Avesh Khan: ಆವೇಶ್ ಖಾನ್ ಎಸೆದ ಬೆಂಕಿ ಬೌಲಿಂಗ್ಗೆ ಆರೆಂಜ್ ಕ್ಯಾಪ್ ಬ್ಯಾಟರ್ ಬಟ್ಲರ್ ಕ್ಲೀನ್ ಬೌಲ್ಡ್: ವಿಡಿಯೋ
LSG vs RR, IPL 2022: ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ರಾಜಸ್ಥಾನ್ಗೆ ಆರಂಭದಲ್ಲೇ ಲಖನೌ ಶಾಕ್ ನೀಡಿತು. ಸ್ಪೀಡ್ ಸ್ಟಾರ್ ಆವೇಶ್ ಖಾನ್ (Avesh Khan) ತಮ್ಮ ಘಾತಕ ಬೌಲಿಂಗ್ ಮೂಲಕ ಜಾಸ್ ಬಟ್ಲರ್ (Jos Buttler) ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಪೆವಿಲಿಯನ್‌ಗೆ ಅಟ್ಟಿದರು.
15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾನುವಾರ ನಡೆದ ದ್ವಿತೀಯ ಪಂದ್ಯದಲ್ಲಿ ಲಖನೌ ಸೂಪರ್ ಜೇಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ (LSG vs RR) ತಂಡ 24 ರನ್‌ಗಳ ಭರ್ಜರಿ ಜಯ ಸಾಧಿಸಿತು. ಸ್ಯಾಮ್ಸನ್ ಪಡೆ 179 ರನ್‌ಗಳ ಟಾರ್ಗೆಟ್ ನೀಡಿದರೂ ಲಖನೌ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಈ ಜಯದೊಂದಿಗೆ ರಾಜಸ್ಥಾನ್ ಪಾಯಿಂಟ್ ಟೇಬಲ್ನಲ್ಲಿ 16 ಅಂಕದೊಂದಿಗೆ ಎರಡನೇ ಸ್ಥಾನಕ್ಕೆ ಜಿಗಿದಿದೆ. ಆರ್ ಆರ್ ಈ ಪಂದ್ಯವನ್ನು ಗೆದ್ದಿತಾದರೂ ಆರಂಭದಲ್ಲಿ ಹಿನ್ನಡೆ ಅನುಭವಿಸಿತು. ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ರಾಜಸ್ಥಾನ್ಗೆ ಆರಂಭದಲ್ಲೇ ಲಖನೌ ಶಾಕ್ ನೀಡಿತು. ಸ್ಪೀಡ್ ಸ್ಟಾರ್ ಆವೇಶ್ ಖಾನ್ (Avesh Khan) ತಮ್ಮ ಘಾತಕ ಬೌಲಿಂಗ್ ಮೂಲಕ ಜಾಸ್ ಬಟ್ಲರ್ (Jos Buttler) ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಪೆವಿಲಿಯನ್‌ಗೆ ಅಟ್ಟಿದರು.
ಹೌದು, ಜಾಸ್ ಬಟ್ಲರ್ ಐಪಿಎಲ್ 2022ರ ಮೊದಲಾರ್ಧದಲ್ಲಿ ಒಂದರ ಹಿಂದೆ ಒಂದರಂತೆ ಶತಕ, ಅರ್ಧಶತಕ ಸಿಡಿಸಿ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ, ದ್ವಿತೀಯಾರ್ಧದಲ್ಲಿ ಇವರ ಬ್ಯಾಟ್ ಸೈಲೆಂಟ್ ಆಗಿದೆ. ಕೊನೆಯ 6 ಪಂದ್ಯಗಳಲ್ಲಿ ಇವರ ಖಾತೆಯಿಂದ ಬಂದಿದ್ದು ಒಂದು ಅರ್ಧಶತಕವಷ್ಟೆ. ಆದರೂ ಆರೆಂಜ್ ಕ್ಯಾಪ್ ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ. ಬಟ್ಲರ್ ಕಳಪೆ ಫಾರ್ಮ್ ಲಖನೌ ವಿರುದ್ಧದ ಪಂದ್ಯದಲ್ಲೂ ಮುಂದುವರೆಯಿತು. 