ಮಹಾ ಎಡವಟ್ಟು… ಅವೇಶ್ ಖಾನ್ಗೆ ಬ್ಯಾನ್ ಭೀತಿ..!
Avesh Khan Controversy: ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 'ಹೆಲ್ಮೆಟ್' ಸಂಭ್ರಮದ ಮೂಲಕ ದಂಡದ ಶಿಕ್ಷೆಗೆ ಗುರಿಯಾಗಿದ್ದ ಲಕ್ನೋ ಸೂಪರ್ ಜೈಂಟ್ಸ್ ವೇಗಿ ಅವೇಶ್ ಖಾನ್ ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಈ ಬಾರಿ ಮಾಡಿಕೊಂಡಿರುವ ಎಡವಟ್ಟಿನ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

IPL 2026: ಲಕ್ನೋ ಸೂಪರ್ ಜೈಂಟ್ಸ್ (LSG) ವೇಗಿ ಅವೇಶ್ ಖಾನ್ ಮತ್ತೊಮ್ಮೆ ತಮ್ಮ ವಿಲಕ್ಷಣ ಸಂಭ್ರಮಾಚರಣೆಯ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ರೋಚಕ ಪಂದ್ಯದಲ್ಲಿ ರಿಷಭ್ ಪಂತ್ ಬಾರಿಸಿದ ವಿನ್ನಿಂಗ್ ಶಾಟ್ ಬೌಂಡರಿ ಗೆರೆ ದಾಟುವ ಮೊದಲೇ, ಹೊರಗಡೆ ನಿಂತಿದ್ದ ಅವೇಶ್ ಖಾನ್ ಬ್ಯಾಟ್‌ನಿಂದ ಚೆಂಡನ್ನು ತಡೆದು ಸಂಭ್ರಮಿಸಿದ್ದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಏನಿದು ಘಟನೆ?
ಹೈದರಾಬಾದ್ನಲ್ಲಿ ನಡೆದ ಐಪಿಎಲ್ನ 10ನೇ ಪಂದ್ಯದ ಕೊನೆಯ ಎರಡು ಎಸೆತಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗೆಲ್ಲಲು 1 ರನ್ ಬೇಕಿದ್ದಾಗ, ಪಂತ್ ಅವರು ಲಾಂಗ್-ಆನ್ ಕಡೆಗೆ ಚೆಂಡನ್ನು ಬಾರಿಸಿದರು. ಮುಂದಿನ ಬ್ಯಾಟರ್ ಆಗಿ ಕ್ರೀಸ್‌ಗೆ ಬರಲು ಪ್ಯಾಡ್ ಧರಿಸಿ ಸಜ್ಜಾಗಿದ್ದ ಅವೇಶ್ ಖಾನ್, ಬೌಂಡರಿ ಗೆರೆಯ ಹೊರಭಾಗದಲ್ಲಿ ನಿಂತಿದ್ದರು.
ಇತ್ತ ರಿಷಭ್ ಪಂತ್ ಬಾರಿಸಿದ ಚೆಂಡು ಬೌಂಡರಿ ಗೆರೆ ದಾಟುವ ಮೊದಲೇ ಉತ್ಸಾಹದಲ್ಲಿ ಓಡಿ ಬಂದ ಅವೇಶ್ ಖಾನ್, ತಮ್ಮ ಬ್ಯಾಟ್‌ನಿಂದ ಚೆಂಡನ್ನು ಮತ್ತೆ ಮೈದಾನದ ಒಳಕ್ಕೆ ಹೊಡೆದು ಸಂಭ್ರಮಿಸಿದರು.
OVER THE IN-FIELD! 😍
Captain Rishabh Pant guides the chase and finishes it off in style 🤌@LucknowIPL off the mark on the points table +2️⃣
Scorecard ▶️ https://t.co/qC2rF1Hiiz#TATAIPL | #KhelBindaas | #SRHvLSG pic.twitter.com/SEDFsub4UD
— IndianPremierLeague (@IPL) April 5, 2026
ನಿಯಮ ಏನು ಹೇಳುತ್ತದೆ?
ಕ್ರಿಕೆಟ್‌ನ ನಿಯಮ 41 (ಅನ್ ಫೇರ್ ಪ್ಲೇ) ಮತ್ತು ನಿಯಮ 20.1 (ಡೆಡ್ ಬಾಲ್) ಪ್ರಕಾರ, ಮೈದಾನದ ಹೊರಗಿರುವ ಆಟಗಾರ ಪಂದ್ಯದ ಅವಧಿಯಲ್ಲಿ ಚೆಂಡನ್ನು ಉದ್ದೇಶಪೂರ್ವಕವಾಗಿ ಸ್ಪರ್ಶಿಸಿದರೆ ಅದನ್ನು ‘ಡೆಡ್ ಬಾಲ್’ ಎಂದು ಘೋಷಿಸಬಹುದು. ಅಲ್ಲದೆ, ಎದುರಾಳಿ ತಂಡಕ್ಕೆ 5 ಪೆನಾಲ್ಟಿ ರನ್‌ಗಳನ್ನು ನೀಡುವ ಅವಕಾಶವೂ ಇರುತ್ತದೆ.
