Stock Market: ಕುಸಿಯತ್ತಿರುವ ಷೇರುಪೇಟೆಯಲ್ಲಿ ಲಾಭ ಗಳಿಸಲು ಸಾದ್ಯವಿದೆಯೇ? ಷೇರುಪೇಟೆಯಲ್ಲಿ ಲಾಂಗ್ ಮತ್ತು ಶಾರ್ಟ್ ಪೊಸಿಷನ್​ಗಳ ಬಗ್ಗೆ ತಿಳಿಯಿರಿ

ಸ್ಟಾಕ್ ಮಾರುಕಟ್ಟೆಯಲ್ಲಿ ಜನ ಹೇಗೆ ಷೇರುಗಳನ್ನು ಅಗ್ಗದ ಬೆಲೆಗಳಲ್ಲಿ ಕೊಂಡು ದುಬಾರಿ ಬೆಲೆಗಳಿಗೆ ಮಾರಿ ಲಾಭ ಗಳಿಸುತ್ತಾರೋ, ಹಾಗೆಯೇ ದುಬಾರಿ ಬೆಲೆಗಳಿಗೆ ಮಾರಿದ ಷೇರುಗಳನ್ನು ನಂತರ ಅಗ್ಗದ ಬೆಲೆಗಳಲ್ಲಿ ಕೊಂಡೂ ಸಹ ಲಾಭ ಗಳಿಸಬಹುದು.

Stock Market: ಕುಸಿಯತ್ತಿರುವ ಷೇರುಪೇಟೆಯಲ್ಲಿ ಲಾಭ ಗಳಿಸಲು ಸಾದ್ಯವಿದೆಯೇ? ಷೇರುಪೇಟೆಯಲ್ಲಿ ಲಾಂಗ್ ಮತ್ತು ಶಾರ್ಟ್ ಪೊಸಿಷನ್​ಗಳ ಬಗ್ಗೆ ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Digi Tech Desk

Updated on:Sep 22, 2022 | 11:17 AM

ಸ್ಟಾಕ್ ಮಾರುಕಟ್ಟೆಯಲ್ಲಿ ಜನ ಹೇಗೆ ಷೇರುಗಳನ್ನು ಅಗ್ಗದ ಬೆಲೆಗಳಲ್ಲಿ ಕೊಂಡು ದುಬಾರಿ ಬೆಲೆಗಳಿಗೆ ಮಾರಿ ಲಾಭ ಗಳಿಸುತ್ತಾರೋ, ಹಾಗೆಯೇ ದುಬಾರಿ ಬೆಲೆಗಳಿಗೆ ಮಾರಿದ ಷೇರುಗಳನ್ನು ನಂತರ ಅಗ್ಗದ ಬೆಲೆಗಳಲ್ಲಿ ಕೊಂಡೂ ಸಹ ಲಾಭ ಗಳಿಸಬಹುದು. ಷೇರುಪೇಟೆಯಲ್ಲಿ ಎರಡು ಬಗೆಯ ಸಂವೇದನೆಗಳು ಕೆಲಸ ಮಾಡುತ್ತಿರುತ್ತವೆ. ಮೊದಲನೆಯದು ಗೂಳಿಯ ಓಟ ಹಾಗೂ ಎರಡನೆಯದು ಕರಡಿಯ ಕುಣಿತ. ನೀವೇನಾದರೂ ಕಂಪನಿಯೊಂದರ ಷೇರುಗಳನ್ನು ಕೊಂಡು ಅದರ ಬೆಲೆಗಳಲ್ಲಿ ಏರಿಕೆಯಾಗುವುದೆಂದು ನಿರೀಕ್ಷಿಸುವುದನ್ನು ಗೋಯಿಂಗ್ಲಾಂಗ್” ಅಥವಾ ಲಾಂಗ್ಪೊಸಿಷನ್ ಎನ್ನಲಾಗುತ್ತದೆ. ಇದಕ್ಕೆ ಬದಲಾಗಿ, ನೀವೇನಾದರೂ ಸ್ಟಾಕ್ ಬೆಲೆಯು ಕುಸಿಯುವುದೆಂದು ಯೋಚಿಸಿ ಅದು ನಿಮ್ಮ ಹೆಸರಿಗೆ ವರ್ಗಾವಣೆಯಾಗುವ ಮೊದಲೇ ಮಾರಿಬಿಟ್ಟರೆ, ಅದನ್ನು ಶಾರ್ಟ್ಪೊಸಿಷನ್ ಎನ್ನಲಾಗುತ್ತದೆ. ಶಾಟ್ ಮತ್ತು ಲಾಂಗ್ಪೊಸಿಷನ್ಗಳ ಬಗ್ಗೆ ನಿಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳಬೇಕೆಂದು ನೀವು ಬಯಸಿದರೆ 5paisa.com ಲಿಂಕ್ ಮೇಲೆ ಕ್ಲಿಕ್ ಮಾಡಿ 5paisa (https://bit.ly/3RreGqO) ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಬಹುದು.

