AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿಸಿಐ ಮಾಸ್ಟರ್ ಪ್ಲ್ಯಾನ್: ಇಂಗ್ಲೆಂಡ್​ಗೆ ಆಖಿಬ್ ನಬಿ..!

ಭಾರತ ಮತ್ತು ನ್ಯೂಝಿಲೆಂಡ್ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಯು ನವೆಂಬರ್ 19 ರಿಂದ ಡಿಸೆಂಬರ್ 1, 2026 ರವರೆಗೆ ನಡೆಯಲಿದೆ. ಈ ಪ್ರಮುಖ ಸರಣಿಗೂ ಮುನ್ನ ಟೀಮ್ ಇಂಡಿಯಾದ ಯುವ ವೇಗಿ ಆಖಿಬ್ ನಬಿ ಅವರನ್ನು ಇಂಗ್ಲೆಂಡ್‌ಗೆ ಕಳುಹಿಸಲು ಬಿಸಿಸಿಐ ನಿರ್ಧರಿಸಿದೆ. ಈ ಮೂಲಕ ಕಿವೀಸ್ ಸರಣಿಗೂ ಮುನ್ನವೇ ತನ್ನ ವೇಗದ ಬೌಲಿಂಗ್ ಅಸ್ತ್ರವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಭಾರತೀಯ ಕ್ರಿಕೆಟ್ ಮಂಡಳಿ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ.

ಬಿಸಿಸಿಐ ಮಾಸ್ಟರ್ ಪ್ಲ್ಯಾನ್: ಇಂಗ್ಲೆಂಡ್​ಗೆ ಆಖಿಬ್ ನಬಿ..!
Auqib Nabi Image Credit source: BCCI
ಝಾಹಿರ್ ಯೂಸುಫ್
|

Updated on: Aug 29, 2026 | 3:02 PM

Share

ಟೀಮ್ ಇಂಡಿಯಾ ವೇಗಿ ಆಖಿಬ್ ನಬಿ ಅವರಿಗೆ ಇಂಗ್ಲಿಷ್ ಕೌಂಟಿ ಕ್ರಿಕೆಟ್‌ನಲ್ಲಿ ಶಾರ್ಟ್-ಟರ್ಮ್ ರೆಡ್-ಬಾಲ್ (ಟೆಸ್ಟ್) ಒಪ್ಪಂದವನ್ನು ಕೊಡಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಸಕ್ರಿಯವಾಗಿ ಮಾತುಕತೆ ನಡೆಸುತ್ತಿದೆ. ಮುಂಬರುವ ಮಹತ್ವದ ನ್ಯೂಝಿಲೆಂಡ್ ಟೆಸ್ಟ್ ಸರಣಿಗೂ ಮುನ್ನ ಕಾಶ್ಮೀರಿ ವೇಗಿ ವಿದೇಶಿ ಮಣ್ಣಿನಲ್ಲಿ ಉತ್ತಮ ಅನುಭವ ಮತ್ತು ಅಭ್ಯಾಸ ಸಿಗಲಿ ಎಂಬ ಉದ್ದೇಶದಿಂದ ಬಿಸಿಸಿಐ ಈ ಹೆಜ್ಜೆಯನ್ನಿಟ್ಟಿದೆ.

ಸರೆ ಕೌಂಟಿ ಕ್ಲಬ್ ಜೊತೆ ಮಾತುಕತೆ:

ಲಂಡನ್ ಮೂಲದ ಪ್ರತಿಷ್ಠಿತ ಸರ್ರೆ ಕೌಂಟಿ ಕ್ರಿಕೆಟ್ ಕ್ಲಬ್ ಗುಣಮಟ್ಟದ ಸ್ವಿಂಗ್ ಬೌಲರ್‌ಗಾಗಿ ಹುಡುಕಾಟ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಹಾಗೂ ಸರ್ರೆ ಕ್ಲಬ್‌ನ ಮುಖ್ಯಸ್ಥರಾದ ಅಲೆಕ್ ಸ್ಟೀವರ್ಟ್  ಅವರು ಬಿಸಿಸಿಐನ ಉನ್ನತ ಅಧಿಕಾರಿಗಳೊಂದಿಗೆ ನೇರ ಮಾತುಕತೆ ನಡೆಸುತ್ತಿದ್ದಾರೆ.

ಬಿಸಿಸಿಐನ ಮಾಸ್ಟರ್ ಪ್ಲ್ಯಾನ್ ಏನು?

