ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ನಿಂದ ಪಾಕ್ ಔಟ್! ಫೈನಲ್ಗೇರಲು ಭಾರತ ಇನ್ನೇಷ್ಟು ಪಂದ್ಯಗಳನ್ನು ಗೆಲ್ಲಬೇಕು?
ICC World Test Championship: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23ರ ವೇಳಾಪಟ್ಟಿಯಡಿಯಲ್ಲಿ ಭಾರತ ಇನ್ನೂ 6 ಟೆಸ್ಟ್‌ಗಳನ್ನು ಆಡಬೇಕಾಗಿದೆ. ಈ 6 ಟೆಸ್ಟ್ ಪಂದ್ಯಗಳಲ್ಲಿ ಭಾರತ ಕನಿಷ್ಠ ಪಕ್ಷ 5 ಟೆಸ್ಟ್ ಪಂದ್ಯಗಳನ್ನಾದರು ಗೆಲ್ಲಬೇಕಿದೆ.
ಮೊದಲು ರಾವಲ್ಪಿಂಡಿಯಲ್ಲಿ ಸೋಲು, ನಂತರ ಮುಲ್ತಾನ್ ಟೆಸ್ಟ್ನಲ್ಲೂ ಸೋಲು..ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಕಳೆದುಕೊಂಡಿರುವ ಪಾಕಿಸ್ತಾನ ((England defeated Pakistan)) ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ನಿಂದ ಹೊರಬಿದ್ದಿದೆ. ಹೌದು, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಸೋತ ಬಳಿಕ ಇದೀಗ ಬಾಬರ್ ಅಜಮ್ (Babar Azam) ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಿಂದ (World Test Championship) ಹೊರಗುಳಿದಿದೆ. ಇಂಗ್ಲೆಂಡ್ ಕೂಡ ಈ ರೇಸ್‌ನಿಂದ ಹೊರಗುಳಿದಿದ್ದು, ಪ್ರಶಸ್ತಿ ಸಮರಕ್ಕೆ ಕೇವಲ ನಾಲ್ಕು ತಂಡಗಳು ಮಾತ್ರ ಸ್ಪರ್ಧಿಗಳಾಗಿವೆ. ಈ ನಾಲ್ಕು ತಂಡಗಳಲ್ಲಿ ಟೀಂ ಇಂಡಿಯಾ ಕೂಡ ಒಂದಾಗಿದೆ. ಇದಲ್ಲದೇ ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ತಂಡಗಳಿಗೂ ಫೈನಲ್ ತಲುಪುವ ಅವಕಾಶ ಹೊಂದಿವೆ.
ಟೀಂ ಇಂಡಿಯಾದ ಬಗ್ಗೆ ಮಾತನಾಡುವುದಾದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡುವುದು ಭಾರತಕ್ಕೆ ಸುಲಭದ ದಾರಿಯಾಗಿಲ್ಲ. ಈ ನಾಲ್ಕು ತಂಡಗಳಲ್ಲಿ ಆಸ್ಟ್ರೇಲಿಯಾ ಮಾತ್ರ ಫೈನಲ್‌ಗೆ ತಲುಪುವುದು ಖಚಿತವಾಗಿದೆ. ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಭಾರತ ಎರಡನೇ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿವೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ತಲುಪಲು ಈ ತಂಡಗಳು ಏನು ಮಾಡಬೇಕು ಎಂಬುದರ ಪೂರ್ಣ ವಿವರ ಹೀಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಗ್ರ 4 ತಂಡಗಳು
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನ ರೇಸ್‌ನಲ್ಲಿ, ಆಸ್ಟ್ರೇಲಿಯಾ ಮೊದಲ, ದಕ್ಷಿಣ ಆಫ್ರಿಕಾ ಎರಡನೇ, ಶ್ರೀಲಂಕಾ ಮೂರನೇ ಮತ್ತು ಭಾರತ ನಾಲ್ಕನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಮಾತ್ರ 60 PCT(%) ಕ್ಕಿಂತ ಹೆಚ್ಚು ಅಂಕಗಳನ್ನು ಹೊಂದಿವೆ. ಆದರೆ ಶ್ರೀಲಂಕಾ ಮತ್ತು ಭಾರತವು 60 PCT (%) ನಿಂದ ದೂರದಲ್ಲಿವೆ. ಆದರೆ ಭಾರತ ಮತ್ತು ಶ್ರೀಲಂಕಾ ಎರಡೂ ತಂಡಗಳಿಗೂ ಫೈನಲ್ ತಲುಪುವ ಅವಕಾಶವಿದೆ. ಆದರೆ ಇದಕ್ಕಾಗಿ ಉಭಯ ತಂಡಗಳು ಇನ್ನಿಲ್ಲದ ಕಸರತ್ತು ನಡೆಸಬೇಕಿದೆ.
