CSK vs KKR IPL 2026: ಕೆಕೆಆರ್ ವಿರುದ್ಧ ಗೆದ್ದು ಬೀಗಿದ ಸಿಎಸ್​ಕೆ

CSK vs KKR, IPL 2026: ಐಪಿಎಲ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಈವರೆಗೆ 33 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಸಿಎಸ್​ಕೆ ತಂಡ 21 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇದೇ ವೇಳೆ ಕೆಕೆಆರ್ ತಂಡ ಗೆದ್ದಿರುವುದು 11 ಪಂದ್ಯಗಳಲ್ಲಿ ಮಾತ್ರ.

CSK vs KKR IPL 2026: ಕೆಕೆಆರ್ ವಿರುದ್ಧ ಗೆದ್ದು ಬೀಗಿದ ಸಿಎಸ್​ಕೆ
CSK vs KKR

Updated on: Apr 14, 2026 | 11:34 PM

ಇಂಡಿಯನ್ ಪ್ರೀಮಿಯರ್ ಲೀಗ್​ನ 21ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ ತಂಡವು 20 ಓವರ್​ಗಳಲ್ಲಿ ಕಲೆಹಾಕಿದ್ದು 192 ರನ್​ಗಳು. ಈ ಗುರಿಯನ್ನು ಬೆನ್ನತ್ತಿದ ಕೆಕೆಆರ್ ತಂಡ 20 ಓವರ್​ಗಳಲ್ಲಿ 160 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಸಿಎಸ್​ಕೆ ತಂಡ 32 ರನ್​ಗಳ ಜಯ ಸಾಧಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್ (ನಾಯಕ), ಆಯುಷ್ ಮ್ಹಾತ್ರೆ, ಸರ್ಫರಾಝ್ ಖಾನ್, ಶಿವಂ ದುಬೆ, ಡೆವಾಲ್ಡ್ ಬ್ರೆವಿಸ್, ಜೇಮಿ ಓವರ್ಟನ್, ನೂರ್ ಅಹ್ಮದ್, ಅನ್ಶುಲ್ ಕಂಬೋಜ್, ಗುರ್ಜಪ್ನೀತ್ ಸಿಂಗ್, ಖಲೀಲ್ ಅಹ್ಮದ್.

ಕೊಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ XI): ಅಜಿಂಕ್ಯ ರಹಾನೆ (ನಾಯಕ), ಕ್ಯಾಮರೋನ್ ಗ್ರೀನ್, ಆಂಗ್​ಕ್ರಿಶ್ ರಘುವಂಶಿ (ವಿಕೆಟ್ ಕೀಪರ್), ರೋವ್​ಮನ್ ಪೊವೆಲ್, ರಿಂಕು ಸಿಂಗ್, ಸುನಿಲ್ ನರೈನ್, ರಮಣ್​ದೀಪ್ ಸಿಂಗ್, ಅನುಕುಲ್ ರಾಯ್, ವರುಣ್ ಚಕ್ರವರ್ತಿ, ವೈಭವ್ ಅರೋರಾ, ಕಾರ್ತಿಕ್ ತ್ಯಾಗಿ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಅಜಿಂಕ್ಯ ರಹಾನೆ (ನಾಯಕ), ಅಂಗ್​ಕ್ರಿಶ್ ರಘುವಂಶಿ, ಅನುಕುಲ್ ರಾಯ್, ಮನೀಶ್ ಪಾಂಡೆ, ರಮಣದೀಪ್ ಸಿಂಗ್, ರಿಂಕು ಸಿಂಗ್, ರೋವ್​ಮನ್ ಪೊವೆಲ್, ಸುನಿಲ್ ನರೈನ್, ಉಮ್ರಾನ್ ಮಲಿಕ್, ವೈಭವ್ ಅರೋರಾ, ವರುಣ್ ಚಕ್ರವರ್ತಿ, ಕ್ಯಾಮೆರೋನ್ ಗ್ರೀನ್, ಫಿನ್ ಅಲೆನ್, ಮಥೀಶ ಪತಿರಾಣ, ತೇಜಸ್ವಿ ಸಿಂಗ್, ಕಾರ್ತಿಕ್ ತ್ಯಾಗಿ, ಪ್ರಶಾಂತ್ ಸೋಲಂಕಿ, ರಾಹುಲ್ ತ್ರಿಪಾಠಿ, ಟಿಮ್ ಸೈಫರ್ಟ್, ಬ್ಲೆಸ್ಸಿಂಗ್ ಮುಝರಬಾನಿ, ಸಾರ್ಥಕ್ ರಂಜನ್, ದಕ್ಷ್ ಕಮ್ರಾ, ರಚಿನ್ ರವೀಂದ್ರ, ಆಕಾಶ್ ದೀಪ್.

ಚೆನ್ನೈ ಸೂಪರ್ ಕಿಂಗ್ಸ್ ತಂಡ: ರುತುರಾಜ್ ಗಾಯಕ್‌ವಾಡ್ (ನಾಯಕ), ಆಯುಷ್ ಮ್ಹಾತ್ರೆ, ಎಂಎಸ್ ಧೋನಿ, ಸಂಜು ಸ್ಯಾಮ್ಸನ್, ಡೆವಾಲ್ಡ್ ಬ್ರೆವಿಸ್, ಉರ್ವಿಲ್ ಪಟೇಲ್, ಶಿವಂ ದುಬೆ, ಜೇಮಿ ಓವರ್‌ಟನ್, ರಾಮಕೃಷ್ಣ ಘೋಷ್, ನೂರ್ ಅಹ್ಮದ್, ಖಲೀಲ್ ಅಹ್ಮದ್, ಅನ್ಶುಲ್ ಕಂಬೋಜ್, ಗುರ್ಜಪ್ನೀತ್ ಸಿಂಗ್, ಶ್ರೇಯಸ್ ಗೋಪಾಲ್, ಮುಖೇಶ್ ಚೌಧರಿ, ನಾಥನ್ ಎಲ್ಲಿಸ್, ಅಕೇಲ್ ಹೊಸೈನ್, ಪ್ರಶಾಂತ್ ವೀರ್, ಕಾರ್ತಿಕ್ ಶರ್ಮಾ, ಮ್ಯಾಥ್ಯೂ ಶಾರ್ಟ್, ಅಮನ್ ಖಾನ್, ಸರ್ಫರಾಝ್ ಖಾನ್, ಮ್ಯಾಟ್ ಹೆನ್ರಿ, ರಾಹುಲ್ ಚಹರ್, ಝಾಕ್ ಫೌಲ್ಕ್ಸ್.