ಸನ್ ರೈಸರ್ಸ್ ಹೈದರಾಬಾದ್ ತಂಡವು ಈ ಘಟನೆ ಸೇರಿದಂತೆ ಅಂಪೈರಿಂಗ್ ಕುರಿತಾದ ಇತರ ದೂರುಗಳ ಬಗ್ಗೆ ಬಿಸಿಸಿಐಗೆ ಅಧಿಕೃತವಾಗಿ ಪತ್ರ ಬರೆಯಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ಒಂದು ವೇಳೆ ಈ ಘಟನೆಯನ್ನು ಮ್ಯಾಚ್ ರೆಫರಿ ಗಂಭೀರವಾಗಿ ಪರಿಗಣಿಸಿದರೆ, ಐಸಿಸಿ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಅವರಿಗೆ ಒಂದು ಪಂದ್ಯದ ನಿಷೇಧ ಹೇರಬಹುದು ಎಂದು ಕೆಲವು ವರದಿಗಳು ಸೂಚಿಸಿವೆ.
ಬಿಸಿಸಿಐ ಇದನ್ನು “ನಡವಳಿಕೆ ಸಂಹಿತೆ” (Code of Conduct) ಉಲ್ಲಂಘನೆ ಎಂದು ಪರಿಗಣಿಸಿದರೆ ಮಾತ್ರ ಈ ಕ್ರಮ ಕೈಗೊಳ್ಳಬಹುದು. ಹೀಗಾಗಿ ಇಲ್ಲಿ ಮ್ಯಾಚ್ ರೆಫರಿಯ ಪರಿಗಣನೆಯೊಂದಿಗೆ, ಬಿಸಿಸಿಐ ತೆಗೆದುಕೊಳ್ಳುವ ಕ್ರಮ ಕೂಡ ಮುಖ್ಯವಾಗುತ್ತದೆ.
ಆದರೆ ಈ ಬಗ್ಗೆ ಸನ್ರೈಸರ್ಸ್ ಹೈದರಾಬಾದ್ ಆಟಗಾರರು ಯಾವುದೇ ಅಪೀಲ್ ಮಾಡಿರಲಿಲ್ಲ. ಇದಾಗ್ಯೂ ಇದೀಗ ಅವೇಶ್ ಖಾನ್ ಅವರ ಮಹಾ ಎಡವಟ್ಟಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಲಕ್ನೋ ಸೂಪರ್ ಜೈಂಟ್ಸ್ ಆಟಗಾರನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅನೇಕರು ಆಗ್ರಹಿಸಿದ್ದಾರೆ.
ಹಳೆಯ ನೆನಪು:
ಈ ಹಿಂದೆ 2023ರಲ್ಲಿ ಆರ್ ಸಿಬಿ ವಿರುದ್ಧ ಗೆದ್ದಾಗ ಅವೇಶ್ ಖಾನ್ ತಮ್ಮ ಹೆಲ್ಮೆಟ್ ಅನ್ನು ನೆಲಕ್ಕೆ ಅಪ್ಪಳಿಸಿ ಸಂಭ್ರಮಿಸಿದ್ದರು. ಆಗ ಅವರಿಗೆ ಪಂದ್ಯದ ಶುಲ್ಕದಲ್ಲಿ ದಂಡ ವಿಧಿಸಲಾಗಿತ್ತು. ಈಗ ಮತ್ತೆ ಇಂತಹದ್ದೇ ಒಂದು ‘ಅನಗತ್ಯ’ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಇದನ್ನೂ ಓದಿ: PSL 2026: ಡೇವಿಡ್ ವಾರ್ನರ್ ಬಂಧನ
ಒಟ್ಟಾರೆಯಾಗಿ, ಈ ಘಟನೆಯನ್ನು “ಅನ್ ಫೇರ್ ಪ್ಲೇ” (Unfair Play) ಎಂದು ಪರಿಗಣಿಸಿ ಬಿಸಿಸಿಐ ಕ್ರಮ ಕೈಗೊಳ್ಳುತ್ತದೆಯೇ ಎಂದು ಕಾದು ನೋಡಬೇಕಿದೆ. ಒಂದು ವೇಳೆ ನಿಷೇಧ ಹೇರಲ್ಪಟ್ಟರೆ, ಅವೇಶ್ ಖಾನ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮುಂದಿನ ಪಂದ್ಯದಿಂದ ಹೊರಗುಳಿಯಬೇಕಾಗುತ್ತದೆ.




