AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಕ್​ಸ್ಟಾರ್​ಗಳಾದ 90 ರ ದಶಕದ ಭಾರತೀಯ ಕ್ರಿಕೆಟ್​ ದಂತಕಥೆಗಳು! ಕನ್ನಡಿಗ ವೆಂಕಟೇಶ್ ಪ್ರಸಾದ್, ಜವಾಗಲ್ ಶ್ರೀನಾಥ್ ಹೊಸ ಅವತಾರ ನೋಡಿ

ಈ ಜಾಹೀರಾತು ವಿಡಿಯೋದಲ್ಲಿ, ಭಾರತದ 4 ಮಾಜಿ ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್, ಜವಾಗಲ್ ಶ್ರೀನಾಥ್, ಮನಿಂದರ್ ಸಿಂಗ್ ಮತ್ತು ಸಬಾ ಕರೀಮ್ ಅವರು ಇಂಗ್ಲಿಷ್ ಹಾಡಿಗೆ ನೃತ್ಯ ಮಾಡಿದ್ದಾರೆ.

ರಾಕ್​ಸ್ಟಾರ್​ಗಳಾದ 90 ರ ದಶಕದ ಭಾರತೀಯ ಕ್ರಿಕೆಟ್​ ದಂತಕಥೆಗಳು! ಕನ್ನಡಿಗ ವೆಂಕಟೇಶ್ ಪ್ರಸಾದ್, ಜವಾಗಲ್ ಶ್ರೀನಾಥ್ ಹೊಸ ಅವತಾರ ನೋಡಿ
90 ರ ದಶಕದ ಭಾರತೀಯ ಕ್ರಿಕೆಟ್​ ದಂತಕಥೆಗಳು
ಪೃಥ್ವಿಶಂಕರ
|

Updated on: May 01, 2021 | 7:42 PM

Share

ಐಪಿಎಲ್ 2021 ಪ್ರಾರಂಭವಾಗುವ ಮುನ್ನ, ರಾಹುಲ್ ದ್ರಾವಿಡ್ ಬೀಚ್ ರಸ್ತೆಯಲ್ಲಿ ಗೂಂಡಾಗಿರಿ ಮಾಡುತ್ತಿರುವ ವಿಡಿಯೋ ಎಲ್ಲರ ಹೃದಯ ಗೆದ್ದಿತ್ತು. ಅವರು ಇಂದಿರಾ ನಗರದ ಗೂಂಡಾ ಆಗುವ ಮೂಲಕ ಎಲ್ಲರನ್ನೂ ಬೆದರಿಸಿದ್ದಲ್ಲದೆ, ರಸ್ತೆಯಲ್ಲಿ ನಿಂತಿದ್ದ ಕಾರ್​ ಕನ್ನಡಿ ಒಡೆದು ಹವಾ ಎಬ್ಬಿಸಿದ್ದರು. ದ್ರಾವಿಡ್​ ಅವರ ಹೊಸ ಅವತಾರಕ್ಕೆ ಅಂದು ಸೋಲದವರು ಯಾರು ಇರಲಿಲ್ಲ. ವಾಸ್ತವವಾಗಿ ಅಂದು ದ್ರಾವಿಡ್ ಖಾಸಗಿ ಕಂಪನಿಯ ಜಾಹೀರಾತಿನಲ್ಲಿ ಆ ರೀತಿಯಾಗಿ ನಟಿಸಿ ತನ್ನಲ್ಲಿದ್ದ ನಟನನ್ನು ಹೊರಹಾಕಿದ್ದರು. ಇದರಿಂದ ಕಂಪನಿಗೂ ಒಳ್ಳೇಯ ಪ್ರಚಾರ ಸಿಕ್ಕಿತ್ತು. ಈಗ ಅದೇ ಮಾದರಿಯನ್ನು ಮುಂದುವರೆಸಿರುವ ಕಂಪನಿ 80 ಮತ್ತು 90 ರ ದಶಕಗಳಲ್ಲಿ ಭಾರತಕ್ಕಾಗಿ ಕ್ರಿಕೆಟ್ ಆಡಿದ 4 ಆಟಗಾರರನ್ನು ಬಳಸಿಕೊಂಡು ಹೊಸ ಜಾಹೀರಾತನ್ನು ಚಿತ್ರೀಕರಣ ಮಾಡಿ, ಆ ವಿಡಿಯೋವನ್ನು ಬಿಡುಗಡೆ ಮಾಡಿದೆ.