 

LIVE NEWS & UPDATES

The liveblog has ended.
  • 14 Apr 2026 11:30 PM (IST)

    CSK vs KKR IPL 2026 Live Score: ಸಿಎಸ್​ಕೆ ತಂಡಕ್ಕೆ ಜಯ

    • ಕೆಕೆಆರ್ ವಿರುದ್ಧ 32 ರನ್​ಗಳ ಜಯ ಸಾಧಿಸಿದ ಸಿಎಸ್​ಕೆ
    • ಮೊದಲ ಬ್ಯಾಟ್ ಮಾಡಿ 20 ಓವರ್​ಗಳಲ್ಲಿ 192 ರನ್ ಕಲೆಹಾಕಿದ್ದ ಸಿಎಸ್​ಕೆ
    • 193 ರನ್​ಗಳ ಗುರಿ ಬೆನ್ನತ್ತಿದ ಕೆಕೆಆರ್ 20 ಓವರ್​ಗಳಲ್ಲಿ ಗಳಿಸಿದ್ದು 160 ರನ್​ಗಳು ಮಾತ್ರ.
    • ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೂಪರ್ ಜಯ
  • 14 Apr 2026 11:11 PM (IST)

    CSK vs KKR IPL 2026 Live Score: 62 ರನ್​​ಗಳ ಅವಶಕ್ಯತೆ

    ಕೊನೆಯ 18 ಎಸೆತಗಳಲ್ಲಿ ಕೆಕೆಆರ್ ತಂಡಕ್ಕೆ ಗೆಲ್ಲಲು 62 ರನ್​ಗಳ ಅವಶ್ಯಕತೆ.

    ಸೋಲಿನ ಸುಳಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ​.

    ಗೆಲುವಿನತ್ತ ಸಾಗಿದ ಚೆನ್ನೈ ಸೂಪರ್ ಕಿಂಗ್ಸ್​,

    ಕ್ರೀಸ್​ನಲ್ಲಿ ರೋವ್​ಮನ್ ಪೊವೆಲ್ ಹಾಗೂ ರಮಣ್​ದೀಪ್ ಸಿಂಗ್ ಬ್ಯಾಟಿಂಗ್.

  • 14 Apr 2026 10:56 PM (IST)

    CSK vs KKR IPL 2026 Live Score: 15 ಓವರ್​ಗಳು ಮುಕ್ತಾಯ

    15 ಓವರ್​ಗಳಲ್ಲಿ 107 ರನ್ ಕಲೆಹಾಕಿರುವ ಕೊಲ್ಕತ್ತಾ ನೈಟ್ ರೈಡರ್ಸ್​

    ಕೊನೆಯ 30 ಎಸೆತಗಳಲ್ಲಿ 86 ರನ್​ಗಳ ಗುರಿ

    ಕ್ರೀಸ್​ನಲ್ಲಿ ರೋವ್​ಮನ್ ಪೊವೆಲ್ ಹಾಗೂ ರಮಣ್​ದೀಪ್ ಸಿಂಗ್ ಬ್ಯಾಟಿಂಗ್.

     

  • 14 Apr 2026 10:43 PM (IST)

    CSK vs KKR IPL 2026 Live Score: ಕೆಕೆಆರ್​ 6ನೇ ವಿಕೆಟ್ ಪತನ

    ನೂರ್ ಅಹ್ಮದ್ ಎಸೆದ 13ನೇ ಓವರ್​ನ 5ನೇ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ರಿಂಕು ಸಿಂಗ್ (6).

    90 ರನ್​ಗೆ 6 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿರುವ ಕೆಕೆಆರ್.

    ಕ್ರೀಸ್​ನಲ್ಲಿ ರೋವ್​ಮನ್ ಪೊವೆಲ್ ಹಾಗೂ ರಮಣ್​ದೀಪ್ ಸಿಂಗ್ ಬ್ಯಾಟಿಂಗ್.

     

  • 14 Apr 2026 10:35 PM (IST)

    CSK vs KKR IPL 2026 Live Score: ಕ್ಲೀನ್ ಬೌಲ್ಡ್​

    ನೂರ್ ಅಹ್ಮದ್ ಎಸೆದ 11ನೇ ಓವರ್​ನ ಕೊನೆಯ ಎಸೆತದಲ್ಲಿ ಕ್ಯಾಮರೋನ್ ಗ್ರೀನ್ ಕ್ಲೀನ್ ಬೌಲ್ಡ್​.

    ಮೊದಲ ಎಸೆತದಲ್ಲೇ ಸೊನ್ನೆ ಸುತ್ತಿ ನಿರ್ಗಮಿಸಿದ ಗ್ರೀನ್.

    11 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 85 ರನ್ ಕಲೆಹಾಕಿರುವ ಕೆಕೆಆರ್.

    ಕ್ರೀಸ್​ನಲ್ಲಿ ರೋವ್​ಮನ್ ಪೊವೆಲ್ ಹಾಗೂ ರಿಂಕು ಸಿಂಗ್ ಬ್ಯಾಟಿಂಗ್.

