AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

GT vs RR Highlights IPL 2023: ಸಂಜು, ಹೆಟ್ಮಾಯಿರ್ ಅರ್ಧಶತಕ; ಗುಜರಾತ್​ಗೆ ಸೋಲು

Gujarat Titans vs Rajasthan Royals IPL 2023 Highlights in Kannada: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಕದನ ರೋಚಕ ರೀತಿಯಲ್ಲಿ ಅಂತ್ಯಗೊಂಡಿದೆ. ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು 3 ವಿಕೆಟ್​ಗಳಿಂದ ಮಣಿಸಿತು.

GT vs RR Highlights IPL 2023: ಸಂಜು, ಹೆಟ್ಮಾಯಿರ್ ಅರ್ಧಶತಕ; ಗುಜರಾತ್​ಗೆ ಸೋಲು
ಗುಜರಾತ್- ರಾಜಸ್ಥಾನ್ ಮುಖಾಮುಖಿ
ಪೃಥ್ವಿಶಂಕರ
|

Updated on:Apr 16, 2023 | 11:14 PM

Share

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಕದನ ರೋಚಕ ರೀತಿಯಲ್ಲಿ ಅಂತ್ಯಗೊಂಡಿದೆ. ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು 3 ವಿಕೆಟ್​ಗಳಿಂದ ಮಣಿಸಿತು. ಈ ಪಂದ್ಯದಲ್ಲಿ ಟಾಸ್ ಸೋತ ಗುಜರಾತ್ ಟೈಟಾನ್ಸ್ ತಂಡ 20 ಓವರ್‌ಗಳ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತು. 178 ರನ್‌ಗಳ ಗುರಿ ಬೆನ್ನತ್ತಿದ್ದ ರಾಜಸ್ಥಾನ ತಂಡದ ಪರ ಸ್ಫೋಟಕ ಬ್ಯಾಟಿಂಗ್‌ ಮಾಡಿದ ಹೆಟ್ಮೆಯರ್ ಮತ್ತು ಸಂಜು ತಲಾ ಅರ್ಧಶತಕ ಸಿಡಿಸಿ ತಂಡವನ್ನು 19.2 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಗೆಲುವಿನ ದಡ ಸೇರಿಸಿದರು.

LIVE NEWS & UPDATES

The liveblog has ended.
  • 16 Apr 2023 11:10 PM (IST)

    ಹೆಟ್ಮಾಯಿರ್ ಗೆಲುವಿನ ಅರ್ಧಶತಕ

    20ನೇ ಓವರ್​ನ ಮೊದಲ ಎಸೆತದಲ್ಲಿ ಡಬಲ್ ಕದ್ದು ತಮ್ಮ ಅರ್ಧಶತಕ ಪೂರೈಸಿದ ಹೆಟ್ಮಾಯಿರ್ 2ನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

  • 16 Apr 2023 11:04 PM (IST)

    ಅಶ್ವಿನ್ ಮ್ಯಾಜಿಕ್, ಔಟ್

    ಜುರೆಲ್ ವಿಕೆಟ್ ಬಳಿಕ ಬಂದ ಅಶ್ವಿನ್ ಆಡಿದ ಎರಡು ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು. ಆನಂತರ ಮುಂದಿನ ಎಸೆತದಲ್ಲಿ ಔಟಾದರು.

  • 16 Apr 2023 11:03 PM (IST)

    ಶಮಿಗೆ ಸಿಕ್ಸರ್

    19ನೇ ಓವರ್ ಎಸೆದ ಶಮಿಗೆ ಮೊದಲ ಎಸೆತದಲ್ಲಿ ಜುರೆಲ್ ಸಿಕ್ಸರ್ ಬಾರಿಸಿದರು. ಆದರೆ ಮುಂದಿನ ಎಸೆತದಲ್ಲಿ ಕ್ಯಾಚಿತ್ತು ಔಟಾದರು.

  • 16 Apr 2023 11:00 PM (IST)

    ರಶೀದ್​ಗೆ ಸಿಕ್ಸರ್

    17ನೇ ಓವರ್​ನಲ್ಲಿ ದೃವ್ ಒಂದು ಬೌಂಡರಿ ಬಾರಿಸಿದರೆ, 18ನೇ ಓವರ್​ನಲ್ಲಿ ಹೆಟ್ಮಾಯಿರ್​, ರಶೀದ್​​ಗೆ 1 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು.