6 ಎಸೆತಗಳಲ್ಲಿ ಕೇವಲ 2 ರನ್ಗೆ ಸುತ್ತಾದರು. ಅದರಲ್ಲೂ ಅವರು ಔಟಾಗಿದ್ದು ತೀರಾ ಕಳಪೆಯಾಗಿತ್ತು. ಆವೇಶ್ ಖಾನ್ ಅವರ 136.8kph ವೇಗದ ಬೌಲಿಂಗ್ಗೆ ಸ್ಕೂಪ್ ಶಾಟ್ ಹೊಡೆಯಲು ಹೋಗಿ ಎಡವಿದ ಬಟ್ಲರ್ ಕ್ಲೀನ್ ಬೌಲ್ಡ್ ಆದರು. ಇದರ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಬಟ್ಲರ್ ನಿರ್ಗಮನದ ನಂತರ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ಸಂಜು ಸ್ಯಾಮ್ಸನ್ 64 ರನ್‌ಗಳ ಜೊತೆಯಾಟ ಕಟ್ಟಿದರು. ಉತ್ತಮವಾಗಿ ಆಡುತ್ತಿದ್ದ ಸಂಜು 32 ರನ್ (24 ಎಸೆತ, 6 ಬೌಂಡರಿ) ಗಳಿಸಿ ಔಟ್ ಆಗಿ ಮಗದೊಮ್ಮೆ ನಿರಾಸೆ ಮೂಡಿಸಿದರು. ಬಳಿಕ ಕ್ರೀಸಿಗಿಳಿದ ಪಡಿಕ್ಕಲ್ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಆದರೆ ಜೈಸ್ವಾಲ್ ಬೆನ್ನಲ್ಲೇ ಪಡಿಕ್ಕಲ್ ಕೂಡ ಪೆವಿಲಿಯನ್‌ಗೆ ಮರಳಿರುವುದು ಹಿನ್ನಡೆಗೆ ಕಾರಣವಾಯಿತು. ಜೈಸ್ವಾಲ್ 41 (29 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ಪಡಿಕ್ಕಲ್ 39 ರನ್ (18 ಎಸೆತ, 5 ಬೌಂಡರಿ, 2 ಸಿಕ್ಸರ್) ಗಳಿಸಿ ನಿರ್ಗಮಿಸಿದರು. ಅಂತಿಮವಾಗಿ ರಾಜಸ್ಥಾನ್ 6 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು. ರಿಯಾನ್ ಪರಾಗ್ 17, ಜೇಮ್ಸ್ ನೀಶಮ್ 14, ಟ್ರೆಂಟ್ ಬೌಲ್ಟ್ 17* ಹಾಗೂ ಆರ್. ಅಶ್ವಿನ್ 10* ರನ್ ಗಳಿಸಿದರು.
179 ರನ್‌ಗಳ ಸ್ಪರ್ಧಾತ್ಮಕ ಸವಾಲು ಬೆನ್ನತ್ತಿದ ಲಖನೌ ಸೂಪರ್ ಜೈಂಟ್ಸ್, ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್ ಡಿಕಾಕ್(7) ಹಾಗೂ ಕೆಎಲ್ ರಾಹುಲ್(10) ಬಹುಬೇಗನೆ ಪೆವಿಲಿಯನ್ ಸೇರಿದರು. ಇವರ ಬೆನ್ನಲ್ಲೇ ಬಂದ ಆಯುಷ್ ಬಡೋನಿ ಖಾತೆ ತೆರೆಯುವ ಮೊದಲೇ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ದೀಪಕ್ ಹೂಡ(59) ಬಿರುಸಿನ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿ ತಂಡಕ್ಕೆ ಚೇತರಿಕೆ ನೀಡಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕೃನಾಲ್ ಪಾಂಡ್ಯ(25), ಜೇಸನ್ ಹೋಲ್ಡರ್(1), ದುಶ್ಮಂತ ಚಮೀರ(0) ತಂಡಕ್ಕೆ ಆಸರೆ ಆಗಲಿಲ್ಲ. ಮಾರ್ಕಸ್ ಸ್ಟಾಯ್ನಿಸ್ (27) ಕೊನೆವರೆಗೂ ಹೋರಾಡಿದರು ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಪರಿಣಾಮ ಲಖನೌ ಹೋರಾಟ 154 ರನ್‌ಗಳಿಗೆ ಅಂತ್ಯಗೊಂಡಿತು. ಬೋಲ್ಟ್, ಪ್ರಸಿದ್ಧ್ ಹಾಗೂ ಮೆಕಾಯ್ 2 ವಿಕೆಟ್ ಪಡೆದು ಮಿಂಚಿದರು.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:51 am, Mon, 16 May 22