IPL 2024: ಒಲ್ಲದ ಮನಸ್ಸಿಂದ ಹಾರ್ದಿಕ್ಗೆ ಹಗ್ ಕೊಟ್ಟ ರೋಹಿತ್?: ಎಲ್ಲವನ್ನೂ ಹೇಳುತ್ತಿದೆ ಈ ವಿಡಿಯೋ
Rohit Sharma Hug Hardik Pandya: ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ ಮತ್ತು ಹಾಲಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಮೈದಾನದಲ್ಲಿ ಪರಸ್ಪರ ಮುಖಾಮುಖಿ ಆಗಿ ತಬ್ಬಿಕೊಂಡರು. ಆದರೆ, ಈ ವಿಡಿಯೋದಲ್ಲಿ ರೋಹಿತ್, ಹಾರ್ದಿಕ್ ಅವರನ್ನು ಒಲ್ಲದ ಮನಸ್ಸಿನಿಂದ ಅಪ್ಪಿಕೊಂಡಂತೆ ಕಂಡುಬಂತು.
ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) ಟೂರ್ನಿ ಆರಂಭಕ್ಕೆ ಒಂದು ದಿನವಷ್ಟೆ ಬಾಕಿಯಿದೆ. ಈಗಾಗಲೇ ಎಲ್ಲ ಫ್ರಾಂಚೈಸಿಗೆ ಆಟಗಾರರ ಸೇರಿಕೊಂಡಿದ್ದು, ಅಭ್ಯಾಸ ಶುರುಮಾಡಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ಕೂಡ ತನ್ನ ತವರಿನಲ್ಲಿ ಪ್ರ್ಯಾಕ್ಟೀಸ್ ಮಾಡಿದ್ದಾರೆ. ಮೊದಲ ಅಭ್ಯಾಸ ಅವದಿಯಲ್ಲಿ ಮುಂಬೈ ಇಂಡಿಯನ್ಸ್ ಆಟಗಾರರು ಮೈದಾನದಲ್ಲಿ ಇರುವಾಗ ವಿಶೇಷ ಘಟನೆ ನಡೆಯಿತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಎಂಐಯ ಮಾಜಿ ನಾಯಕ ರೋಹಿತ್ ಶರ್ಮಾ ಮತ್ತು ಹಾಲಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಮೈದಾನದಲ್ಲಿ ಪರಸ್ಪರ ಮುಖಾಮುಖಿ ಆಗಿ ತಬ್ಬಿಕೊಂಡರು. ಆದರೆ, ಈ ವಿಡಿಯೋದಲ್ಲಿ ರೋಹಿತ್, ಹಾರ್ದಿಕ್ ಅವರನ್ನು ಒಲ್ಲದ ಮನಸ್ಸಿನಿಂದ ಅಪ್ಪಿಕೊಂಡಂತೆ ಕಂಡುಬಂತು.
ಅಭ್ಯಾಸಕ್ಕೆಂದು ಎಲ್ಲ ಆಟಗಾರರು ಮೈದಾನದಲ್ಲಿ ಇದ್ದರು. ಆ ಸಂದರ್ಭ ರೋಹಿತ್ ಅವರನ್ನು ಹಾರ್ದಿಕ್ ನೋಡಿದ್ದಾರೆ. ನೇರವಾಗಿ ರೋಹಿತ್ ಬಳಿ ಹೋಗಿ ರೋಹಿತ್ಗೆ ಹಗ್ ಕೊಟ್ಟಿದ್ದಾರೆ. ಹಿಟ್ಮ್ಯಾನ್ ಅಭಿಮಾನಿಗಳನ್ನು ಈ ವಿಡಿಯೋವನ್ನು ಕಂಡು ಮನಸ್ಸಿಲದಿದ್ದರೂ ರೋಹಿತ್ ಅವರು ಹಾರ್ದಿಕ್ರನ್ನು ಅಪ್ಪಿಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದರಲ್ಲಿ ರೋಹಿತ್ ಹಾವಭಾವ ಕೂಡ ಅದೇರೀತಿಯಲ್ಲಿತ್ತು.
