ಏಕದಿನ ಕ್ರಿಕೆಟ್ನ ಟಾಪ್-10 ಬ್ಯಾಟರ್ಗಳನ್ನು ಹೆಸರಿಸಿದ ಎಬಿಡಿ
Ab devilliers's Top 10 Batters: ಸೌತ್ ಆಫ್ರಿಕಾ ತಂಡದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಒಡಿಐ ಕ್ರಿಕೆಟ್ನ ಟಾಪ್-10 ಬ್ಯಾಟರ್ಗಳನ್ನು ಹೆಸರಿಸಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ನಾಲ್ವರು ಬ್ಯಾಟ್ಸ್ಮನ್ಗಳು ಸ್ಥಾನ ಪಡೆದಿದ್ದಾರೆ. ಇದಾಗ್ಯೂ ಟಾಪ್-10 ಪಟ್ಟಿಯಲ್ಲಿ ಇಂಗ್ಲೆಂಡ್, ನ್ಯೂಝಿಲೆಂಡ್ನ ಯಾವುದೇ ಬ್ಯಾಟರ್ಗಳು ಕಾಣಿಸಿಕೊಂಡಿಲ್ಲ.

ಸಿಡಿಲಬ್ಬರದ ಸಿಡಿಲಮರಿ ಖ್ಯಾತಿಯ ಎಬಿ ಡಿವಿಲಿಯರ್ಸ್ ಏಕದಿನ ಕ್ರಿಕೆಟ್ನ ಟಾಪ್-10 ಬ್ಯಾಟರ್ಗಳನ್ನು ಹೆಸರಿಸಿದ್ದಾರೆ. ಇಂಗ್ಲೆಂಡ್ ಕ್ರಿಕೆಟಿಗರಾದ ಆದಿಲ್ ರಶೀದ್ ಹಾಗೂ ಮೊಯೀನ್ ಖಾನ್ ನಡೆಸಿಕೊಡುವ ಬಿಯರ್ಡ್ ಬಿಫೋರ್ ವಿಕೆಟ್ ಪಾಡ್ಕಾಸ್ಟ್ನಲ್ಲಿ ಕಾಣಿಸಿಕೊಂಡ ಎಬಿಡಿಗೆ ವಿಶ್ವದ ಅಗ್ರ 10 ಏಕದಿನ ಬ್ಯಾಟರ್ಗಳನ್ನು ಹೆಸರಿಸುವಂತೆ ಕೇಳಿಕೊಳ್ಳಲಾಗಿತ್ತು.
ಈ ಪ್ರಶ್ನೆಗೆ ಉತ್ತರಿಸಿದ ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿಯನ್ನು ಏಕದಿನ ಕ್ರಿಕೆಟ್ನ ಸರ್ವಶ್ರೇಷ್ಠ ಬ್ಯಾಟರ್ ಎಂಬ ಬಣ್ಣಿಸಿದರು. ಇನ್ನು ಎರಡನೇ ಸ್ಥಾನವನ್ನು ಖುದ್ದು ಎಬಿ ಡಿವಿಲಿಯರ್ಸ್ ಪಡೆದುಕೊಂಡರು.
ಹಾಗೆಯೇ ಮೂರನೇ ಬೆಸ್ಟ್ ಬ್ಯಾಟರ್ ಆಗಿ ಎಬಿಡಿ ಆಯ್ಕೆ ಮಾಡಿಕೊಂಡಿದ್ದು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್. ನಾಲ್ಕನೇ ಸ್ಥಾನದಲ್ಲಿ ಕ್ರಿಕೆಟ್ ದೇವರು ಖ್ಯಾತಿಯ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಹೆಸರಿಸಿದರು.
ಐದನೇ ಸ್ಥಾಕ್ಕೆ ಸೌತ್ ಆಫ್ರಿಕಾ ತಂಡದ ಮಾಜಿ ನಾಯಕ ಹಾಶಿಮ್ ಆಮ್ಲಾ ಅವರನ್ನು ಆಯ್ಕೆ ಮಾಡಲಾಗಿದೆ. ಹಾಗೆಯೇ ಆರನೇ ಸ್ಥಾನವನ್ನು ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ನೀಡಿದ್ದಾರೆ.