  • 14 Apr 2026 10:33 PM (IST)

    CSK vs KKR IPL 2026 Live Score: ರಹಾನೆ ಔಟ್

    ನೂರ್ ಅಹ್ಮದ್ ಎಸೆದ 11ನೇ ಓವರ್​ನ 5ನೇ ಎಸೆತದಲ್ಲಿ ಫ್ರಂಟ್ ಫೀಲ್ಡರ್​ಗೆ ಕ್ಯಾಚ್ ನೀಡಿದ ಅಜಿಂಕ್ಯ ರಹಾನೆ (28).

    ಚೆನ್ನೈ ಸೂಪರ್ ಕಿಂಗ್ಸ್​ ತಂಡಕ್ಕೆ 4ನೇ ಯಶಸ್ಸು.

    ಕ್ರೀಸ್​ನಲ್ಲಿ ರಿಂಕು ಸಿಂಗ್ ಹಾಗೂ ಕ್ಯಾಮರೋನ್ ಗ್ರೀನ್ ಬ್ಯಾಟಿಂಗ್.

  • 14 Apr 2026 10:27 PM (IST)

    CSK vs KKR IPL 2026 Live Score: ಕೆಕೆಆರ್​ 3ನೇ ವಿಕೆಟ್ ಪತನ

    ಅಕಿಲ್ ಹುಸೈನ್ ಎಸೆದ 10ನೇ ಓವರ್​ನ ಮೂರನೇ ಎಸೆತದಲ್ಲಿ ಕ್ಯಾಚ್ ನೀಡಿ ಹೊರ ನಡೆದ ರಘುವಂಶಿ (27).

    ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮೂರನೇ ಯಶಸ್ಸು.

    ಕ್ರೀಸ್​ನಲ್ಲಿ ಅಜಿಂಕ್ಯ ರಹಾನೆ ಹಾಗೂ ರಿಂಕು ಸಿಂಗ್ ಬ್ಯಾಟಿಂಗ್.

     

  • 14 Apr 2026 10:24 PM (IST)

    CSK vs KKR IPL 2026 Live Score: ಒಂದೇ ಓವರ್​ನಲ್ಲಿ 2 ಸಿಕ್ಸ್​

    ಗುರ್ಜಪ್ನೀತ್ ಸಿಂಗ್ ಎಸೆದ 9ನೇ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ 2 ಸಿಕ್ಸ್ ಸಿಡಿಸಿದ ರಹಾನೆ.

    5ನೇ ಎಸೆತದಲ್ಲಿ ಮತ್ತೊಂದು ಫೋರ್​.

    9 ಓವರ್​ಗಳ ಮುಕ್ತಾಯದ ವೇಳೆಗೆ ಕೆಕೆಆರ್ ತಂಡದ ಸ್ಕೋರ್- 77/2

    ಕ್ರೀಸ್​ನಲ್ಲಿ ಅಜಿಂಕ್ಯ ರಹಾನೆ ಮತ್ತು ರಘುವಂಶಿ ಬ್ಯಾಟಿಂಗ್.

     

  • 14 Apr 2026 10:06 PM (IST)

    CSK vs KKR IPL 2026 Live Score: ಪವರ್​ಪ್ಲೇ ಮುಕ್ತಾಯ

    • ಪವರ್​ಪ್ಲೇನಲ್ಲಿ ಕೇವಲ 36 ರನ್ ಕಲೆಹಾಕಿದ ಕೆಕೆಆರ್
    • ಮೊದಲ 6 ಓವರ್​ಗಳಲ್ಲಿ ಕೇವಲ 36 ರನ್ ನೀಡಿ 2 ವಿಕೆಟ್ ಕಬಳಿಸಿದ ಸಿಎಸ್​ಕೆ
    • ಫಿನ್ ಅಲೆನ್ (1) ಹಾಗೂ ಸುನಿಲ್ ನರೈನ್ (24) ವಿಕೆಟ್ ಕಳೆದುಕೊಂಡ ಕೆಕೆಆರ್
    • ಕೆಕೆಆರ್ ತಂಡಕ್ಕೆ 193 ರನ್​ಗಳ ಗುರಿ ನೀಡಿರುವ ಸಿಎಸ್​ಕೆ
  • 14 Apr 2026 09:59 PM (IST)

    CSK vs KKR IPL 2026 Live Score: ಕೆಕೆಆರ್​ ಎರಡನೇ ವಿಕೆಟ್ ಪತನ

    ಖಲೀಲ್ ಅಹ್ಮದ್ ಎಸೆದ 5ನೇ ಓವರ್​ನ 2ನೇ ಎಸೆತದಲ್ಲಿ ಸ್ಲಿಪ್​ನಲ್ಲಿ ಕ್ಯಾಚ್ ನೀಡಿ ಹೊರ ನಡೆದ ಸುನಿಲ್ ನರೈನ್ (24).

    ಎರಡನೇ ವಿಕೆಟ್ ಕಳೆದುಕೊಂಡ ಕೊಲ್ಕತ್ತಾ ನೈಟ್ ರೈಡರ್ಸ್​.

    ಕ್ರೀಸ್​ನಲ್ಲಿ ಅಂಗ್​ಕ್ರಿಶ್ ರಘುವಂಶಿ ಹಾಗೂ ಅಜಿಂಕ್ಯ ರಹಾನೆ ಬ್ಯಾಟಿಂಗ್.

     

  • 14 Apr 2026 09:54 PM (IST)

    CSK vs KKR IPL 2026 Live Score: ಕ್ಯಾಚ್ ಡ್ರಾಪ್

    ಅನ್ಶುಲ್ ಕಂಬೋಜ್ ಎಸೆದ 4ನೇ ಓವರ್​ನ 2ನೇ ಎಸೆತದಲ್ಲಿ ಸುನಿಲ್ ನರೈನ್ ನೀಡಿದ ಸುಲಭ ಕ್ಯಾಚ್ ಕೈಚೆಲ್ಲಿದ ರುತುರಾಜ್ ಗಾಯಕ್ವಾಡ್.

