AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ‘ಎ’ ತಂಡ ಪ್ರಕಟ: ಕೆಎಲ್ ರಾಹುಲ್, ಪಡಿಕ್ಕಲ್, ಜೈಸ್ವಾಲ್​​ಗೆ ಸ್ಥಾನ!

ಭಾರತ ‘ಎ’ ಮತ್ತು ನ್ಯೂಝಿಲೆಂಡ್ ‘ಎ’ ನಡುವಣ 3 ಪಂದ್ಯಗಳ ಟೆಸ್ಟ್ ಸರಣಿ ಅಕ್ಟೋಬರ್ 24 ರಿಂದ ಶುರುವಾಗಲಿದೆ. ಕಿವೀಸ್ ನಾಡಿನಲ್ಲಿ ನಡೆಯಲಿರುವ ಈ ಸರಣಿಗಾಗಿ ಬಲಿಷ್ಠ ಭಾರತ ‘ಎ’ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಕರ್ನಾಟಕದ ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್ ಹಾಗೂ ಸ್ಮರಣ್ ರವಿಚಂದ್ರನ್ ಕಾಣಿಸಿಕೊಂಡಿರುವುದು ವಿಶೇಷ.

ಭಾರತ 'ಎ' ತಂಡ ಪ್ರಕಟ: ಕೆಎಲ್ ರಾಹುಲ್, ಪಡಿಕ್ಕಲ್, ಜೈಸ್ವಾಲ್​​ಗೆ ಸ್ಥಾನ!
Team India Image Credit source: GettyImages
ಝಾಹಿರ್ ಯೂಸುಫ್
|

Updated on: Oct 07, 2026 | 11:58 AM

Share

ಮುಂಬರುವ ನ್ಯೂಝಿಲೆಂಡ್ ಎ ವಿರುದ್ಧದ ಸರಣಿಗಾಗಿ ಭಾರತ ‘ಎ’ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರನ್ನೊಳಗೊಂಡಿರುವ ಈ ತಂಡವನ್ನು ಧ್ರುವ್ ಜುರೆಲ್ ಮುನ್ನಡೆಸಲಿದ್ದಾರೆ. ಇನ್ನು ಈ ತಂಡದಲ್ಲಿ ಭಾರತ ಟೆಸ್ಟ್ ತಂಡದ ಸ್ಟಾರ್ ಆಟಗಾರರಾದ ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ವಾಷಿಂಗ್ಟನ್ ಸುಂದರ್ ಹಾಗೂ ಸಾಯಿ ಸುದರ್ಶನ್ ಕಾಣಿಸಿಕೊಂಡಿರುವುದು ವಿಶೇಷ.

ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್​ ಸರಣಿಗೂ ಮುನ್ನ ಅಲ್ಲಿನ ಪಿಚ್ ಹಾಗೂ ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಮತ್ತು ಉತ್ತಮ ಅಭ್ಯಾಸ ಪಡೆಯಲು ಟೀಮ್ ಇಂಡಿಯಾ ಆಟಗಾರರನ್ನು ಭಾರತ ಎ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅದರಂತೆ ನ್ಯೂಝಿಲೆಂಡ್ ಎ ವಿರುದ್ಧದ ಸರಣಿಯಲ್ಲಿ ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ಯಶಸ್ವಿ ಜೈಸ್ವಾಲ್, ವಾಷಿಂಗ್ಟನ್ ಸುಂದರ್ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

ರಿಷಭ್ ಪಂತ್ ಆಯ್ಕೆ:

15 ಸದಸ್ಯರ ಭಾರತ ‘ಎ’ ತಂಡಕ್ಕೆ ವಿಕೆಟ್‌ಕೀಪರ್ ಆಗಿ ರಿಷಭ್ ಪಂತ್ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ, ಬಿಸಿಸಿಐ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿರುವಂತೆ, ಇತ್ತೀಚಿನ ಫಿಟ್ನೆಸ್ ಸಮಸ್ಯೆಗಳ ಕಾರಣದಿಂದಾಗಿ ಅವರ ಭಾಗವಹಿಸುವಿಕೆಯು ಸಂಪೂರ್ಣವಾಗಿ ಅವರ ಫಿಟ್​ನೆಸ್​ ಕ್ಲಿಯರೆನ್ಸ್ ಮೇಲೆ ಅವಲಂಬಿತವಾಗಿದೆ. ಅಂದರೆ ಸಂಪೂರ್ಣ ಫಿಟ್ ಆಗಿರುವುದು ದೃಢಪಟ್ಟರೆ ಮಾತ್ರ ನ್ಯೂಝಿಲೆಂಡ್‌ನಲ್ಲಿ ಪಂದ್ಯಗಳನ್ನು ಆಡಲಿದ್ದಾರೆ.

ದೇಶಿ ಕ್ರಿಕೆಟ್ ತಾರೆಗಳಿಗೂ ಮನ್ನಣೆ:

ಈ ಬಾರಿಯ ತಂಡದಲ್ಲಿ ದೇಶಿ ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಯುವ ಆಟಗಾರರಾದ ರವಿಚಂದ್ರನ್ ಸ್ಮರಣ್ ಮತ್ತು ವಿದರ್ಭದ ಬ್ಯಾಟರ್ ಯಶ್ ರಾಥೋಡ್ ಅವರಿಗೆ ಸ್ಥಾನ ಕಲ್ಪಿಸಲಾಗಿದೆ. ಇವರೊಂದಿಗೆ ಎಡಗೈ ವೇಗಿ ಮುಖೇಶ್ ಚೌಧರಿ ಕೂಡ ತಂಡಕ್ಕೆ ಮರಳಿದ್ದಾರೆ.

