AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ellyse Perry: ಮಹಿಳಾ ಆ್ಯಶಸ್: 99 ರನ್​ಗೆ ಔಟಾದ ಎಲೀಸ್ ಪೆರಿ: ಆರ್​ಸಿಬಿ ಆಟಗಾರ್ತಿಯಿಂದ ಐತಿಹಾಸಿಕ ಸಾಧನೆ

Womens Ashes, ENG vs AUS: ಎಲೀಸ್ ಪೆರಿ ಹಾಗೂ ತಹಿಲಾ ಮೆಕ್​ಗ್ರಾತ್ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ಮಹಿಳಾ ಆ್ಯಶಸ್​ನ ಮೊದಲ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 328 ರನ್ ಗಳಿಸಿದೆ.

Ellyse Perry: ಮಹಿಳಾ ಆ್ಯಶಸ್: 99 ರನ್​ಗೆ ಔಟಾದ ಎಲೀಸ್ ಪೆರಿ: ಆರ್​ಸಿಬಿ ಆಟಗಾರ್ತಿಯಿಂದ ಐತಿಹಾಸಿಕ ಸಾಧನೆ
ellyse perry
Vinay Bhat
|

Updated on: Jun 23, 2023 | 7:34 AM

Share

ಮುಖ್ಯಾಂಶಗಳು

  • 99 ರನ್​ಗೆ ಔಟಾದ ಎಲೀಸ್ ಪೆರಿ
  • ಆರ್​ಸಿಬಿ ಆಟಗಾರ್ತಿಯಿಂದ ಐತಿಹಾಸಿಕ ಸಾಧನೆ
  • ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 328 ರನ್ ಗಳಿಸಿದೆ

ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ (ENG vs AUS) ನಡುವಣ 2023ನೇ ಆವೃತ್ತಿಯ ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿ ಆರಂಭವಾಗಿದೆ. ಈಗಾಗಲೇ ಪುರುಷರ ವಿಭಾಗದಲ್ಲಿ ಮೊದಲ ಪಂದ್ಯ ನಡೆದಿದ್ದು ಇದರಲ್ಲಿ ಪ್ಯಾಟ್ ಕಮಿನ್ಸ್ ನಾಯಕತ್ವದ ಆಸೀಸ್ 2 ವಿಕೆಟ್​ಗಳ ರೋಚಕ ಜಯ ಸಾಧಿಸಿತು. ಇದೀಗ ಮಹಿಳಾ ಆ್ಯಶಸ್​ಗೆ (Womens Ashes) ಚಾಲನೆ ಸಿಕ್ಕಿದೆ. ನ್ಯಾಥಿಂಗ್​ಹ್ಯಾಮ್​ನ ಟ್ರೆಂಟ್ ಬ್ರಿಡ್ಜ್​ನಲ್ಲಿ ನಡೆಯುತ್ತಿರುವ ಮೊದಲ ಪಂದ್ಯದ ಮೊದಲ ದಿನ ಆಸ್ಟ್ರೇಲಿಯಾ ಮಹಿಳೆಯರು ಮೇಲುಗೈ ಸಾಧಿಸಿದರು. ಎಲೀಸ್ ಪೆರಿ (Ellyse Perry) ಹಾಗೂ ತಹಿಲಾ ಮೆಕ್​ಗ್ರಾತ್ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಕಾಂಗರೂ ಪಡೆ ಮೊದಲ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 328 ರನ್ ಗಳಿಸಿದೆ.

ಈ ಪಂದ್ಯದಲ್ಲಿ ಎಲೀಸ್ ಪೆರಿ 99 ರನ್​ಗಳಿಗೆ ಔಟ್ ಆಗುವ ಮೂಲಕ 1ರನ್​ನಿಂದ ಶತಕ ವಂಚಿತರಾದರು. ಟಾಸ್ ಗೆದ್ದ ಆಸ್ಟ್ರೇಲಿಯಾ ಮಹಿಳಾ ತಂಡದ ನಾಯಕಿ ಅಲಿಸ್ಸಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಓಪನರ್​ಗಳಾದ ಬೆಥ್ ಮೂನಿ ಹಾಗೂ ಪೋಬ್ ಲಿಚ್‌ಫೀಲ್ಡ್ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ಎಡವಿದರು. ಪೋಬ್ 23 ರನ್​ಗೆ ಔಟಾದರು. ಎರಡನೇ ವಿಕೆಟ್​ಗೆ ಮೂನಿ (33) ಹಾಗೂ ಎಲೀಸ್ ಪೆರಿ 48 ರನ್‌ ಸೇರಿಸಿದರು. ನಂತರ ಶುರುವಾಗಿದ್ದು ಪೆರಿ ಹಾಗೂ ತಹಿಲಾ ಮೆಕ್​ಗ್ರಾತ್ ಜೊತೆಯಾಟ. ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ ಈ ಜೋಡಿ ಉಪಯುಕ್ತ ಕಾಣಿಕೆ ನೀಡಿತು.

