Virat Kohli: ನನಗಲ್ಲ, ಈ ಪ್ರಶಸ್ತಿಯನ್ನು ಆತನಿಗೆ ಕೊಡ್ಬೇಕಿತ್ತು: ವಿರಾಟ್ ಕೊಹ್ಲಿ

IPL 2025 RCB vs PBKS: ಮುಲ್ಲನ್​ಪುರ್​ನಲ್ಲಿ ನಡೆದ ಐಪಿಎಲ್​ನ 37ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 157 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18.5 ಓವರ್​​ಗಳಲ್ಲಿ 159 ರನ್ ಬಾರಿಸಿ 7 ವಿಕೆಟ್​ಗಳ ಜಯ ಸಾಧಿಸಿದೆ.

Virat Kohli: ನನಗಲ್ಲ, ಈ ಪ್ರಶಸ್ತಿಯನ್ನು ಆತನಿಗೆ ಕೊಡ್ಬೇಕಿತ್ತು: ವಿರಾಟ್ ಕೊಹ್ಲಿ
Virat Kohli

Updated on: Apr 21, 2025 | 2:09 PM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​​ ಸೀಸನ್-18ರ 37ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ವಿರಾಟ್ ಕೊಹ್ಲಿ (Virat Kohli). ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಕಿಂಗ್ ಕೊಹ್ಲಿ 54 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ ಅಜೇಯ 74 ರನ್ ಬಾರಿಸಿದ್ದರು. ಈ ಭರ್ಜರಿ ಪ್ರದರ್ಶನದ ಫಲವಾಗಿ ವಿರಾಟ್ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಒಲಿಯಿತು.

ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ಇದು ನಮಗೆ ಬಹಳ ಮುಖ್ಯವಾದ ಪಂದ್ಯವಾಗಿತ್ತು. ಏಕೆಂದರೆ ಪ್ಲೇಆಫ್​ ಅರ್ಹತೆಯ ವಿಷಯದಲ್ಲಿ 2 ಅಂಕಗಳು ಭಾರಿ ವ್ಯತ್ಯಾಸವನ್ನುಂಟುಮಾಡಬಹುದು. ನಾವು ತವರಿನಲ್ಲಿ ಸೋತರೂ, ಹೊರಗಡೆ ಉತ್ತಮ  ಕ್ರಿಕೆಟ್ ಆಡಿದ್ದೇವೆ. ನೀವು ಪಾಯಿಂಟ್ಸ್​ ಟೇಬಲ್​ನಲ್ಲಿ ಎಂಟರಿಂದ ಹತ್ತು ಅಂಕಗಳಿಗೆ ಹೋದಾಗ, ಅದು ಪಾಯಿಂಟ್‌ಗಳ ಪಟ್ಟಿಯಲ್ಲಿ ಭಾರಿ ವ್ಯತ್ಯಾಸವನ್ನುಂಟು ಮಾಡುತ್ತದೆ.

ಪ್ರತಿ ಪಂದ್ಯದಲ್ಲೂ 2 ಅಂಕಗಳನ್ನು ಪಡೆಯುವುದು ನಮ್ಮ ಮನಸ್ಥಿತಿಯಾಗಿರಬೇಕು. ನಾನು ನನ್ನ ಬ್ಯಾಟಿಂಗ್​ನಲ್ಲಿ ಇನ್ನಷ್ಟು ವೇಗವನ್ನು ಹೆಚ್ಚಿಸಲು ಬಯಸಿದ್ದೆ. ಆದರೆ ಈ ಹಂತದಲ್ಲಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಬಿರುಸಿನ ಬ್ಯಾಟಿಂಗ್​ನೊಂದಿಗೆ ರನ್​ ಗತಿಯಲ್ಲಿ ತುಂಬಾ ವ್ಯತ್ಯಾಸವನ್ನು ಉಂಟು ಮಾಡಿದ್ದರು.