  • 16 Apr 2023 10:52 PM (IST)

    16 ಓವರ್ ಅಂತ್ಯ

    16ನೇ ಓವರ್​ನಲ್ಲಿ ಹೆಟ್ಮಾಯಿರ್ 2 ಸಿಕ್ಸರ್ ಬಾರಿಸಿದರೆ, ಜುರೆಲ್ ಬೌಂಡರಿ ಹೊಡೆದರು. ರಾಜಸ್ಥಾನ್ ಗೆಲುವಿಗೆ 24 ಎಸೆತಗಳಲ್ಲಿ 44 ರನ್ ಬೇಕು

  • 16 Apr 2023 10:43 PM (IST)

    ಸ್ಯಾಮ್ಸನ್ ಔಟ್

    15ನೇ ಓವರ್​ನಲ್ಲಿ 1 ಸಿಕ್ಸ್ ಹಾಗೂ 1 ಬೌಂಡರಿ ಬಾರಿಸಿದ ಸಂಜು ಕೊನೆಯ ಎಸೆತದಲ್ಲಿ ಕ್ಯಾಚಿತ್ತು ಔಟಾದರು.

  • 16 Apr 2023 10:42 PM (IST)

    ಸಂಜು ಅರ್ಧಶತಕ

    14ನೇ ಓವರ್​ನ 2ನೇ ಎಸೆತದಲ್ಲಿ ಸಿಂಗಲ್ ಕದ್ದ ನಾಯಕ ಸಂಜು 29 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ್ದಾರೆ.

  • 16 Apr 2023 10:41 PM (IST)

    ಹೆಟ್ಮಾಯಿರ್ ಸಿಕ್ಸ್

    14ನೇ ಓವರ್​ನಲ್ಲಿ ಒಂದು ಸಿಕ್ಸರ್ ಹಾಗೂ ಬೌಂಡರಿ ಬಾರಿಸಿದ ಹೆಟ್ಮಾಯಿರ್ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.

  • 16 Apr 2023 10:32 PM (IST)

    ರಶೀದ್​ಗೆ ಹ್ಯಾಟ್ರಿಕ್ ಸಿಕ್ಸ್

    ತಮ್ಮ ಕೋಟಾದ 3ನೇ ಓವರ್ ಬೌಲ್ ಮಾಡಲು ಬಂದ ರಶೀದ್​ ಖಾನ್​ಗೆ ರಾಜಸ್ಥಾನ್ ನಾಯಕ ಸಂಜು ಮೂರು ಎಸೆತಗಳಲ್ಲಿ ಮೂರು ಸಿಕ್ಸರ್ ಬಾರಿಸಿದರು.

  • 16 Apr 2023 10:25 PM (IST)

    ಸಂಜು ಸಿಕ್ಸರ್

    ಪರಾಗ್ ವಿಕೆಟ್ ಉರುಳಿಸಿದ ರಶೀದ್ ಓವರ್​ನ ಕೊನೆಯ ಎಸೆತವನ್ನು ಸಂಜು ಡೀಪ್ ಮಿಡ್ ವಿಕೆಟ್​ನಲ್ಲಿ ಸಿಕ್ಸರ್​ಗಟ್ಟಿದರು.

  • 16 Apr 2023 10:21 PM (IST)

    ರಶೀದ್​ಗೆ ಮತ್ತೊಂದು ವಿಕೆಟ್

    ಹಿಂದಿನ ಓವರ್​ನಲ್ಲಿ ಪಡಿಕಲ್ ವಿಕೆಟ್ ಉರುಳಿಸಿದ್ದ ರಶೀದ್ ತಮ್ಮ ಮುಂದಿನ ಓವರ್​ನಲ್ಲಿ ಪರಾಗ್ ವಿಕೆಟ್ ಉರುಳಿಸಿದ್ದಾರೆ. ಲಾಂಗ್ ಆಫ್​ನಲ್ಲಿ ಮಿಲ್ಲರ್ ಕ್ಯಾಚ್ ತೆಗೆದುಕೊಂಡರು.

