AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯನ್ ಗೇಮ್ಸ್​ನಲ್ಲಿ ಚಿನ್ನ ಗೆದ್ದ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಮಡದಿ ದೀಪಿಕಾ- ಹರಿಂದರ್ ಜೋಡಿ..!

Asian Games 2023: ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನಲ್ಲಿ ಭಾರತ ಮತ್ತೊಂದು ಚಿನ್ನದ ಪದಕ ಗೆದ್ದುಕೊಂಡಿದೆ. ಸ್ಕ್ವಾಷ್‌ ಮಿಶ್ರ ಡಬಲ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಲಭಿಸಿದ್ದು, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರ ಮಡದಿ ದೀಪಿಕಾ ಪಳ್ಳಿಕಲ್ ಮತ್ತು ಹರಿಂದರ್ ಪಾಲ್ ಸಿಂಗ್ ಜೋಡಿ ಭಾರತಕ್ಕೆ ಈ ಪದಕವನ್ನು ಗೆದ್ದುಕೊಟ್ಟಿದೆ.

ಏಷ್ಯನ್ ಗೇಮ್ಸ್​ನಲ್ಲಿ ಚಿನ್ನ ಗೆದ್ದ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಮಡದಿ ದೀಪಿಕಾ- ಹರಿಂದರ್ ಜೋಡಿ..!
ದಿನೇಶ್ ಕಾರ್ತಿಕ್, ದೀಪಿಕ್, ಹರಿಂದರ್
ಪೃಥ್ವಿಶಂಕರ
|

Updated on:Oct 05, 2023 | 1:31 PM

Share

ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನಲ್ಲಿ (Asian Games 2023) ಭಾರತ ಮತ್ತೊಂದು ಚಿನ್ನದ ಪದಕ ಗೆದ್ದುಕೊಂಡಿದೆ. ಸ್ಕ್ವಾಷ್‌ ಮಿಶ್ರ ಡಬಲ್ಸ್‌ನಲ್ಲಿ (Squash Mixed Doubles Event) ಭಾರತಕ್ಕೆ ಚಿನ್ನದ ಪದಕ ಲಭಿಸಿದ್ದು, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ (Dinesh Karthik) ಅವರ ಮಡದಿ ದೀಪಿಕಾ ಪಳ್ಳಿಕಲ್ ಮತ್ತು ಹರಿಂದರ್ ಪಾಲ್ ಸಿಂಗ್ ( Dipika Pallikal and Harinder Pal Singh Sandhu) ಜೋಡಿ ಭಾರತಕ್ಕೆ ಈ ಪದಕವನ್ನು ಗೆದ್ದುಕೊಟ್ಟಿದೆ. ಈ ಜೋಡಿ ಫೈನಲ್‌ನಲ್ಲಿ ಮಲೇಷ್ಯಾವನ್ನು 2-0 ಅಂತರದಿಂದ ಮಣಿಸಿದ್ದು, ಈ ಮೂಲಕ ಭಾರತಕ್ಕೆ 20ನೇ ಚಿನ್ನದ ಪದಕ ಸಿಕ್ಕಂತಾಗಿದೆ. ಅಲ್ಲದೆ ಇದುವರೆಗೆ ಭಾರತದ ಪದಕಗಳ ಖಾತೆಗೆ 83 ಪದಕಗಳು ಬಿದ್ದಿದ್ದು, ಏಷ್ಯನ್ ಗೇಮ್ಸ್‌ ಇತಿಹಾಸದಲ್ಲಿ ಅಧಿಕ ಪದಕಗಳ ಭೇಟಿಯಾಡಿದ ನೂತನ ದಾಖಲೆಯನ್ನು ಭಾರತದ ಕ್ರೀಡಾಪಟುಗಳು ಸೃಷ್ಟಿಸಿದ್ದಾರೆ.

ಕಠಿಣ ಸ್ಪರ್ಧೆಯಲ್ಲಿ ಗೆಲುವು

ಫೈನಲ್ ಪಂದ್ಯದಲ್ಲಿ ಮಲೇಷ್ಯಾದ ಐಫಾ ಬಿಂತಿ ಅಜ್ಮಾನ್ ಮತ್ತು ಮೊಹಮ್ಮದ್ ಸಯಾಫಿಕ್ ಬಿನ್ ಮೊಹಮ್ಮದ್ ಕಮಲ್ ಅವರನ್ನು ಭಾರತದ ಜೋಡಿ 2-0 ಅಂತರದಿಂದ ಗೆದ್ದಿರಬಹುದು. ಆದರೆ ಈ ಪಂದ್ಯದಲ್ಲಿ ಮಲೇಷ್ಯಾದ ಜೋಡಿ ಪ್ರಬಲ ಸ್ಪರ್ಧೆ ನೀಡಿ 11-10, 11-10 ರಿಂದ ರೋಚಕ ಸೋಲುಂಡಿತು. 35 ನಿಮಿಷಗಳ ಕಾಲ ನಡೆದ ಫೈನಲ್ ಪಂದ್ಯದಲ್ಲಿ, ದೀಪಿಕಾ ಮತ್ತು ಹರಿಂದರ್ ಅವರು ತಮ್ಮ ಎಲ್ಲ ಪ್ರಯತ್ನಗಳ ಹೊರತಾಗಿಯೂ ತಮ್ಮ ಎದುರಾಳಿ ತಂಡವನ್ನು ಗೆಲ್ಲಲು ಬಿಡಲಿಲ್ಲ. ಒಂದು ಹಂತದಲ್ಲಿ ಭಾರತ ತಂಡ ಸುಲಭ ಗೆಲುವಿಗೆ ಒಂದು ಹೆಜ್ಜೆ ದೂರದಲ್ಲಿತ್ತು. ಆದರೆ ನಂತರ ಭಾರತ ಸುಲಭವಾಗಿ ಅಂಕಗಳನ್ನು ಕಳೆದುಕೊಂಡಿತು. ಎರಡನೇ ಗೇಮ್​ನಲ್ಲಿ ಮಲೇಷ್ಯಾ ತಂಡ ಸತತ ಏಳು ಪಾಯಿಂಟ್ಸ್ ಪಡೆದು ಸ್ಕೋರ್ ಅನ್ನು 3-9 ರಿಂದ 10-9ಕ್ಕೆ ಇಳಿಸಿತು. ಆದರೆ ಮತ್ತೆ ಲಯಕ್ಕೆ ಮರಳಿದ ದೀಪಿಕಾ ಮತ್ತು ಹರಿಂದರ್, ಮಲೇಷ್ಯಾ ಜೋಡಿಯನ್ನು ಮಣಿಸುವಲ್ಲಿ ಯಶಸ್ವಿಯಾದರು.

