960 ಪ್ರಭಾವಶಾಲಿ ಕೋರ್ಸ್‌ಗಳನ್ನು ನಿರ್ಮಿಸಿದೆ. ಅಪ್ಲಿಕೇಶನ್ ಪ್ರತಿ ಭಾಷೆಯಲ್ಲಿ ಹೊಸ ಕೋರ್ಸ್‌ಗಳನ್ನು ಪ್ರತಿ ವಾರವೂ ಸಹ ಬಿಡುಗಡೆ ಮಾಡುತ್ತಿದೆ. ಈ ಎಲ್ಲ ಕೋರ್ಸ್‌ಗಳನ್ನು ಆಯಾ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಿರುವ 800 ಕ್ಕೂ ಹೆಚ್ಚು ಪರಿಣಿತರ ಮಾರ್ಗದರ್ಶಕರೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಇದು ಅಪ್ಲಿಕೇಶನ್‌ನ ಬಳಕೆದಾರರಿಗೆ ಅಮೂಲ್ಯವಾದ ಒಳನೋಟಗಳು ಮತ್ತು ಮಾರ್ಗದರ್ಶನವನ್ನು ಒದಗಿಸುತ್ತದೆ. ದೇಶೀಯ ಭಾಷೆಯ ಬೆಂಬಲ ಮತ್ತು ಪರಿಣಿತ-ಬೆಂಬಲಿತ ವಿಷಯದ ಈ ಅನನ್ಯ ಸಂಯೋಜನೆಯು ಭಾರತದಲ್ಲಿ ಲಕ್ಷಾಂತರ ಬಳಕೆದಾರರನ್ನು ತಲುಪಲು ಮತ್ತು ಧನಾತ್ಮಕವಾಗಿ ಅವರ ಮೇಲೆ ಪ್ರಭಾವ ಬೀರಲು ffreedom ಅಪ್ಲಿಕೇಶನ್‌ಗೆ ಸಹಾಯ ಮಾಡಿದೆ. ಈ ಎಲ್ಲಾ ಕೋರ್ಸ್‌ಗಳು ಚಂದಾದಾರಿಕೆ ಪ್ಯಾಕೇಜ್ ಮೂಲಕ ಲಭ್ಯವಿವೆ, ಅದನ್ನು ಪಡೆಯುವ ಮೂಲಕ ಬಳಕೆದಾರರು ಈ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ಎಲ್ಲಾ ಕೋರ್ಸ್‌ಗಳಿಗೆ ಪ್ರವೇಶವನ್ನು ಪಡೆಯಬಹುದು.

ಇದನ್ನು ಓದಿ: Sponsored: ಜ್ಯೋತಿಷಿ ಮಾಡಿದ ಸಹಾಯದಿಂದ ಈಗ ದಿನಕ್ಕೆ 35 ಲಕ್ಷ ರೂಪಾಯಿ ವ್ಯವಹಾರ ನಡೆಸುತ್ತಾರೆ ಇಂಜಿನಿಯರ್​!

ಭಾರತದಲ್ಲಿ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಸ್ಥಾಪಿತವಾಗಿರುವ ffreedom ಅಪ್ಲಿಕೇಶನ್‌ ಇಂದು ಲಕ್ಷಾಂತರ ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳನ್ನು ಸೃಷ್ಟಿಸಲು ನಿರ್ದಿಷ್ಟ ಒತ್ತು ನೀಡುತ್ತದೆ. ಈ ಅಪ್ಲಿಕೇಶನ್​​ನ ಸಂಸ್ಥಾಪಕ ಮತ್ತು CEO, ಶ್ರೀ. ಸಿ.ಎಸ್. ಸುಧೀರ್, ಅವರು ಹೇಳುವ ಪ್ರಕಾರ ಭಾರತದ ಪ್ರಸ್ತುತ ಆರ್ಥಿಕತೆಯು ಸುಮಾರು 3.5 ಟ್ರಿಲಿಯನ್ ಆಗಿದೆ ಮತ್ತು 5 ಟ್ರಿಲಿಯನ್ ಜಿಡಿಪಿಯನ್ನು ತಲುಪುವ ಗುರಿಯನ್ನು ಹೊಂದಿದೆ, ಇದನ್ನು ರೈತರು, ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳು ಮತ್ತು ದೊಡ್ಡ ಕಾರ್ಪೊರೇಟ್‌ಗಳ ಸಹಯೋಗದೊಂದಿಗೆ ಸಾಧಿಸಬಹುದು. ಆದಾಗ್ಯೂ, “ಭಾರತದ ಪ್ರಸ್ತುತ ಶಿಕ್ಷಣ ವ್ಯವಸ್ಥೆಯು ಲಕ್ಷಾಂತರ ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳನ್ನು ಸೃಷ್ಟಿಸಲು ಅಗತ್ಯವಾದ ಮೂಲಭೂತ ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡುವುದಿಲ್ಲ” ಎಂದು ಅವರು ಹೇಳುತ್ತಾರೆ. ಈ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ, ಎಲ್ಲಾ ಕ್ಷೇತ್ರಗಳಿಗೆ ಮತ್ತು ನಿರ್ದಿಷ್ಟವಾಗಿ ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳಿಗೆ ನಿಖರವಾದ ಜ್ಞಾನ ವರ್ಗಾವಣೆ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಒದಗಿಸುವ ನಿಟ್ಟಿನಲ್ಲಿ ಮತ್ತು ಈ ಮೂಲಕ ಭಾರತವು ತನ್ನ ಗುರಿಯನ್ನು ತಲುಪಲು ಅಗತ್ಯವಿರುವ ಬೆಂಬಲವನ್ನು ಒದಗಿಸಲು ffreedom ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಅದರ ಸಮಗ್ರ ಕೋರ್ಸ್​ಗಳು ಮತ್ತು ತಜ್ಞರ ಬೆಂಬಲಿತ ವಿಷಯದ ಮೂಲಕ, ಭಾರತದ ಆರ್ಥಿಕತೆಯ ಬೆಳವಣಿಗೆಗೆ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡಲು ಮತ್ತು ಈ ಮೂಲಕ ವ್ಯಕ್ತಿಗಳು ಮತ್ತು ಸಮುದಾಯಗಳನ್ನು ಸಶಕ್ತಗೊಳಿಸಲು ffreedom ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತಿದೆ.