ಲಾಂಗ್ ಪೊಸಿಷನ್ ಅರ್ಥ

ಮಾರುಕಟ್ಟೆಯಲ್ಲಿ ಗೂಳಿಯ ಓಟದ ಪ್ರವೃತ್ತಿಯಿದ್ದರೆ ಹಾಗೂ ಷೇರಿನ ಬೆಲೆ ಏರುವುದೆಂದು ಮಾರಾಟಗಾರನು ಭಾವಿಸಿದರೆ ಆಗ ಅವನು ಅದನ್ನು ದೀರ್ಘಕಾಲದವರೆಗೆ ಮಾರದೇ ಇಟ್ಟುಕೊಳ್ಳಬಹುದು. ನಂತರ, ಬೆಲೆಯಲ್ಲಿ ಏರಿಕೆಯಾದಾಗ ಅವನು ಷೇರುಗಳನ್ನು ಮಾರಿ ಲಾಭ ಗಳಿಸಬಹುದು. ಉದಾಹರಣೆಗೆ, ಎಬಿಸಿ ಕಂಪನಿಯ ಷೇರೊಂದರ ಬೆಲೆ 100/= ರೂಪಾಯಿಗಳೆಂದು ಭಾವಿಸೋಣ. ಒಂದು ವೇಳೆ ಮಾರಾಟಗಾರನು ಮುಂಬರುವ ಸಮಯದಲ್ಲಿ ಅದರ ಬೆಲೆ 120/= ರೂಪಾಯಿಗಳಿಗೆ ಏರಿಕೆಯಾಗಬಹುದು ಎಂದು ಭಾವಿಸಿದರೆ, ಆಗ ಅವನು ಅದನ್ನು 100/= ರೂಪಾಯಿಗಳಿಗೆ ಕೊಂಡು ಅದರ ಬೆಲೆ 120/= ರೂಪಾಯಿಗಳಾದಾಗ ಮಾರಿ ಲಾಭ ಗಳಿಸುತ್ತಾನೆ. ಇದರ ಅರ್ಥವೆಂದರೆ, ಮುಂದೊಂದು ದಿನ ಅದರ ಬೆಲೆ ಏರುವ ನಿರೀಕ್ಷೆಯಲ್ಲಿ ಅವನು ಅದನ್ನು ದೀರ್ಘಕಾಲ ತನ್ನ ಬಳಿಯಲ್ಲಿಯೇ ಇಟ್ಟುಕೊಂಡಿದ್ದ ಎಂದಾಗುತ್ತದೆ.

ಶಾರ್ಟ್ ಪೊಸಿಷನ್ ಅರ್ಥ

ಗೋಯಿಂಗ್ ಶರ್ಟ್ ಅಥವಾ ಶಾರ್ಟಿಂಗ್ಎಂದು ಹೇಳಿದರೆ ಅದು ಸ್ವಲ್ಪ ವಿಚಿತ್ರವಾಗಿ ಕೇಳಿಸಬಹುದು. ಸಾಮಾನ್ಯವಾಗಿ, ಮಾರಾಟದಲ್ಲಿ, ಯಾವುದೇ ವಸ್ತುವನ್ನು ಮಾರುವ ಮೊದಲು ಕೊಳ್ಳಬೇಕಾಗುತ್ತದೆ. ಆದರೆ, ಸ್ಟಾಕ್ ಮಾರ್ಕೆಟ್​ನ ವಿಷಯದಲ್ಲಿ ಅದು ಹಾಗಲ್ಲ. ವಾಸ್ತವದಲ್ಲಿ, ಹೂಡಿಕೆದಾರನೊಬ್ಬನು ಶಾರ್ಟ್ ಪೊಸಿಷನ್ ತೆಗೆದುಕೊಂಡಾಗ, ಅವನು ಬ್ರೋಕರ್​ನಿಂದ ಷೇರುಗಳನ್ನು ಮಾರಕಟ್ಟೆಯ ದರದಲ್ಲಿ ಸಾಲ ಪಡೆದು ಅವುಗಳನ್ನು ಮಾರುತ್ತಾನೆ. ನಂತರ, ಅವನು ಅದೇ ಷೇರನ್ನು ಅಗ್ಗದ ಬೆಲೆಯಲ್ಲಿ ಕೊಂಡು ಬ್ರೋಕರ್​ಗೆ ಹಿಂದಿರುಗಿಸುತ್ತಾನೆ. ಸ್ಟಾಕ್​ನ ಬೆಲೆ ಕುಸಿದರೆ ಅವನು ಅದನ್ನು ಅಗ್ಗದ ಬೆಲೆಯಲ್ಲಿ ಕೊಂಡು ಲಾಭ ಗಳಿಸಬಹುದೆಂಬುದು ಅವನ ಭಾವನೆಯಾಗಿರುತ್ತದೆ.

ಲಾಂಗ್ ಮತ್ತು ಶಾರ್ಟ್ ಪೊಸಿಷನ್ ವ್ಯವಹಾರವು ಬಹುತೇಕ ಡಿರೈವೇಟಿವ್ಸ್ ಅಥವಾ ಫ್ಯೂಚರ್ ಮತ್ತು ಆಪ್ಷನ ವಲಯದಲ್ಲಿ ನಡೆಯುತ್ತದೆ. ಮುಂಬರುವ ಸಮಯದಲ್ಲಿ ಪೂರೈಕೆಯಾಗುವ ಷೇರುಗಳ ವಹಿವಾಟು ಅಲ್ಲಿ ಪ್ರಸ್ತುತ ಸಮಯದಲ್ಲಿ ನಡೆಯುತ್ತದೆ. ಲಾಂಗ್ ಮತ್ತು ಶಾರ್ಟ್ ಪೊಸಿಷನ್​ಗಳ ಬಗೆಗಿನ ಹೆಚ್ಚಿನ ವಿವರಗಳಿಗಾಗಿ 5paisa.com ಜಾಲತಾಣವನ್ನು ಸಂದರ್ಶಿಸಿ.. 5Paisa (https://bit.ly/3RreGqO

Published On - 6:08 pm, Thu, 8 September 22

ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