    4 ಓವರ್​ಗಳಲ್ಲಿ 28 ರನ್ ಕಲೆಹಾಕಿರುವ ಕೊಲ್ಕತ್ತಾ ನೈಟ್ ರೈಡರ್ಸ್.

    ಕ್ರೀಸ್​ನಲ್ಲಿ ಅಜಿಂಕ್ಯ ರಹಾನೆ ಹಾಗೂ ಸುನಿಲ್ ನರೈನ್ ಬ್ಯಾಟಿಂಗ್.

     

  • 14 Apr 2026 09:45 PM (IST)

    CSK vs KKR IPL 2026 Live Score: ಕೆಕೆಆರ್​ ಮೊದಲ ವಿಕೆಟ್ ಪತನ

    ಅನ್ಶುಲ್ ಕಂಬೋಜ್ ಎಸೆದ 2ನೇ ಓವರ್​ನ 3ನೇ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಫಿನ್ ಅಲೆನ್ (1).

    ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೊದಲ ವಿಕೆಟ್ ಪತನ.

    ಕ್ರೀಸ್​ನಲ್ಲಿ ಅಜಿಂಕ್ಯ ರಹಾನೆ ಹಾಗೂ ಸುನಿಲ್ ನರೈನ್ ಬ್ಯಾಟಿಂಗ್.

    2 ಓವರ್​ಗಳಲ್ಲಿ 14 ರನ್ ಕಲೆಹಾಕಿ ಒಂದು ವಿಕೆಟ್ ಕಳೆದುಕೊಂಡ ಕೆಕೆಆರ್.

  • 14 Apr 2026 09:41 PM (IST)

    CSK vs KKR IPL 2026 Live Score: ಮೊದಲ ಓವರ್-ಮೊದಲ ಸಿಕ್ಸ್

    1. ಖಲೀಲ್ ಅಹ್ಮದ್ ಎಸೆದ ಮೊದಲ ಓವರ್​ನ ಮೊದಲ ಎಸೆತದಲ್ಲಿ 1 ರನ್ ಕಲೆಹಾಕಿದ ಸುನಿಲ್ ನರೈನ್
    2. ಎರಡನೇ ಎಸೆತದಲ್ಲಿ ಯಾವುದೇ ರನ್ ಇಲ್ಲ
    3. ಮೂರನೇ ಎಸೆತವನ್ನು ಡಾಟ್ ಮಾಡಿದ ಸುನಿಲ್ ನರೈನ್
    4. ನಾಲ್ಕನೇ ಎಸೆತದಲ್ಲೂ ಯಾವುದೇ ರನ್ ಇಲ್ಲ.
    5. ಐದನೇ ಎಸೆತದಲ್ಲಿ ಡೀಪ್ ಮಿಡ್​ ವಿಕೆಟ್​ನತ್ತ ಸಿಕ್ಸ್ ಸಿಡಿಸಿದ ನರೈನ್
    6. ಕೊನೆಯ ಎಸೆತದಲ್ಲಿ ಯಾವುದೇ ರನ್ ಇಲ್ಲ.

    ಮೊದಲ ಓವರ್​ನಲ್ಲಿ 7 ರನ್ ಕಲೆಹಾಕಿದ ಕೆಕೆಆರ್​.

  • 14 Apr 2026 09:36 PM (IST)

    CSK vs KKR IPL 2026 Live Score: ಕೆಕೆಆರ್​ ಇನಿಂಗ್ಸ್ ಆರಂಭ

    • ಕೆಕೆಆರ್ ಆರಂಭಿಕರು: ಫಿನ್ ಅಲೆನ್, ಸುನಿಲ್ ನರೈನ್
    • ಸಿಎಸ್​ಕೆ ಪರ ಮೊದಲ ಓವರ್: ಖಲೀಲ್ ಅಹ್ಮದ್
    • ಕೆಕೆಆರ್​ ತಂಡಕ್ಕೆ 193 ರನ್​ಗಳ ಗುರಿ ನೀಡಿರುವ ಸಿಎಸ್​ಕೆ
  • 14 Apr 2026 09:19 PM (IST)

    CSK vs KKR IPL 2026 Live Score: ಸಿಎಸ್​ಕೆ ಇನಿಂಗ್ಸ್ ಅಂತ್ಯ

    • 20 ಓವರ್​ಗಳಲ್ಲಿ 192 ರನ್​ ಕಲೆಹಾಕಿದ ಚೆನ್ನೈ ಸೂಪರ್ ಕಿಂಗ್ಸ್​
    • ಸಿಎಸ್​ಕೆ ಪರ 32 ಎಸೆತಗಳಲ್ಲಿ 48 ರನ್ ಬಾರಿಸಿದ ಸಂಜು ಸ್ಯಾಮ್ಸನ್.
    • ಕೆಕೆಆರ್ ಪರ 2 ವಿಕೆಟ್ ಕಬಳಿಸಿದ ಕಾರ್ತಿಕ್ ತ್ಯಾಗಿ
    • ಕೆಕೆಆರ್ ತಂಡಕ್ಕೆ 20 ಓವರ್​ಗಳಲ್ಲಿ 193 ರನ್​ಗಳ ಗುರಿ
  • 14 Apr 2026 09:04 PM (IST)

    CSK vs KKR IPL 2026 Live Score: ಸಿಎಸ್​ಕೆ 5ನೇ ವಿಕೆಟ್ ಪತನ

    ಕಾರ್ತಿಕ್ ತ್ಯಾಗಿ ಎಸೆದ 18ನೇ ಓವರ್​ನ 3ನೇ ಎಸೆದಲ್ಲಿ ಸುಲಭ ಕ್ಯಾಚ್ ನೀಡಿದ ಡೆವಾಲ್ಡ್ ಬ್ರೆವಿಸ್ (41).