ಫೋನ್ ಕರೆಗಳ ಮೂಲಕ ಹಣಕಾಸಿನ ಶಿಕ್ಷಣವನ್ನು ಒದಗಿಸುವ ವೇದಿಕೆಯಿಂದ ಆರಂಭಗೊಂಡು ಅದರ Android ಅಪ್ಲಿಕೇಶನ್‌ನಲ್ಲಿ 10 ಮಿಲಿಯನ್ ಬಳಕೆದಾರರನ್ನು ತಲುಪಿ ನಂತರ 2020ರ ಮಾರ್ಚ್ 20ರಂದು ಜೀವನೋಪಾಯ ಶಿಕ್ಷಣ ಒದಗಿಸುವ ffreedom App ಆಗಿ ಪ್ರಾರಂಭಗೊಂಡು ಅಲ್ಲಿಂದ ಇಲ್ಲಿಯವರೆಗೆ ಈ ಅಪ್ಲಿಕೇಶನ್ ಗಮನಾರ್ಹ ಪ್ರಯಾಣವನ್ನು ಮಾಡಿದೆ. ಈ ಅಪ್ಲಿಕೇಶನ್ ಅನೇಕ ಹೊಸ ವೈಶಿಷ್ಟ್ಯಗಳನ್ನು ಹೊಂದಿರುವ ಕೋರ್ಸ್ ಗಳನ್ನು ನಿರ್ಮಿಸಿದೆ, ಉದಾಹರಣೆಗೆ ಸ್ಥಳೀಯ ಭಾಷೆಯ ಬೆಂಬಲ, ಪರಿಣಿತ-ಬೆಂಬಲಿತ ವಿಷಯ ಮತ್ತು ಕೃಷಿ, ವ್ಯಾಪಾರ ಮತ್ತು ವೈಯಕ್ತಿಕ ಹಣಕಾಸು ವಿಷಯಗಳಲ್ಲಿ ವಿಸ್ತರಿತ ಕೋರ್ಸ್ ಗಳನ್ನು ಇದು ಒಳಗೊಂಡಿದೆ. ಇಲ್ಲಿರುವ ಇನ್ಫೋಗ್ರಾಫಿಕ್ ಈ ಅಪ್ಲಿಕೇಶನ್ ನ ಪ್ರಯಾಣ ಮತ್ತು ಅದರ ಮೈಲಿಗಲ್ಲುಗಳನ್ನು ವಿವರಿಸುತ್ತದೆ.

