ಪಂದ್ಯ ಆರಂಭಕ್ಕೂ ಮೊದಲೇ ಆರ್ಸಿಬಿಗೆ ಬಿಗ್ ಶಾಕ್; ಈ ಸ್ಟಾರ್ ಪ್ಲೇಯರ್ ಡೌಟ್
CKS Vs RCB: ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಚೆನ್ನೈನಲ್ಲಿ ಮುಖಾಮುಖಿಯಾಗಲಿವೆ. ಭುವನೇಶ್ವರ್ ಕುಮಾರ್ ಅವರ ಗಾಯದಿಂದ ಆರ್ಸಿಬಿಗೆ ಆತಂಕ ಎದುರಾಗಿದೆ. ಚೆಪಾಕ್‌ನಲ್ಲಿ ಆರ್ಸಿಬಿ ಈವರೆಗೆ ಗೆದ್ದಿರೋದು ಒಂದೇ ಪಂದ್ಯ. ಹೀಗಾಗಿ ಇದು ಸವಾಲಾಗಿ ಪರಿಣಮಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂದು (ಮಾರ್ಚ್ 28) ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಮುಖಾ ಮುಖಿ ಆಗುತ್ತಿವೆ. ಕಳೆದ ಸೀಸನ್ನಲ್ಲಿ ಚೆನ್ನೈ ತಂಡವನ್ನು ಸೋಲಿಸಿ ಆರ್ಸಿಬಿ ಕ್ವಾಲಿಫೈಯರ್ ಪಂದ್ಯಕ್ಕೆ ಅವಕಾಶ ಪಡೆಯಿತು. ಈ ಸೇಡನ್ನು ಚೆನ್ನೈ ತೀರಿಸಿಕೊಳ್ಳಲು ಸಂಚು ರೂಪಿಸಿದೆ. ಇತ್ತ ಆರ್ಸಿಬಿ ತಂಡವು ಇದಕ್ಕೆ ಪ್ರತಿ ತಂತ್ರ ರೂಪಿಸಿದೆ. ರಾತ್ರಿ 7 ಗಂಟೆಗೆ ಟಾಸ್ ನಡೆಯಲಿದ್ದು, 7.30ಕ್ಕೆ ಪಂದ್ಯ ಆರಂಭ ಆಗಲಿದೆ.
ಇಂದಿನ ಪಂದ್ಯದಲ್ಲೂ ಆರ್ಸಿಬಿ ವೇಗಿ ಭುವನೇಶ್ವರ್ ಕುಮಾರ್ ಅವರು ಆಡೋದು ಅನುಮಾನ ಎಂದೇ ಹೇಳಲಾಗುತ್ತಿದೆ. ಗಾಯದ ಸಮಸ್ಯೆಯಿಂದ ಅವರು ಹಿಂದಿನ ಪಂದ್ಯದಲ್ಲೂ ಇರಲಿಲ್ಲ. ಈ ಪಂದ್ಯದಲ್ಲೂ ಅವರ ಇರುವಿಕೆ ಇನ್ನೂ ಖಚಿತವಾಗಿಲ್ಲ. ಸ್ಟಾರ್ ಬೌಲರ್ ಇಲ್ಲದೆ ಇರುವುದು ಆರ್ಸಿಬಿಗೆ ಕಷ್ಟ ಆಗಲಿದೆ.
ಭುವನೇಶ್ವರ್ ಕುಮಾರ್ ಬದಲು ರಸಿಕ್ ದಾರ್ ಸಲಾಮ್ ಅವರು ಬಂದಿದ್ದರು. ಅವರು ಕಳೆದ ಪಂದ್ಯದಲ್ಲಿ ಕೊಂಚ ದುಬಾರಿಯೇ ಆಗಿದ್ದರು. ಆದಾರೆ, ಭುವನೇಶ್ವರ್ ಅವರು ಫಿಟ್ ಆಗಿಲ್ಲ ಎಂದರೆ ರಸಿಕ್ ಅವರಿಗೆ ಅವಕಾಶ ಸಿಗೋದು ಪಕ್ಕಾ ಎನ್ನಲಾಗುತ್ತಿದೆ. ಟಾಸ್ ಬಳಿಕವೇ ಅವರ ಇರುವಿಕೆ ಖಾತ್ರಿ ಆಗಲಿದೆ.
ಸ್ವಪ್ನಿಲ್ ಸಿಂಗ್ ಅವರನ್ನು ಕೂಡ ಒಂದು ಆಯ್ಕೆ ಆಗಿ ಆರ್ಸಿಬಿ ಇಟ್ಟುಕೊಂಡಿದೆ. ಅವರು ಕಳೆದ ಸೀಸನ್ನಲ್ಲಿ ಉತ್ತಮ ಆಟ ಪ್ರದರ್ಶನ ನೀಡಿದ್ದರು. ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಅವಕಾಶ ಆರ್ಸಿಬಿಗೆ ಇದೆ. ಭುವನೇಶ್ವರ್ ಬೇಗ ರಿಕವರಿ ಆದರೆ ಆರ್ಸಿಬಿಗೆ ಬಲ ಸಿಕ್ಕಂತೆ ಆಗಲಿದೆ.
ಭುವನೇಶ್ವರ್ ಕುಮಾರ್ ರೆಕಾರ್ಡ್
ಭುವನೇಶ್ವರ್ ಕುಮಾರ್ ಅವರು ಸಿಎಸ್ಕೆ ವಿರುದ್ಧ ಒಳ್ಳೆಯ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಚೆನ್ನೈ ವಿರುದ್ಧ ಆಡಿರುವ 20 ಪಂದ್ಯಗಳಲ್ಲಿ 13 ವಿಕೆಟ್ ತೆಗೆದಿರುವ ಅವರು, 6.90 ಎಕಾನಮಿ ಹೊಂದಿದ್ದಾರೆ. ಹೀಗಾಗಿ, ಹೆಚ್ಚು ವಿಕೆಟ್ ಕೀಳದೇ ಇದ್ದರೂ ರನ್ ನಿಯಂತ್ರಣ ತಂಡಕ್ಕೆ ಸಹಕಾರಿ ಆಗಲಿದೆ. ಪವರ್ಪ್ಲೇನ್ಲ್ಲಿ ಎರಡು ಓವರ್ನ ಭುವನೇಶ್ವರ್ ಮಾಡಿದರೆ ಚೆನ್ನೈನ ಕಡಿಮೆ ಮೊತ್ತಕ್ಕೆ ಕಟ್ಟು ಹಾಕಬಹುದು.
ಇದನ್ನೂ ಓದಿ: ನೋವು, ಬೇಸರ, ಹತಾಶೆ; ಹೈದರಾಬಾದ್ ಸೋಲು ಕಂಡಾಗ ಕಾವ್ಯಾ ಮಾರನ್ ಎಕ್ಸ್ಪ್ರೆಷನ್ ನೋಡಿ
ಚೆಪಾಕ್ ಸ್ಟೇಡಿಯಂನಲ್ಲಿ ಆರ್ಸಿಬಿ ಆಡಲು ತುಂಬಾನೇ ಕಷ್ಟಪಡುತ್ತಿದೆ. ಈ ಸ್ಟೇಡಿಯಂನಲ್ಲಿ ಆರ್ಸಿಬಿ ವಿನ್ ಆಗಿದ್ದರು 2008ರಲ್ಲೇ ಕೊನೆ! ಆ ಬಳಿಕ ತಂಡಕ್ಕೆ ಇಲ್ಲಿ ಗೆಲುವು ಸಿಕ್ಕೇ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:47 am, Fri, 28 March 25