ಯಾವ ರಾಕ್​ಸ್ಟಾರ್​ಗಳಿಗೂ ಕಡಿಮೆ ಇಲ್ಲ ಈ ಜಾಹೀರಾತು ವಿಡಿಯೋದಲ್ಲಿ, ಭಾರತದ 4 ಮಾಜಿ ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್, ಜವಾಗಲ್ ಶ್ರೀನಾಥ್, ಮನಿಂದರ್ ಸಿಂಗ್ ಮತ್ತು ಸಬಾ ಕರೀಮ್ ಅವರು ಇಂಗ್ಲಿಷ್ ಹಾಡಿಗೆ ನೃತ್ಯ ಮಾಡಿದ್ದಾರೆ. ಈ ಜಾಹೀರಾತು ವೀಡಿಯೊದಲ್ಲಿ ಅವರೆಲ್ಲರೂ ರಾಕ್‌ಸ್ಟಾರ್‌ ವೇಷದಲ್ಲಿ ಕಾಣಿಸಿಕೊಂಡಿದ್ದು, ಯಾವ ರಾಕ್​ಸ್ಟಾರ್​ಗಳಿಗೂ ಕಡಿಮೆ ಇಲ್ಲವೆಂಬಂತೆ ನಟಿಸಿದ್ದಾರೆ. ಈ ಹಾಡಿನಲ್ಲಿ ಕ್ರಿಕೆಟ್​ ದಂತಕಥೆಗಳಾದ ಈ ನಾಲ್ವರು ಆಟಗಾರರು ಆ ದಿನಗಳಲ್ಲಿ ಮಾಡಿದ ಸಾಧನೆಗಳ ಬಗ್ಗೆ ವಿವರಿಸಲಾಗಿದೆ.

4 ಮಾಜಿ ಕ್ರಿಕೆಟಿಗರ ರಾಕ್‌ಸ್ಟಾರ್ ನೋಟ ಬಲಗೈ ಸ್ಪಿನ್ನರ್ ಮನಿಂದರ್ ಸಿಂಗ್ ಈ ನಾಲ್ಕು ಕ್ರಿಕೆಟಿಗರಲ್ಲಿ ಹಿರಿಯವರಾಗಿದ್ದಾರೆ. ಅದೇ ಸಮಯದಲ್ಲಿ, ಕನ್ನಡಿಗ ಶ್ರೀನಾಥ್ ಮತ್ತು ವೆಂಕಟೇಶ್ ಪ್ರಸಾದ್ ಜೋಡಿ 90 ರ ದಶಕದಲ್ಲಿ ಭಾರತದ ವೇಗದ ಬೌಲಿಂಗ್‌ನ ಗುರುತಾಗಿದ್ದರು. ಅಲ್ಲದೆ ನಯನ್ ಮೊಂಗಿಯಾ ಅವರ ಬದಲಿಗೆ 1995-96ರಲ್ಲಿ ಸಬಾ ಕರೀಮ್ ಭಾರತೀಯ ತಂಡಕ್ಕೆ ಕಾಲಿಟ್ಟರು. ಈ 4 ಆಟಗಾರರು ತಯಂಡಕ್ಕೆ ತಮ್ಮದೆ ಆದಂತಹ ಕೊಡುಗೆ ನೀಡಿದ್ದಾರೆ.

ರೋಹಿತ್ ಶರ್ಮಾ ಕೂಡ ವಿಡಿಯೋ ಹಂಚಿಕೊಂಡಿದ್ದಾರೆ ಪ್ರಸಾದ್, ಶ್ರೀನಾಥ್, ಮನಿಂದರ್ ಮತ್ತು ಸಬಾ ಅವರ ಹೊಸದಾಗಿ ಸೇರಿಸಲಾದ ಈ ವಿಡಿಯೋವನ್ನು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಕೂಡ ಹಂಚಿಕೊಂಡಿದ್ದಾರೆ. ವೆಂಕಿ ಭಾಯ್ ಅವರು ನಮ್ಮ ತರಬೇತುದಾರರಾಗಿದ್ದಾಗ ನಾವು ಅವರ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇವೆ. ಈಗ ನಾನು ಕ್ರೀಡಾಂಗಣದ ಕಡೆಗೆ ಪ್ರಯಾಣಿಸುವಾಗ ಅವರ ಹಾಡನ್ನು ಕೇಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇದಕ್ಕೂ ಮುನ್ನ ರಾಹುಲ್ ದ್ರಾವಿಡ್ ಅವರ ಇಂದಿರಾನಗರ ಗೂಂಡಾ ಜಾಹೀರಾತು ಸಾಕಷ್ಟು ಜನಪ್ರಿಯವಾಗಿತ್ತು. ಅದೇ ವೇಗದಲ್ಲಿ ಟಿ 20 ಯುಗದಲ್ಲಿ ಹೊರಹೊಮ್ಮಿದ 4 ಮಾಜಿ ಕ್ರಿಕೆಟಿಗರ ಈ ರಾಕ್‌ಸ್ಟಾರ್ ಅವತಾರವೂ ಜನರ ಮನಸ್ಸನ್ನು ಸೆಳೆಯುತ್ತದೆ ಎಂದು ನಿರೀಕ್ಷಿಸಲಾಗಿದೆ.