Rishab Pant, DC vs LSG: ಶಾಕಿಂಗ್ ಸೋಲಿಗೆ ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್ ದೂರಿದ್ದು ಯಾರನ್ನ ನೋಡಿ
IPL 2025, DC vs LSG: ವಿಶಾಖಪಟ್ಟಣಂನ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ ನಾಲ್ಕನೇ ಪಂದ್ಯ ರೋಚಕತೆಯಿಂದ ಕೂಡಿತ್ತು. ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೇಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಯಾರೂ ಊಹಿಸಲಾಗದಂತೆ ಗೆಲುವು ಕಂಡಿತು. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಸೋತ ತಂಡದ ನಾಯಕ ರಿಷಭ್ ಪಂತ್ ಕೆಲ ವಿಚಾರ ಹಂಚಿಕೊಂಡಿದ್ದಾರೆ.

ಬೆಂಗಳೂರು (ಮಾ, 24): ಸೋಮವಾರ ರಾತ್ರಿ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ ನಾಲ್ಕನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ (DC vs LSG) ವಿರುದ್ಧ ಅದ್ಭುತ ಗೆಲುವು ಸಾಧಿಸಿತು. ಯಾರೂ ಊಹಿಸಲಾಗದ ರೀತಿಯಲ್ಲಿ ಸಾಗಿದ ಪಂದ್ಯದಲ್ಲಿ ಡೆಲ್ಲಿ ಕೊನೆಯ ಓವರ್‌ನಲ್ಲಿ ಗೆದ್ದುಕೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಎಲ್‌ಎಸ್‌ಜಿ, ಕ್ಯಾಪಿಟಲ್ಸ್‌ಗೆ 210 ರನ್‌ಗಳ ಗುರಿಯನ್ನು ನೀಡಿತು. ದೆಹಲಿ ತಂಡ ಕೇವಲ ಒಂದು ವಿಕೆಟ್ ಬಾಕಿ ಇರುವಾಗಲೇ 19.3 ಓವರ್‌ಗಳಲ್ಲಿ ಗುರಿ ತಲುಪಿತು. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಸೋತ ತಂಡದ ನಾಯಕ ರಿಷಭ್ ಪಂತ್ ಕೆಲ ವಿಚಾರ ಹಂಚಿಕೊಂಡಿದ್ದಾರೆ.
‘‘ನಮ್ಮ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ನಿಜವಾಗಿಯೂ ಉತ್ತಮವಾಗಿ ಆಡಿದ್ದಾರೆ. ಈ ವಿಕೆಟ್‌ನಲ್ಲಿ ಇದು ಉತ್ತಮ ಸ್ಕೋರ್ ಎಂದು ನಾನು ಭಾವಿಸುತ್ತೇನೆ. ಒಂದು ತಂಡವಾಗಿ ನಾವು ಪ್ರತಿ ಪಂದ್ಯದಿಂದ ಏನಾದರು ಸಕಾರಾತ್ಮಕ ಅಂಶಗಳನ್ನು ತೆಗೆದುಕೊಳ್ಳಲು ನೋಡುತ್ತಿದ್ದೇವೆ ಮತ್ತು ಒಂದು ತಂಡವಾಗಿ ನಾವು ಪ್ರತಿ ಪಂದ್ಯದಿಂದ ಏನಾದರು ಕಲಿಯಲು ನೋಡುತ್ತೇವೆ. ನಮ್ಮ ನ್ಯೂನ್ಯತೆಗಳನ್ನು ಸರಿಯಾಗಿ ಮಾಡಿಕೊಂಡರೆ ಭವಿಷ್ಯದಲ್ಲಿ ಅದು ನಮಗೆ ಉತ್ತಮವಾಗಿರುತ್ತದೆ’’ ಎಂದು ರಿಷಭ್ ಪಂತ್ ಹೇಳಿದ್ದಾರೆ.
ಮಾತು ಮುಂದುವರೆಸಿದ ಅವರು ‘‘ನಮಗೆ ಆರಂಭಲ್ಲಿ ಉತ್ತಮ ವಿಕೆಟ್‌ಗಳು ಸಿಕ್ಕವು, ಆದರೆ ಇನ್ನೂ ಮುಂದಕ್ಕೆ ಈ ಪಿಚ್ ಬ್ಯಾಟಿಂಗ್ ಮಾಡಲು ಉತ್ತಮ ವಿಕೆಟ್ ಎಂದು ನಮಗೆ ತಿಳಿದಿತ್ತು. ಎದುರಾಳಿಯ ಕಡೆಯಿಂದ ಒಂದೆರಡು ಉತ್ತಮ ಜೊತೆಯಾಟ ಬಂತು. ಸ್ಟಬ್ಸ್, ಅಶುತೋಷ್ ಮತ್ತು ವಿಪ್ರಜ್ ನಿಗಮ್ ಅವರು ಉತ್ತಮ ಪಾರ್ಟ್ನರ್ಶಿಪ್ ಪಡೆದುಕೊಂಡರು. ನಿಗಮ್ ಒಳ್ಳೆಯ ರೀತಿಯಲ್ಲಿ ಬ್ಯಾಟಿಂಗ್ ಮಾಡಿದರು, ಅವರು ಪಂದ್ಯವನ್ನು ನಮ್ಮಿಂದ ಕಸಿದುಕೊಂಡರು ಎಂದು ನಾನು ಭಾವಿಸುತ್ತೇನೆ’’ ಎಂದು ಹೇಳಿದರು.