Virender Sehwag: ಮಿಸ್ಟರ್ ಕೂಲ್ ಆಟಗಾರನನ್ನು ಹೆಸರಿಸಿದ ವೀರೇಂದ್ರ ಸೆಹ್ವಾಗ್

ಮೂರನೇ ವಿಕೆಟ್​ಗೆ ಪೆರಿ ಹಾಗೂ ತಹಿಲಾ 129 ರನ್​ಗಳ ಜೊತೆಯಾಟ ಆಡಿದರು. ತಹಿಲಾ 83 ಎಸೆತಗಳಲ್ಲಿ 61 ರನ್ ಗಳಿಸಿ ಎಕ್ಸೆಲ್‌ಸ್ಟನ್ ಎಸೆತದಲ್ಲಿ ಬೌಲ್ಡ್ ಆದರು. ಇತ್ತ ಪೆರಿ ಅವರು ಶತಕ ಪೂರೈಸಲು ಇನ್ನೊಂದು ರನ್‌ ಮಾತ್ರ ಅಗತ್ಯವಿದ್ದಾಗ ಔಟಾದರು. 153 ಎಸೆತಗಳಲ್ಲಿ 15 ಫೋರ್​ನೊಂದಿಗೆ 99 ರನ್​ಗೆ ನಿರ್ಗಮಿಸಿದರು. ಇದರ ಜೊತೆಗೆ ಐತಿಹಾಸಿಕ ಸಾಧನೆ ಕೂಡ ಮಾಡಿದರು. ಪೆರಿ ಇದೀಗ ದಾಖಲೆಯ ಹತ್ತು ಮಹಿಳಾ ಆ್ಯಶಸ್ ಸರಣಿ ಆಡಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ತಮ್ಮ ಮುಡಿಗೆ ಮತ್ತೊಂದು ಗರಿಯನ್ನು ಸೇರಿಸಿಕೊಂಡಿದ್ದಾರೆ.

