Sign In

By signing in or creating an account, you agree with Associated Broadcasting Company's Terms & Conditions and Privacy Policy.

DC vs LSG ಟರ್ನಿಂಗ್ ಪಾಯಿಂಟ್: 15 ಎಸೆತಗಳಲ್ಲಿ ಲಕ್ನೋ ಸೋಲಿನ ಕಥೆ ಬರೆದ ಯುಪಿ ಹುಡುಗ ವಿಪ್ರಾಜ್ ನಿಗಮ್

Vipraj Nigam, IPL 2025: ಡೆಲ್ಲಿ ಕ್ಯಾಪಿಟಲ್ಸ್ ತಂಡದ 6 ಬ್ಯಾಟ್ಸ್‌ಮನ್‌ಗಳು ಔಟಾದರು. ತಂಡದ ಗೆಲುವಿಗೆ ಇನ್ನೂ 97 ರನ್‌ಗಳು ಬೇಕಾಗಿದ್ದವು ಮತ್ತು ಕೇವಲ 45 ಎಸೆತಗಳು ಮಾತ್ರ ಉಳಿದಿದ್ದವು. ಅಶುತೋಷ್ ಶರ್ಮಾ ಒಂದು ತುದಿಯಲ್ಲಿದ್ದರೆ ಈ ಸಂದರ್ಭ ಬ್ಯಾಟಿಂಗ್ ಮಾಡಲು ಬಂದಿದ್ದು ವಿಪ್ರಾಜ್ ನಿಗಮ್. ಇದು ವಿಪ್ರರಾಜ್ ಅವರ ಚೊಚ್ಚಲ ಪಂದ್ಯ ಕೂಡ.

DC vs LSG ಟರ್ನಿಂಗ್ ಪಾಯಿಂಟ್: 15 ಎಸೆತಗಳಲ್ಲಿ ಲಕ್ನೋ ಸೋಲಿನ ಕಥೆ ಬರೆದ ಯುಪಿ ಹುಡುಗ ವಿಪ್ರಾಜ್ ನಿಗಮ್
Vipraj Nigam
Follow us
Vinay Bhat
|

Updated on: Mar 25, 2025 | 9:38 AM

ಬೆಂಗಳೂರು (ಮಾ, 24): ಇಂಡಿಯನ್ ಪ್ರೀಮಿಯರ್ ಲೀಗ್ 2025 ರ ನಾಲ್ಕನೇ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (DC vs LSG) ನಡುವೆ ವೈಜಾಗ್‌ನ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಕೊನೆಯ ಓವರ್ ವರೆಗೆ ನಡೆದ ಈ ರಣರೋಚಕ ಪಂದ್ಯದಲ್ಲಿ ಡೆಲ್ಲಿ ಕೇವಲ ಒಂದು ವಿಕೆಟ್ ಅಂತರದಿಂದ ಗೆದ್ದಿತು. 210 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡಿಸಿ ಒಂದು ಹಂತದಲ್ಲಿ 65/5 ಕ್ಕೆ ತತ್ತರಿಸಿತ್ತು. ಆದರೆ ನಂತರ ಹೀಗಾಗುತ್ತೆ ಎಂಬುದನ್ನು ಯಾರೂ ಊಹಿಸಿರಲಿಲ್ಲ. ಡೆಲ್ಲಿಯ ಈ ವಿಶೇಷ ಗೆಲುವಿನಲ್ಲಿ ಅಶುತೋಷ್ ಶರ್ಮಾ ಜೊತೆ ವಿಪ್ರಾಜ್ ನಿಗಮ್ ಪ್ರಮುಖ ಪಾತ್ರ ವಹಿಸಿದ್ದರು ಎಂಬುದರಲ್ಲಿ ಸಂದೇಹವಿಲ್ಲ.

