
ಆಸ್ಟ್ರೇಲಿಯಾ (Australia) ತಂಡದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್ (David Warner) ಸೋಷಿಯಲ್ ಮೀಡಿಯಾದಲ್ಲಿ ನಾನಾ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಬಾಲಿವುಡ್ ಬಾದ್ಷಾ ಶಾರೂಖ್ ಖಾನ್ ಅಭಿನಯದ ಪಠಾಣ್ ಲುಕ್ನಲ್ಲಿ ವಿಡಿಯೋ ಹಂಚಿಕೊಂಡಿದ್ದ ವಾರ್ನರ್ ಇದೀಗ ಸೌತ್ ಸ್ಟಾರ್ ರೂಪದಲ್ಲಿ ಎಲ್ಲರ ಗಮನ ಸೆಳೆದಿರುವುದು ವಿಶೇಷ.
ಡೇವಿಡ್ ವಾರ್ನರ್ ತಮಿಳಿನ ವಿಕ್ರಮ್ ಅಭಿನಯದ ಸೂಪರ್ ಹಿಟ್ ಚಿತ್ರ ಐ ಸಿನಿಮಾದ ದೃಶ್ಯವೊಂದರ ಕ್ಲಿಪ್ವೊಂದಕ್ಕೆ ಫೇಸ್-ಸ್ವಾಪ್ ಮಾಡಿದ್ದಾರೆ. ವಿಶೇಷ ಎಂದರೆ ಆಸೀಸ್ ಕ್ರಿಕೆಟಿಗ ಹೀಗೆ ಫೇಸ್ ಸ್ವಾಪ್ ಮಾಡಿರುವು ಐ ಚಿತ್ರದ ಹೈಲೇಟ್ಗಳಲ್ಲಿ ಒಂದಾಗಿರುವ ಜಿಮ್ ಫೈಟ್ ಸೀಸನ್ನಲ್ಲಿ. ಇದುವೇ ಈಗ ಎಲ್ಲರ ಆಕರ್ಷಣೆಗೆ ಕಾರಣವಾಗಿದೆ.
ಮೂಲ ಚಿತ್ರದಲ್ಲಿ ನಟ ವಿಕ್ರಮ್ ಜಿಮ್ ಮಾಡುತ್ತಿರುವ ವೇಳೆ ವಿಲನ್ಗಳ ಜೊತೆ ಫೈಟಿಂಗ್ ನಡೆಯುತ್ತದೆ. ಅದೇ ದೃಶ್ಯಕ್ಕೆ ಡೇವಿಡ್ ವಾರ್ನರ್ ಮುಖಚಹರೆ ಎಡಿಟ್ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ಆಸ್ಟ್ರೇಲಿಯಾ ಆಟಗಾರ ಇನ್ಸ್ಟಾಗ್ರಾಮ್ ಸೇರಿದಂತೆ ಪ್ರಮುಖ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
ಇದೀಗ ವಾರ್ನರ್ ಅವರ ಹೊಸ ಅವತಾರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ನಾನಾ ರೀತಿಯಲ್ಲಿ ಕಾಲೆಳೆಯುವ ಕಮೆಂಟ್ಗಳನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ.
ಬಾರ್ಡರ್-ಗವಾಸ್ಕರ್ ಸರಣಿಯಿಂದ ಔಟ್:
ಭಾರತ-ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಿಂದ ಡೇವಿಡ್ ವಾರ್ನರ್ ಹೊರಗುಳಿದಿದ್ದಾರೆ. 2ನೇ ಟೆಸ್ಟ್ ಪಂದ್ಯದ ವೇಳೆ ಕೈಗೆ ಗಾಯ ಮಾಡಿಕೊಂಡಿರುವ ವಾರ್ನರ್ ಇದೀಗ ಆಸ್ಟ್ರೇಲಿಯಾಗೆ ಮರಳಿದ್ದಾರೆ. ಹೀಗಾಗಿ ಮೂರನೇ ಹಾಗೂ ನಾಲ್ಕನೇ ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಕಾಣಿಸಿಕೊಳ್ಳುವುದಿಲ್ಲ. ಇದಾಗ್ಯೂ ಟೀಮ್ ಇಂಡಿಯಾ ವಿರುದ್ಧದ ಏಕದಿನ ಸರಣಿಯ ಮೂಲಕ ಡೇವಿಡ್ ವಾರ್ನರ್ ಕಂಬ್ಯಾಕ್ ಮಾಡಲಿದ್ದಾರೆ.