AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

CSK vs SRH IPL 2026 Highlights: ಸಿಎಸ್​ಕೆ ಮಣಿಸಿ ಪ್ಲೇಆಫ್​ಗೇರಿದ ಸನ್​ರೈಸರ್ಸ್​

Chennai Super Kings vs Sunrisers Hyderabad, Highlights: ಇಶಾನ್ ಕಿಶನ್ ಅವರ 70 ರನ್‌ಗಳ ಅದ್ಭುತ ಇನ್ನಿಂಗ್ಸ್ ಮತ್ತು ನಾಯಕ ಪ್ಯಾಟ್ ಕಮ್ಮಿನ್ಸ್ ಅವರ ಅತ್ಯುತ್ತಮ ಬೌಲಿಂಗ್‌ನಿಂದ ಸನ್‌ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅವರ ತವರು ನೆಲದಲ್ಲಿ 5 ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ, ಹೈದರಾಬಾದ್ ಪ್ಲೇಆಫ್‌ಗೆ ಅರ್ಹತೆ ಪಡೆಯಿತು.

CSK vs SRH IPL 2026 Highlights: ಸಿಎಸ್​ಕೆ ಮಣಿಸಿ ಪ್ಲೇಆಫ್​ಗೇರಿದ ಸನ್​ರೈಸರ್ಸ್​
Srh
ಪೃಥ್ವಿಶಂಕರ
|

Updated on:May 18, 2026 | 11:47 PM

Share

ಇಶಾನ್ ಕಿಶನ್ ಅವರ 70 ರನ್‌ಗಳ ಅದ್ಭುತ ಇನ್ನಿಂಗ್ಸ್ ಮತ್ತು ನಾಯಕ ಪ್ಯಾಟ್ ಕಮ್ಮಿನ್ಸ್ ಅವರ ಅತ್ಯುತ್ತಮ ಬೌಲಿಂಗ್‌ನಿಂದ ಸನ್‌ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅವರ ತವರು ನೆಲದಲ್ಲಿ 5 ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ, ಹೈದರಾಬಾದ್ ಪ್ಲೇಆಫ್‌ಗೆ ಅರ್ಹತೆ ಪಡೆಯಿತು. ಇದಲ್ಲದೆ, ಹೈದರಾಬಾದ್ ಗೆಲುವಿನೊಂದಿಗೆ ಗುಜರಾತ್ ಕೂಡ ಪ್ಲೇಆಫ್‌ಗೆ ಅರ್ಹತೆ ಪಡೆಯಿತು. ಆದಾಗ್ಯೂ, ಈ ಸೋಲಿನೊಂದಿಗೆ, ಸಿಎಸ್​ಕೆ ಪ್ಲೇಆಫ್ ತಲುಪುವ ಭರವಸೆ ಅಧಿಕೃತವಾಗಿ ಕೊನೆಗೊಂಡಿತು.

LIVE NEWS & UPDATES

The liveblog has ended.
  • 18 May 2026 11:45 PM (IST)

    CSK vs SRH IPL 2026: ಪ್ಲೇಆಫ್‌ಗೇರಿದ ಸನ್​ರೈಸರ್ಸ್​

    ಹೈದರಾಬಾದ್ ತಂಡವು ಸಿಎಸ್​ಕೆ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಪ್ಲೇಆಫ್‌ಗೇರಿದೆ. ಹೈದರಾಬಾದ್ ತಂಡದ ಗೆಲುವಿನೊಂದಿಗೆ ಗುಜರಾತ್ ಕೂಡ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಇದರರ್ಥ ಈ ಆವೃತ್ತಿಯಲ್ಲಿ ಆರ್​ಸಿಬಿ, ಹೈದರಾಬಾದ್ ಮತ್ತು ಗುಜರಾತ್ ಸೇರಿದಂತೆ ಮೂರು ತಂಡಗಳು ಪ್ಲೇಆಫ್ ತಲುಪಿವೆ. ಈಗ, ಕೇವಲ ಒಂದು ಪ್ಲೇಆಫ್ ಸ್ಥಾನ ಮಾತ್ರ ಉಳಿದಿದೆ.

  • 18 May 2026 11:37 PM (IST)

    CSK vs SRH IPL 2026: ಕಿಶನ್ 70 ರನ್ ಬಾರಿಸಿ ಔಟ್

    ಇಶಾನ್ ಕಿಶನ್ 70 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿ ಔಟಾದರು. ಹೈದರಾಬಾದ್ ಗೆಲುವಿಗೆ 9 ಎಸೆತಗಳಲ್ಲಿ 6 ರನ್ ಗಳ ಅಗತ್ಯವಿದೆ.