    ಕ್ರೀಸ್​ನಲ್ಲಿ ಶಿವಂ ದುಬೆ ಹಾಗೂ ಜೇಮಿ ಓವರ್ಟನ್ ಬ್ಯಾಟಿಂಗ್.

    18 ಓವರ್​ಗಳಲ್ಲಿ 175 ರನ್ ಕಲೆಹಾಕಿರುವ ಚೆನ್ನೈ ಸೂಪರ್ ಕಿಂಗ್ಸ್.

     

  • 14 Apr 2026 08:56 PM (IST)

    CSK vs KKR IPL 2026 Live Score: ಸಿಎಸ್​ಕೆ 4ನೇ ವಿಕೆಟ್ ಪತನ

    ಸುನಿಲ್ ನರೈನ್ ಎಸೆದ 17ನೇ ಓವರ್​ನ ಮೊದಲ ಎಸೆತದಲ್ಲೇ ಬೌಲ್ಡ್ ಆದ ಸರ್ಫರಾಝ್ ಖಾನ್ (23).

    ಕ್ರೀಸ್​ನಲ್ಲಿ ಡೆವಾಲ್ಡ್ ಬ್ರೆವಿಸ್ ಹಾಗೂ ಶಿವಂ ದುಬೆ ಬ್ಯಾಟಿಂಗ್.

    17 ಓವರ್​ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 169 ರನ್​ಗಳು.

  • 14 Apr 2026 08:52 PM (IST)

    CSK vs KKR IPL 2026 Live Score: ಸರ್ಫು ಸಿಕ್ಸ್

    ವೈಭವ್ ಅರೋರ ಎಸೆದ 16ನೇ ಓವರ್​ನ 4ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಸರ್ಫರಾಝ್.

    ಸರ್ಫರಾಝ್ ಸಿಕ್ಸರ್​ನೊಂದಿಗೆ ಸಿಎಸ್​ಕೆ ತಂಡದ ಸ್ಕೋರ್ 16 ಓವರ್​ಗಳಲ್ಲಿ 163 ರನ್​ಗಳು.

    ಕ್ರೀಸ್​ನಲ್ಲಿ ಡೆವಾಲ್ಡ್ ಬ್ರೆವಿಸ್ ಹಾಗೂ ಸರ್ಫರಾಝ್ ಬ್ಯಾಟಿಂಗ್.

     

  • 14 Apr 2026 08:39 PM (IST)

    CSK vs KKR IPL 2026 Live Score: 14ನೇ ಓವರ್​ನಲ್ಲಿ 15 ರನ್

    ವರುಣ್ ಚಕ್ರವರ್ತಿ ಎಸೆದ 14ನೇ ಓವರ್​ನ 2ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಸರ್ಫರಾಝ್.

    ಕೊನೆಯ ಎರಡು ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ಡೆವಾಲ್ಡ್ ಬ್ರೆವಿಸ್.

    14 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 136 ರನ್ ಕಲೆಹಾಕಿದ ಸಿಎಸ್​ಕೆ.

     

  • 14 Apr 2026 08:26 PM (IST)

    CSK vs KKR IPL 2026 Live Score: ಸಿಕ್ – ಬೌಲ್ಡ್

    ಕಾರ್ತಿಕ್ ತ್ಯಾಗಿ ಎಸೆದ 12ನೇ ಓವರ್​ನ ಮೊದಲ ಎಸೆತದಲ್ಲೇ ಸ್ಟ್ರೈಟ್ ಹಿಟ್ ಸಿಕ್ಸ್ ಬಾರಿಸಿದ ಸಂಜು ಸ್ಯಾಮ್ಸನ್.

    ಎರಡನೇ ಎಸೆತದಲ್ಲಿ ಸಂಜು ಸ್ಯಾಮ್ಸನ್​ನ​ (48) ಕ್ಲೀನ್ ಬೌಲ್ಡ್ ಮಾಡಿದ ಕಾರ್ತಿಕ್ ತ್ಯಾಗಿ.

    ಕ್ರೀಸ್​ನಲ್ಲಿ ಡೆವಾಲ್ಡ್ ಬ್ರೆವಿಸ್ ಹಾಗೂ ಸರ್ಫರಾಝ್ ಖಾನ್ ಬ್ಯಾಟಿಂಗ್.

    12 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 118 ರನ್ ಕಲೆಹಾಕಿರುವ ಸಿಎಸ್​ಕೆ.

  • 14 Apr 2026 08:19 PM (IST)

    CSK vs KKR IPL 2026 Live Score: 10 ಓವರ್​ ಮುಕ್ತಾಯ

    ಕಾರ್ತಿಕ್ ತ್ಯಾಗಿ ಎಸೆದ 10ನೇ ಓವರ್​ನ 5ನೇ ಎಸೆತದಲ್ಲಿ ಆಫ್ ಸೈಡ್​ನತ್ತ ಆಕರ್ಷಕ ಸಿಕ್ಸ್ ಸಿಡಿಸಿದ ಸಂಜು.

    10 ಓವರ್​ಗಳ ಮುಕ್ತಾಯದ ವೇಳೆಗೆ ಸಿಎಸ್​ಕೆ ತಂಡದ ಸ್ಕೋರ್- 102/2

    ಕ್ರೀಸ್​ನಲ್ಲಿ ಡೆವಾಲ್ಡ್ ಬ್ರೆವಿಸ್ ಹಾಗೂ ಸಂಜು ಸ್ಯಾಮ್ಸನ್ ಬ್ಯಾಟಿಂಗ್.

     

  • 14 Apr 2026 08:10 PM (IST)

    CSK vs KKR IPL 2026 Live Score: ಸಂಜು ಸ್ಯಾಮ್ಸನ್ ಫೋರ್

    ವರುಣ್ ಚಕ್ರವರ್ತಿ ಎಸೆದ 8ನೇ ಓವರ್​ನ 4ನೇ ಎಸೆತದಲ್ಲಿ ಆಫ್​ ಸೈಡ್​ನತ್ತ ಫೋರ್ ಬಾರಿಸಿದ ಸಂಜು ಸ್ಯಾಮ್ಸನ್.

