AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

CWG 2022: ಹಾಕಿಯಲ್ಲಿ ಭಾರತ ತಂಡಕ್ಕೆ ಮೋಸ: ಆಕ್ರೋಶ ವ್ಯಕ್ತಪಡಿಸಿದ ಸೆಹ್ವಾಗ್

CWG 2022: ಮೊದಲ ಶೂಟೌಟ್ ಅವಕಾಶ ಪಡೆದ ಆಸ್ಟ್ರೇಲಿಯಾ ನಿರ್ದಿಷ್ಟ ಸಮಯದೊಳಗೆ ಚೆಂಡನ್ನು ಗೋಲು ಬಲೆಯೊಳಗೆ ತಲುಪಿಸಲು ಸಾಧ್ಯವಾಗಿರಲಿಲ್ಲ.

CWG 2022: ಹಾಕಿಯಲ್ಲಿ ಭಾರತ ತಂಡಕ್ಕೆ ಮೋಸ: ಆಕ್ರೋಶ ವ್ಯಕ್ತಪಡಿಸಿದ ಸೆಹ್ವಾಗ್
Sehwag
TV9 Web
| Edited By: |

Updated on: Aug 06, 2022 | 1:51 PM

Share

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಚಿನ್ನದ ಪದಕದ ರೇಸ್‌ನಿಂದ ಹೊರಬಿದ್ದಿದೆ. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದ್ದರು. ಆದರೆ, ಈ ಪಂದ್ಯದ ಪೆನಾಲ್ಟಿ ಶೂಟೌಟ್‌ ಇದೀಗ ವಿವಾದಕ್ಕೆ ಸಿಲುಕಿದೆ. ಏಕೆಂದರೆ ಪೂರ್ಣ ಆಟದಲ್ಲಿ ಉಭಯ ತಂಡಗಳು 1-1 ಗೋಲುಗಳ ಸಮಬಲ ಸಾಧಿಸಿದ್ದರಿಂದ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಬೇಕಾಯಿತು. ಆದರೆ ಈ ವೇಳೆ ರೆಫರಿ ಮಾಡಿದ ಎಡವಟ್ಟಿನಿಂದ ಆಸ್ಟ್ರೇಲಿಯಾ ತಂಡಕ್ಕೆ ಅನುಕೂಲವಾಯಿತು.

ಮೊದಲ ಶೂಟೌಟ್ ಅವಕಾಶ ಪಡೆದ ಆಸ್ಟ್ರೇಲಿಯಾ ನಿರ್ದಿಷ್ಟ ಸಮಯದೊಳಗೆ ಚೆಂಡನ್ನು ಗೋಲು ಬಲೆಯೊಳಗೆ ತಲುಪಿಸಲು ಸಾಧ್ಯವಾಗಿರಲಿಲ್ಲ. ಅದರಲ್ಲೂ ಭಾರತ ತಂಡದ ಗೋಲಿ ಸವಿತಾ ಪುನಿಯಾ ಚೆಂಡನ್ನು ತಡೆದಿದ್ದರು. ಆದರೆ ರೆಫರಿ ಈ ವೇಳೆ ಸಮಯದ ಪರಿಗಣಿಸದಿರುವುದು ಎಡವಟ್ಟಿಗೆ ಕಾರಣವಾಯಿತು. ಅಂದರೆ ನಿರ್ದಿಷ್ಟ ಸಮಯದೊಳಗೆ ಪೆನಾಲ್ಟಿ ಶೂಟೌಟ್​ನಲ್ಲಿ ಗೋಲುಗಳಿಸಬೇಕು. ಆದರೆ ಇಲ್ಲಿ ತಾಂತ್ರಿಕ ದೋಷದಿಂದಾಗಿ ಸಮಯವನ್ನು ಲೆಕ್ಕ ಮಾಡಲು ಸಾಧ್ಯವಾಗಿಲ್ಲ ಎಂದು ರೆಫರಿ ತಿಳಿಸಿದರು. ಅಷ್ಟೇ ಅಲ್ಲದೆ ಆಸ್ಟ್ರೇಲಿಯಾಗೆ ಮತ್ತೊಮ್ಮೆ ಶೂಟೌಟ್ ಅವಕಾಶ ನೀಡಲಾಯಿತು.