  • 16 Apr 2023 10:13 PM (IST)

    ಪಡಿಕಲ್ ಔಟ್

    25 ಎಸೆತಗಳಲ್ಲಿ 26 ರನ್ ಬಾರಿಸಿದ್ದ ಪಡಿಕಲ್ ಶಾರ್ಟ್​ ಥರ್ಡ್​ಮ್ಯಾನ್​ನಲ್ಲಿ ಕ್ಯಾಚಿತ್ತು ಔಟಾದರು. 9ನೇ ಓವರ್​ನಲ್ಲಿ ರಶೀದ್ ಖಾನ್ ಈ ವಿಕೆಟ್ ಪಡೆದರು.

  • 16 Apr 2023 10:03 PM (IST)

    ಸಂಜು ಸಿಕ್ಸರ್

    7ನೇ ಓವರ್​ನ 2ನೇ ಎಸೆತವನ್ನು ಸಂಜು ಡೀಪ್ ಸ್ಕ್ವೇರ್ ಲೆಗ್​ನಲ್ಲಿ ಸಿಕ್ಸರ್​ಗಟ್ಟಿದರೆ, 5ನೇ ಎಸೆತವನ್ನು ಎಕ್ಸ್ಟ್ರಾ ಕವರ್​ನಲ್ಲಿ ಪಡಿಕಲ್ ಬೌಂಡರಿಗಟ್ಟಿದರು.

  • 16 Apr 2023 10:01 PM (IST)

    ಪವರ್​ ಪ್ಲೇ ಅಂತ್ಯ

    6ನೇ ಓವರ್​ನ 4ನೇ ಎಸೆತವನ್ನು ಪಡಿಕಲ್ ವೈಡ್ ಲಾಂಗ್ ಆಫ್​ನಲ್ಲಿ ಸಿಕ್ಸರ್ ಬಾರಿಸಿದರು. ರಾಜಸ್ಥಾನ್ ರಾಯಲ್ಸ್ ಪರ ಪಡಿಕ್ಕಲ್ 19 ರನ್ ಹಾಗೂ ಸಂಜು 4 ರನ್ ಗಳಿಸಿ ಆಡುತ್ತಿದ್ದಾರೆ. 6 ಓವರ್‌ಗಳ ನಂತರ ರಾಜಸ್ಥಾನ ಸ್ಕೋರ್ 26/2

  • 16 Apr 2023 10:00 PM (IST)

    ಪಡಿಕಲ್ ಸಿಕ್ಸರ್

    5ನೇ ಓವರ್​ನಲ್ಲಿ ಪಡಿಕಲ್ ಸಿಕ್ಸರ್ ಬಾರಿಸಿದರು. ರಾಜಸ್ಥಾನ್ ರಾಯಲ್ಸ್ ಪರ ಪಡಿಕ್ಕಲ್ 13 ರನ್ ಮತ್ತು ಸಂಜು 4 ರನ್ ಗಳಿಸಿ ಆಡುತ್ತಿದ್ದಾರೆ.ರಾಜಸ್ಥಾನ್ ಸ್ಕೋರ್ 5 ಓವರ್‌ಗಳ ನಂತರ 20/2. ಈ ಓವರ್‌ನಲ್ಲಿ ಶುಭಮನ್ ಗಿಲ್ ವಿಕೆಟ್ ಹಿಂದೆ ಕ್ಯಾಚ್ ಕೈಬಿಟ್ಟರು.

  • 16 Apr 2023 09:43 PM (IST)

    ಬಟ್ಲರ್ ಔಟ್

    ಮೂರನೇ ಓವರ್‌ನ 5ನೇ ಎಸೆತದಲ್ಲಿ ಮೊಹಮ್ಮದ್ ಶಮಿ ಜೋಸ್ ಬಟ್ಲರ್ ಅವರನ್ನು ಬೌಲ್ಡ್ ಮಾಡಿದರು. 3 ಓವರ್‌ಗಳ ನಂತರ ರಾಜಸ್ಥಾನ ಸ್ಕೋರ್ 4/2. ರಾಜಸ್ಥಾನ ಗೆಲ್ಲಲು ಇನ್ನೂ 174 ರನ್‌ಗಳ ಅಗತ್ಯವಿದೆ.