    8 ಓವರ್​ಗಳ ಮುಕ್ತಾಯದ ವೇಳೆಗೆ ಸಿಎಸ್​ಕೆ ಸ್ಕೋರ್ – 89/2

    ಕ್ರೀಸ್​ನಲ್ಲಿ ಸಂಜು ಸ್ಯಾಮ್ಸನ್ ಹಾಗೂ ಡೆವಾಲ್ಡ್ ಬ್ರೆವಿಸ್ ಬ್ಯಾಟಿಂಗ್

  • 14 Apr 2026 07:59 PM (IST)

    CSK vs KKR IPL 2026 Live Score: ಪವರ್​ಪ್ಲೇನಲ್ಲಿ ಸಿಎಸ್​ಕೆ ಪವರ್​ಫುಲ್

    • ವೈಭವ್ ಅರೋರ ಎಸೆದ 6ನೇ ಓವರ್​ನಲ್ಲಿ ಹ್ಯಾಟ್ರಿಕ್ ಫೋರ್ ಬಾರಿಸಿದ ಆಯುಷ್.
    • ಕೊನೆಯ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಆಯುಷ್ (38)
    • 6 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 72 ರನ್​ ಕಲೆಹಾಕಿದ ಚೆನ್ನೈ ಸೂಪರ್ ಕಿಂಗ್ಸ್​
    • ರುತುರಾಜ್ ಗಾಯಕ್ವಾಡ್ (7), ಆಯುಷ್ (38) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ಕೆಕೆಆರ್​.
    • ಕ್ರೀಸ್​ನಲ್ಲಿ ಸಂಜು ಸ್ಯಾಮ್ಸನ್ ಹಾಗೂ ಡೆವಾಲ್ಡ್ ಬ್ರೆವಿಸ್ ಬ್ಯಾಟಿಂಗ್

     

  • 14 Apr 2026 07:54 PM (IST)

    CSK vs KKR IPL 2026 Live Score: ಸಿಕ್ಸರ್ ಸಂಜು

    ಅನುಕುಲ್ ರಾಯ್ ಎಸೆದ 5ನೇ ಓವರ್​ನ ಮೊದಲ ಎಸೆತದಲ್ಲೇ ಸ್ಟೈಟ್ ಹಿಟ್ ಸಿಕ್ಸ್ ಬಾರಿಸಿದ ಸಂಜು ಸ್ಯಾಮ್ಸನ್.

    ಐದು ಓವರ್​ಗಳಲ್ಲಿ 60 ರನ್​ ಕಲೆಹಾಕಿದ ಚೆನ್ನೈ ಸೂಪರ್ ಕಿಂಗ್ಸ್​.

    ಕ್ರೀಸ್​ನಲ್ಲಿ ಆಯುಷ್ ಮತ್ತು ಸಂಜು ಸ್ಯಾಮ್ಸನ್ ಬ್ಯಾಟಿಂಗ್.

  • 14 Apr 2026 07:50 PM (IST)

    CSK vs KKR IPL 2026 Live Score: ಆಯುಷ್ ಅಬ್ಬರ

    ಕ್ಯಾಮರೋನ್ ಗ್ರೀನ್ ಎಸೆದ 4ನೇ ಓವರ್​ನ 2ನೇ ಎಸೆತದಲ್ಲಿ ಫೋರ್ ಬಾರಿಸಿದ ಆಯುಷ್.

    ನಾಲ್ಕನೇ ಎಸೆತದಲ್ಲಿ ಆಯುಷ್ ಬ್ಯಾಟ್​ನಿಂದ ಎಕ್ಸ್​ಟ್ರಾ ಕವರ್​ನತ್ತ ಮತ್ತೊಂದು ಫೋರ್.

    ಐದನೇ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಆಯುಷ್ ಮ್ಹಾತ್ರೆ.

    ಕೊನೆಯ ಎಸೆತದಲ್ಲಿ ಡೀಪ್ ಮಿಡ್​ ವಿಕೆಟ್​ನತ್ತ ಮತ್ತೊಂದು ಸಿಕ್ಸ್ ಬಾರಿಸಿದ ಯುವ ದಾಂಡಿಗ.

    ಕ್ರೀಸ್​ನಲ್ಲಿ ಆಯುಷ್ ಮತ್ತು ಸಂಜು ಸ್ಯಾಮ್ಸನ್ ಬ್ಯಾಟಿಂಗ್.

    4 ಓವರ್​ಗಳ ಮುಕ್ತಾಯದ ವೇಳೆಗೆ ಸಿಎಸ್​ಕೆ ತಂಡದ ಸ್ಕೋರ್ 52/1

  • 14 Apr 2026 07:41 PM (IST)

    CSK vs KKR IPL 2026 Live Score: ಬೌಲಿಂಗ್ ಚೇಂಜ್: ಮೊದಲ ವಿಕೆಟ್

    ಸ್ಪಿನ್ನರ್​ ಅನುಕುಲ್ ರಾಯ್​ಗೆ ಚೆಂಡು ನೀಡಿದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ.

    ಮೂರನೇ ಓವರ್​ನ 2ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ರುತುರಾಜ್ (7). ಸಿಎಸ್​ಕೆ ತಂಡದ ಮೊದಲ ವಿಕೆಟ್ ಪತನ.

    ಕ್ರೀಸ್​ನಲ್ಲಿ ಸಂಜು ಸ್ಯಾಮ್ಸನ್ ಹಾಗೂ ಆಯುಷ್ ಮ್ಹಾತ್ರೆ ಬ್ಯಾಟಿಂಗ್.