ದಾಖಲೆಯ ದ್ವಿಶತಕ, ತಂಡದಲ್ಲಿ ಸಂಚಲನ; ದುರಂತ ಅಂತ್ಯದತ್ತ ಟೀಂ ಇಂಡಿಯಾ ಆರಂಭಿಕನ ವೃತ್ತಿ ಬದುಕು!
ಭಾರತ ಹೇಗೆ ಫೈನಲ್ ತಲುಪಬಹುದಾಗಿದೆ?
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23ರ ವೇಳಾಪಟ್ಟಿಯಡಿಯಲ್ಲಿ ಭಾರತ ಇನ್ನೂ 6 ಟೆಸ್ಟ್‌ಗಳನ್ನು ಆಡಬೇಕಾಗಿದೆ. ಈ 6 ಟೆಸ್ಟ್ ಪಂದ್ಯಗಳಲ್ಲಿ ಭಾರತ ಕನಿಷ್ಠ ಪಕ್ಷ 5 ಟೆಸ್ಟ್ ಪಂದ್ಯಗಳನ್ನಾದರು ಗೆಲ್ಲಬೇಕಿದೆ. ಇದಕ್ಕಾಗಿ ಭಾರತ, ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್ ಪಂದ್ಯಗಳ ಸರಣಿ ಮತ್ತು ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಬೇಕಿದೆ.
ಶ್ರೀಲಂಕಾಗೆ ಇನ್ನೂ 2 ಪಂದ್ಯಗಳು ಬಾಕಿ ಉಳಿದಿದ್ದು, ನ್ಯೂಜಿಲೆಂಡ್ ವಿರುದ್ಧ ಈ ಟೆಸ್ಟ್ ಸರಣಿಯನ್ನು ಆಡಬೇಕಿದೆ. ಈ ಎರಡು ಟೆಸ್ಟ್ ಪಂದ್ಯಗಳಿಗಾಗಿ ನ್ಯೂಜಿಲೆಂಡ್ ಪ್ರವಾಸ ಮಾಡಲ್ಲಿರುವ ಶ್ರೀಲಂಕಾ ಅಲ್ಲಿ ಎರಡೂ ಟೆಸ್ಟ್‌ಗಳನ್ನು ಗೆಲ್ಲಬೇಕು. ಆಗ ಮಾತ್ರ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ತಲುಪಲು ಸಾಧ್ಯವಾಗುತ್ತದೆ.
ಆಸ್ಟ್ರೇಲಿಯ ತಂಡಕ್ಕೆ ಇನ್ನು 7 ಟೆಸ್ಟ್ ಪಂದ್ಯಗಳು ಬಾಕಿ ಉಳಿದಿದ್ದು, ಫೈನಲ್ ತಲುಪಲು 2 ಗೆಲುವು ಮತ್ತು ಡ್ರಾ ಅಗತ್ಯವಿದೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ವಿರುದ್ಧ 3 ಟೆಸ್ಟ್ ಹಾಗೂ ಭಾರತ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ.
ಮತ್ತೊಂದೆಡೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡಬೇಕೆಂದರೆ ದಕ್ಷಿಣ ಆಫ್ರಿಕಾ ಉಳಿದಿರುವ 5 ಟೆಸ್ಟ್‌ಗಳಲ್ಲಿ 3 ಟೆಸ್ಟ್ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಈ ಟೆಸ್ಟ್ ಸರಣಿಗಳನ್ನು ಆಡಬೇಕಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:27 pm, Mon, 12 December 22