ಸತತ ಎರಡು ಸಿಕ್ಸರ್‌ಗಳನ್ನು ಬಾರಿಸಿದ ನಂತರ ಟ್ರಿಸ್ಟಾನ್ ಸ್ಟಬ್ಸ್ ಬೌಲ್ಡ್ ಆದಾಗ ಲಕ್ನೋ ಸೂಪರ್ ಜೈಂಟ್ಸ್ ತಂಡವು ಪಂದ್ಯವನ್ನು ಗೆದ್ದಿತು ಎಂದೇ ಭಾವಿಸಲಾಗಿತ್ತು. ಡೆಲ್ಲಿ ಕ್ಯಾಪಿಟಲ್ಸ್ ತಂಡದ 6 ಬ್ಯಾಟ್ಸ್‌ಮನ್‌ಗಳು ಔಟಾದರು. ತಂಡದ ಗೆಲುವಿಗೆ ಇನ್ನೂ 97 ರನ್‌ಗಳು ಬೇಕಾಗಿದ್ದವು ಮತ್ತು ಕೇವಲ 45 ಎಸೆತಗಳು ಮಾತ್ರ ಉಳಿದಿದ್ದವು. ಅಶುತೋಷ್ ಶರ್ಮಾ ಒಂದು ತುದಿಯಲ್ಲಿದ್ದರೆ ಈ ಸಂದರ್ಭ ಬ್ಯಾಟಿಂಗ್ ಮಾಡಲು ಬಂದಿದ್ದು ವಿಪ್ರಾಜ್ ನಿಗಮ್. ಇದು ವಿಪ್ರರಾಜ್ ಅವರ ಚೊಚ್ಚಲ ಪಂದ್ಯ ಕೂಡ.

ಬ್ಯಾಟ್‌ನಿಂದ ಪಂದ್ಯದ ಗತಿ ಬದಲಾಯಿಸಿದ ವಿಪ್ರಾಜ್:

ವಿಪ್ರಾಜ್ ಬ್ಯಾಟಿಂಗ್‌ಗೆ ಬಂದ ತಕ್ಷಣವೇ ತಮ್ಮ ಬ್ಯಾಟಿಂಗ್ ಮೂಲಕ ಪಂದ್ಯಕ್ಕೆ ಹೊಸ ತಿರುವು ಕೊಟ್ಟರು. 14 ನೇ ಓವರ್‌ನಲ್ಲಿ ರವಿ ಬಿಷ್ಣೋಯ್‌ರಂತಹ ಅದ್ಭುತ ಬೌಲರ್ ವಿರುದ್ಧ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಮುಂದಿನ ಓವರ್‌ನಲ್ಲಿ ಅವರು ಶಹಬಾಜ್ ಅಹ್ಮದ್ ಬೌಲಿಂಗ್​ನಲ್ಲಿ ಬೌಂಡರಿ ಮತ್ತು ಸಿಕ್ಸರ್‌ ಸಿಡಿಸಿದರು. 16 ನೇ ಓವರ್‌ನಲ್ಲಿ ಪ್ರಿನ್ಸ್ ಯಾದವ್ ವಿರುದ್ಧ ಸತತ ಎರಡು ಬೌಂಡರಿಗಳನ್ನು ಬಾರಿಸಿದರು. ಕೇವಲ 15 ಎಸೆತಗಳಲ್ಲಿ 260 ಸ್ಟ್ರೈಕ್ ರೇಟ್‌ನಲ್ಲಿ 39 ರನ್ ಚಚ್ಚಿದರು. ಇದರಲ್ಲಿ 5 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳು ಸೇರಿವೆ.