    3 ಓವರ್​ಗಳ ಮುಕ್ತಾಯದ ವೇಳೆಗೆ 1 ವಿಕೆಟ್ ಕಳೆದುಕೊಂಡು 31 ರನ್​ ಕಲೆಹಾಕಿದ ಸಿಎಸ್​ಕೆ.

     

  • 14 Apr 2026 07:40 PM (IST)

    CSK vs KKR IPL 2026 Live Score: ಉತ್ತಮ ಆರಂಭ

    ಕ್ಯಾಮರೋನ್ ಗ್ರೀನ್ ಎಸೆದ 2ನೇ ಓವರ್​ನ 2ನೇ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ರುತುರಾಜ್ ಗಾಯಕ್ವಾಡ್.

    2 ಓವರ್​ಗಳ ಮುಕ್ತಾಯದ ವೇಳೆಗೆ ಸಿಎಸ್​ಕೆ ತಂಡದ ಸ್ಕೋರ್ 24

    ಕ್ರೀಸ್​ನಲ್ಲಿ ಸಂಜು ಸ್ಯಾಮ್ಸನ್ ಹಾಗೂ ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್.

     

  • 14 Apr 2026 07:33 PM (IST)

    CSK vs KKR IPL 2026 Live Score: ಹ್ಯಾಟ್ರಿಕ್ ಫೋರ್

    1. ವೈಭವ್ ಅರೋರ ಎಸೆದ ಮೊದಲ ಓವರ್​ನ ಮೊದಲ ಎಸೆತದಲ್ಲಿ ಬ್ಯಾಕ್​ವರ್ಡ್ ಪಾಯಿಂಟ್​ನತ್ತ ಫೋರ್ ಬಾರಿಸಿದ ಸಂಜು ಸ್ಯಾಮ್ಸನ್.
    2. ಎರಡನೇ ಎಸೆತದಲ್ಲಿ ಆಫ್ ಸೈಡ್​ನತ್ತ ಆಕರ್ಷಕ ಫೋರ್ ಸಿಡಿಸಿದ ಸಂಜು ಸ್ಯಾಮ್ಸನ್.
    3. ಮೂರನೇ ಎಸೆತದಲ್ಲಿ ಸಂಜು ಸ್ಯಾಮ್ಸನ್​ ಬ್ಯಾಟ್​ನಿಂದ ಸ್ಲಿಪ್​ ಮೂಲಕ ಮೂರನೇ ಫೋರ್​.
    4. ನಾಲ್ಕನೇ ಎಸೆತದಲ್ಲಿ ಒಂದು ರನ್​.
    5. ಐದನೇ ಎಸೆತದಲ್ಲಿ ರುತುರಾಜ್ ಗಾಯಕ್ವಾಡ್ 1 ರನ್.
    6. ಕೊನೆಯ ಎಸೆತದಲ್ಲಿ ಯಾವುದೇ ರನ್ ಇಲ್ಲ.

    ಮೊದಲ ಓವರ್​ನಲ್ಲಿ 14 ರನ್ ಕಲೆಹಾಕಿದ ಸಿಎಸ್​ಕೆ.

  • 14 Apr 2026 07:31 PM (IST)

    CSK vs KKR IPL 2026 Live Score: ಸಿಎಸ್​ಕೆ ಇನಿಂಗ್ಸ್ ಆರಂಭ

    • ಸಿಎಸ್​ಕೆ ಪರ ಆರಂಭಿಕರು: ಸಂಜು ಸ್ಯಾಮ್ಸನ್, ರುತುರಾಜ್ ಗಾಯಕ್ವಾಡ್
    • ಕೆಕೆಆರ್ ಪರ ಮೊದಲ ಓವರ್​: ವೈಭವ್ ಅರೋರ
    • ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿರುವ ಕೆಕೆಆರ್
  • 14 Apr 2026 07:14 PM (IST)

    CSK vs KKR IPL 2026 Live Score: ಟಾಸ್ ವಿಡಿಯೋ

    ಈ ಪಂದ್ಯದಲ್ಲಿ ಟಾಸ್ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿದೆ. ಅದರಂತೆ ಸಿಎಸ್​ಕೆ ಮೊದಲು ಬ್ಯಾಟ್ ಮಾಡಲಿದೆ.

  • 14 Apr 2026 07:09 PM (IST)

    CSK vs KKR IPL 2026 Live Score: ಕೆಕೆಆರ್ ಪ್ಲೇಯಿಂಗ್ 11

    ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ XI): ಅಜಿಂಕ್ಯ ರಹಾನೆ (ನಾಯಕ), ಕ್ಯಾಮರೋನ್ ಗ್ರೀನ್, ಆಂಗ್​ಕ್ರಿಶ್ ರಘುವಂಶಿ (ವಿಕೆಟ್ ಕೀಪರ್), ರೋವ್​ಮನ್ ಪೊವೆಲ್, ರಿಂಕು ಸಿಂಗ್, ಸುನಿಲ್ ನರೈನ್, ರಮಣ್​ದೀಪ್ ಸಿಂಗ್, ಅನುಕುಲ್ ರಾಯ್, ವರುಣ್ ಚಕ್ರವರ್ತಿ, ವೈಭವ್ ಅರೋರಾ, ಕಾರ್ತಿಕ್ ತ್ಯಾಗಿ.

  • 14 Apr 2026 07:07 PM (IST)

    CSK vs KKR IPL 2026 Live Score: ಸಿಎಸ್​ಕೆ ಪ್ಲೇಯಿಂಗ್ ಇಲೆವೆನ್

    ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್ (ನಾಯಕ), ಆಯುಷ್ ಮ್ಹಾತ್ರೆ, ಸರ್ಫರಾಝ್ ಖಾನ್, ಶಿವಂ ದುಬೆ, ಡೆವಾಲ್ಡ್ ಬ್ರೆವಿಸ್, ಜೇಮಿ ಓವರ್ಟನ್, ನೂರ್ ಅಹ್ಮದ್, ಅನ್ಶುಲ್ ಕಂಬೋಜ್, ಗುರ್ಜಪ್ನೀತ್ ಸಿಂಗ್, ಖಲೀಲ್ ಅಹ್ಮದ್.