ಇನ್ನುಳಿದಂತೆ ಜಮ್ಮು-ಕಾಶ್ಮೀರದ ವೇಗಿ ಆಖಿಬ್ ನಬಿ, ಟೀಮ್ ಇಂಡಿಯಾದ ಪ್ರಮುಖ ವೇಗದ ಬೌಲರ್‌ಗಳಾದ ಮುಖೇಶ್ ಕುಮಾರ್ ಮತ್ತು ಆಕಾಶ್ ದೀಪ್ ಬೌಲಿಂಗ್ ವಿಭಾಗ ಮುನ್ನಡೆಸಲಿದ್ದಾರೆ. ಹಾಗೆಯೇ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಮತ್ತು ಸ್ಪಿನ್ನರ್ ಮಾನವ್ ಸುತಾರ್ ಅವರಿಗೂ ತಂಡದಲ್ಲಿ ಅವಕಾಶ ನೀಡಲಾಗಿದೆ. ಅದರಂತೆ ಭಾರತ ಎ ತಂಡ ಈ ಕೆಳಗಿನಂತಿದೆ…

ಭಾರತ ‘ಎ’ ತಂಡ: ಧ್ರುವ್ ಜುರೆಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ರವಿಚಂದ್ರನ್ ಸ್ಮರಣ್, ಯಶ್ ರಾಥೋಡ್, ರಿಷಭ್ ಪಂತ್ (ವಿಕೆಟ್‌ಕೀಪರ್), ವಾಷಿಂಗ್ಟನ್ ಸುಂದರ್, ಮಾನವ್ ಸುತಾರ್, ಆಕಾಶ್ ದೀಪ್, ಮುಖೇಶ್ ಕುಮಾರ್, ಅನ್ಶುಲ್ ಕಂಬೋಜ್, ಮುಖೇಶ್ ಚೌಧರಿ, ಆಖಿಬ್ ನಬಿ.

ಇದನ್ನೂ ಓದಿ: ಭಾರತ ಟಿ20 ತಂಡದಿಂದ ಐವರು ಔಟ್!

ಭಾರತ ‘ಎ’ vs ನ್ಯೂಝಿಲೆಂಡ್ ‘ಎ’ ವೇಳಾಪಟ್ಟಿ:

ಭಾರತ ‘ಎ’ ಮತ್ತು ನ್ಯೂಝಿಲೆಂಡ್ ‘ಎ’ ನಡುವೆ ಒಟ್ಟು ಮೂರು ಅನಧಿಕೃತ ಟೆಸ್ಟ್ (ಮಲ್ಟಿ-ಡೇ) ಪಂದ್ಯಗಳು ನಡೆಯಲಿದೆ. ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಿರಿಯರ ತಂಡಗಳು ಆಡುವ ಅಧಿಕೃತ ಟೆಸ್ಟ್ ಪಂದ್ಯಗಳು 5 ದಿನಗಳ ಕಾಲ ನಡೆಯುತ್ತವೆ. ಆದರೆ, ಭಾರತ ‘ಎ’ ಮತ್ತು ನ್ಯೂಝಿಲೆಂಡ್ ‘ಎ’ ನಡುವೆ ನಡೆಯುವ ಈ ಟೆಸ್ಟ್ ಪಂದ್ಯಗಳನ್ನು 4 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಈ ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ…

  1.  ಮೊದಲ ಪಂದ್ಯ: ಅಕ್ಟೋಬರ್ 24 ರಿಂದ 27 (ಲಿಂಕನ್)
  2. ಎರಡನೇ ಪಂದ್ಯ: ಅಕ್ಟೋಬರ್ 31 ರಿಂದ ನವೆಂಬರ್ 3 (ಕ್ರೈಸ್ಟ್‌ಚರ್ಚ್)
  3. ಮೂರನೇ ಪಂದ್ಯ: ನವೆಂಬರ್ 7 ರಿಂದ 10 (ಲಿಂಕನ್)

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
4 ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ 4 ರೈಲುಗಳು!
4 ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ 4 ರೈಲುಗಳು!
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ
ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ಆಹಾರದಾಸೆಗೆ ಕಾರಿನ ಮೇಲೆ ಕಾಲಿಟ್ಟ ಕಾಡಾನೆ! ಪ್ರಯಾಣಿಕರು ಜಸ್ಟ್ ಮಿಸ್
ಆಹಾರದಾಸೆಗೆ ಕಾರಿನ ಮೇಲೆ ಕಾಲಿಟ್ಟ ಕಾಡಾನೆ! ಪ್ರಯಾಣಿಕರು ಜಸ್ಟ್ ಮಿಸ್
‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’; ಯಶಸ್ ವಿರುದ್ಧ ಮಿತಿಮೀರಿದ ಮಂಜು ಮಾತು
‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’; ಯಶಸ್ ವಿರುದ್ಧ ಮಿತಿಮೀರಿದ ಮಂಜು ಮಾತು
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಆಡಳಿತ: ಒಂದು ಅವಲೋಕನ
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಆಡಳಿತ: ಒಂದು ಅವಲೋಕನ
ರಾಜ್ಯ ಸರ್ಕಾರಕ್ಕೆ 2000 ರೂ. ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್!
ರಾಜ್ಯ ಸರ್ಕಾರಕ್ಕೆ 2000 ರೂ. ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್!
ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಕಿರಿಕಿರಿಯ ಸಾಧ್ಯತೆ
ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಕಿರಿಕಿರಿಯ ಸಾಧ್ಯತೆ