Asian Games: 16 ಚಿನ್ನ, 71 ಪದಕ; ಏಷ್ಯನ್ ಗೇಮ್ಸ್​ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಭಾರತ..! ಪ್ರಧಾನಿ ಮೋದಿ ಮೆಚ್ಚುಗೆ

ದೀಪಿಕಾಗೆ ಎರಡನೇ ಪದಕ

ಈ ಏಷ್ಯನ್ ಗೇಮ್ಸ್‌ನಲ್ಲಿ ದೀಪಿಕಾಗೆ ಇದು ಎರಡನೇ ಪದಕವಾಗಿದೆ. ಇದಕ್ಕೂ ಮುನ್ನ ಮಹಿಳಾ ತಂಡದೊಂದಿಗೆ ಕಂಚಿನ ಪದಕ ಜಯಿಸಿದ್ದರು. ಈಗ ಅವರ ಖಾತೆಯಲ್ಲಿ ಆರು ಏಷ್ಯನ್ ಗೇಮ್ಸ್ ಪದಕಗಳಿವೆ, ಇದರಲ್ಲಿ ಒಂದು ಚಿನ್ನ, ಒಂದು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳು ಸೇರಿವೆ.

ದಿನೇಶ್ ಕಾರ್ತಿಕ್ ಬದುಕು ಬದಲಿಸಿದ ದೀಪಿಕಾ

ವಾಸ್ತವವಾಗಿ ಟೀಂ ಇಂಡಿಯಾ ಕ್ರಿಕೆಟಿಗ ದಿನೇಶ್ ಕಾರ್ತಿಕ್ ವೈವಾಹಿಕ ಜೀವನದಲ್ಲಿ 2012 ರಲ್ಲಿ ಬಿರುಗಾಳಿ ಎದ್ದಿತ್ತು. ಆಪ್ತ ಗೆಳೆಯ ಹಾಗೂ ಟೀಂ ಇಂಡಿಯಾದ ಮಾಜಿ ಆಟಗಾರ ಮುರುಳಿ ವಿಜಯ್, ಕಾರ್ತಿಕ್ ವೈವಾಹಿಕ ಬದುಕಿಗೆ ಹುಳಿ ಹಿಂಡಿದ್ದರು. ಆಪ್ತ ಗೆಳೆಯನ ಮನೆಗೆ ಆಗಾಗ್ಗೆ ಹೋಗಿ ಬರುತ್ತಿದ್ದ ವಿಜಯ್, ಕಾರ್ತಿಕ್ ಅವರ ಪತ್ನಿ ನಿಕಿತಾ ವಂಜಾರಾ ಅವರಿಗೆ ಪ್ರೀತಿಯ ಬಲೆ ಬೀಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಕಾರ್ತಿಕ್, ನಿಕಿತಾಗೆ ವಿಚ್ಛೇದನ ನೀಡಿದ್ದರು. ಈ ವೇಳೆ ಕುಗ್ಗಿ ಹೋಗಿದ್ದ ಕಾರ್ತಿಕ್ ಬದುಕಿನಲ್ಲಿ ಬಂದವರೇ ಈ ದೀಪಿಕಾ ಪಳ್ಳಿಕಲ್.

ಜಿಮ್​ನಲ್ಲಿ ಪರಸ್ಪರ ಭೇಟಿಯಾದ ದೀಪಿಕಾ ಹಾಗೂ ಕಾರ್ತಿಕ್ ನಡುವೆ ಮೊದಲು ಸ್ನೇಹ ಹುಟ್ಟಿಕೊಂಡಿತು. ಬಳಿಕ  ಒಂದು ವರ್ಷದೊಳಗೆ ದೀಪಿಕಾಗೆ ದಿನೇಶ್ ಪ್ರಪೋಸ್ ಮಾಡಿದ್ದರು. ಆರಂಭದಲ್ಲಿ ದೀಪಿಕಾ ಇದಕ್ಕೆ ಒಪ್ಪಿರಲಿಲ್ಲ. ಏಕೆಂದರೆ ಈ ಇಬ್ಬರು ಅನ್ಯ ಧರ್ಮಿಯರಾಗಿದ್ದರು. ಹೀಗಾಗಿ ಇಬ್ಬರ ಪ್ರೀತಿಗೆ ಧರ್ಮ ಅಡ್ಡಿಯಾಗಿತ್ತು. ಆದರೆ ತಿಂಗಳುಗಳವರೆಗೆ ಇವರಿಬ್ಬರ ಸತತ ಪ್ರಯತ್ನದ ನಂತರ ಮನೆಯವರು ಒಪ್ಪಿಗೆ ಸೂಚಿಸಿದರು. ಅಂತಿಮವಾಗಿ ಈ ಜೋಡಿ 2015 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:07 pm, Thu, 5 October 23

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್