IPL 2024: ದೇಶದ 50 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್‌; ಪಟ್ಟಿಯಲ್ಲಿ ಮೈಸೂರು..!

IPL 2024: ದೇಶದ 50 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್​ ನಿರ್ಮಿಸುವುದಾಗಿ ಬಿಸಿಸಿಐ ಘೋಷಿಸಿದೆ. ಸದ್ಯಕ್ಕೆ ಮೊದಲ 22 ಪಂದ್ಯಗಳ ಅಂದರೆ ಮೊದಲಾರ್ಧದ ಐಪಿಎಲ್​ನಲ್ಲಿ ನಡೆಯಲ್ಲಿರುವ ಪಂದ್ಯಗಳಿಗೆ ಯಾವ್ಯಾವ ಸ್ಥಳದಲ್ಲಿ ಯಾವ್ಯಾವ ದಿನಾಂಕದಂದು ಫ್ಯಾನ್ ಪಾರ್ಕ್​ ಆಯೋಜಿಸಲಿದೆ ಎಂಬುದನ್ನು ಬಿಸಿಸಿಐ ಪ್ರಕಟಿಸಿದೆ.

IPL 2024: ದೇಶದ 50 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್‌; ಪಟ್ಟಿಯಲ್ಲಿ ಮೈಸೂರು..!
ಐಪಿಎಲ್ ಫ್ಯಾನ್ ಪಾರ್ಕ್​
Follow us
ಪೃಥ್ವಿಶಂಕರ
|

Updated on:Mar 20, 2024 | 9:43 PM

ಇದೇ ಮಾರ್ಚ್​ 22 ರಿಂದ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಆರಂಭವಾಗಲಿದೆ. ಲೋಕಸಭಾ ಚುನಾವಣೆ ಇರುವ ಕಾರಣ ಇದುವರೆಗೆ ಮೊದಲ 22 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಇಷ್ಟರಲ್ಲೇ ಬಿಡುಗಡೆ ಮಾಡಲು ಬಿಸಿಸಿಐ (BCCI) ತಯಾರಿ ನಡೆಸಿದೆ. ಈ ನಡುವೆ ಐಪಿಎಲ್ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ ನೀಡಿರುವ ಮಂಡಳಿ, ದೇಶದ 50 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್ (IPL 2024 Fan Park)​ ನಿರ್ಮಿಸುವುದಾಗಿ ಘೋಷಿಸಿದೆ. ಸದ್ಯಕ್ಕೆ ಮೊದಲ 22 ಪಂದ್ಯಗಳ ಅಂದರೆ ಮೊದಲಾರ್ಧದ ಐಪಿಎಲ್​ನಲ್ಲಿ ನಡೆಯಲ್ಲಿರುವ ಪಂದ್ಯಗಳಿಗೆ ಯಾವ್ಯಾವ ಸ್ಥಳದಲ್ಲಿ ಯಾವ್ಯಾವ ದಿನಾಂಕದಂದು ಫ್ಯಾನ್ ಪಾರ್ಕ್​ ಆಯೋಜಿಸಲಿದೆ ಎಂಬುದನ್ನು ಬಿಸಿಸಿಐ ಪ್ರಕಟಿಸಿದೆ.

15 ಫ್ಯಾನ್ ಪಾರ್ಕ್‌

ಐಪಿಎಲ್​ ಅನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯುವ ಸಲುವಾಗಿ ಬಿಸಿಸಿಐ 2015 ರ ಆವೃತ್ತಿಯಿಂದ ಈ ಫ್ಯಾನ್ ಪಾರ್ಕ್​ ಅನ್ನು ಆಯೋಜಿಸುತ್ತಿದೆ. ಯಾರಿಗೆ ಮೈದಾನಕ್ಕೆ ಹೋಗಿ ಪಂದ್ಯವನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲವೋ ಅಂತಹವರು ಮೈದಾನದಲ್ಲಿ ಪಂದ್ಯವನ್ನು ವೀಕ್ಷಿಸಿದ ಅನುಭವವನ್ನು ಈ ಫ್ಯಾನ್ ಪಾರ್ಕ್​ನಲ್ಲಿ ಪಡೆದುಕೊಳ್ಳಬಹುದಾಗಿದೆ. ಮೇಲೆ ಹೇಳಿದಂತೆ ಮೊದಲ ಎರಡು ವಾರಗಳಲ್ಲಿ ಅಂದರೆ 22 ಮಾರ್ಚ್ 2024 ರಿಂದ 7 ಏಪ್ರಿಲ್ 2024 ರವರೆಗೆ ಮೊದಲ ಹಂತದಲ್ಲಿ 15 ಫ್ಯಾನ್ ಪಾರ್ಕ್‌ಗಳು ಇರುತ್ತವೆ. ಐಪಿಎಲ್ ಉದ್ಘಾಟನಾ ಪಂದ್ಯದಿಂದಲೇ ಈ ಫ್ಯಾನ್ ಪಾರ್ಕ್​ ಇರಲಿದೆ.

