AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

NZ vs PAK: 2 ಓವರ್​ಗಳಲ್ಲಿ 51 ರನ್ಸ್​: ಪಾಕ್ ಬೌಲರ್​ಗಳ ಬೆಂಡೆತ್ತಿದ ಫಿನ್ ಅಲೆನ್

New Zealand vs Pakistan: ಪಾಕಿಸ್ತಾನ್ ವಿರುದ್ಧದ 3ನೇ ಟಿ20 ಪಂದ್ಯದಲ್ಲೂ ನ್ಯೂಝಿಲೆಂಡ್ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ 7 ವಿಕೆಟ್ ಕಳೆದುಕೊಂಡು 224 ರನ್ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 179 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ನ್ಯೂಝಿಲೆಂಡ್ ತಂಡವು 45 ರನ್​ಗಳ ಸಾಧಿಸಿದೆ.

NZ vs PAK: 2 ಓವರ್​ಗಳಲ್ಲಿ 51 ರನ್ಸ್​: ಪಾಕ್ ಬೌಲರ್​ಗಳ ಬೆಂಡೆತ್ತಿದ ಫಿನ್ ಅಲೆನ್
Haris Rauf-Fin Allen
TV9 Web
| Edited By: |

Updated on: Jan 17, 2024 | 12:10 PM

Share

ಡ್ಯುನೆಡಿನ್​ನ ಯೂನಿವರ್ಸಿಟಿ ಓವಲ್​ ಮೈದಾನದಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ 3ನೇ ಟಿ20 ಪಂದ್ಯದಲ್ಲೂ ಫಿನ್ ಅಲೆನ್ (Finn Allen) ಅಬ್ಬರಿಸಿದ್ದಾರೆ. ಈ ಬಾರಿ ಸಿಡಿಲಬ್ಬರದ ಎಂಬುದಷ್ಟೇ ವ್ಯತ್ಯಾಸ. ಏಕೆಂದರೆ ಈ ಪಂದ್ಯದಲ್ಲಿ ಅಲೆನ್ ಬ್ಯಾಟ್​ನಿಂದ ಸಿಡಿದಿರುವುದು ಬರೋಬ್ಬರಿ 16 ಸಿಕ್ಸರ್​ಗಳು. ಅದರಲ್ಲೂ ಪಾಕ್ ತಂಡದ ಪ್ರಮುಖ ವೇಗಿಗಳನ್ನು ಚೆಂಡಾಡಿದ ಅಲೆನ್ ರನ್​ ಮಳೆ ಹರಿಸಿದರು. ಈ ಮೂಲಕ ಕೇವಲ 48 ಎಸೆತಗಳಲ್ಲಿ ಶತಕ ಪೂರೈಸಿ ಬ್ಯಾಟ್ ಮೇಲೆಕ್ಕೆತ್ತಿದರು.

ವಿಶೇಷ ಎಂದರೆ ಪಾಕ್ ತಂಡದ ಪ್ರಮುಖ ಬೌಲರ್ ಹ್ಯಾರಿಸ್ ರೌಫ್ ಅವರ ಒಂದೇ ಓವರ್​ನಲ್ಲಿ ಅಲೆನ್ ಕಲೆಹಾಕಿದ್ದು ಬರೋಬ್ಬರಿ 27 ರನ್​ಗಳು. ಪವರ್​ಪ್ಲೇನ ಕೊನೆಯ ಓವರ್​ ಎಸೆದಿದ್ದ ಹ್ಯಾರಿಸ್ ಅವರ ಮೊದಲ ಎಸೆತಕ್ಕೆ ಅಲೆನ್ ಸಿಕ್ಸರ್ ಉತ್ತರ ನೀಡಿದರು. 2ನೇ ಎಸೆತದಲ್ಲಿ ಭರ್ಜರಿ ಫೋರ್ ಬಾರಿಸಿದರು.

ಇನ್ನು 3ನೇ ಎಸೆತದಲ್ಲಿ ಫೋರ್ ಬಾರಿಸುವ ಮೂಲಕ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 4ನೇ ಎಸೆತದಲ್ಲಿ ಮತ್ತೊಂದು ಸಿಕ್ಸ್​. 5ನೇ ಎಸೆತದಲ್ಲೂ ಸಿಕ್ಸರ್​. ಕೊನೆಯ ಎಸೆತದಲ್ಲಿ 1 ರನ್​ ಕಲೆಹಾಕಿದರು. ಈ ಮೂಲಕ ಫಿನ್ ಅಲೆನ್ ಹ್ಯಾರಿಸ್ ರೌಫ್ ಅವರ ಒಂದೇ ಓವರ್​ನಲ್ಲಿ 27 ರನ್ ಚಚ್ಚಿದ್ದರು.

ಶಾಹೀನ್​ಗೂ ಬಿಸಿ ಮುಟ್ಟಿಸಿದ್ದ ಅಲೆನ್:

ಇದಕ್ಕೂ ಮುನ್ನ ಮೊದಲ ಟಿ20 ಪಂದ್ಯದಲ್ಲಿ ಶಾಹೀನ್ ಅಫ್ರಿದಿ ಓವರ್​ನಲ್ಲಿ ಫಿನ್ ಅಲೆನ್ 24 ರನ್ ಬಾರಿಸಿದ್ದರು. ಆ ಓವರ್​ನಲ್ಲಿ 6,4,4,4,6 ಸಿಡಿಸುವ ಮೂಲಕ ನ್ಯೂಝಿಲೆಂಡ್ ದಾಂಡಿಗ ರನ್​ ಸುರಿಮಳೆಗೈದಿದ್ದರು. ಇದೀಗ ಹ್ಯಾರಿಸ್ ರೌಫ್ ಓವರ್​ನಲ್ಲೂ 27 ರನ್​ ಸಿಡಿಸಿದ್ದಾರೆ. ಈ ಮೂಲಕ ಪಾಕ್ ತಂಡದ ಪ್ರಮುಖ ವೇಗಿಗಳ ವಿರುದ್ಧ ಕೇವಲ 2 ಓವರ್​ಗಳಲ್ಲಿ 51 ರನ್​ ಚಚ್ಚಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.

View this post on Instagram

A post shared by TVNZ+ (@tvnz.official)

ವಿಶ್ವ ದಾಖಲೆ ಬರೆದ ಫಿನ್:

ಈ ಪಂದ್ಯದಲ್ಲಿ 62 ಎಸೆತಗಳನ್ನು ಎದುರಿಸಿದ ಫಿನ್ ಅಲೆನ್ 16 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 137 ರನ್ ಬಾರಿಸಿದ್ದರು. ಈ 16 ಸಿಕ್ಸ್​ಗಳೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇನಿಂಗ್ಸ್​ವೊಂದರಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆಯನ್ನು ಅಲೆನ್ ಸರಿಗಟ್ಟಿದ್ದಾರೆ.

ಈ ಹಿಂದೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ವಿಶ್ವ ದಾಖಲೆ ಅಫ್ಘಾನಿಸ್ತಾದ ಆರಂಭಿಕ ಆಟಗಾರ ಹಝರುತುಲ್ಲಾ ಝಝೈ ಹೆಸರಿನಲ್ಲಿತ್ತು. 2019 ರಲ್ಲಿ ಐರ್ಲೆಂಡ್ ವಿರುದ್ಧ ಝಝೈ ಒಟ್ಟು 16 ಸಿಕ್ಸ್​ಗಳನ್ನು ಸಿಡಿಸಿದ್ದರು. ಇದೀಗ ಫಿನ್ ಅಲೆನ್ ಕೂಡ 16 ಸಿಕ್ಸ್​ ಬಾರಿಸಿ ಈ ವಿಶ್ವ ದಾಖಲೆಯನ್ನು ಸರಿಗಟ್ಟಿರುವುದು ವಿಶೇಷ.

ಪಾಕ್ ತಂಡಕ್ಕೆ ಹ್ಯಾಟ್ರಿಕ್ ಸೋಲು:

ಪಾಕಿಸ್ತಾನ್ ವಿರುದ್ಧದ 3ನೇ ಟಿ20 ಪಂದ್ಯದಲ್ಲೂ ನ್ಯೂಝಿಲೆಂಡ್ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ 7 ವಿಕೆಟ್ ಕಳೆದುಕೊಂಡು 224 ರನ್ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 179 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ನ್ಯೂಝಿಲೆಂಡ್ ತಂಡವು 45 ರನ್​ಗಳ ಸಾಧಿಸಿದೆ.

ಇದನ್ನೂ ಓದಿ: Finn Allen: ಅಲೆನ್ ಅಬ್ಬರಕ್ಕೆ ಹಳೆಯ ದಾಖಲೆಗಳು ಉಡೀಸ್

ಈ ಗೆಲುವಿನೊಂದಿಗೆ ಐದು ಪಂದ್ಯಗಳ ಟಿ20 ಸರಣಿಯನ್ನು ನ್ಯೂಝಿಲೆಂಡ್ 3-0 ಅಂತರದಿಂದ ವಶಪಡಿಸಿಕೊಂಡಿದೆ. ಇದಕ್ಕೂ ಮುನ್ನ ನಡೆದ ಮೊದಲ ಟಿ20 ಪಂದ್ಯದಲ್ಲಿ ಪಾಕ್ ತಂಡವು 46 ರನ್​ಗಳಿಂದ ಸೋಲನುಭವಿಸಿತ್ತು. ಇನ್ನು 2ನೇ ಟಿ20 ಪಂದ್ಯದಲ್ಲಿ ನ್ಯೂಝಿಲೆಂಡ್ 21 ರನ್​ಗಳ ಜಯಭೇರಿ ಬಾರಿಸಿತ್ತು. ಇದೀಗ ಮೂರನೇ ಪಂದ್ಯದಲ್ಲೂ ಗೆಲ್ಲುವ ಮೂಲಕ ನ್ಯೂಝಿಲೆಂಡ್ ಪಾಕ್ ಪಡೆಗೆ ಹ್ಯಾಟ್ರಿಕ್ ಸೋಲುಣಿಸಿದೆ.