  • 14 Apr 2026 07:02 PM (IST)

    CSK vs KKR IPL 2026 Live Score: ಟಾಸ್ ಗೆದ್ದ ಕೆಕೆಆರ್​

    ಈ ಪಂದ್ಯದಲ್ಲಿ ಟಾಸ್ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿದೆ. ಅದರಂತೆ ಸಿಎಸ್​ಕೆ ತಂಡವು ಮೊದಲು ಬ್ಯಾಟ್ ಮಾಡಲಿದೆ.

  • 14 Apr 2026 06:30 PM (IST)

    CSK vs KKR IPL 2026 Live Score: ಕೋಲ್ಕತ್ತಾ ನೈಟ್ ರೈಡರ್ಸ್ ತಂಡ

    ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಅಜಿಂಕ್ಯ ರಹಾನೆ (ನಾಯಕ), ಅಂಗ್​ಕ್ರಿಶ್ ರಘುವಂಶಿ, ಅನುಕುಲ್ ರಾಯ್, ಮನೀಶ್ ಪಾಂಡೆ, ರಮಣದೀಪ್ ಸಿಂಗ್, ರಿಂಕು ಸಿಂಗ್, ರೋವ್​ಮನ್ ಪೊವೆಲ್, ಸುನಿಲ್ ನರೈನ್, ಉಮ್ರಾನ್ ಮಲಿಕ್, ವೈಭವ್ ಅರೋರಾ, ವರುಣ್ ಚಕ್ರವರ್ತಿ, ಕ್ಯಾಮೆರೋನ್ ಗ್ರೀನ್, ಫಿನ್ ಅಲೆನ್, ಮಥೀಶ ಪತಿರಾಣ, ತೇಜಸ್ವಿ ಸಿಂಗ್, ಕಾರ್ತಿಕ್ ತ್ಯಾಗಿ, ಪ್ರಶಾಂತ್ ಸೋಲಂಕಿ, ರಾಹುಲ್ ತ್ರಿಪಾಠಿ, ಟಿಮ್ ಸೈಫರ್ಟ್, ಬ್ಲೆಸ್ಸಿಂಗ್ ಮುಝರಬಾನಿ, ಸಾರ್ಥಕ್ ರಂಜನ್, ದಕ್ಷ್ ಕಮ್ರಾ, ರಚಿನ್ ರವೀಂದ್ರ, ಆಕಾಶ್ ದೀಪ್.

  • 14 Apr 2026 06:29 PM (IST)

    CSK vs KKR IPL 2026 Live Score: ಚೆನ್ನೈ ಸೂಪರ್ ಕಿಂಗ್ಸ್ ತಂಡ

    ಚೆನ್ನೈ ಸೂಪರ್ ಕಿಂಗ್ಸ್ ತಂಡ: ರುತುರಾಜ್ ಗಾಯಕ್‌ವಾಡ್ (ನಾಯಕ), ಆಯುಷ್ ಮ್ಹಾತ್ರೆ, ಎಂಎಸ್ ಧೋನಿ, ಸಂಜು ಸ್ಯಾಮ್ಸನ್, ಡೆವಾಲ್ಡ್ ಬ್ರೆವಿಸ್, ಉರ್ವಿಲ್ ಪಟೇಲ್, ಶಿವಂ ದುಬೆ, ಜೇಮಿ ಓವರ್‌ಟನ್, ರಾಮಕೃಷ್ಣ ಘೋಷ್, ನೂರ್ ಅಹ್ಮದ್, ಖಲೀಲ್ ಅಹ್ಮದ್, ಅನ್ಶುಲ್ ಕಂಬೋಜ್, ಗುರ್ಜಪ್ನೀತ್ ಸಿಂಗ್, ಶ್ರೇಯಸ್ ಗೋಪಾಲ್, ಮುಖೇಶ್ ಚೌಧರಿ, ನಾಥನ್ ಎಲ್ಲಿಸ್, ಅಕೇಲ್ ಹೊಸೈನ್, ಪ್ರಶಾಂತ್ ವೀರ್, ಕಾರ್ತಿಕ್ ಶರ್ಮಾ, ಮ್ಯಾಥ್ಯೂ ಶಾರ್ಟ್, ಅಮನ್ ಖಾನ್, ಸರ್ಫರಾಝ್ ಖಾನ್, ಮ್ಯಾಟ್ ಹೆನ್ರಿ, ರಾಹುಲ್ ಚಹರ್, ಝಾಕ್ ಫೌಲ್ಕ್ಸ್.

  • 14 Apr 2026 06:28 PM (IST)

    CSK vs KKR IPL 2026 Live Score: ರೈಡರ್ಸ್ vs ಕಿಂಗ್ಸ್

  • 14 Apr 2026 06:03 PM (IST)

    CSK vs KKR IPL 2026 Live Score: ಐಪಿಎಲ್​ನ 21 ಪಂದ್ಯಕ್ಕೆ ವೇದಿಕೆ ಸಜ್ಜು

    • ಚೆನ್ನೈ ಸೂಪರ್ ಕಿಂಗ್ಸ್ vs ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿ
    • ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯ
    • ಈವರೆಗೆ ಒಂದೇ ಒಂದು ಮ್ಯಾಚ್ ಗೆಲ್ಲದ ಕೆಕೆಆರ್​
    • ಕೇವಲ ಒಂದು ಪಂದ್ಯ ಮಾತ್ರ ಗೆದ್ದಿರುವ ಸಿಎಸ್​ಕೆ

Published On - 5:59 pm, Tue, 14 April 26

Follow Us