ಇದನ್ನೂ ಓದಿ
Image
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
Image
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Image
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಇದೀಗ ರೆಫರಿಯ ನಿರ್ಧಾರದ ಬಗ್ಗೆ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಟೀಮ್ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಹಾಕಿಯಲ್ಲಿ ಭಾರತ ಸೂಪರ್ ಪವರ್ ಅಲ್ಲದ ಕಾರಣ ಗಡಿಯಾರ ಹಾಳಾಗಿದೆ ಎಂದು ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಭಾರತ ಸೂಪರ್ ಪವರ್ ಆದಾಗ ಗಡಿಯಾರ ಸಮಯಕ್ಕೆ ಸರಿಯಾಗಿ ಓಡುತ್ತದೆ ಎಂದು ರೆಫರಿ ನಿರ್ಧಾರವನ್ನು ಸೆಹ್ವಾಗ್ ವ್ಯಂಗ್ಯವಾಡಿದ್ದಾರೆ. ಅಷ್ಟೇ ಅಲ್ಲದೆ ನಾವು ಕ್ರಿಕೆಟ್‌ನಲ್ಲಿ ಸೂಪರ್ ಪವರ್‌ಗಳಾಗಿರದಿದ್ದರೆ, ಕ್ರಿಕೆಟ್‌ನಲ್ಲಿಯೂ ಹೀಗೆ ಸಂಭವಿಸುತ್ತಿತ್ತು. ಹಾಕಿಯನ್ನು ಕೂಡ ಸೂಪರ್ ಪವರ್ ಮಾಡಿದ್ರೆ ಎಲ್ಲಾ ಗಡಿಯಾರಗಳು ಸಮಯಕ್ಕೆ ಪ್ರಾರಂಭವಾಗುತ್ತವೆ. ನಮ್ಮ ಆಟಗಾರ್ತಿಯರು ಬಗ್ಗೆ ಹೆಮ್ಮೆಯಿದೆ ಸೆಹ್ವಾಗ್ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಈ ಪ್ರಕರಣವನ್ನು ಹಾಕಿ ಫೆಡರೇಶನ್ ಗಂಭೀರವಾಗಿ ಪರಿಗಣಿಸಿದೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಮಹಿಳಾ ತಂಡ ಸೆಮಿಫೈನಲ್ ಸೋಲಿನ ಸಂದರ್ಭದಲ್ಲಿ ಗಡಿಯಾರಕ್ಕೆ ಸಂಬಂಧಿಸಿದ ವಿವಾದಕ್ಕಾಗಿ ಅಂತರಾಷ್ಟ್ರೀಯ ಹಾಕಿ ಫೆಡರೇಶನ್ ಕ್ಷಮೆಯಾಚಿಸುತ್ತಿರುವುದಾಗಿ ತಿಳಿಸಿದೆ. ಅಲ್ಲದೆ ಈ ಬಗ್ಗೆ ತನಿಖೆ ನಡೆಸಲು ಎಫ್‌ಐಎಚ್ ಆದೇಶಿಸಿದೆ. ಇನ್ನು ಪಂದ್ಯದ ಪೆನಾಲ್ಟಿ ಶೂಟೌಟ್​ನಲ್ಲಿ ಆಸ್ಟ್ರೇಲಿಯಾ 3 ಗೋಲುಗಳಿಸಿದರೆ, ಭಾರತೀಯ ವನಿತೆಯರು ಗೋಲು ಬಾರಿಸಲು ವಿಫಲರಾಗಿದ್ದರು.