  • 16 Apr 2023 09:43 PM (IST)

    ಮೊದಲ ವಿಕೆಟ್ ಪತನ

    ನಾಯಕ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ 1 ರನ್ ಗಳಿಸಿ ಯಶಸ್ವಿ ಜೈಸ್ವಾಲ್ ಔಟಾದರು. 2 ಓವರ್‌ಗಳ ನಂತರ ರಾಜಸ್ಥಾನ ಸ್ಕೋರ್ 3/1

  • 16 Apr 2023 09:33 PM (IST)

    ರಾಜಸ್ಥಾನ್ ಬ್ಯಾಟಿಂಗ್ ಆರಂಭ

    ರಾಜಸ್ಥಾನದ ಆರಂಭಿಕ ಆಟಗಾರ ಜೋಸ್ ಬಟ್ಲರ್ 0 ಮತ್ತು ಯಶ್ವಿ ಜೈಸ್ವಾಲ್ 1 ರನ್‌ಗಳೊಂದಿಗೆ ಆಡುತ್ತಿದ್ದಾರೆ. 1 ಓವರ್ ನಂತರ ರಾಜಸ್ಥಾನ ಸ್ಕೋರ್ 1/0. ಗುಜರಾತ್ ಟೈಟಾನ್ಸ್ 178 ರನ್ ಟಾರ್ಗೆಟ್ ನೀಡಿದೆ.

  • 16 Apr 2023 09:10 PM (IST)

    177 ರನ್ ಟಾರ್ಗೆಟ್

    20ನೇ ಓವರ್​ನಲ್ಲಿ 2 ಬೌಂಡರಿ ಬಾರಿಸಿದ ಮಿಲ್ಲರ್, ಆ ನಂತರದ ಎಸೆತದಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿ ಕ್ಯಾಚಿತ್ತು ಔಟಾದರು. ಆ ನಂತರ ಬಂದ ರಶೀದ್ ಖಾನ್ ಕೂಡ ರನೌಟ್ ಆದರು. ಅಂತಿಮವಾಗಿ ಗುಜರಾತ್ 7 ವಿಕೆಟ್ ಕಳೆದುಕೊಂಡು 177 ರನ್ ಕಲೆಹಾಕಿದೆ.

  • 16 Apr 2023 09:05 PM (IST)

    ಮನೋಹರ್ ಸಿಕ್ಸರ್, ಔಟ್

    ಝಂಪಾ ಎಸೆದ 19ನೇ ಓವರ್​ನಲ್ಲಿ ಮಿಲ್ಲರ್ 1 ಬೌಂಡರಿ ಬಾರಿಸಿದರೆ, ಕನ್ನಡಿಗ ಮನೋಹರ್ ಭರ್ಜರಿ ಸಿಕ್ಸರ್ ಬಾರಿಸಿದರು. ಆದರೆ ಕೊನೆಯ ಎಸೆತದಲ್ಲಿ ಕ್ಯಾಚಿತ್ತು ಔಟಾದರು.

  • 16 Apr 2023 08:57 PM (IST)

    ಮನೋಹರ್ ಎರಡು ಸಿಕ್ಸರ್

    18ನೇ ಓವರ್​ನ ಮೂರು ಮತ್ತು ನಾಲ್ಕನೇ ಎಸೆತವನ್ನು ಕನ್ನಡಿಗ ಮನೋಹರ್ ಎರಡು ಸಿಕ್ಸರ್ ಬಾರಿಸಿದರು. ಇದರೊಂದಿಗೆ ಗುಜರಾತ್ 150 ರನ್ ಕೂಡ ಪೂರ್ಣಗೊಂಡಿದೆ.

  • 16 Apr 2023 08:45 PM (IST)

    ಗಿಲ್ ಔಟ್

    ಸಂದೀಪ್ ಶರ್ಮಾ ಎಸೆದ 16ನೇ ಓವರ್​ನ 2ನೇ ಎಸೆತದಲ್ಲಿ ಗಿಲ್ ಲಾಂಗ್​ ಆಫ್​ನಲ್ಲಿ ಕ್ಯಾಚಿತ್ತು ಔಟಾದರು.