ಗುಜರಾತ್, ಮುಂಬೈ ತಂಡಕ್ಕೆ ಇಬ್ಬರು ಬದಲಿ ಆಟಗಾರರು ಎಂಟ್ರಿ
ರೋಹಿತ್ ಅವರನ್ನು ಅಪ್ಪಿಕೊಂಡ ಹಾರ್ದಿಕ್ ಪಾಂಡ್ಯ ವಿಡಿಯೋ ಇಲ್ಲಿದೆ:
𝟰𝟱 🫂 𝟯𝟯#OneFamily #MumbaiIndians | @hardikpandya7 @ImRo45 pic.twitter.com/eyKSq7WwCV
— Mumbai Indians (@mipaltan) March 20, 2024
ಐಪಿಎಲ್ 2024ರಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಅಡಿಯಲ್ಲಿ ರೋಹಿತ್ ಶರ್ಮಾ ಆಡಲಿದ್ದರೆ. ಆದರೆ, ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಸ್ಟಾರ್ ಆಲ್ ರೌಂಡರ್ ರೋಹಿತ್ ನಾಯಕತ್ವದಲ್ಲಿ ಆಡಲಿದ್ದಾರೆ. ಐಸಿಸಿ ಈವೆಂಟ್‌ನಲ್ಲಿ ರೋಹಿತ್ ಮೆನ್ ಇನ್ ಬ್ಲೂ ತಂಡದ ನಾಯಕರಾಗುತ್ತಾರೆ ಎಂದು ಬಿಸಿಸಿಐ ಖಚಿತಪಡಿಸಿದೆ.
ಮುಂಬೈ ಇಂಡಿಯನ್ಸ್ ಐಪಿಎಲ್ ವೇಳಾಪಟ್ಟಿ
ಮುಂಬೈ ಇಂಡಿಯನ್ಸ್ ತನ್ನ ಐಪಿಎಲ್ 2024 ಅಭಿಯಾನವನ್ನು ಮಾರ್ಚ್ 24 ರಂದು ಗುಜರಾತ್ ಟೈಟಾನ್ಸ್ ವಿರುದ್ಧ ಆಡುವ ಮೂಲಕ ಆರಂಭಿಸಲಿದೆ. ಮಾರ್ಚ್ 27 ರಂದು ತಮ್ಮ ಎರಡನೇ ಪಂದ್ಯಕ್ಕಾಗಿ ಹೈದರಾಬಾದ್‌ಗೆ ಪ್ರಯಾಣಿಸಲಿದ್ದಾರೆ. ಬಳಿಕ ಏಪ್ರಿಲ್ 1 ರಂದು ರಾಜಸ್ಥಾನ ರಾಯಲ್ಸ್ ವಿರುದ್ಧ ತಮ್ಮ ಮೊದಲ ತವರು ಪಂದ್ಯವನ್ನು ಆಡಲಿದೆ. ಮುಂದಿನ ಪಂದ್ಯವು ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಏಪ್ರಿಲ್ 7 ರಂದು ನಡೆಯಲಿದೆ. ಎರಡು ತಂಡಗಳ ನಡುವಿನ ಸೂಪರ್ ಸಂಡೆ ಪಂದ್ಯ 3:30 PM IST ಕ್ಕೆ ಪ್ರಾರಂಭವಾಗುತ್ತದೆ. ನಂತರದ ವೇಳಾಪಟ್ಟಿ ಇನ್ನಷ್ಟೆ ಪ್ರಕಟವಾಗಬೇಕಿದೆ.
ದೇಶದ 50 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್; ಪಟ್ಟಿಯಲ್ಲಿ ಮೈಸೂರು..!
ಮುಂಬೈ ಇಂಡಿಯನ್ಸ್ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಡೆವಾಲ್ಡ್ ಬ್ರೆವಿಸ್, ಟಿಮ್ ಡೇವಿಡ್, ತಿಲಕ್ ವರ್ಮಾ, ಅರ್ಜುನ್ ತೆಂಡೂಲ್ಕರ್, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಲ್, ನೆಹಾಲ್ ವಧೇರಾ, ಶಮ್ಸ್ ಮುಲಾನಿ, ವಿಷ್ಣು ವಿನೋದ್, ಪಿಯೂಷ್ ಚಾವ್ಲಾ, ರೊಮಾರಿಯೊ ಶೆಫರ್ಡ್, ಜೆರಾಲ್ಡ್ ಕೋಟ್ಝಿ, ದಿಲ್ಶನ್ ಮಧುಶಂಕ, ಶ್ರೇಯಸ್ ಗೋಪಾಲ್, ನುವಾನ್ ತುಷಾರ, ಅನ್ಶುಲ್ ಕಾಂಬೋಜ್, ನಮನ್ ಧೀರ್, ಮೊಹಮ್ಮದ್ ನಬಿ, ಶಿವಾಲಿಕ್ ಶರ್ಮಾ, ಲ್ಯೂಕ್ ವುಡ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