Follow Us
ಕೆಂಪೇಗೌಡ ಜಯಂತಿ ನಡೆಯಲು ಬಿಡದೇ ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶ
ಕೆಂಪೇಗೌಡ ಜಯಂತಿ ನಡೆಯಲು ಬಿಡದೇ ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶ
ಲಿಂಗನಮಕ್ಕಿ ಡ್ಯಾಂನಲ್ಲಿ ತೀವ್ರ ನೀರಿನ ಕೊರತೆ: ವಿದ್ಯುತ್ ಉತ್ಪಾದನೆ ಸ್ಥಗಿತ
ಲಿಂಗನಮಕ್ಕಿ ಡ್ಯಾಂನಲ್ಲಿ ತೀವ್ರ ನೀರಿನ ಕೊರತೆ: ವಿದ್ಯುತ್ ಉತ್ಪಾದನೆ ಸ್ಥಗಿತ
ಪ್ರತಿ ವರ್ಷ ಒಂದೊಂದು ಕ್ಷೇತ್ರದಲ್ಲಿ ಕೆಂಪೇಗೌಡ ಜಯಂತಿ ಆಚರಣೆ: ಸಿಎಂ
ಪ್ರತಿ ವರ್ಷ ಒಂದೊಂದು ಕ್ಷೇತ್ರದಲ್ಲಿ ಕೆಂಪೇಗೌಡ ಜಯಂತಿ ಆಚರಣೆ: ಸಿಎಂ
ಅಡ್ಡ ಮತದಾನ ಬಗ್ಗೆ ವಿಜಯೇಂದ್ರಗೆ ವವರದಿ ಸಲ್ಲಿಸಿ ಸಿ.ಟಿ ರವಿ ಹೇಳಿದ್ದೇನು?
ಅಡ್ಡ ಮತದಾನ ಬಗ್ಗೆ ವಿಜಯೇಂದ್ರಗೆ ವವರದಿ ಸಲ್ಲಿಸಿ ಸಿ.ಟಿ ರವಿ ಹೇಳಿದ್ದೇನು?
ಮಡಿಕೇರಿ: ಎಂಟು ತಿಂಗಳ ಮಗುವಿನ ಗಂಟಲಲ್ಲಿತ್ತು ಎಲ್​ಇಡಿ ಬಲ್ಬ್!
ಮಡಿಕೇರಿ: ಎಂಟು ತಿಂಗಳ ಮಗುವಿನ ಗಂಟಲಲ್ಲಿತ್ತು ಎಲ್​ಇಡಿ ಬಲ್ಬ್!
ರಾಯಚೂರು ಜಿಲ್ಲೆಯಲ್ಲಿ 318 ಶೂನ್ಯ ಶಿಕ್ಷಕ ಸರ್ಕಾರಿ ಶಾಲೆಗಳು!
ರಾಯಚೂರು ಜಿಲ್ಲೆಯಲ್ಲಿ 318 ಶೂನ್ಯ ಶಿಕ್ಷಕ ಸರ್ಕಾರಿ ಶಾಲೆಗಳು!
ಈ ರಾಶಿಯವರಿಗೆ ಇಂದು ಅದೃಷ್ಟ ಕೂಡಿ ಬರಲಿದೆ
ಈ ರಾಶಿಯವರಿಗೆ ಇಂದು ಅದೃಷ್ಟ ಕೂಡಿ ಬರಲಿದೆ
ಚಿಕ್ಕಬಳ್ಳಾಪುರ: ಅನ್ನಭಾಗ್ಯ ಯೋಜನೆಯ ಗೋಧಿ ಅಕ್ರಮ ಸಾಗಾಟ, 14 ಟನ್ ವಶಕ್ಕೆ
ಚಿಕ್ಕಬಳ್ಳಾಪುರ: ಅನ್ನಭಾಗ್ಯ ಯೋಜನೆಯ ಗೋಧಿ ಅಕ್ರಮ ಸಾಗಾಟ, 14 ಟನ್ ವಶಕ್ಕೆ
ಮೈಸೂರು ರಸ್ತೆ To ಮಾಗಡಿ ರಸ್ತೆ ಕೇವಲ 15 ನಿಮಿಷ: ಹೇಗಿದೆ ನೋಡಿ ಕೃಷ್ಣ ಪಥ
ಮೈಸೂರು ರಸ್ತೆ To ಮಾಗಡಿ ರಸ್ತೆ ಕೇವಲ 15 ನಿಮಿಷ: ಹೇಗಿದೆ ನೋಡಿ ಕೃಷ್ಣ ಪಥ
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