Ashes 2023: ಮೊದಲ ದಿನವೇ ಇತಿಹಾಸ ಸೃಷ್ಟಿ; ಇಂಗ್ಲೆಂಡ್ ನಿರ್ಧಾರವನ್ನು ‘ಮೂರ್ಖತನ’ ಎಂದ ನೆಟ್ಟಿಗರು..!
ENG vs AUS, Ashes 2023: ಇದೀಗ ಸೋಶಿಯಲ್ ಮೀಡಿಯಾದಲ್ಲಿ ನಾಯಕ ಸ್ಟೋಕ್ಸ್ ಮತ್ತು ಮುಖ್ಯ ತರಬೇತುದಾರ ಬ್ರೆಂಡನ್ ಮೆಕಲಮ್ ನಿರ್ಧಾರದ ಬಗ್ಗೆ ನೆಟ್ಟಿಗರು ಹಾಗೂ ಕ್ರಿಕೆಟ್ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಟೆಸ್ಟ್ ಕ್ರಿಕೆಟ್ (Test Cricket)… ಸತತ ಐದು ದಿನಗಳವರೆಗೆ ನಡೆಯುವ ಆಟ. ಬ್ಯಾಟ್ಟ್ಮನ್ಗಳ ನಿಧಾನಗತಿಯ ಬ್ಯಾಟಿಂಗ್, ಬೌಲರ್ಗಳ ಚಾಣಾಕ್ಷತನದ ಬೌಲಿಂಗ್ ಜೊತೆ ಪೂರ್ಣ ಐದು ದಿನಗಳ ಕಾಲ ಟೆಸ್ಟ್ ಕ್ರಿಕೆಟ್ ನೋಡುವುದೇ ಒಂದು ರೀತಿಯ ಅದ್ಭುತ ಅನುಭವ. ಆದರೆ ಕಳೆದ ಕೆಲವು ವರ್ಷಗಳಿಂದ ಟೆಸ್ಟ್ ಕ್ರಿಕೆಟ್ ಶೈಲಿಯನ್ನೇ ಬದಲಿಸಲು ಹೊರಟಿರುವ ಇಂಗ್ಲೆಂಡ್ (England) ತಂಡ ಕೆಲವು ಅಚ್ಚರಿಯ ನಿರ್ಧಾರಗಳೊಂದಿಗೆ ವಿಶ್ವ ಕ್ರಿಕೆಟ್ಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಭಾಝ್ ಬಾಲ್ (ಆಕ್ರಮಣಕಾರಿ ಆಟ) ಕ್ರಿಕೆಟ್ ಮೂಲಕ ಟೆಸ್ಟ್ ಕ್ರಿಕೆಟ್ ಸ್ವರೂಪವನ್ನೇ ಬದಲಿಸಿರುವ ಇಂಗ್ಲೆಂಡ್ ತನ್ನ ನೂತನ ಪ್ರಯೋಗದಿಂದ ಹಲವು ಅಚ್ಚರಿಯ ಫಲಿತಾಂಶಗಳನ್ನು ಕಂಡಿದೆ. ಇದೀಗ ಆಶಸ್ ಸರಣಿಯಲ್ಲೂ (Ashes 2023) ಇದೇ ಮಾದರಿಯನ್ನು ಮುಂದುವರೆಸಿರುವ ಇಂಗ್ಲೆಂಡ್ ಮೊದಲ ದಿನವೇ ಅಂದರೆ, ಕೇವಲ 78 ಓವರ್ಗಳನ್ನು ಆಡಿದ ಬಳಿಕ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ಗೆ ಆರಂಭ ಉತ್ತಮವಾಗಿಲ್ಲದಿದ್ದರೂ, ಆಕ್ರಮಣಕಾರಿ ಆರಂಭ ಖಂಡಿತವಾಗಿಯೂ ಸಿಕ್ಕಿತ್ತು. ಒಂದೆಡೆ ವಿಕೆಟ್ ಉರುಳುತ್ತಿದ್ದರು, ಒಬ್ಬರ ನಂತರ ಒಬ್ಬರಂತೆ ಬಂದ ಪ್ರತಿಯೊಬ್ಬ ಆಂಗ್ಲ ಬ್ಯಾಟರ್ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಹೀಗಾಗಿ ಸತತ ವಿಕೆಟ್ ಉರುಳಿದರೂ, ಇಂಗ್ಲೆಂಡ್ ತಂಡದ ಎಕಾನಮಿ ಮಾತ್ರ 4 ರ ಕೆಳಗಿಳಿಯಲಿಲ್ಲ. ಅಂತಿಮವಾಗಿ 8 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ 393 ರನ್ಗಳಿಗೆ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
Ashes 2023: ಮಿಚೆಲ್ ಸ್ಟಾರ್ಕ್ ಔಟ್! ಮೊದಲ ಆಶಸ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ ಪ್ರಕಟ