ಇನ್ನು ಟಾಪ್-10 ಏಕದಿನ ಬ್ಯಾಟರ್ಗಳ ಪಟ್ಟಿಯಲ್ಲಿ ಏಳನೇ ಸ್ಥಾನ ಪಡೆದಿರುವುದು ಟೀಮ್ ಇಂಡಿಯಾದ ಯಶಸ್ವಿ ನಾಯಕ ಮಹೇಂದ್ರ ಸಿಂಗ್. ಹಾಗೆಯೇ ಎಂಟನೇ ಸ್ಥಾನಕ್ಕೆ ಶ್ರೀಲಂಕಾದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಕುಮಾರ್ ಸಂಗಾಕ್ಕರ ಅವರನ್ನು ಹೆಸರಿಸಿದ್ದಾರೆ.
ಒಂಭತ್ತನೇ ಸ್ಥಾನದಲ್ಲಿ ಪಾಕಿಸ್ತಾನದ ಬಾಬರ್ ಆಝಂ ಅವರನ್ನು ಆಯ್ಕೆ ಮಾಡಿ ಎಬಿ ಡಿವಿಲಿಯರ್ಸ್ ಅಚ್ಚರಿ ಮೂಡಿಸಿದ್ದಾರೆ. ಇನ್ನು ಟಾಪ್-10 ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿರುವುದು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್. ಅದರಂತೆ ಎಬಿಡಿ ಹೆಸರಿಸಿರುವ ಟಾಪ್-10 ಏಕದಿನ ಬ್ಯಾಟರ್ಗಳ ಪಟ್ಟಿ ಈ ಕೆಳಗಿನಂತಿದೆ…
- ವಿರಾಟ್ ಕೊಹ್ಲಿ (ಭಾರತ)
- ಎಬಿ ಡಿವಿಲಿಯರ್ಸ್ (ಸೌತ್ ಆಫ್ರಿಕಾ)
- ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)
- ಸಚಿನ್ ತೆಂಡೂಲ್ಕರ್ (ಭಾರತ)
- ಹಾಶಿಮ್ ಆಮ್ಲಾ (ಸೌತ್ ಆಫ್ರಿಕಾ)
- ರೋಹಿತ್ ಶರ್ಮಾ (ಭಾರತ)
- ಮಹೇಂದ್ರ ಸಿಂಗ್ ಧೋನಿ (ಭಾರತ)
- ಕುಮಾರ್ ಸಂಗಾಕ್ಕರ (ಶ್ರೀಲಂಕಾ)
- ಬಾಬರ್ ಆಝಂ (ಪಾಕಿಸ್ತಾನ್)
- ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)
ಇದನ್ನೂ ಓದಿ: ದಾಸ್ ಲಿಟ್ಟನ್ ದಾಸ್… ಬಾಂಗ್ಲಾ ಪರ ಹೊಸ ಇತಿಹಾಸ
ಎಬಿ ಡಿವಿಲಿಯಯರ್ಸ್ ಹೆಸರಿಸಿರುವ ಟಾಪ್-10 ಒಡಿಐ ಬ್ಯಾಟರ್ಗಳ ಪಟ್ಟಿಯಲ್ಲಿ ಭಾರತದ ನಾಲ್ವರು ಬ್ಯಾಟ್ಸ್ಮನ್ಗಳು ಕಾಣಿಸಿಕೊಂಡಿದ್ದಾರೆ. ಹಾಗೆಯೇ ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾದ ತಲಾ ಇಬ್ಬರು ಬ್ಯಾಟರ್ಗಳಿಗೆ ಸ್ಥಾನ ನೀಡಿದ್ದಾರೆ. ಇದಾಗ್ಯೂ ಇಂಗ್ಲೆಂಡ್, ನ್ಯೂಝಿಲೆಂಡ್ ಹಾಗೂ ವೆಸ್ಟ್ ಇಂಡೀಸ್ನ ಯಾವುದೇ ಬ್ಯಾಟರ್ಗಳನ್ನು ಎಬಿಡಿ ಹೆಸರಿಸಿಲ್ಲ ಎಂಬುದು ಅಚ್ಚರಿ.
Published On - 11:08 am, Thu, 4 September 25