Follow Us
TV9 Web
TV9 Web

TV9 Kannada

Read More
ಸಿಜೆಪಿ ಪ್ರತಿಭಟನೆಗೂ ಮುನ್ನ ಪೊಲೀಸರ ಕಾರ್ಯಾಚರಣೆ: 30 ರಿಂದ 40 ಜನ ವಶಕ್ಕೆ
ಸಿಜೆಪಿ ಪ್ರತಿಭಟನೆಗೂ ಮುನ್ನ ಪೊಲೀಸರ ಕಾರ್ಯಾಚರಣೆ: 30 ರಿಂದ 40 ಜನ ವಶಕ್ಕೆ
ಪತ್ನಿ ಸೋನಲ್ ಕಡೆಯಿಂದ ಸಿಕ್ಕ ವಿಶೇಷ ಉಡುಗೊರೆ ಬಗ್ಗೆ ಹೇಳಿದ ತರುಣ್ ಸುಧೀರ್ 
ಪತ್ನಿ ಸೋನಲ್ ಕಡೆಯಿಂದ ಸಿಕ್ಕ ವಿಶೇಷ ಉಡುಗೊರೆ ಬಗ್ಗೆ ಹೇಳಿದ ತರುಣ್ ಸುಧೀರ್ 
ಮಹಾಲಯ ಅಮಾವಾಸ್ಯೆ: ಪಿತೃಗಳಿಗೆ ಕೃತಜ್ಞತೆ ಸಲ್ಲಿಸುವ ಈ ದಿನದ ಮಹತ್ವ
ಮಹಾಲಯ ಅಮಾವಾಸ್ಯೆ: ಪಿತೃಗಳಿಗೆ ಕೃತಜ್ಞತೆ ಸಲ್ಲಿಸುವ ಈ ದಿನದ ಮಹತ್ವ
ಏಳು ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಈ ವಾರ ಹೊರ ಹೋಗೋದು ಯಾರು?
ಏಳು ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಈ ವಾರ ಹೊರ ಹೋಗೋದು ಯಾರು?
ಬೆಂಗಳೂರು: ಬ್ರಿಗೇಡ್ ರಸ್ತೆ ಲೇಡಿಸ್​​ ಪಬ್​​ಗಳ ಮೇಲೆ ಪೊಲೀಸರ ದಿಢೀರ್ ದಾಳಿ
ಬೆಂಗಳೂರು: ಬ್ರಿಗೇಡ್ ರಸ್ತೆ ಲೇಡಿಸ್​​ ಪಬ್​​ಗಳ ಮೇಲೆ ಪೊಲೀಸರ ದಿಢೀರ್ ದಾಳಿ
ಸಿಜೆಪಿ ಪ್ರತಿಭಟನೆ ನಿಷೇಧಿಸಿ: ಎಲ್ಲ ರಾಜ್ಯಗಳಿಗೆ ಗೃಹ ಇಲಾಖೆ ಸೂಚನೆ
ಸಿಜೆಪಿ ಪ್ರತಿಭಟನೆ ನಿಷೇಧಿಸಿ: ಎಲ್ಲ ರಾಜ್ಯಗಳಿಗೆ ಗೃಹ ಇಲಾಖೆ ಸೂಚನೆ
ಇಂದು ಮಹಾಲಯ ಅಮವಾಸ್ಯೆ; ನಿಮ್ಮ ಪೂರ್ವಜರನ್ನು ಸ್ಮರಿಸಿ
ಇಂದು ಮಹಾಲಯ ಅಮವಾಸ್ಯೆ; ನಿಮ್ಮ ಪೂರ್ವಜರನ್ನು ಸ್ಮರಿಸಿ
ಹಾಸನಾಂಬೆ ಮಹೋತ್ಸವ: ಗುತ್ತಿಗೆದಾರನ ಜತೆ ಸಚಿವ ಶಿವಲಿಂಗೇಗೌಡ ಚೌಕಾಸಿ
ಹಾಸನಾಂಬೆ ಮಹೋತ್ಸವ: ಗುತ್ತಿಗೆದಾರನ ಜತೆ ಸಚಿವ ಶಿವಲಿಂಗೇಗೌಡ ಚೌಕಾಸಿ
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?