ಇದನ್ನೂ ಓದಿ
Image
ಇದಕ್ಕಾಗಿಯೇ ಈ ನಿಯಮ ಇರೋದು: ರೋಹಿತ್, ಧೋನಿಗೆ ಫಾಫ್ ಡುಪ್ಲೆಸಿಸ್ ತಿರುಗೇಟು
Image
ಶಾಕಿಂಗ್ ಸೋಲಿಗೆ ಎಲ್​ಎಸ್​ಜಿ ನಾಯಕ ರಿಷಭ್ ಪಂತ್ ದೂರಿದ್ದು ಯಾರನ್ನ ನೋಡಿ
Image
VIDEO: ಗೆಲ್ಲುವ ಪಂದ್ಯವನ್ನು 'ಕೈ ಚೆಲ್ಲಿದ' ರಿಷಭ್ ಪಂತ್
Image
ಸೋಲಿನ ಬೆನ್ನಲ್ಲೇ ರಿಷಭ್ ಪಂತ್​ಗೂ ಬಿಸಿ ಮುಟ್ಟಿಸಿದ ಸಂಜೀವ್ ಗೊಯೆಂಕಾ

Rishab Pant, DC vs LSG: ಶಾಕಿಂಗ್ ಸೋಲಿಗೆ ಎಲ್​ಎಸ್​ಜಿ ನಾಯಕ ರಿಷಭ್ ಪಂತ್ ದೂರಿದ್ದು ಯಾರನ್ನ ನೋಡಿ

ವಿಪ್ರಾಜ್ ಔಟಾದಾಗ, ಡೆಲ್ಲಿ ಗೆಲುವಿಗೆ 23 ಎಸೆತಗಳಲ್ಲಿ 42 ರನ್ ಬೇಕಾಗಿತ್ತು. ಅಶುತೋಷ್ ಶರ್ಮಾ ಅವರೊಂದಿಗೆ ವಿಪ್ರಾಜ್ 7 ನೇ ವಿಕೆಟ್‌ಗೆ 22 ಎಸೆತಗಳಲ್ಲಿ 55 ರನ್‌ಗಳ ಜೊತೆಯಾಟ ಆಡಿದರು. ಈ ಸಂದರ್ಭ ಅಶುತೋಷ್ 20 ಎಸೆತಗಳಲ್ಲಿ 20 ರನ್ ಗಳಿಸಿದ್ದರು. ವಿಪ್ರಾಜ್ ಔಟಾದ ನಂತರ ಆ ಲಯವನ್ನು ಮುಂದುವರೆಸಿದ ಅಶುತೋಷ್ ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸಿ ಜಯ ತಂದುಕೊಟ್ಟರು.

ವಿಪ್ರಾಜ್ ನಿಗಮ್ ಯಾರು?:

ವಿಪ್ರಾಜ್ ನಿಗಮ್ ಯುಪಿ ಪರ ದೇಶೀಯ ಕ್ರಿಕೆಟ್ ಆಡುತ್ತಾರೆ. ಅವರ ವಯಸ್ಸು 20 ವರ್ಷ 239 ದಿನಗಳು. ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅತ್ಯಂತ ಕಿರಿಯ ಆಟಗಾರ. ಐಪಿಎಲ್‌ಗೆ ಪದಾರ್ಪಣೆ ಮಾಡುವ ಮೊದಲು, ಅವರು 3 ಪ್ರಥಮ ದರ್ಜೆ ಪಂದ್ಯಗಳು, 5 ಲಿಸ್ಟ್ ಎ ಪಂದ್ಯಗಳು ಮತ್ತು 7 ಟಿ20 ಪಂದ್ಯಗಳನ್ನು ಆಡಿದ್ದರು. ಇದರಲ್ಲಿ ಅವರು 25 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಬ್ಯಾಟಿಂಗ್‌ನಲ್ಲಿ 116 ರನ್‌ಗಳನ್ನು ಗಳಿಸಿದ್ದಾರೆ. ನಿಗಮ್ 2023 ರಲ್ಲಿ ನಡೆದ UPT20 ಲೀಗ್‌ನಲ್ಲಿ ಮೊದಲ ಬಾರಿಗೆ ಬೆಳಕಿಗೆ ಬಂದರು, ಅಲ್ಲಿ ಅವರು ಒಂದೇ ಓವರ್‌ನಲ್ಲಿ 28 ರನ್‌ಗಳನ್ನು ಬಾರಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿ ಶಾಸಕರು ಪೀಠಕ್ಕೆ ಆಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಆಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್