  • 2 ರಿಂದ 3 ಪಂದ್ಯಗಳ ಗುರಿ: ಕೌಂಟಿ ಚಾಂಪಿಯನ್‌ಶಿಪ್‌ನ ಅಂತಿಮ ಹಂತದಲ್ಲಿ ಆಖಿಬ್ ನಬಿ ಅವರಿಗೆ ಕನಿಷ್ಠ ಎರಡು ಅಥವಾ ಮೂರು ರೆಡ್-ಬಾಲ್ ಪಂದ್ಯಗಳನ್ನು ಆಡಿಸಲು ಭಾರತೀಯ ತಂಡದ ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ.
  • ಭವಿಷ್ಯದ ಟೆಸ್ಟ್ ತಂಡಕ್ಕೆ ಸಿದ್ಧತೆ: ಕಳೆದ ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ಅಂದರೆ 60 ವಿಕೆಟ್ ಪಡೆದಿದ್ದರೂ ನಬಿಗೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಅವರು ಸುಮ್ಮನೆ ಬೆಂಚ್ ಕಾಯುವುದನ್ನು ತಪ್ಪಿಸಿ, ಅವರನ್ನು ನ್ಯೂಝಿಲೆಂಡ್ ಸರಣಿಗೆ ಸಜ್ಜುಗೊಳಿಸಲು ಪ್ಲ್ಯಾನ್ ರೂಪಿಸಲಾಗಿದೆ.
  • ನ್ಯೂಝಿಲೆಂಡ್ ಪ್ರವಾಸಕ್ಕೆ ಸಿದ್ಧತೆ: ನ್ಯೂಝಿಲೆಂಡ್ ಮತ್ತು ಇಂಗ್ಲೆಂಡ್‌ನ ಹವಾಮಾನ ಪರಿಸ್ಥಿತಿಗಳು ಸ್ವಲ್ಪ ಭಿನ್ನವಾಗಿದ್ದರೂ, ವಿದೇಶಿ ಪಿಚ್‌ಗಳಲ್ಲಿ ಕೆಂಪು ಚೆಂಡಿನಲ್ಲಿ ಬೌಲಿಂಗ್ ಮಾಡುವುದು ನಬಿ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
  • ವೀಸಾ ಪ್ರಕ್ರಿಯೆ ಚುರುಕು: ಬಿಸಿಸಿಐ ಸದ್ಯ ನಬಿ ಅವರ ಯುಕೆ ವೀಸಾ ನಿಯಮಾವಳಿಗಳನ್ನು ಪೂರ್ಣಗೊಳಿಸುವಲ್ಲಿ ನಿರತವಾಗಿದೆ. ವೀಸಾ ಕೈ ಸೇರಿದ ತಕ್ಷಣ ಅವರು ಇಂಗ್ಲೆಂಡ್‌ಗೆ ಹಾರಲಿದ್ದಾರೆ.

ಸದ್ಯ ಟೀಮ್ ಇಂಡಿಯಾ ಆಟಗಾರ:

ಕಳೆದ ರಣಜಿ ಟ್ರೋಫಿ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಆಖಿಬ್ ನಬಿ, ಬರೋಬ್ಬರಿ 60 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈ ಅಮೋಘ ಪ್ರದರ್ಶನದ ಹಿನ್ನೆಲೆಯಲ್ಲಿ, ಅವರನ್ನು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಜಸ್‌ಪ್ರೀತ್ ಬುಮ್ರಾ ಅವರ ಬದಲಿಯಾಗಿ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿತ್ತು.

ಇದನ್ನೂ ಓದಿ: ಏಷ್ಯನ್ ಗೇಮ್ಸ್​ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾದಲ್ಲಿ ಬದಲಾವಣೆ?

ಆದರೆ, ಶ್ರೀಲಂಕಾದಲ್ಲಿ ಸ್ಪಿನ್ ಸ್ನೇಹಿ ಪಿಚ್‌ಗಳಿದ್ದ ಕಾರಣ ಆಖಿಬ್ ನಬಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದೀಗ ಮುಂಬರುವ ಮಹತ್ವದ ಟೆಸ್ಟ್ ಪಂದ್ಯಗಳಿಗಾಗಿ ಅವರನ್ನು ಸಜ್ಜುಗೊಳಿಸಲು ಬಿಸಿಸಿಐ ವಿಶೇಷ ಪ್ಲ್ಯಾನ್ ರೂಪಿಸುತ್ತಿದೆ. ಹೀಗಾಗಿ, ಮುಂಬರುವ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಆಖಿಬ್ ನಬಿ ಭಾರತ ತಂಡದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಬಹುದು.

