ನೀವು ಭಾರತ ಕ್ರಿಕೆಟ್ ತಂಡದ ಪರ ಆಡಬೇಕೇ?: ಇದಕ್ಕಾಗಿ ಏನೆಲ್ಲ ಮಾಡಬೇಕು?
How to Become a Cricketer: ಪ್ರತಿಯೊಬ್ಬ ಕ್ರಿಕೆಟ್ ಫ್ಯಾನ್ಗೆ ತಾನು ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಎಂಎಸ್ ಧೋನಿ ರೀತಿ ದೊಡ್ಡ ಕ್ರಿಕೆಟಿಗ ಆಗಬೇಕು ಎಂಬ ಕನಸು ಇರುತ್ತದೆ. ಆದರೆ, ಅದು ಅಷ್ಟೊಂದು ಸುಲಭವಲ್ಲ. ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗಬೇಕು ಎಂದರೆ ಕೆಲವು ನಿಯಮಗಳಿವೆ. ಹಾಗಾದರೆ, ಟೀಮ್ ಇಂಡಿಯಾಕ್ಕೆ ಆಯ್ಕೆ ಆಗಬೇಕು ಎಂದರೆ ಏನೆಲ್ಲ ಮಾಡಬೇಕು?. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

‘ಕ್ರಿಕೆಟ್’ ಜಗತ್ತಿನ ಎರಡನೇ ಅತ್ಯಂತ ಜನಪ್ರಿಯ ಕ್ರೀಡೆಯಾಗಿದ್ದು, 2.5 ಶತಕೋಟಿಗೂ ಹೆಚ್ಚು ಅಭಿಮಾನಿಗಳನ್ನು ಹೊಂದಿದೆ. ಈ ಕ್ರೀಡೆಯು ಸುಮಾರು 300 ವರ್ಷಗಳಿಂದಲೂ ಇದೆ. ಇಂದು ಪ್ರಪಂಚದಾದ್ಯಂತ ಜನರು ಆಡುವ, ವೀಕ್ಷಿಸುವ ಮತ್ತು ಆನಂದಿಸುವ ಒಂದು ನಿರ್ದಿಷ್ಟ ಕ್ರೀಡೆಯಲ್ಲಿ ಕ್ರಿಕೆಟ್ ಪ್ರಮುಖವಾದೂದು. ಕ್ರಿಕೆಟ್ಗೆ ಅತಿ ಹೆಚ್ಚು ಅಭಿಮಾನಿಗಳು ಇರುವುದು ಭಾರತದಲ್ಲೇ. ಪ್ರತಿಯೊಬ್ಬ ಕ್ರಿಕೆಟ್ ಫ್ಯಾನ್ಗೆ ತಾನು ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಎಂಎಸ್ ಧೋನಿ ರೀತಿ ದೊಡ್ಡ ಕ್ರಿಕೆಟಿಗ ಆಗಬೇಕು ಎಂಬ ಕನಸು ಇರುತ್ತದೆ. ಆದರೆ, ಅದು ಅಷ್ಟೊಂದು ಸುಲಭವಲ್ಲ. ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗಬೇಕು ಎಂದರೆ ನೀರು ಕುಡಿದಷ್ಟು ಸುಲಭಲ್ಲ. ಇದಕ್ಕೆ ಅದರದ್ದೇಯಾದ ಕೆಲವು ನಿಯಮಗಳಿವೆ. ಆದರೆ, ಕಷ್ಟ ಪಟ್ಟರೆ ನಿರಂತರವಾಗಿ ಶ್ರಮವಹಿಸುತ್ತಿದ್ದರೆ ಯಾವುದೂ ಅಸಾಧ್ಯವಲ್ಲ. ಹಾಗಾದರೆ, ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗಬೇಕು ಎಂದರೆ ಏನೆಲ್ಲ ಮಾಡಬೇಕು?. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. ಕ್ರಿಕೆಟಿಗ ಯಾರು? ಕ್ರಿಕೆಟಿಗ ಎಂದರೆ ಕ್ರಿಕೆಟ್ ಕ್ರೀಡೆಯನ್ನು ವೃತ್ತಿಪರವಾಗಿ ಆಡುವ ವ್ಯಕ್ತಿ. ವೃತ್ತಿಪರ ಕ್ರಿಕೆಟ್ ದೈಹಿಕವಾಗಿ ಕಠಿಣ ಮತ್ತು ಹೆಚ್ಚು ಸ್ಪರ್ಧಾತ್ಮಕ ಕ್ರೀಡೆಯಾಗಿದೆ. ಇದರಲ್ಲಿ ಕೆಲವೇ ಕೆಲವು ಪ್ರತಿಭಾವಂತ ವ್ಯಕ್ತಿಗಳು ಸಾಧಕರಾಗುತ್ತಾರೆ. ಕ್ರಿಕೆಟ್ ಆಟಗಾರರಲ್ಲಿ ನಾಲ್ಕು ಪ್ರಾಥಮಿಕ ವಿಧಗಳಿವೆ. ಆಲ್ ರೌಂಡರ್, ಬ್ಯಾಟರ್, ಬೌಲರ್ ಮತ್ತು ವಿಕೆಟ್ ಕೀಪರ್. ಭಾರತೀಯ ಕ್ರಿಕೆಟಿಗನಾಗುವುದು ಹೇಗೆ?- ಕ್ರಿಕೆಟಿಗನಾಗಲು ಅಗತ್ಯತೆಗಳು ಯಾವುವು? ವೃತ್ತಿಪರ ಕ್ರಿಕೆಟಿಗನಾಗುವುದು ಅಷ್ಟೊಂದು ಸುಲಭವಲ್ಲ. ಯಶಸ್ವಿ ಕ್ರಿಕೆಟ್ ಆಟಗಾರನಾಗಲು, ಆತ ಆಟವನ್ನು ಚೆನ್ನಾಗಿ ಆಡುವ ಸಾಮರ್ಥ್ಯ ಹೊಂದಿರಬೇಕು. ಅದನ್ನು ವೃತ್ತಿಯನ್ನಾಗಿಸಲು ಆತ ವಿಶೇಷ ಪ್ರತಿಭೆಗಳನ್ನು ಹೊಂದಿರಬೇಕು. ಕ್ರಿಕೆಟಿಗನಾಗಲು ಕೆಲವು ಅವಶ್ಯಕತೆಗಳನ್ನು...
Published On - 10:18 am, Mon, 29 April 24