ಪೆರಿ-ತಹಿಲಾ ನಿರ್ಗಮನದ ಬಳಿಕ ಬಂದ ಜೆಸ್ ಜಾನ್ಸನ್ 11 ರನ್​ಗೆ ಔಟಾದರೆ, ನಾಯಕಿ ಅಲಿಸ್ಸಾ ಸೊನ್ನೆ ಸುತ್ತಿದರು. ಆ್ಯಶ್ಲೆಘ್ ಗಾರ್ಡನರ್ 76 ಎಸೆತಗಳಲ್ಲಿ 40 ರನ್ ಕಲೆಹಾಕಿದರು. ಸದ್ಯ ಮೊದಲ ದಿನದಾಟದ ಅಂತ್ಯಕ್ಕೆ ಅನ್ನಾಬೆಲ್ ಸುಥರ್ಲೆಂಡ್ 39 ರನ್ ಗಳಿಸಿ ಮತ್ತು ಅಲಾನ ಕಿಂಗ್ 7 ರನ್ ಗಳಿಸಿ ದ್ವಿತೀಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯಾ ಮೊದಲ ದಿನದ ಅಂತ್ಯಕ್ಕೆ 85 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 328 ರನ್ ಗಳಿಸಿದೆ. ಇಂಗ್ಲೆಂಡ್ ಪರ ಸೂಫಿ ಎಕ್ಸೆಲ್‌ಸ್ಟನ್ 3 ಹಾಗೂ ಲೌರೆನ್ ಫಿಲರ್ 2 ವಿಕೆಟ್ ಪಡೆದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Vinay Bhat
Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು; ಮನೆಯ ಮಹರಾಣಿ ಸೇರಿ ಮೂವರು ಕಳಪೆ
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು; ಮನೆಯ ಮಹರಾಣಿ ಸೇರಿ ಮೂವರು ಕಳಪೆ
ಹಾಸನ: 32 ಕಾಡಾನೆಗಳ ಹಿಂಡು ಪತ್ತೆ, ಡ್ರೋನ್​​ ಕ್ಯಾಮರಾದಲ್ಲಿ ದೃಶ್ಯ ಸೆರೆ
ಹಾಸನ: 32 ಕಾಡಾನೆಗಳ ಹಿಂಡು ಪತ್ತೆ, ಡ್ರೋನ್​​ ಕ್ಯಾಮರಾದಲ್ಲಿ ದೃಶ್ಯ ಸೆರೆ
ದನದ ಶೆಡ್ ಬಿಲ್ ಬಾಕಿ:ಪಂಚಾಯ್ತಿ ಮುಂದೆ ಎಮ್ಮೆ ಕರು ಕಟ್ಟಿದ ಫಲಾನುಭವಿ
ದನದ ಶೆಡ್ ಬಿಲ್ ಬಾಕಿ:ಪಂಚಾಯ್ತಿ ಮುಂದೆ ಎಮ್ಮೆ ಕರು ಕಟ್ಟಿದ ಫಲಾನುಭವಿ
ಚಿಕ್ಕಣ್ಣನ ಡ್ಯಾನ್ಸ್ ನೋಡಿ ಪ್ರಭುದೇವಗೆ ಹೋಲಿಸಿದ ಶಿವಣ್ಣ
ಚಿಕ್ಕಣ್ಣನ ಡ್ಯಾನ್ಸ್ ನೋಡಿ ಪ್ರಭುದೇವಗೆ ಹೋಲಿಸಿದ ಶಿವಣ್ಣ
ಹೆಚ್​​​ಡಿಕೆ-ಡಿಕೆಶಿ ಜಟಾಪಟಿ:ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ
ಹೆಚ್​​​ಡಿಕೆ-ಡಿಕೆಶಿ ಜಟಾಪಟಿ:ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ
ಲಕ್ಷ್ಮೀಪುತ್ರ ಟ್ರೇಲರ್‌ಗೆ ಶಿವಣ್ಣ ಫಿದಾ; ಚಿಕ್ಕಣ್ಣ ಭವಿಷ್ಯದ ಸ್ಟಾರ್
ಲಕ್ಷ್ಮೀಪುತ್ರ ಟ್ರೇಲರ್‌ಗೆ ಶಿವಣ್ಣ ಫಿದಾ; ಚಿಕ್ಕಣ್ಣ ಭವಿಷ್ಯದ ಸ್ಟಾರ್
ಚಿನ್ನ ಗ್ರಾಂಗೆ 10 ಸಾವಿರದ ಒಳಗೆ ಬರುತ್ತಾ? ಹೂಡಿಕೆ ತಜ್ಞರು ಹೇಳಿದ್ದೇನು?
ಚಿನ್ನ ಗ್ರಾಂಗೆ 10 ಸಾವಿರದ ಒಳಗೆ ಬರುತ್ತಾ? ಹೂಡಿಕೆ ತಜ್ಞರು ಹೇಳಿದ್ದೇನು?
ಸಚಿವ ಸ್ಥಾನ ವಂಚಿತ ಹೆಬ್ಬಾಳ್ಕರ್, ಮಹದೇವಪ್ಪಗೆ ಪ್ರಮುಖ ಹುದ್ದೆ ಸಾಧ್ಯತೆ
ಸಚಿವ ಸ್ಥಾನ ವಂಚಿತ ಹೆಬ್ಬಾಳ್ಕರ್, ಮಹದೇವಪ್ಪಗೆ ಪ್ರಮುಖ ಹುದ್ದೆ ಸಾಧ್ಯತೆ
ಚಿನ್ನದ ಬೆಲೆ ದಿಢೀರ್​​ ಕುಸಿತ ಕಂಡಿದ್ದೇಕೆ? ಇಲ್ಲಿದೆ ತಜ್ಞರ ವಿವರಣೆ
ಚಿನ್ನದ ಬೆಲೆ ದಿಢೀರ್​​ ಕುಸಿತ ಕಂಡಿದ್ದೇಕೆ? ಇಲ್ಲಿದೆ ತಜ್ಞರ ವಿವರಣೆ
ದೆಹಲಿಗೆ ತೆರಳಿದ ಹರಿಪ್ರಸಾದ್​​: KPCC ಕಾರ್ಯಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ?
ದೆಹಲಿಗೆ ತೆರಳಿದ ಹರಿಪ್ರಸಾದ್​​: KPCC ಕಾರ್ಯಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ?