AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

AB de Villiers: ಎಬಿಡಿ ಸಿಡಿಲಬ್ಬರ: 10 ಸಿಕ್ಸರ್, 7 ಬೌಂಡರಿಗಳೊಂದಿಗೆ ಭರ್ಜರಿ ಶತಕ

RCB’s intra-squad match: ಮೊದಲು ಬ್ಯಾಟ್ ಮಾಡಿದ RCB A ತಂಡಕ್ಕೆ ಎಬಿಡಿ ನೆರವಾದರು. ಎಂದಿನಂತೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಡಿವಿಲಿಯರ್ಸ್​ ಬಿ ತಂಡದಲ್ಲಿದ್ದ ಬೌಲರುಗಳ ಬೆಂಡೆತ್ತಿದ್ದರು.

AB de Villiers: ಎಬಿಡಿ ಸಿಡಿಲಬ್ಬರ: 10 ಸಿಕ್ಸರ್, 7 ಬೌಂಡರಿಗಳೊಂದಿಗೆ ಭರ್ಜರಿ ಶತಕ
AB de Villiers
TV9 Web
| Edited By: |

Updated on:Sep 15, 2021 | 2:35 PM

Share

ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2021) ದ್ವಿತಿಯಾರ್ಧ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 19 ರಂದು ಮುಂಬೈ ಇಂಡಿಯನ್ಸ್ (MI) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಣ ಮುಖಾಮುಖಿಯೊಂದಿಗೆ ಐಪಿಎಲ್​ನ (IPL) ಎರಡನೇ ಹಂತಕ್ಕೆ ಚಾಲನೆ ದೊರೆಯಲಿದೆ. ಅತ್ತ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ತಂಡವು ಮೊದಲ ಪಂದ್ಯವನ್ನು ಸೆಪ್ಟೆಂಬರ್ 20 ರಂದು ಕೆಕೆಆರ್ (KKR) ವಿರುದ್ದ ಆಡಲಿದೆ. ಇದಕ್ಕಾಗಿ ಆರ್​ಸಿಬಿ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ. ಆರ್​ಸಿಬಿ ಬಳಗವು RCB A ಮತ್ತು RCB B ತಂಡಗಳಾಗಿ ವಿಂಗಡನೆಗೊಂಡು ಅಭ್ಯಾಸದಲ್ಲಿ ನಿರತರಾಗಿವೆ. ಅದರಂತೆ ನಡೆದ ಮೊದಲ ಇನ್​ಟ್ರಾಸ್ಕ್ವಾಡ್​ ಪಂದ್ಯದಲ್ಲಿ ಹರ್ಷಲ್ ಪಟೇಲ್ ನೇತೃತ್ವದ RCB A ತಂಡವು ದೇವದತ್ ಪಡಿಕ್ಕಲ್ ಮುನ್ನಡೆಸಿದ B ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿಯುವ ಮೂಲಕ ಎಬಿ ಡಿವಿಲಿಯರ್ಸ್​ ತನ್ನ ಪುನರಾಗಮನವನ್ನು ಸಾರಿದ್ದಾರೆ.

ಮೊದಲು ಬ್ಯಾಟ್ ಮಾಡಿದ RCB A ತಂಡಕ್ಕೆ ಎಬಿಡಿ ನೆರವಾದರು. ಎಂದಿನಂತೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಡಿವಿಲಿಯರ್ಸ್​ ಬಿ ತಂಡದಲ್ಲಿದ್ದ ಬೌಲರುಗಳ ಬೆಂಡೆತ್ತಿದ್ದರು. ಪರಿಣಾಮ ಎಬಿಡಿ ಬ್ಯಾಟ್​ನಿಂದ ಸಿಡಿದದ್ದು 10 ಸಿಕ್ಸರ್ ಹಾಗೂ 7 ಬೌಂಡರಿಗಳು. ಅದರಂತೆ ಕೇವಲ 46 ಎಸೆತಗಳಲ್ಲಿ ಡಿವಿಲಿಯರ್ಸ್​ 104 ರನ್​ ಚಚ್ಚಿದರು. ಮತ್ತೊಂದೆಡೆ ಯುವ ವಿಕೆಟ್ ಕೀಪರ್ ಬ್ಯಾಟ್ಸ್​​ಮನ್ ಮೊಹಮ್ಮದ್ ಅಜರುದ್ದೀನ್ ಎಬಿಡಿಗೆ ಉತ್ತಮ ಸಾಥ್ ನೀಡಿದರು. 43 ಎಸೆತಗಳನ್ನು ಎದುರಿಸಿದ ಅಜರ್ 3 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 66 ರನ್​ ಬಾರಿಸಿದರು. ಪರಿಣಾಮ ನಿಗದಿತ 20 ಓವರ್​ಗಳಲ್ಲಿ RCB A ತಂಡದ ಸ್ಕೋರ್ 213ಕ್ಕೆ ಬಂದು ನಿಂತಿತು.

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಆರ್​ಸಿಬಿ ಬಿ ತಂಡಕ್ಕೆ ದೇವದತ್ ಪಡಿಕ್ಕಲ್ ಉತ್ತಮ ಆರಂಭ ಒದಗಿಸಿದರು. 21 ಎಸೆತಗಳಲ್ಲಿ 36 ರನ್​ ಬಾರಿಸಿದ ಪಡಿಕ್ಕಲ್​ ಭದ್ರ ಬುನಾದಿ ಹಾಕಿಕೊಟ್ಟರು. ಇದರ ಬೆನ್ನಲ್ಲೇ ಅಬ್ಬರಿಸಲಾರಂಭಿಸಿದ ಕೆಎಸ್​ ಭರತ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 47 ಎಸೆತಗಳಲ್ಲಿ 95 ರನ್​ ಬಾರಿಸುವ ಮೂಲಕ ಭರತ್ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅದರಂತೆ RCB B ತಂಡವು 7 ವಿಕೆಟ್​ಗಳ ಜಯ ಸಾಧಿಸಿತು. ಈ ಪಂದ್ಯದೊಂದಿಗೆ ಆರ್​ಸಿಬಿ ಬ್ಯಾಟ್ಸ್​​ಮನ್​ಗಳು ತಮ್ಮ ಫಾರ್ಮ್​ ಅನ್ನು ಪ್ರದರ್ಶಿಸಿದ್ದಾರೆ. ಅದರಲ್ಲೂ ತಂಡದಲ್ಲಿ ಅವಕಾಶಕ್ಕಾಗಿ ಎದುರು ನೋಡುತ್ತಿರುವ ಅಜರ್ ಹಾಗೂ ಭರತ್ ಅಬ್ಬರಿಸಿರುವುದು ಆರ್​ಸಿಬಿ ಪಾಲಿಗೆ ಶುಭ ಸೂಚನೆ ಎನ್ನಬಹುದು.

ಇದನ್ನೂ ಓದಿ: IPL 2021: ಪ್ಲೇ ಆಫ್ ಪ್ರವೇಶಿಸಲು ದ್ವಿತಿಯಾರ್ಧದಲ್ಲಿ ಪ್ರತಿ ತಂಡಗಳು ಎಷ್ಟು ಪಂದ್ಯ ಗೆಲ್ಲಬೇಕು?

ಇದನ್ನೂ ಓದಿ: IPL 2021: ಐಪಿಎಲ್​ನಲ್ಲಿ ಪಾಕ್ ಆಟಗಾರರಿಗೆ ಸಿಕ್ಕ ಭಾಗ್ಯ ಕೊಹ್ಲಿ, ಗೇಲ್, ಎಬಿಡಿಗೆ ಇನ್ನೂ ಸಿಕ್ಕಿಲ್ಲ

ಇದನ್ನೂ ಓದಿ: Crime News: ಅಕ್ಕನಿಗೆ ಯುವಕನೊಂದಿಗೆ ಸಂಬಂಧ: ಕಥೆ ಮುಗಿಸಿ ನಗುತ್ತಾ ನಿಂತಿದ್ದ ತಮ್ಮ..!

ಇದನ್ನೂ ಓದಿ: Crime News: ಹುಡುಗಿ ಧ್ವನಿಯಲ್ಲೇ ಡಾಕ್ಟರ್​ ಕೈಯಿಂದ 2 ಕೋಟಿ ರೂ ಪೀಕಿದ ಚಾಲಾಕಿ..!

(AB de Villiers slams a cracking century in RCB’s intra-squad practice match)

Published On - 2:31 pm, Wed, 15 September 21

Follow Us
Web contact
Web contact

TV9 Kannada

Read More
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