  • 18 May 2026 11:37 PM (IST)

    CSK vs SRH IPL 2026: 12 ಎಸೆತಗಳಲ್ಲಿ 13 ರನ್‌ ಬೇಕು

    ಹೈದರಾಬಾದ್ ಗೆಲ್ಲಲು 12 ಎಸೆತಗಳಲ್ಲಿ 13 ರನ್‌ಗಳು ಬೇಕಾಗಿವೆ, ಇದು ಸುಲಭ ಗೆಲುವಿನಂತೆ ಕಾಣುತ್ತಿದೆ. ತಂಡವು 18 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 168 ರನ್‌ಗಳನ್ನು ಗಳಿಸಿದೆ. ಇಶಾನ್ ಪ್ರಸ್ತುತ 70 ರನ್‌ಗಳೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 18 May 2026 11:18 PM (IST)

    CSK vs SRH IPL 2026: ಇಶಾನ್ ಕಿಶನ್ ಅರ್ಧಶತಕ

    ಇಶಾನ್ ಕಿಶನ್ 37 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. ಹೈದರಾಬಾದ್ 16 ಓವರ್‌ಗಳಲ್ಲಿ 3 ವಿಕೆಟ್‌ಗೆ 143 ರನ್ ಗಳಿಸಿದೆ. ಗೆಲ್ಲಲು 24 ಎಸೆತಗಳಲ್ಲಿ 38 ರನ್‌ಗಳು ಬೇಕಾಗಿವೆ.

  • 18 May 2026 10:56 PM (IST)

    CSK vs SRH IPL 2026: ಅರ್ಧಶತಕದ ಜೊತೆಯಾಟ

    ಕ್ಲಾಸೆನ್ ಮತ್ತು ಇಶಾನ್ ಈಗಾಗಲೇ ಅರ್ಧಶತಕದ ಜೊತೆಯಾಟ ನಡೆಸಿದ್ದಾರೆ. ಹೈದರಾಬಾದ್ 13 ಓವರ್‌ಗಳಲ್ಲಿ 2 ವಿಕೆಟ್‌ಗೆ 114 ರನ್ ಗಳಿಸಿದೆ. ಗೆಲ್ಲಲು 42 ಎಸೆತಗಳಲ್ಲಿ 67 ರನ್‌ಗಳು ಬೇಕಾಗಿವೆ.

  • 18 May 2026 10:41 PM (IST)

    CSK vs SRH IPL 2026: 10 ಓವರ್‌ಗಳಲ್ಲಿ 75 ರನ್‌

    ಹೈದರಾಬಾದ್ ಗೆಲ್ಲಲು 60 ಎಸೆತಗಳಲ್ಲಿ 106 ರನ್‌ಗಳ ಅಗತ್ಯವಿದೆ. 10 ಓವರ್‌ಗಳಲ್ಲಿ 2 ವಿಕೆಟ್‌ಗೆ 75 ರನ್‌ಗಳಿಸಿದೆ. ಇಶಾನ್ ಮತ್ತು ಕ್ಲಾಸೆನ್ ಕ್ರೀಸ್‌ನಲ್ಲಿದ್ದಾರೆ.

  • 18 May 2026 10:23 PM (IST)

    CSK vs SRH IPL 2026: 50 ರನ್ ಪೂರ್ಣ

    ಹೈದರಾಬಾದ್ 7 ಓವರ್‌ಗಳಲ್ಲಿ 1 ವಿಕೆಟ್‌ಗೆ 53 ರನ್ ಗಳಿಸಿದೆ. ಇಶಾನ್ ಮತ್ತು ಅಭಿಷೇಕ್ ಎರಡನೇ ವಿಕೆಟ್‌ಗೆ 27 ಎಸೆತಗಳಲ್ಲಿ 35 ರನ್ ಸೇರಿಸಿದ್ದಾರೆ.

  • 18 May 2026 10:02 PM (IST)

    CSK vs SRH IPL 2026: ಹೆಡ್ ಔಟ್

    ಟ್ರಾವಿಸ್ ಹೆಡ್ ಅವರನ್ನು ಮುಖೇಶ್ ಚೌಧರಿ 6 ರನ್‌ಗಳಿಗೆ ಔಟ್ ಮಾಡಿದರು. ಹೈದರಾಬಾದ್ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ತಂಡವು 3 ಓವರ್‌ಗಳಲ್ಲಿ 1 ವಿಕೆಟ್‌ಗೆ 19 ರನ್ ಗಳಿಸಿದೆ.