  • 16 Apr 2023 08:38 PM (IST)

    4 ಓವರ್​ಗಳ ನಂತರ ಸಿಕ್ಸರ್

    ಕೊನೆಯದಾಗಿ 10ನೇ ಓವರ್​ನಲ್ಲಿ ಬೌಂಡರಿ ಬಾರಿಸಿದ್ದ ಗುಜರಾತ್ ಇದೀಗ 15ನೇ ಓವರ್​ನ 4ನೇ ಎಸೆತದಲ್ಲಿ ಸಿಕ್ಸರ್ ಕಂಡಿದೆ.

  • 16 Apr 2023 08:29 PM (IST)

    ಶತಕ ಪೂರ್ಣ

    12ನೇ ಓವರ್​ನ ಕೊನೆಯ ಎಸೆತದಲ್ಲಿ ಡಬಲ್ ಕದಿಯುವುದರೊಂದಿಗೆ ಮಿಲ್ಲರ್, ಗುಜರಾತ್ ತಂಡದ ಸ್ಕೋರ್ ಅನ್ನು ಶತಕ ದಾಟಿಸಿದ್ದಾರೆ.

  • 16 Apr 2023 08:27 PM (IST)

    ಪಾಂಡ್ಯ ಔಟ್

    11ನೇ ಓವರ್ ಎಸೆಯಲು ಬಂದ ಚಹಲ್, ಗುಜರಾತ್ ನಾಯಕ ಪಾಂಡ್ಯರನ್ನು ಔಟ್ ಮಾಡಿದ್ದಾರೆ. ಕವರ್ರ್ಸ್​ನಲ್ಲಿ ಜೈಸ್ವಾಲ್ ಕ್ಯಾಚ್ ತೆಗೆದುಕೊಂಡರು.

  • 16 Apr 2023 08:19 PM (IST)

    ಅರ್ಧಶತಕದ ಜೊತೆಯಾಟ

    ಗುಜರಾತ್ ಇನ್ನಿಂಗ್ಸ್​ನ 10 ಓವರ್​ ಮುಗಿದಿದೆ. ಈ ಓವರ್​ನಲ್ಲಿ ಬೌಂಡರಿ ಬಾರಿಸಿದ ಪಾಂಡ್ಯ, ಗಿಲ್ ಜೊತೆಗೆ ಅರ್ಧಶತಕದ ಜೊತೆಯಾಟವನ್ನು ಪೂರೈಸಿದರು.

  • 16 Apr 2023 08:09 PM (IST)

    ಗಿಲ್ ಅಬ್ಬರ

    8ನೇ ಓವರ್​ನಲ್ಲಿ ಗಿಲ್ ಅಬ್ಬರಿಸಿದರು. ಅಶ್ವಿನ್ ಎಸೆದ ಈ ಓವರ್​ನಲ್ಲಿ ಗಿಲ್ 2 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿದರು. ಈ ಓವರ್​ನಿಂದ 18 ರನ್ ಬಂದವು.

  • 16 Apr 2023 08:08 PM (IST)

    ಪಾಂಡ್ಯ ಸಿಕ್ಸರ್

    ಸುದರ್ಶನ್ ವಿಕೆಟ್ ಬಳಿಕ ಬಂದ ಪಾಂಡ್ಯ 7ನೇ ಓವರ್​ನ ಮೊದಲ ಎಸೆತವನ್ನು ಸಿಕ್ಸರ್ಗಟ್ಟಿದರೆ, 2ನೇ ಎಸೆತದಲ್ಲಿ ಬೌಂಡರಿ ಬಾರಿಸಿದರು.

  • 16 Apr 2023 08:08 PM (IST)

    ಪವರ್ ಪ್ಲೇ ಅಂತ್ಯ

    6ನೇ ಓವರ್​ನ ಮೊದಲ ಎಸೆತವನ್ನು ಸ್ಕ್ವೇರ್​ ಲೆಗ್​ನಲ್ಲಿ ಬೌಂಡರಿಗಟ್ಟಿದ ಗಿಲ್, 6ನೇ ಎಸೆತವನ್ನು ಮಿಡ್ ಆಫ್​ನಲ್ಲಿ ಬೌಂಡರಿ ಬಾರಿಸಿದರು.

