Asian Games: 16 ಚಿನ್ನ, 71 ಪದಕ; ಏಷ್ಯನ್ ಗೇಮ್ಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಭಾರತ..! ಪ್ರಧಾನಿ ಮೋದಿ ಮೆಚ್ಚುಗೆ
Asian Games: ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಭಾರತ ಹೊಸ ಯಶೋಗಾಥೆ ಬರೆದಿದೆ. ಈ ಹಿಂದೆ ಜಕಾರ್ತದಲ್ಲಿ ನಡೆದಿದ್ದ 2018ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 16 ಚಿನ್ನ ಸೇರಿದಂತೆ ಒಟ್ಟು 70 ಪದಕಗಳನ್ನು ಗೆದ್ದಿತ್ತು. ಆದರೆ ಈಗ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್ನ 11ನೇ ದಿನದಂದು 16ನೇ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಪದಕಗಳ ಸಂಖ್ಯೆ 71 ಕ್ಕೇರಿದೆ.
ಏಷ್ಯನ್ ಗೇಮ್ಸ್ (Asian Games 2023) ಇತಿಹಾಸದಲ್ಲಿ ಭಾರತ ಹೊಸ ಯಶೋಗಾಥೆ ಬರೆದಿದೆ. ಈ ಹಿಂದೆ ಜಕಾರ್ತದಲ್ಲಿ ನಡೆದಿದ್ದ 2018ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 16 ಚಿನ್ನ ಸೇರಿದಂತೆ ಒಟ್ಟು 70 ಪದಕಗಳನ್ನು ಗೆದ್ದಿತ್ತು. ಆದರೆ ಈಗ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್ನ 11ನೇ ದಿನದಂದು 16ನೇ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಪದಕಗಳ ಸಂಖ್ಯೆ 71 ಕ್ಕೇರಿದೆ. ಈ ಮೂಲಕ ಭಾರತ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಅಧಿಕ ಪದಕಗಳನ್ನು ಗೆದ್ದ ತನ್ನ ದಾಖಲೆಯನ್ನು ಮುರಿದಿದೆ. ಇಂದು ಬೆಳಿಗ್ಗೆ ಆರ್ಚರಿ ಸಂಯುಕ್ತ ಮಿಶ್ರ ತಂಡ ಸ್ಪರ್ಧೆಯಲ್ಲಿ (Compound Mixed-team Event of Archery) ಭಾರತ 16ನೇ ಚಿನ್ನದ ಪದಕ ಗೆದ್ದುಕೊಂಡಿದ್ದು, ಪದಕಗಳ ವಿಚಾರದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ.
ಫೈನಲ್ನಲ್ಲಿ ರೋಚಕ ಹಣಾಹಣಿ
ಆರ್ಚರಿ ಕಾಂಪೌಂಡ್ ವಿಭಾಗದ ಮಿಶ್ರ ಸ್ಪರ್ಧೆಯಲ್ಲಿ ಓಜಸ್ ಪ್ರವೀಣ್ ಡಿಯೋಟಾಲೆ ಮತ್ತು ಜ್ಯೋತಿ ಸುರೇಖಾ ವೆನ್ನಂ ಭಾರತಕ್ಕೆ ಚಿನ್ನ ತಂದುಕೊಟ್ಟಿದ್ದಾರೆ. ಪ್ರವೀಣ್ ಮತ್ತು ಜ್ಯೋತಿ ಮಿಶ್ರ ಡಬಲ್ಸ್ ಸೆಮಿಫೈನಲ್‌ನಲ್ಲಿ ಕಜಕಿಸ್ತಾನ್ ಜೋಡಿಯನ್ನು 159-154 ರಿಂದ ಸೋಲಿಸಿ ಫೈನಲ್ ತಲುಪಿದ್ದರು. ಇನ್ನು ಫೈನಲ್ನಲ್ಲಿ ಭಾರತದ ಆರ್ಚರಿ ತಂಡದ ಮುಂದೆ ಕೊರಿಯಾ ಜೋಡಿ ಆರಂಭದಿಂದಲೇ ಒತ್ತಡಕ್ಕೆ ಸಿಲುಕಿತ್ತು. ಮೊದಲ ಸೆಟ್‌ನಲ್ಲಿ ಭಾರತದ ಜೋಡಿ 40 ಅಂಕಗಳು ಕಲೆಹಾಕಿತು. ಕೊರಿಯಾದ ಆರ್ಚರಿ ತಂಡ 38 ಅಂಕ ಕಲೆಹಾಕಿತು. ಮುಂದಿನ ಸುತ್ತಿನಲ್ಲೂ ಭಾರತದ ಜೋಡಿ 6 ಪ್ರಯತ್ನದಲ್ಲೂ ತಲಾ 10 ಅಂಕ ಸಂಪಾದಿಸಿತು. ಆದರೆ ಕೊರಿಯಾದ ಜೋಡಿ ನಿಧಾನವಾಗಿ ಆಟಕ್ಕೆ ಮರಳಿತು. ಈ ವೇಳೆ ಶಾಟ್ ನಂಬರ್ 9ರಲ್ಲಿ ಪ್ರವೀಣ್ 9 ಅಂಕ ಕಲೆಹಾಕಿದರು. ಆ ತಪ್ಪಿನ ಲಾಭ ಪಡೆದ ಕೊರಿಯಾದ ಬಿಲ್ಲುಗಾರರು ಸ್ಕೋರ್ ಸಮಗೊಳಿಸಿದರು.
National Anthem Time… https://t.co/brsmJ8YGgj
— India_AllSports (@India_AllSports) October 4, 2023
ಏಷ್ಯನ್ ಗೇಮ್ಸ್‌ನಲ್ಲಿ ದಾಖಲೆ ಸೃಷ್ಟಿಸಿದ ಭಾರತದ ಶೂಟರ್ಗಳು; 22 ಪದಕಗಳೊಂದಿಗೆ ಪಯಣ ಅಂತ್ಯ
ಕೊನೆಯಲ್ಲಿ ಗೆದ್ದ ಭಾರತ
ಅಂತಿಮ ಸೆಟ್‌ನಲ್ಲಿ ಭಾರತದ ಜೋಡಿ ತಲಾ 10 ಅಂಕ ಸಂಪಾದಿಸಿತು. ಆದರೆ ಅಂತಿಮ ಸೆಟ್‌ನಲ್ಲಿ ಒತ್ತಡಕ್ಕೆ ಸಿಲುಕಿದ ಕೊರಿಯನ್ ಜೋಡಿ 19 ಅಂಕ ಕಲೆಹಾಕಿತು. ಅಂತಿಮವಾಗಿ ಭಾರತದ ಜೋಡಿಯು 159-158 ಅಂಕಗಳೊಂದಿಗೆ ಜೋ ಜೆಹುನ್ ಮತ್ತು ಸೊ ಚಿಯೋನ್ ಜೋಡಿಯನ್ನು ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟಿತು.
ಇನ್ನು ಏಷ್ಯನ್ ಗೇಮ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ ಭಾರತದ ಕ್ರೀಡಾ ಸ್ಪರ್ಧಿಗಳಿಗೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಭಾರತೀಯರ ಸಾಧನೆಯನ್ನು ಕೊಂಡಾಡಿದ್ದಾರೆ.
India shines brighter than ever before at the Asian Games!
With 71 medals, we are celebrating our best-ever medal tally, a testament to the unparalleled dedication, grit and sporting spirit of our athletes.
Every medal highlights a life journey of hard work and passion.
— Narendra Modi (@narendramodi) October 4, 2023
ಹ್ಯಾಂಗ್‌ಝೌ ಕ್ರೀಡಾಕೂಟದಲ್ಲಿ ಭಾರತ 100 ಪದಕ ಗೆಲ್ಲುವ ಗುರಿ ಹೊಂದಿದೆ. ಐದು ವರ್ಷಗಳ ಹಿಂದೆ ಜಕಾರ್ತಾ ಏಷ್ಯನ್ ಗೇಮ್ಸ್ 16 ಚಿನ್ನ ಸೇರಿದಂತೆ 70 ಪದಕಗಳನ್ನು ತಂದಿತ್ತು. ಆದರೆ ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಸದ್ಯ 16ನೇ ಚಿನ್ನದ ಪದಕದೊಂದಿಗೆ 71 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:30 am, Wed, 4 October 23