ಇಂಗ್ಲೆಂಡ್ ಟೆಸ್ಟ್ ತಂಡ ಪ್ರಕಟ: 21 ವರ್ಷದ ಯುವ ಆಟಗಾರ ಆಯ್ಕೆ
England vs New Zealand: ನವೆಂಬರ್ 28 ರಿಂದ ಶುರುವಾಗಲಿರುವ ಇಂಗ್ಲೆಂಡ್ ವಿರುದ್ಧದ ಈ ಸರಣಿಯು ನ್ಯೂಝಿಲೆಂಡ್ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಸರಣಿಯನ್ನು ಕಿವೀಸ್ ಪಡೆ 3-0 ಅಂತರದಿಂದ ಗೆದ್ದುಕೊಂಡರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಆಸೆಯನ್ನು ಜೀವಂತವಿರಿಸಿಕೊಳ್ಳಬಹುದು.
ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ತಂಡವನ್ನು ಘೋಷಿಸಲಾಗಿದೆ. 16 ಸದಸ್ಯರ ಈ ತಂಡವನ್ನು ಬೆನ್ ಸ್ಟೋಕ್ಸ್ ಮುನ್ನಡೆಸಲಿದ್ದು, ಒಲೀ ಪೋಪ್ ಉಪನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ತಂಡಕ್ಕೆ ಹೊಸ ಮುಖವಾಗಿ 21 ವರ್ಷದ ಜೇಕೊಬ್ ಬೆಥೆಲ್ ಆಯ್ಕೆಯಾಗಿದ್ದಾರೆ. ಜೇಕೊಬ್ ಬೆಥೆಲ್ ಈಗಾಗಲೇ ಕೌಂಟಿ ಕ್ರಿಕೆಟ್ನಲ್ಲಿ ಆಲ್ರೌಂಡರ್ ಆಟದೊಂದಿಗೆ ಸಂಚಲನ ಸೃಷ್ಟಿಸಿದ್ದಾರೆ. ಇದೀಗ ಟೆಸ್ಟ್ ತಂಡಕ್ಕೂ ಬೆಥೆಲ್ಗೂ ಬುಲಾವ್ ನೀಡಲಾಗಿರುವುದು ವಿಶೇಷ.
ಇನ್ನು ವಿಕೆಟ್ ಕೀಪರ್ ಬ್ಯಾಟರ್ ಜಾಮಿ ಸ್ಮಿತ್ ಪಿತೃತ್ವ ರಜೆಯಲ್ಲಿರುವ ಕಾರಣ ಈ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಜೋರ್ಡನ್ ಕಾಕ್ಸ್ ಅವರನ್ನು ಹೆಚ್ಚುವರಿ ವಿಕೆಟ್ ಕೀಪರ್ ಆಗಿ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅದರಂತೆ ನ್ಯೂಝಿಲೆಂಡ್ ವಿರುದ್ಧದ ಸರಣಿಗೆ ಇಂಗ್ಲೆಂಡ್ ತಂಡ ಈ ಕೆಳಗಿನಂತಿದೆ…
ಇಂಗ್ಲೆಂಡ್ ಟೆಸ್ಟ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ರೆಹಾನ್ ಅಹ್ಮದ್, ಗಸ್ ಅಟ್ಕಿನ್ಸನ್, ಶೋಯೆಬ್ ಬಶೀರ್, ಜೇಕೊಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಜೋರ್ಡನ್ ಕಾಕ್ಸ್, ಝಾಕ್ ಕ್ರಾಲಿ, ಬೆನ್ ಡಕೆಟ್ , ಜಾಕ್ ಲೀಚ್, ಒಲೀ ಪೋಪ್, ಮ್ಯಾಥ್ಯೂ ಪಾಟ್ಸ್, ಜೋ ರೂಟ್, ಒಲೀ ಸ್ಟೋನ್, ಕ್ರಿಸ್ ವೋಕ್.
ನ್ಯೂಝಿಲೆಂಡ್ vs ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ:
- ನವೆಂಬರ್ 23 ರಿಂದ 24: ಎರಡು ದಿನಗಳ ಅಭ್ಯಾಸ ಪಂದ್ಯ
- ನವೆಂಬರ್ 28 ರಿಂದ 2: ಮೊದಲ ಟೆಸ್ಟ್ ಪಂದ್ಯ- ಹ್ಯಾಗ್ಲಿ ಓವಲ್ ಮೈದಾನ, ಕ್ರೈಸ್ಟ್‌ಚರ್ಚ್
- ಡಿಸೆಂಬರ್ 6 ರಿಂದ 10: ಎರಡನೇ ಟೆಸ್ಟ್ ಪಂದ್ಯ- ಬೇಸಿನ್ ರಿಸರ್ವ್ ಸ್ಟೇಡಿಯಂ, ವೆಲ್ಲಿಂಗ್ಟನ್
- ಡಿಸೆಂಬರ್ 14 ರಿಂದ 18: ಮೂರನೇ ಟೆಸ್ಟ್ ಪಂದ್ಯ- ಸೆಡನ್ ಪಾರ್ಕ್ ಸ್ಟೇಡಿಯಂ, ಹ್ಯಾಮಿಲ್ಟನ್
ನ್ಯೂಝಿಲೆಂಡ್ಗೆ ನಿರ್ಣಾಯಕ ಸರಣಿ:
ಇಂಗ್ಲೆಂಡ್ ವಿರುದ್ಧದ ಈ ಸರಣಿಯು ನ್ಯೂಝಿಲೆಂಡ್ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಸರಣಿಯನ್ನು ಕಿವೀಸ್ ಪಡೆ 3-0 ಅಂತರದಿಂದ ಗೆದ್ದುಕೊಂಡರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಆಸೆಯನ್ನು ಜೀವಂತವಿರಿಸಿಕೊಳ್ಳಬಹುದು.
ಇದನ್ನೂ ಓದಿ: IPL 2025: RCB ತಂಡಕ್ಕೆ ವಿರಾಟ್ ಕೊಹ್ಲಿ ನಾಯಕ?
ಅತ್ತ ಇಂಗ್ಲೆಂಡ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ರೇಸ್ನಲ್ಲಿ ಉಳಿಯಬೇಕಿದ್ದರೆ ನ್ಯೂಝಿಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಜಯ ಸಾಧಿಸಬೇಕು. ಹೀಗಾಗಿ ಈ ಸರಣಿಯಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.