AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Champions Trophy 2025: ಭಾರತ ಸೇರಿದಂತೆ 7 ತಂಡಗಳು ಪ್ರಕಟ; ಟೀಂ ಇಂಡಿಯಾದಲ್ಲಿ ಯಾರ್ಯಾರಿಗೆ ಸ್ಥಾನ?

Champions Trophy 2025: ಫೆಬ್ರವರಿ 19 ರಿಂದ ಆರಂಭವಾಗುವ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ರೋಹಿತ್ ಶರ್ಮಾ ನಾಯಕತ್ವದ 15 ಸದಸ್ಯರ ಬಲಿಷ್ಠ ತಂಡವನ್ನು ಬಿಸಿಸಿಐ ಆಯ್ಕೆ ಮಾಡಿದೆ. ಇಂಗ್ಲೆಂಡ್, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ತಂಡಗಳನ್ನೂ ಈಗಾಗಲೇ ಪ್ರಕಟಿಸಲಾಗಿದೆ. ಪಾಕಿಸ್ತಾನ ಮಾತ್ರ ತನ್ನ ತಂಡವನ್ನು ಪ್ರಕಟಿಸಿಲ್ಲ.

Champions Trophy 2025: ಭಾರತ ಸೇರಿದಂತೆ 7 ತಂಡಗಳು ಪ್ರಕಟ; ಟೀಂ ಇಂಡಿಯಾದಲ್ಲಿ ಯಾರ್ಯಾರಿಗೆ ಸ್ಥಾನ?
ಚಾಂಪಿಯನ್ಸ್ ಟ್ರೋಫಿ
ಪೃಥ್ವಿಶಂಕರ
|

Updated on:Jan 18, 2025 | 3:09 PM

Share

ಫೆಬ್ರವರಿ 19 ರಿಂದ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಗೆ ಕೊನೆಗೂ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ 15 ಸದಸ್ಯರ ಬಲಿಷ್ಠ ತಂಡವನ್ನು ಈ ಐಸಿಸಿ ಈವೆಂಟ್​ಗೆ ಬಿಸಿಸಿಐ ಆಯ್ಕೆ ಮಾಡಿದೆ. ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿದ್ದು, ಇದೀಗ ಟೀಂ ಇಂಡಿಯಾ ಪ್ರಕಟಣೆಯ ಜೊತೆಗೆ ಒಟ್ಟು 7 ತಂಡಗಳ ಪಟ್ಟಿ ಹೊರಬಿದ್ದಂತ್ತಾಗಿದೆ. ಉಳಿದಂತೆ ಆತಿಥೇಯ ಪಾಕಿಸ್ತಾನ ಮಾತ್ರ ಇದುವರೆಗೂ ತನ್ನ ತಂಡವನ್ನು ಪ್ರಕಟಿಸಿಲ್ಲ. ಪಾಕಿಸ್ತಾನವನ್ನು ಹೊರತುಪಡಿಸಿ ಇಂಗ್ಲೆಂಡ್‌, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ಭಾರತ ತಮ್ಮ ತಮ್ಮ ತಂಡಗಳನ್ನು ಘೋಷಿಸಿದ್ದು, ಪ್ರತಿಯೊಂದು ತಂಡದಲ್ಲೂ ಯಾರ್ಯಾರಿಗೆ ಅವಕಾಶ ಸಿಕ್ಕಿದೆ ಎಂಬುದರ ವಿವರ ಇಲ್ಲಿದೆ.

7 ತಂಡಗಳ ಪಟ್ಟಿ ಹೀಗಿದೆ

ಇಂಗ್ಲೆಂಡ್‌ ತಂಡ: ಜೋಸ್ ಬಟ್ಲರ್ (ನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸ್, ಬೆನ್ ಡಕೆಟ್, ಜೇಮೀ ಓವರ್ಟನ್, ಜೇಮೀ ಸ್ಮಿತ್, ಲಿಯಾಮ್ ಲಿವಿಂಗ್ಸ್ಟೋನ್, ಆದಿಲ್ ರಶೀದ್, ಜೋ ರೂಟ್, ಸಾಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್.