  • 18 May 2026 10:01 PM (IST)

    CSK vs SRH IPL 2026: 2 ಓವರ್ ಪೂರ್ಣ

    ಸ್ಪೆನ್ಸರ್ ಜಾನ್ಸನ್ 2ನೇ ಓವರ್​ನಲ್ಲಿ ಕೇವಲ 5 ರನ್ ನೀಡಿದರು. ಹೈದರಾಬಾದ್ ತಂಡವು 2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 15 ರನ್ ಗಳಿಸಿದೆ.

  • 18 May 2026 09:31 PM (IST)

    CSK vs SRH IPL 2026: 181 ರನ್‌ಗಳ ಗುರಿ

    ಸಿಎಸ್​ಕೆ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 180 ರನ್ ಗಳಿಸಿದೆ. ಹೈದರಾಬಾದ್ ಗೆಲ್ಲಲು ಈಗ 181 ರನ್‌ಗಳ ಅಗತ್ಯವಿದೆ. ಪ್ಯಾಟ್ ಕಮ್ಮಿನ್ಸ್ ಅದ್ಭುತ ಬೌಲಿಂಗ್ ಮಾಡಿ 3 ವಿಕೆಟ್‌ಗಳನ್ನು ಕಬಳಿಸಿದರೆ, CSK ಪರ ಬ್ರೆವಿಸ್ 44 ರನ್‌ಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡರು.

  • 18 May 2026 09:21 PM (IST)

    CSK vs SRH IPL 2026: ಕಮ್ಮಿನ್ಸ್​ಗೆ 3 ವಿಕೆಟ್

    ಪ್ಯಾಟ್ ಕಮ್ಮಿನ್ಸ್ 4 ಓವರ್‌ಗಳಲ್ಲಿ 28 ರನ್‌ಗಳಿಗೆ 3 ವಿಕೆಟ್ ಪಡೆದರು. ಸಿಎಸ್​ಕೆ 16 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 144 ರನ್ ಗಳಿಸಿದೆ.

  • 18 May 2026 08:52 PM (IST)

    CSK vs SRH IPL 2026: 14 ಓವರ್‌ಗಳು ಪೂರ್ಣ

    ನಿತೀಶ್ ರೆಡ್ಡಿ ಎಸೆದ 14ನೇ ಓವರ್​ನಲ್ಲಿ 18 ರನ್ ಬಂದವು. ಸಿಎಸ್‌ಕೆ 14 ಓವರ್‌ಗಳಲ್ಲಿ 4 ವಿಕೆಟ್‌ಗೆ 122 ರನ್ ಗಳಿಸಿದೆ.

  • 18 May 2026 08:51 PM (IST)

    CSK vs SRH IPL 2026: ರುತುರಾಜ್ ಗಾಯಕ್ವಾಡ್ ಔಟ್

    ರುತುರಾಜ್ ಗಾಯಕ್ವಾಡ್ ಕೇಲವ 15 ರನ್ ಗಳಿಸಿ ಔಟಾದರು. ಸಿಎಸ್​ಕೆ 12 ಓವರ್‌ಗಳಲ್ಲಿ 4 ವಿಕೆಟ್‌ಗೆ 100 ರನ್ ಗಳಿಸಿದೆ.

  • 18 May 2026 08:25 PM (IST)

    CSK vs SRH IPL 2026: 8 ಓವರ್​ಗಳು ಪೂರ್ಣ

    ಹೈದರಾಬಾದ್ ಪರ ಪ್ರಫುಲ್ 8ನೇ ಓವರ್ ಎಸೆದರು. ಈ ಓವರ್‌ನಲ್ಲಿ ಒಟ್ಟು 18 ರನ್‌ಗಳು ಬಂದವು. ಸಿಎಸ್‌ಕೆ 8 ಓವರ್‌ಗಳಲ್ಲಿ 2 ವಿಕೆಟ್‌ಗೆ 79 ರನ್ ಗಳಿಸಿದೆ.