ಬೆನ್ ಸ್ಟೋಕ್ಸ್ ಅವರ ಈ ನಿರ್ಧಾರ ಸಾಕಷ್ಟು ಅಚ್ಚರಿಗೆ ಕಾರಣವಾಯಿತು. ಏಕೆಂದರೆ, ಒಂದೆಡೆ ಭರ್ಜರಿ ಶತಕ ಸಿಡಿಸಿದ ರೂಟ್ ಅದ್ಭುತವಾಗಿ ಬ್ಯಾಟ್ ಬೀಸುತ್ತಿದ್ದರೆ, ಇನ್ನೊಂದೆಡೆ ರಾಬಿನ್ಸನ್ ರೂಟ್ಗೆ ಉತ್ತಮ ಸಾಥ್ ನೀಡುತ್ತಿದ್ದರು. ಹೀಗಾಗಿ ಇಂಗ್ಲೆಂಡ್ ಮೊದಲ ದಿನದಲ್ಲಿ ಇನ್ನೂ ಹೆಚ್ಚಿನ ರನ್ ಕಲೆಹಾಕಬಹುದಿತ್ತು. ಆದರೆ ಮಾಜಿ ನಾಯಕ ರೂಟ್ ಶತಕ ಸಿಡಿಸಿದ ಬಳಿಕ ನಾಯಕ ಸ್ಟೋಕ್ಸ್ ಇದ್ದಕ್ಕಿದ್ದಂತೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಇದು ಇಂಗ್ಲೆಂಡ್ ನಿರ್ಧಾರದ ವಿಲಕ್ಷಣ ವಿಷಯವಾಯಿತು.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ನಾಯಕ ಸ್ಟೋಕ್ಸ್ ಮತ್ತು ಮುಖ್ಯ ತರಬೇತುದಾರ ಬ್ರೆಂಡನ್ ಮೆಕಲಮ್ ನಿರ್ಧಾರದ ಬಗ್ಗೆ ನೆಟ್ಟಿಗರು ಹಾಗೂ ಕ್ರಿಕೆಟ್ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಹಾಗೆಯೇ ಈ ಇಬ್ಬರ ನಿರ್ಧಾರವನ್ನು ಹುಚ್ಚುತನದ ನಿರ್ಧಾರ ಎಂದಿದ್ದರೆ, ಇನ್ನೂ ಕೆಲವರು ಇಂಗ್ಲೆಂಡ್ ನಾಯಕನ ನಿರ್ಧಾರವನ್ನು ಬ್ರಿಲಿಯೆಂಟ್ ಎಂದು ಹೊಗಳಿದ್ದಾರೆ.
England declare what’s happening ?
— England’s Barmy Army ???????? (@TheBarmyArmy) June 16, 2023
These England guys are mental… they declare when literally no one expects them to ?
— arfan (@Im__Arfan) June 16, 2023
And England declare. Of course they have. Totally bonkers and totally brilliant. Superb from Joe Root in making an unbeaten 118 in England’s 393 for eight and now they will have 20 minutes at Australia….
— Paul Newman (@Paul_NewmanDM) June 16, 2023
That’s the most Bazball declaration ???#England declare for 393/8….ON DAY 1!!!#AUSvsENG
— Broken Cricket Dreams Cricket Blog (@cricket_broken) June 16, 2023
You got to be kidding me
Why would England declare on the 1st day of the test ?#Ashes2023
— Alam (@Alam_Strikes) June 16, 2023
ಆಶಸ್ನಲ್ಲಿ ಇತಿಹಾಸ ಸೃಷ್ಟಿಸಿದ ಇಂಗ್ಲೆಂಡ್
ಆಶಸ್ ಇತಿಹಾಸದಲ್ಲಿ ಇಷ್ಟು ಕಡಿಮೆ ಓವರ್‌ಗಳಿಗೆ (78 ಓವರ್) ತಂಡವೊಂದು ಡಿಕ್ಲೇರ್ ಮಾಡಲು ನಿರ್ಧರಿಸಿದ ದಾಖಲೆಗೆ ಇಂಗ್ಲೆಂಡ್ ಭಾಜನವಾಗಿದೆ. ಈ ಹಿಂದೆ, 1937 ರಲ್ಲಿ ಆಸ್ಟ್ರೇಲಿಯಾ 66 ಓವರ್‌ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿ ದಾಖಲೆಯನ್ನು ಬರೆದಿತ್ತು. ಆದರೆ, ಆ ಸಮಯದಲ್ಲಿ ಒಂದು ಓವರ್ಗೆ 6 ಎಸೆತಗಳ ಬದಲು 8 ಎಸೆತಗಳಿದ್ದವು. ಹೀಗಾಗಿ ಇದೀಗ ಇಂಗ್ಲೆಂಡ್ ತೆಗೆದುಕೊಂಡ ನಿರ್ಧಾರವು ದಾಖಲೆಯಾಗಿದೆ.