ಇದನ್ನೂ ಓದಿ
PSL 2025: ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ RCB ಮಾಜಿ ಆಟಗಾರರು
ಪ್ರಿಯಾಂಶ್ ಆರ್ಯನ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್
ಕ್ರಿಸ್​ ಗೇಲ್ ದಾಖಲೆ ಜಸ್ಟ್ ಮಿಸ್: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
ಉಲ್ಟಾ ಹೊಡೆದ RCB ಕಪ್ ಗೆಲ್ಲಬಾರದು ಎಂದಿದ್ದ ಅಂಬಾಟಿ ರಾಯುಡು

ಹೀಗಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಯು ದೇವದತ್ ಪಡಿಕ್ಕಲ್​ಗೆ ಕೊಡಬೇಕಿತ್ತು ಎಂಬುದು ನನ್ನ ಭಾವನೆ. ಇದಾಗ್ಯೂ ಈ ಪ್ರಶಸ್ತಿ ನನಗೆ ಕೊಟ್ಟಿದ್ದಾರೆ ಎಂದು ನನಗೆ ತಿಳೀತಿಲ್ಲ. ಈ ಪ್ರಶಸ್ತಿಗೆ ದೇವ್ (ದೇವದತ್ ಪಡಿಕ್ಕಲ್) ಅರ್ಹರಾಗಿದ್ದರು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಇನ್ನು ದೇವದತ್ ಪಡಿಕ್ಕಲ್ ಜೊತೆಗಿನ ಶತಕದ ಜೊತೆಯಾಟದ ಬಗ್ಗೆ ಮಾತನಾಡಿದ ಕೊಹ್ಲಿ, ಟಿ 20 ಕ್ರಿಕೆಟ್‌ನಲ್ಲಿ ರನ್ ಚೇಸ್ ಸಮಯದಲ್ಲಿ ಒಂದು ಉತ್ತಮ ಪಾಲುದಾರಿಕೆ ಸಾಕು. ಅಂತಹದೊಂದು ಜೊತೆಯಾಟವನ್ನು ದೇವದತ್ ಪಡಿಕ್ಕಲ್ ಆಡಿದ್ದಾರೆ.

ಈಗ ನಮಗೆ ಉತ್ತಮ ತಂಡ ಸಿಕ್ಕಿದೆ. ಹರಾಜಿನ ಬಳಿಕ ಉತ್ತಮ ತಂಡದ ಸಂಯೋಜನೆಯಾಗಿದೆ. ಟಿಮ್ ಡೇವಿಡ್, ಜಿತೇಶ್ ಶರ್ಮಾ, ರಜತ್ ಪಾಟಿದಾರ್ ಅವರಂತಹ ಆಟಗಾರರು, ಅವರು ನಿರ್ವಹಿಸುತ್ತಿರುವ ಪಾತ್ರಗಳು ಚೆನ್ನಾಗಿ ಮೂಡಿಬರುತ್ತಿದೆ. ಇಂದು ರೊಮಾರಿಯೊ ನಮ್ಮ ಪರ ಕಣಕ್ಕಿಳಿದಿದ್ದಾರೆ.

ಇದನ್ನೂ ಓದಿ: VIDEO: RCB ಅಭಿಮಾನಿಗಳ ಗಮನಕ್ಕೆ: ನೀವು ಸುಳ್ಳಿಗೆ ಮರುಳಾಗಿದ್ದೀರಿ

ನಮ್ಮ ತಂಡವು ಗೆಲುವಿಗಾಗಿ ಹಸಿದಿರುವುದಂತು ನಿಜ. ಇದೇ ಕಾರಣದಿಂದಾಗಿ ಪ್ರತಿ ಆಟಗಾರರಲ್ಲಿ  ತೀವ್ರತೆಯನ್ನು ನೀವು ನೋಡಬಹುದು. ಇವೆಲ್ಲವನ್ನೂ ನೋಡಲು ನಿಜವಾಗಿಯೂ ಸಂತೋಷವಾಗುತ್ತದೆ. ಇಂತಹ ಮನಸ್ಥಿತಿ ಇದ್ದಾಗಲೇ ಗೆಲ್ಲುವ ಸಾಧ್ಯತೆಗಳಿರುತ್ತವೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

 

Published On - 10:24 am, Mon, 21 April 25