  • 16 Apr 2023 08:06 PM (IST)

    ಸುದರ್ಶನ್ ರನ್ ಔಟ್

    ಸಾಯಿ ಸುದರ್ಶನ್ ರನ್ ಔಟ್ ಆಗಿದ್ದಾರೆ. ಗುಜರಾತ್ ಟೈಟಾನ್ಸ್ 2ನೇ ವಿಕೆಟ್ ಪತನವಾಯಿತು. ರಾಜಸ್ಥಾನದ ಅದ್ಭುತ ಫೀಲ್ಡಿಂಗ್. ಸುದರ್ಶನ್ 20 ರನ್ ಗಳಿಸಿ ಪೆವಿಲಿಯನ್​ಗೆ ಮರಳಿದರು.

  • 16 Apr 2023 07:56 PM (IST)

    4 ಓವರ್‌ ಅಂತ್ಯ

    ಗುಜರಾತ್ ಪರ ಸಾಯಿ ಸುದರ್ಶನ್ 16 ರನ್ ಹಾಗೂ ಶುಭಮನ್ ಗಿಲ್ 5 ರನ್ ಗಳಿಸಿ ಆಡುತ್ತಿದ್ದಾರೆ. 4 ಓವರ್‌ಗಳ ನಂತರ ಗುಜರಾತ್ ಸ್ಕೋರ್ 27/1

  • 16 Apr 2023 07:45 PM (IST)

    ಸುದರ್ಶನ್ ಬೌಂಡರಿ

    2ನೇ ಓವರ್​ನಲ್ಲಿ ಸುದರ್ಶನ್ ಫೋರ್ ಬಾರಿಸಿದರು. ಸದ್ಯ ಕ್ರೀಸ್‌ನಲ್ಲಿ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಇದ್ದಾರೆ.

  • 16 Apr 2023 07:43 PM (IST)

    ಸಹಾ ಔಟ್

    ಮೊದಲ ಓವರ್‌ನಲ್ಲಿಯೇ ಗುಜರಾತ್ ಟೈಟಾನ್ಸ್‌ಗೆ ದೊಡ್ಡ ಪೆಟ್ಟು ಬಿದ್ದಿತು. ಬೋಲ್ಟ್​ ಎಸೆದ ಮೊದಲ ಓವರ್​ನ ಮೂರನೇ ಎಸೆತದಲ್ಲಿ ಸಹಾ ಕ್ಯಾಚ್ ನೀಡಿದರು. ಸಂಜು ಸ್ಯಾಮ್ಸನ್, ಹೆಟ್ಮೆಯರ್ ಮತ್ತು ಜುರೆಲ್ ಈ ಕ್ಯಾಚ್ ಹಿಡಿಯಲು ಮುಂದಾದರು. ಮೂವರೂ ಪ್ರಯತ್ನಿಸಿದರು, ಚೆಂಡು ಸ್ಯಾಮ್ಸನ್ ಅವರ ಕೈಗವಸುಗಳನ್ನು ತಾಗಿ ಬೋಲ್ಟ್ ಕೈಗೆ ಹೋಯಿತು.

  • 16 Apr 2023 07:19 PM (IST)

    ರಾಜಸ್ಥಾನ್ ರಾಯಲ್ಸ್

    ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ಆರ್ ಅಶ್ವಿನ್, ಟ್ರೆಂಟ್ ಬೌಲ್ಟ್, ಆಡಮ್ ಝಂಪಾ, ಸಂದೀಪ್ ಶರ್ಮಾ ಮತ್ತು ಯುಜ್ವೇಂದ್ರ ಚಹಾಲ್

  • 16 Apr 2023 07:18 PM (IST)

    ಗುಜರಾತ್ ಟೈಟಾನ್ಸ್‌

    ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ, ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ

  • 16 Apr 2023 07:07 PM (IST)

    ಟಾಸ್ ಗೆದ್ದ ರಾಜಸ್ಥಾನ್

    ಟಾಸ್ ಗೆದ್ದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

Published On - Apr 16,2023 7:05 PM

Follow Us
ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿತ್ತು 10 ಟನ್ ಕೆಮಿಕಲ್ ಮಿಶ್ರಿತ ಅಡಿಕೆ
ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿತ್ತು 10 ಟನ್ ಕೆಮಿಕಲ್ ಮಿಶ್ರಿತ ಅಡಿಕೆ
ರವಿ ಸಿಂಹ ರಾಶಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ರವಿ ಸಿಂಹ ರಾಶಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಮಲ್ಲತ್ತಹಳ್ಳಿಯಲ್ಲಿ ರಸ್ತೆಗೆ ಉರುಳಿದ ಬೃಹತ್ ಮರ
ಮಲ್ಲತ್ತಹಳ್ಳಿಯಲ್ಲಿ ರಸ್ತೆಗೆ ಉರುಳಿದ ಬೃಹತ್ ಮರ
ಚೆನ್ನೈನಲ್ಲಿ 12,000 ಶಂಖಗಳಿಂದ ಸಿದ್ಧವಾಯ್ತು ಗಣೇಶನ ಮೂರ್ತಿ!
ಚೆನ್ನೈನಲ್ಲಿ 12,000 ಶಂಖಗಳಿಂದ ಸಿದ್ಧವಾಯ್ತು ಗಣೇಶನ ಮೂರ್ತಿ!
ಪಂಚಾಯ್ತಿ ಎಲೆಕ್ಷನ್ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಡಿಸಿಎಂ ಪರಮೇಶ್ವರ್
ಪಂಚಾಯ್ತಿ ಎಲೆಕ್ಷನ್ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಡಿಸಿಎಂ ಪರಮೇಶ್ವರ್
ಜಾರಕಿಹೊಳಿ ಮೇಲೆ ಇಡಿ ದಾಳಿ:‘ಕೈ’ ಮನೆಯೊಳಗೆ ಷಡ್ಯಂತ್ರದ ಮಾತಿನ ಸದ್ದು
ಜಾರಕಿಹೊಳಿ ಮೇಲೆ ಇಡಿ ದಾಳಿ:‘ಕೈ’ ಮನೆಯೊಳಗೆ ಷಡ್ಯಂತ್ರದ ಮಾತಿನ ಸದ್ದು
ಅಂಬಾನಿ ಮನೆಯಲ್ಲಿ ಅದ್ದೂರಿ ಗಣೇಶೋತ್ಸವ; ರಾಧಿಕಾ ಮರ್ಚೆಂಟ್​ ನೃತ್ಯ
ಅಂಬಾನಿ ಮನೆಯಲ್ಲಿ ಅದ್ದೂರಿ ಗಣೇಶೋತ್ಸವ; ರಾಧಿಕಾ ಮರ್ಚೆಂಟ್​ ನೃತ್ಯ
ಬೆಂಗಳೂರಿನಲ್ಲಿ ಅಬ್ಬರಿಸಿದ ಮಳೆರಾಯ: ರಸ್ತೆಗಳೆಲ್ಲಾ ಜಲಾವೃತ!
ಬೆಂಗಳೂರಿನಲ್ಲಿ ಅಬ್ಬರಿಸಿದ ಮಳೆರಾಯ: ರಸ್ತೆಗಳೆಲ್ಲಾ ಜಲಾವೃತ!
ಕೊಪ್ಪಳ ಹಾಸ್ಟೆಲ್​​ಗೆ ಬಂದು ತಿಗಣಿಗೆ ಮದ್ದು ನೀಡಿದ ಚೆನ್ನೈ ತಜ್ಞರು
ಕೊಪ್ಪಳ ಹಾಸ್ಟೆಲ್​​ಗೆ ಬಂದು ತಿಗಣಿಗೆ ಮದ್ದು ನೀಡಿದ ಚೆನ್ನೈ ತಜ್ಞರು
ಬಿಗ್​​ಬಾಸ್​​ ಮನೆಯಿಂದ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ಓಂ ಪ್ರಕಾಶ್ ರಾವ್
ಬಿಗ್​​ಬಾಸ್​​ ಮನೆಯಿಂದ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ಓಂ ಪ್ರಕಾಶ್ ರಾವ್