IPL 2025: ಸೊನ್ನೆ ಸುತ್ತಿದ ಪಂತ್; ಮಾಲೀಕನಿಗೆ ಹೆದರುತ್ತಲೇ ಪೆವಿಲಿಯನ್ ಸೇರಿದ ನಾಯಕ
‘‘ಬೌಲರ್‌ಗಳಿಗೆ ಸಾಕಷ್ಟು ಒತ್ತಡವಿತ್ತು. ಆದರೆ ನಾವು ಕೆಲವೊಂದು ವಿಷಯವನ್ನು ಸರಿಯಾಗಿ ಮಾಡಬಹುದಿತ್ತು ಎಂದು ನಾನು ಭಾವಿಸುತ್ತೇನೆ. ನಾವು ಸಾಕಷ್ಟು ಒತ್ತಡವನ್ನು ಅನುಭವಿಸಿದೆವು. ಈ ಪಂದ್ಯದಲ್ಲಿ ಅದೃಷ್ಟ ಖಂಡಿತವಾಗಿಯೂ ಒಂದು ಪಾತ್ರವನ್ನು ವಹಿಸಿದೆ, ಅದು ಮೋಹಿತ್ ಶರ್ಮಾ ವಿಚಾರದಲ್ಲಿ ಆಗಿರಬಹುದು ಹಾಗೆಗೆ ಸ್ಟಂಪಿಂಗ್‌ಗೆ ಕೂಡ ಅವಕಾಶವಾಗಿತ್ತು. ಆದರೆ ಕ್ರಿಕೆಟ್ ಆಟದಲ್ಲಿ ಇಂತಹ ವಿಷಯಗಳು ಸಂಭವಿಸುತ್ತವೆ, ನೀವು ಈ ವಿಷಯಗಳ ಮೇಲೆ ಸೀರಿಯೆಸ್ ಆಗು ತೆಗೆದುಕೊಳ್ಳಲು ಸಾಧ್ಯವಿಲ್ಲ, ಬದಲಿಗೆ ನೀವು ಉತ್ತಮ ಕ್ರಿಕೆಟ್ ಆಡಬೇಕು’’ ಎಂಬುದು ರಿಷಭ್ ಪಂತ್ ಮಾತು. ಒಟ್ಟಾರೆಯಾಗಿ ಪಂತ್ ಹೇಳಿರುವ ಪ್ರಕಾರ ಮಧ್ಯಮ ಓವರ್‌ನಲ್ಲಿ ಎದುರಾಳಿಯ ಮೇಲೆ ಒತ್ತಡ ಹಾಕಲು ವಿಫಲರಾದೆವು, ಸ್ಟಂಪಿಂಗ್ ಸೇರಿದಂತೆ ಕೆಲವು ಅವಕಾಶಗಳನ್ನು ಕೈಚೆಲ್ಲಿದೆವು ಎಂದು ಹೇಳುವ ಮೂಲಕ ಎರಡನೇ ಇನ್ನಿಂಗ್ಸ್ನಲ್ಲಿ ತಂಡ ಮಾಡಿದ ತಪ್ಪೇ ಸೋಲಿಗೆ ಕಾರಣವಾಯಿತು ಎಂದು ಹೇಳಿದ್ದಾರೆ.
ಗೆಲುವಿನ ನಂತರ ಅಕ್ಷರ್ ಪಟೇಲ್ ಹೇಳಿದ್ದೇನು?:
ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ನಂತರ ಮಾತನಾಡಿದ ಅಕ್ಷರ್ ಪಟೇಲ್, ‘‘ನನ್ನ ನಿರ್ಧಾರಗಳು ಸಹ ಏರಿಳಿತಗಳಿಂದ ಕೂಡಿತ್ತು. ನಾವು ಈ ಪಂದ್ಯವನ್ನು ಗೆದ್ದಿರುವುದರಿಂದ, ಈಗ ಯಾರೂ ಅದರ ಬಗ್ಗೆ ಮಾತನಾಡುವುದಿಲ್ಲ. ಪವರ್‌ಪ್ಲೇನಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಪಂದ್ಯವನ್ನು ಗೆಲ್ಲುವುದು ಸಾಮಾನ್ಯವಾಗಿ ಕ್ರಿಕೆಟ್‌ನಲ್ಲಿ ನಡೆಯುವುದಿಲ್ಲ, ಆದರೆ ಇಂದಿನ ಕಾಲದಲ್ಲಿ ಕ್ರಿಕೆಟ್ ಬಹಳಷ್ಟು ಬದಲಾಗುತ್ತಿದೆ, ಇದಕ್ಕಾಗಿ ಒಬ್ಬರು ಕ್ರೀಸ್‌ನಲ್ಲಿ ಉಳಿಯಬೇಕು’’ ಎಂದು ಹೇಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