Follow Us
ನೇಪಾಳ ಪ್ರವಾಹ: ಪ್ರಧಾನಿ ಮೋದಿ, ಅಮಿತ್ ಶಾಗೆ ಖರ್ಗೆ ಪತ್ರ
ನೇಪಾಳ ಪ್ರವಾಹ: ಪ್ರಧಾನಿ ಮೋದಿ, ಅಮಿತ್ ಶಾಗೆ ಖರ್ಗೆ ಪತ್ರ
ನಾಗೇಂದ್ರ ರಾಜೀನಾಮೆ ಕೊಟ್ಟರೂ ಬಿಜೆಪಿ ಪಾದಯಾತ್ರೆ ನಿಲ್ಲಿಸಲ್ಲ: ಆರ್ ಅಶೋಕ್
ನಾಗೇಂದ್ರ ರಾಜೀನಾಮೆ ಕೊಟ್ಟರೂ ಬಿಜೆಪಿ ಪಾದಯಾತ್ರೆ ನಿಲ್ಲಿಸಲ್ಲ: ಆರ್ ಅಶೋಕ್
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮಲ-ಮೂತ್ರ ಅಸುರಕ್ಷಿತ ರೀತಿಯಲ್ಲಿ ವಿಲೇವಾರಿ
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮಲ-ಮೂತ್ರ ಅಸುರಕ್ಷಿತ ರೀತಿಯಲ್ಲಿ ವಿಲೇವಾರಿ
ರಂಗನಾಥ ಸ್ವಾಮಿ ದೇವಾಲಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಿಶೇಷ ಪೂಜೆ
ರಂಗನಾಥ ಸ್ವಾಮಿ ದೇವಾಲಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಿಶೇಷ ಪೂಜೆ
ನೇಪಾಳ ಪ್ರವಾಹದಲ್ಲಿ ಸಿಲುಕಿರೋ ಕನ್ನಡಿಗರಿಗೆ ಧೈರ್ಯ ತುಂಬಿದ ಸಿಎಂ
ನೇಪಾಳ ಪ್ರವಾಹದಲ್ಲಿ ಸಿಲುಕಿರೋ ಕನ್ನಡಿಗರಿಗೆ ಧೈರ್ಯ ತುಂಬಿದ ಸಿಎಂ
ದಾವಣಗೆರೆಯಲ್ಲಿ ಅಡಿಕೆ ಬೆಳೆಗಾರರ ಬೃಹತ್ ಪ್ರತಿಭಟನೆ
ದಾವಣಗೆರೆಯಲ್ಲಿ ಅಡಿಕೆ ಬೆಳೆಗಾರರ ಬೃಹತ್ ಪ್ರತಿಭಟನೆ
34 ಕಾಲೇಜು ಹಾಸ್ಟೆಲ್ ಕ್ಯಾಂಟೀನ್‌ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ
34 ಕಾಲೇಜು ಹಾಸ್ಟೆಲ್ ಕ್ಯಾಂಟೀನ್‌ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ
‘ಬಿಗ್ ಬಾಸ್ ಅಗ್ನಿಪರೀಕ್ಷೆ’ ವೇದಿಕೆಯಲ್ಲಿ ರಂಪಾಟ: ಗಂಭೀರ ಆರೋಪ
‘ಬಿಗ್ ಬಾಸ್ ಅಗ್ನಿಪರೀಕ್ಷೆ’ ವೇದಿಕೆಯಲ್ಲಿ ರಂಪಾಟ: ಗಂಭೀರ ಆರೋಪ
ಶನಿ ಭಗವಾನರ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ಶನಿ ಭಗವಾನರ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ನೆರೆಯಿಂದ ಸುತ್ತುವರೆದ ಮನೆಯಲ್ಲಿ ಸಹಾಯಕ್ಕೆ ಕಾದಿರುವ ನೇಪಾಳದ ಜನರು
ನೆರೆಯಿಂದ ಸುತ್ತುವರೆದ ಮನೆಯಲ್ಲಿ ಸಹಾಯಕ್ಕೆ ಕಾದಿರುವ ನೇಪಾಳದ ಜನರು