ಆರ್ಗಾನಿಕ್ ಬೆಳವಣಿಗೆ ಮತ್ತು ವರ್ಡ್ ಆಫ್ ಮೌಥ್ ಮೂಲಕ ದೊಡ್ಡ ಬಳಕೆದಾರರ ನೆಲೆಯನ್ನು ನಿರ್ಮಿಸುವಲ್ಲಿ ffreedom ಅಪ್ಲಿಕೇಶನ್ ಯಶಸ್ವಿಯಾಗಿದೆ. ಈ ವಿಧಾನವು ಕಂಪನಿಗೆ ಭಾರೀ ಮಾರ್ಕೆಟಿಂಗ್ ಪ್ರಯತ್ನಗಳ ಮೇಲೆ ಖರ್ಚು ಮಾಡುವ ಬದಲು ಉತ್ಪನ್ನ ಅಭಿವೃದ್ಧಿ ಮತ್ತು ವಿಸ್ತರಣೆಯ ಮೇಲೆ ಕೇಂದ್ರೀಕರಿಸಲು ಅವಕಾಶ ಮಾಡಿಕೊಟ್ಟಿದೆ. ಕಂಪನಿಯು 18 ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ವಹಿಸುತ್ತಿದೆ, ಇದು 2.5 ಮಿಲಿಯನ್‌ಗಿಂತಲೂ ಹೆಚ್ಚಿನ ಚಂದಾದಾರರ ಮೂಲವನ್ನು ಹೊಂದಿದೆ ಮತ್ತು ಇದು ಕಂಪನಿಗೆ ಆರ್ಗಾನಿಕ್ ಬಳಕೆದಾರರನ್ನು ಆಕರ್ಷಿಸಲು ಸಹಾಯ ಮಾಡಿದೆ. ಹೆಚ್ಚುವರಿಯಾಗಿ, ಕಂಪನಿಯು ಲಾಭದಾಯಕವಾಗಿದೆ, ಇದು ಅದರ ಬಿಸಿನೆಸ್ ಮಾಡೆಲ್ ಪರಿಣಾಮಕಾರಿತ್ವಕ್ಕೆ ಮತ್ತು ಅದರ ಸೇವೆಗಳಿಗೆ ಇರುವ ಬಲವಾದ ಬೇಡಿಕೆಗೆ ಸಾಕ್ಷಿಯಾಗಿದೆ.

ಎಲ್ಲಾ ವಯಸ್ಸಿನ ಮತ್ತು ಹಿನ್ನೆಲೆಯ ವ್ಯಕ್ತಿಗಳು ತಮ್ಮ ಜೀವನೋಪಾಯದ ಗೋಲ್ ಗಳನ್ನು ಸಾಧಿಸುವ ನಿಟ್ಟಿನಲ್ಲಿ ನೆರವಾಗಲು ffreedom ಅಪ್ಲಿಕೇಶನ್‌ನ ಕೋರ್ಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಅದರ ಕೋರ್ಸ್‌ಗಳನ್ನು 37 ಗೋಲ್ ಗಳಾಗಿ ಉಪ-ವರ್ಗೀಕರಿಸುವ ಮೂಲಕ, ಬಳಕೆದಾರರು ತಮ್ಮ ಅಗತ್ಯಗಳಿಗೆ ಸೂಕ್ತವಾದ ಕೋರ್ಸ್ ಅನ್ನು ಹುಡುಕಲು ಮತ್ತು ನಿರ್ದಿಷ್ಟವಾದ ಉದ್ದೇಶಗಳನ್ನು ನಿರ್ಧರಿಸಲು ಈ ಅಪ್ಲಿಕೇಶನ್ ಸಹಾಯ ಮಾಡುತ್ತದೆ. ಈ ವಿಧಾನವು, ಬಳಕೆದಾರರಿಗೆ ಅಪ್ಲಿಕೇಶನ್ ಅನ್ನು ಸುಲಭವಾಗಿ ನ್ಯಾವಿಗೇಟ್ ಮಾಡಲು ಮತ್ತು ಅವರಿಗೆ ಹೆಚ್ಚು ಸೂಕ್ತವಾದ ವಿಷಯವನ್ನು ಹುಡುಕಲು ಸಹಾಯ ಮಾಡುತ್ತದೆ, ಜೊತೆಗೆ ಅವರ ಗೋಲ್ ಗಳನ್ನು ಸಾಧಿಸಲು ಸ್ಪಷ್ಟ ಮಾರ್ಗಸೂಚಿಯನ್ನು ಒದಗಿಸುತ್ತದೆ. ಇದಲ್ಲದೆ, ಅಪ್ಲಿಕೇಶನ್‌ನಲ್ಲಿ ಮೀಸಲಾದ ತರಬೇತುದಾರರು ಮತ್ತು ನಿರ್ದಿಷ್ಟ ಗುರಿಯಲ್ಲಿ ಪರಿಣಿತಿ ಹೊಂದಿರುವ ತಂಡವು ವಿಶೇಷ ಮತ್ತು ವೈಯಕ್ತಿಕಗೊಳಿಸಿದ ಹಣಕಾಸು ಯೋಜನೆಯನ್ನು ಒದಗಿಸುತ್ತದೆ, ಚಂದಾದಾರರು ತಮ್ಮ ಗುರಿಗಳನ್ನು ಸಾಧಿಸಲು ಅಗತ್ಯವಿರುವ ಬೆಂಬಲವನ್ನು ಹೊಂದಿದ್ದಾರೆ ಎಂದು ಇದು ಖಚಿತಪಡಿಸುತ್ತದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 4:14 pm, Tue, 31 January 23

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