ಅತಿ ಕಡಿಮೆ ಓವರ್‌ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ ವಿಚಾರದಲ್ಲಿ ಮೂರು, ನಾಲ್ಕನೇ ಮತ್ತು ಐದನೇ ಸ್ಥಾನವನ್ನು ಇಂಗ್ಲೆಂಡ್ ತಂಡವೇ ಪಡೆದುಕೊಂಡಿದೆ. ಕ್ರಮವಾಗಿ ಇಂಗ್ಲೆಂಡ್ 1912 ರಂದು ಲಾರ್ಡ್ಸ್‌ನಲ್ಲಿ 90 ಓವರ್‌ಗಳಿಗೆ, 1964 ಮತ್ತು 1956 ರಲ್ಲಿ ನಾಟಿಂಗ್ಹ್ಯಾಮ್ ಟೆಸ್ಟ್ನಲ್ಲಿ ಎರಡನೇ ದಿನದಂದು 102 ಮತ್ತು 104 ನೇ ಓವರ್‌ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿ ಈ ದಾಖಲೆ ಬರೆದಿತ್ತು.
ಭಾಝ್ ಬಾಲ್ ಕ್ರಿಕೆಟ್
ಇನ್ನು ಇಂಗ್ಲೆಂಡ್ ಮೊದಲ ದಿನವೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿರುವುದು ಕೆಲವರಿಗೆ ಅಚ್ಚರಿ ಮೂಡಿಸಿದೆ. ಆದರೆ ಸ್ಟೋಕ್ಸ್ ಮತ್ತು ಮೆಕಲಮ್ ಅವರ ಭಾಝ್ ಬಾಲ್ ಕ್ರಿಕೆಟ್ ಸಿದ್ಧಾಂತಕ್ಕೆ (ಫಲಿತಾಂಶ-ಆಧಾರಿತ ಮತ್ತು ಆಕ್ರಮಣಕಾರಿ ಕ್ರಿಕೆಟ್) ಈ ನಿರ್ಧಾರ ಪೂರಕವಾಗಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಅಧ್ಯಾಯ ಆರಂಭಿಸಿರುವ ಇಂಗ್ಲೆಂಡ್, ಆಕ್ರಮಣಕಾರಿ ಆಟಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಇದಕ್ಕೆ ಉದಾಹರಣೆಯಾಗಿ ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಕೇವಲ 58 ಓವರ್‌ಗಳ ಬ್ಯಾಟಿಂಗ್ ಮಾಡಿ 9 ವಿಕೆಟ್ ಕಳೆದುಕೊಂಡು 325 ರನ್ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ ಟೆಸ್ಟ್ನಲ್ಲಿ ಅತಿ ಕಡಿಮೆ ಓವರ್‌ಗಳಿಗೆ ಇನ್ನಿಂಗ್ಸ್ ಮುಗಿಸಿದ 2ನೇ ತಂಡ ಎಂಬ ದಾಖಲೆಯನ್ನು ಇಂಗ್ಲೆಂಡ್ ಬರೆದಿತ್ತು.
ಇನ್ನು ಮೊದಲ ದಿನವೇ ಇಂಗ್ಲೆಂಡ್ 393 ರನ್ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದರಿಂದ, ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ದಿನದಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೆ, 4 ಓವರ್ ಬ್ಯಾಟಿಂಗ್ ಮಾಡಿ 14 ರನ್ ಕಲೆಹಾಕಿದೆ. ಹೀಗಾಗಿ ಮೊದಲ ದಿನವೇ ಆಸೀಸ್ಗೆ ಆಘಾತ ನೀಡಲು ಮುಂದಾಗಿದ್ದ ಇಂಗ್ಲೆಂಡ್ ತಂಡದ ಯೋಜನೆ ಬುಡಮೇಲಾದಂತ್ತಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:29 am, Sat, 17 June 23