ನ್ಯೂಜಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಡೆವೊನ್ ಕಾನ್ವೆ, ಟಾಮ್ ಲೇಥಮ್ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್, ರಚಿನ್ ರವೀಂದ್ರ, ವಿಲ್ ಯಂಗ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ನಾಥನ್ ಸ್ಮಿತ್, ಲಾಕಿ ಫರ್ಗುಸನ್, ಬೆನ್ ಸೀರ್ಸ್, ವಿಲಿಯಂ ಒರೋಕ್, ಮ್ಯಾಟ್ ಹೆನ್ರಿ, ಮೈಕೆಲ್ ಬ್ರೇಸ್​​ವೆಲ್.

ಬಾಂಗ್ಲಾದೇಶ ತಂಡ: ನಜ್ಮುಲ್ ಹೊಸೈನ್ ಶಾಂಟೊ, ಮೆಹಿದಿ ಹಸನ್ ಮಿರಾಜ್, ಸೌಮ್ಯ ಸರ್ಕಾರ್, ತಂಝಿದ್ ಹಸನ್, ತಂಝಿದ್ ಹೃದಯೋಯ್, ಮುಶ್ಫಿಕರ್ ರಹೀಮ್, ಮಹ್ಮದುಲ್ಲಾ, ಜೇಕರ್ ಅಲಿ, ರಿಶಾದ್ ಹೊಸೈನ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರಹಮಾನ್, ಪರ್ವೇಜ್ ಹೊಸೈನ್, ನಸುಮ್ ಅಹ್ಮದ್, ತಂಜಿಮ್ ಹಸನ್ ಶಕೀಬ್, ನಹಿದ್ ರಾಣಾ.

ಅಫ್ಘಾನಿಸ್ತಾನ ತಂಡ: ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮತ್ ಶಾ (ಉಪನಾಯಕ), ರೆಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ಸೇದಿಕುಲ್ಲಾ ಅಟಲ್, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ರಶೀದ್ ಖಾನ್, ಎಎಮ್ ಗಜನ್ಫರ್, ನೂರ್ ಅಹ್ಮದ್, ಫಜಲ್ ಹಕ್ ಫಾರೂಕಿ, ನವೀದ್ ಜದ್ರಾನ್ ಮತ್ತು ಫರೀದ್ ಅಹ್ಮದ್ ಮಲಿಕ್.

ಮೀಸಲು ಆಟಗಾರರು: ದರ್ವಿಶ್ ರಸೌಲಿ, ನಂಗ್ಯಾಲ್ ಖರೋಟಿ ಮತ್ತು ಬಿಲಾಲ್ ಸಾಮಿ.

ದಕ್ಷಿಣ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ರಿಯಾನ್ ರಿಕಲ್ಟನ್ (ವಿಕೆಟ್ ಕೀಪರ್), ಐಡೆನ್ ಮಾರ್ಕ್ರಾಮ್, ಟ್ರಿಸ್ಟಾನ್ ಸ್ಟಬ್ಸ್, ಟೋನಿ ಡಿ ಜೊರ್ಜಿ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಡೇವಿಡ್ ಮಿಲ್ಲರ್, ಕೇಶವ್ ಮಹಾರಾಜ್, ತಬ್ರೈಜ್ ಶಮ್ಸಿ, ಕಗಿಸೊ ರಬಾಡ, ವಿಯಾನ್ ಮುಲ್ಡರ್, ಮಾರ್ಕೊ ಯಾನ್ಸೆನ್, ಲುಂಗಿ ಎನ್ಗಿಡಿ.

ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಟ್ರಾವಿಸ್ ಹೆಡ್, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ಶಾರ್ಟ್, ಆರನ್ ಹಾರ್ಡಿ, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್, ನಾಥನ್ ಎಲ್ಲಿಸ್, ಆಡಮ್ ಜಂಪಾ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ಯಶಸ್ವಿ ಜೈಸ್ವಾಲ್, ರಿಷಬ್ ಪಂತ್, ರವೀಂದ್ರ ಜಡೇಜಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:04 pm, Sat, 18 January 25