IPL 2024: ಐಪಿಎಲ್​ನಲ್ಲಿ ಈ ಐದು ದಾಖಲೆಗಳನ್ನು ಮುರಿಯುವುದು ಕಷ್ಟಸಾಧ್ಯ..!

11 ರಾಜ್ಯಗಳಲ್ಲಿ ಫ್ಯಾನ್ ಪಾರ್ಕ್‌

ಅಂದರೆ ಆರ್​ಸಿಬಿ ಹಾಗೂ ಸಿಎಸ್​ಕೆ ನಡುವೆ ನಡೆಯಲ್ಲಿರುವ ಉದ್ಘಾಟನಾ ಪಂದ್ಯಕ್ಕೆ ಮಧುರೈನಲ್ಲಿ ಈ ಫ್ಯಾನ್ ಪಾರ್ಕ್ ಆಯೋಜಿಸಲಾಗುವುದು. ಭಾರತದ 11 ರಾಜ್ಯಗಳಲ್ಲಿ ಫ್ಯಾನ್ ಪಾರ್ಕ್‌ಗಳನ್ನು ಸ್ಥಾಪಿಸಲಾಗುತ್ತಿದ್ದು, ಅವುಗಳಲ್ಲಿ ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ತಮಿಳುನಾಡು, ಉತ್ತರಾಖಂಡ, ಗುಜರಾತ್, ಕರ್ನಾಟಕ, ಜಾರ್ಖಂಡ್, ಪಂಜಾಬ್ ಮತ್ತು ತೆಲಂಗಾಣ ರಾಜ್ಯಗಳು ಸೇರಿವೆ. ಪ್ರತಿ ವಾರ ಒಂದೇ ಬಾರಿಗೆ ಒಟ್ಟು ಐದು ಸ್ಥಳಗಳಲ್ಲಿ ಫ್ಯಾನ್ ಪಾರ್ಕ್‌ಗಳು ಇರುತ್ತವೆ. ಮುಂದಿನ ಫ್ಯಾನ್ ಪಾರ್ಕ್‌ಗಳ ಸ್ಥಳಗಳನ್ನು ಉಳಿದಾರ್ಧದ ವೇಳಾಪಟ್ಟಿಯ ಪ್ರಕಾರ ಪ್ರಕಟಿಸಲಾಗುತ್ತದೆ ಎಂದು ಬಿಸಿಸಿಐ ಹೇಳಿದೆ.

ಫ್ಯಾನ್ ಪಾರ್ಕ್ ನಗರಗಳ ಸಂಪೂರ್ಣ ಪಟ್ಟಿ

  • ಮಾರ್ಚ್ 23, 24: ಮೀರತ್ (ಉತ್ತರ ಪ್ರದೇಶ)
  • ಏಪ್ರಿಲ್ 6, 7: ವಾರಣಾಸಿ (ಉತ್ತರ ಪ್ರದೇಶ)
  • ಮಾರ್ಚ್ 23, 24: ಬಿಕಾನೇರ್ (ರಾಜಸ್ಥಾನ)
  • ಮಾರ್ಚ್ 23, 24: ಮಿಡ್ನಾಪುರ (ಪಶ್ಚಿಮ ಬಂಗಾಳ)
  • ಮಾರ್ಚ್ 23, 24: ಸೋಲಾಪುರ (ಮಹಾರಾಷ್ಟ್ರ)
  • ಏಪ್ರಿಲ್ 6, 7: ನಾಗ್ಪುರ (ಮಹಾರಾಷ್ಟ್ರ)
  • ಮಾರ್ಚ್ 22, 23: ಮಧುರೈ (ತಮಿಳುನಾಡು)
  • ಮಾರ್ಚ್ 30, 31: ಕೊಯಮತ್ತೂರು (ತಮಿಳುನಾಡು)
  • ಏಪ್ರಿಲ್ 6, 7: ಡೆಹ್ರಾಡೂನ್ (ಉತ್ತರಾಖಂಡ)
  • ಏಪ್ರಿಲ್ 6, 7: ರಾಜ್‌ಕೋಟ್ (ಗುಜರಾತ್)
  • ಮಾರ್ಚ್ 30, 31: ನಾಡಿಯಾಡ್ (ಗುಜರಾತ್)
  • ಏಪ್ರಿಲ್ 6, 7: ಮೈಸೂರು (ಕರ್ನಾಟಕ)
  • ಮಾರ್ಚ್ 30, 31: ಜಮ್ಶೆಡ್ಪುರ (ಜಾರ್ಖಂಡ್)
  • ಮಾರ್ಚ್ 30, 31: ಪಟಿಯಾಲ (ಪಂಜಾಬ್)
  • ಮಾರ್ಚ್ 30, 31: ನಿಜಾಮಾಬಾದ್ (ತೆಲಂಗಾಣ)

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:40 pm, Wed, 20 March 24

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