Faf Duplessis: ಜೆರ್ಸಿ ಬಿಡುಗಡೆ ಕಾರ್ಯಕ್ರಮದಲ್ಲಿ ಆರ್‌ಸಿಬಿ ನಾಯಕ ಡುಪ್ಲೆಸಿಸ್ಗೆ ಭಾರೀ ಅವಮಾನ: ವಿಡಿಯೋ
RCB Green Jersey Launch: ಇಂಡಿಯನ್ ಪ್ರೀಮಿಯರ್ ಲೀಗ್ 2024 ಟೂರ್ನಿ ಮಾರ್ಚ್ 22 ರಂದು ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ-ಸಿಎಸ್ಕೆ ಮುಖಾಮುಖಿ ಆಗಲಿದೆ. ಇದಕ್ಕೂ ಮುನ್ನ ಚೆನ್ನೈನಲ್ಲಿ ಆರ್ಸಿಬಿಯ ಗ್ರೀನ್ ಜೆರ್ಸಿ ಬಿಡುಗಡೆ ಕಾರ್ಯಕ್ರಮ ಇತ್ತು. ಇದರಲ್ಲಿ ನಾಯಕ ಫಾಫ್ ಡುಪ್ಲೆಸಿಸ್ಗೆ ಅವಮಾನವಾಗಿದೆ.
ಬಹುನಿರೀಕ್ಷಿತ ಐಪಿಎಲ್ 2024 ಟೂರ್ನಿಗೆ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮಾರ್ಚ್ 22 ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಆರ್‌ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (RCB vs CSK) ನಡುವಣ ಪಂದ್ಯದ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ. ಚೊಚ್ಚಲ ಪಂದ್ಯದಲ್ಲಿ ಗೆಲ್ಲುವ ನಿರೀಕ್ಷೆಯೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೇ ಚೆನ್ನೈಗೆ ತಲುಪಿದ್ದು, ಅಭ್ಯಾಸ ನಡೆಸುತ್ತಿದೆ. ಇದರ ನಡುವೆ ಬುಧವಾರ ಚೆನ್ನೈನಲ್ಲಿ ಆರ್ಸಿಬಿಯ ಹಸಿರುವ ಜೆರ್ಸಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ವಿರಾಟ್ ಕೊಹ್ಲಿ , ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ನಾಯಕ ಫಾಫ್ ಡುಪ್ಲೆಸಿಸ್ ಭಾಗವಹಿಸಿದ್ದರು. ಈ ಸಂದರ್ಭ ವಿಶೇಷ ಘಟನೆ ನಡೆದಿದೆ.
ಹಸಿರು ಜೆರ್ಸಿ ಬಿಡುಗಡೆ ಸಮಾರಂಭದ ವೇಳೆ ಆರ್‌ಸಿಬಿ ನಾಯಕ ಫಾಫ್ ಡುಸಪ್ಲೆಸಿಸ್ ಬಳಿ ಪಾರ್ಟಿ ಕ್ರ್ಯಾಕರ್ ಸಿಡಿಸಲಾಗಿದೆ. ಇದರ ಶಬ್ದಕ್ಕೆ ಆಶ್ಚರ್ಯಗೊಂಡ ಫಾಫ್ ಮುಖ ತಿರುಗಿಸಿ ಒಂದು ಕ್ಷಣ ಆಘಾತಗೊಂಡರು. ಇದನ್ನು ಕಂಡ ಕೊಹ್ಲಿ ಮತ್ತು ಮ್ಯಾಕ್ಸ್‌ವೆಲ್ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಇದರಿಂದ ಫಾಫ್ಗೆ ಅವಮಾನವಾಯಿತು. ಬಳಿಕ ಫಾಫ್ ಕೂಡ ನಗುತ್ತಾ ನನಗೆ ಪಾರ್ಟಿ ಕ್ರ್ಯಾಕರ್ ಸಿಡಿಸಿದ್ದು ಆಶ್ಚರ್ಯವಾಯಿತು ಎಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ಮುಂಬೈ ಇಂಡಿಯನ್ಸ್ ಸೇರಿದ 12ನೇ ಕ್ಲಾಸ್ ಓದುತ್ತಿರುವ ಹುಡುಗ: ಮೊದಲ ಪಂದ್ಯದಲ್ಲೇ ಕಣಕ್ಕೆ?
ಪಾರ್ಟಿ ಕ್ರ್ಯಾಕರ್ ಸಿಡಿಸಿದ ಸಂದರ್ಭ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ರಿಯಾಕ್ಷನ್ ವಿಡಿಯೋ ಇಲ್ಲಿದೆ:
A fun moment in RCB’s Green Jersey launch event with Faf Du Plessis.
– Virat Kohli and Glenn Maxwell’s reactions was priceless…!!!! ❤️ 😂pic.twitter.com/K2Fnqis4oj
— CricketMAN2 (@ImTanujSingh) March 20, 2024
ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಋತುವಿನಲ್ಲಿ ತಮ್ಮ ಮೊದಲ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ ನಡೆಯಿತು. ಆ ಬಳಿಕ ಆಟಗಾರರು ಮಂಗಳವಾರ ರಾತ್ರಿ ಚೆನ್ನೈಗೆ ಪ್ರಯಾಣ ಬೆಳೆಸಿದರು. ಐಪಿಎಲ್ 2024 ರ ಮೊದಲ ಪಂದ್ಯದಲ್ಲಿ, ಆರ್‌ಸಿಬಿ ಎಂಎಸ್ ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸಲಿದೆ. ಶುಕ್ರವಾರ (ಮಾರ್ಚ್ 22) ಚೆನ್ನೈನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
ಒಲ್ಲದ ಮನಸ್ಸಿಂದ ಹಾರ್ದಿಕ್ಗೆ ಹಗ್ ಕೊಟ್ಟ ರೋಹಿತ್?: ಎಲ್ಲವನ್ನೂ ಹೇಳುತ್ತಿದೆ ಈ ವಿಡಿಯೋ
ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣು:
ವೈಯಕ್ತಿಕ ಕಾರಣಗಳಿಂದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಕಳೆದುಕೊಂಡಿದ್ದ ಬ್ಯಾಟಿಂಗ್ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ, ಐಪಿಎಲ್ 2024 ರಲ್ಲಿ ಆರ್‌ಸಿಬಿ ಪರ ಆಡಲು ಸಿದ್ಧರಾಗಿದ್ದಾರೆ. ಇದೀಗ ಒವರ ಮೇಲೆ ಎಲ್ಲರ ಕಣ್ಣಿದೆ. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿರುವ ಕೊಹ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 237 ಪಂದ್ಯಗಳಲ್ಲಿ 7263 ರನ್ ಗಳಿಸಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಒಂದೇ ತಂಡಕ್ಕಾಗಿ ಐಪಿಎಲ್‌ನ ಎಲ್ಲಾ 16 ಆವೃತ್ತಿಗಳಲ್ಲಿ ಆಡಿದ ಏಕೈಕ ಆಟಗಾರ ಕೊಹ್ಲಿ ಆಗಿದ್ದಾರೆ. ಐಪಿಎಲ್‌ನಲ್ಲಿ ಹೆಚ್ಚು ರನ್ ಗಳಿಸುವುದರ ಜೊತೆಗೆ, ಅವರು ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ ಮತ್ತು ಒಂದು ಋತುವಿನಲ್ಲಿ ಹೆಚ್ಚು ರನ್ ಗಳಿಸಿದ ದಾಖಲೆ ಕೂಡ ಇವರ ಹೆಸರಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