  • 18 May 2026 08:16 PM (IST)

    CSK vs SRH IPL 2026: 6 ಓವರ್‌ಗಳಲ್ಲಿ 57 ರನ್‌

    ಸಿಎಸ್‌ಕೆ ಮೊದಲ 6 ಓವರ್‌ಗಳಲ್ಲಿ 2 ವಿಕೆಟ್‌ಗೆ 57 ರನ್‌ಗಳಿಸಿದೆ. ಕಾರ್ತಿಕ್ ಶರ್ಮಾ ಪ್ರಸ್ತುತ ರುತುರಾಜ್ ಗಾಯಕ್ವಾಡ್ ಅವರೊಂದಿಗೆ ಕ್ರೀಸ್‌ನಲ್ಲಿದ್ದಾರೆ.

  • 18 May 2026 08:00 PM (IST)

    CSK vs SRH IPL 2026: ಸಂಜು ಔಟ್

    ಉತ್ತಮ ಫಾರ್ಮ್‌ನಲ್ಲಿದ್ದ ಸಂಜು ಸ್ಯಾಮ್ಸನ್ 27 ರನ್‌ಗಳಿಗೆ ಔಟಾದರು. ಸಿಎಸ್​ಕೆ ತಂಡದ ಮೊದಲ ವಿಕೆಟ್ ಪತನವಾಯಿತು. ಉರ್ವಿಲ್ ಪಟೇಲ್ ಕ್ರೀಸ್‌ಗೆ ಬಂದಿದ್ದಾರೆ.

  • 18 May 2026 07:34 PM (IST)

    CSK vs SRH IPL 2026: ಸನ್​ರೈಸರ್ಸ್​

    ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹೆನ್ರಿಚ್ ಕ್ಲಾಸೆನ್, ಸಲೀಲ್ ಅರೋರಾ, ಸ್ಮರಣ್ ರವಿಚಂದ್ರನ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮಿನ್ಸ್ (ನಾಯಕ), ಶಿವಂಗ್ ಕುಮಾರ್, ಇಶಾನ್ ಮಾಲಿಂಗ, ಸಾಕಿಬ್ ಹುಸೇನ್, ಪ್ರಫುಲ್ ಹಿಂಗೆ.

  • 18 May 2026 07:33 PM (IST)

    CSK vs SRH IPL 2026: ಸಿಎಸ್​ಕೆ ತಂಡ

    ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್ (ನಾಯಕ), ಉರ್ವಿಲ್ ಪಟೇಲ್, ಕಾರ್ತಿಕ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಪ್ರಶಾಂತ್ ವೀರ್, ಅಕೇಲ್ ಹೊಸೈನ್, ನೂರ್ ಅಹ್ಮದ್, ಅನ್ಶುಲ್ ಕಾಂಬೋಜ್, ಸ್ಪೆನ್ಸರ್ ಜಾನ್ಸನ್.

  • 18 May 2026 07:25 PM (IST)

    CSK vs SRH IPL 2026: ಟಾಸ್ ಗೆದ್ದ ಸಿಎಸ್​ಕೆ

    ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್​ಕೆ ಬ್ಯಾಟಿಂಗ್ ಆಯ್ದುಕೊಂಡಿದೆ.

Published On - May 18,2026 7:25 PM

Follow Us
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಸಮನ್ಸ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಸಮನ್ಸ್
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ
ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ
ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ
ಭಾಮಾ ಹರೀಶ್ ಪುತ್ರ ನಿಧನ: ನಡೆದಿದ್ದೇನೆಂದು ವಿವರಿಸಿದ ಚಿಕ್ಕಪ್ಪ
ಭಾಮಾ ಹರೀಶ್ ಪುತ್ರ ನಿಧನ: ನಡೆದಿದ್ದೇನೆಂದು ವಿವರಿಸಿದ ಚಿಕ್ಕಪ್ಪ
ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್
ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!
ಬೆಳಗಾವಿ ಮೂಲದ ಶಾಸಕನಿಂದ ಅಡ್ಡಮತದಾನ ಶಂಕೆ, ಬಿಜೆಪಿಯಲ್ಲಿ ಸಂಚಲನ
ಬೆಳಗಾವಿ ಮೂಲದ ಶಾಸಕನಿಂದ ಅಡ್ಡಮತದಾನ ಶಂಕೆ, ಬಿಜೆಪಿಯಲ್ಲಿ ಸಂಚಲನ
ಬಿಜೆಪಿ ನಾಯಕರ ಮಧ್ಯೆಯೇ ಜೋರಾದ ವಾಗ್ಯುದ್ಧ!
ಬಿಜೆಪಿ ನಾಯಕರ ಮಧ್ಯೆಯೇ ಜೋರಾದ ವಾಗ್ಯುದ್ಧ!