AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2024: ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಐಸಿಸಿ; ಈ ದಿನದಂದು ಭಾರತ- ಪಾಕ್ ಫೈಟ್

T20 World Cup 2024: ಬಾಂಗ್ಲಾದೇಶದ ಬದಲಿಗೆ ಯುಎಇಯಲ್ಲಿ ನಡೆಯಲ್ಲಿರುವ ಮಹಿಳಾ ಟಿ20 ವಿಶ್ವಕಪ್​ನ ಹೊಸ ವೇಳಾಪಟ್ಟಿಯನ್ನು ಬಿಸಿಸಿಐ ಇಂದು ಬಿಡುಗಡೆಗೊಳಿಸಿದೆ. ಈ ಪಂದ್ಯಾವಳಿಗೆ ಯುಎಇಯ ದುಬೈ ಮತ್ತು ಶಾರ್ಜಾದ ಎರಡು ಕ್ರೀಡಾಂಗಣಗಳು ಆತಿಥ್ಯವಹಿಸಲಿದ್ದು, ಅಕ್ಟೋಬರ್ 3 ರಿಂದ 20 ರವರೆಗೆ ನಡೆಯಲಿದೆ. ಹೊಸ ವೇಳಾಪಟ್ಟಿಯ ಪ್ರಕಾರ ಟೂರ್ನಿಯ ಉದ್ಘಾಟನಾ ಪಂದ್ಯ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ತಂಡಗಳ ನಡುವೆ ನಡೆಯಲಿದೆ

T20 World Cup 2024: ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಐಸಿಸಿ; ಈ ದಿನದಂದು ಭಾರತ- ಪಾಕ್ ಫೈಟ್
ಮಹಿಳಾ ಟಿ20 ವಿಶ್ವಕಪ್
ಪೃಥ್ವಿಶಂಕರ
|

Updated on:Aug 26, 2024 | 9:56 PM

Share

ಬಾಂಗ್ಲಾದೇಶದ ಬದಲಿಗೆ ಯುಎಇಯಲ್ಲಿ ನಡೆಯಲ್ಲಿರುವ ಮಹಿಳಾ ಟಿ20 ವಿಶ್ವಕಪ್​ನ ಹೊಸ ವೇಳಾಪಟ್ಟಿಯನ್ನು ಬಿಸಿಸಿಐ ಇಂದು ಬಿಡುಗಡೆಗೊಳಿಸಿದೆ. ಈ ಪಂದ್ಯಾವಳಿಗೆ ಯುಎಇಯ ದುಬೈ ಮತ್ತು ಶಾರ್ಜಾದ ಎರಡು ಕ್ರೀಡಾಂಗಣಗಳು ಆತಿಥ್ಯವಹಿಸಲಿದ್ದು, ಅಕ್ಟೋಬರ್ 3 ರಿಂದ 20 ರವರೆಗೆ ನಡೆಯಲಿದೆ. ಹೊಸ ವೇಳಾಪಟ್ಟಿಯ ಪ್ರಕಾರ ಟೂರ್ನಿಯ ಉದ್ಘಾಟನಾ ಪಂದ್ಯ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ತಂಡಗಳ ನಡುವೆ ನಡೆಯಲಿದೆ. ಪಂದ್ಯಾವಳಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿದ್ದು, ಎಲ್ಲಾ ತಂಡಗಳು ತಲಾ 4 ಗುಂಪು ಪಂದ್ಯಗಳನ್ನು ಆಡಲಿವೆ. ಅದರಂತೆ ಟೂರ್ನಿಯಲ್ಲಿ ಒಟ್ಟು 23 ಪಂದ್ಯಗಳು ನಡೆಯಲಿವೆ.

ಟೂರ್ನಿಯಲ್ಲಿ ಭಾಗವಹಿಸುವ 10 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಎ ಗುಂಪಿನಲ್ಲಿ ಆಸ್ಟ್ರೇಲಿಯಾ, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳಿದ್ದರೆ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ತಂಡಗಳು ಬಿ ಗುಂಪಿನಲ್ಲಿವೆ. ಟೂರ್ನಿಯ ಸೆಮಿಫೈನಲ್ ಪಂದ್ಯಗಳು ಅಕ್ಟೋಬರ್ 17 ಮತ್ತು 18 ರಂದು ನಡೆದರೆ, ಫೈನಲ್ ಪಂದ್ಯವು ಅಕ್ಟೋಬರ್ 20 ರಂದು ದುಬೈನಲ್ಲಿ ನಡೆಯಲಿದೆ.

ಈ ದಿನದಂದು ಭಾರತ-ಪಾಕಿಸ್ತಾನ ಫೈಟ್

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿವೆ. ಆದ್ದರಿಂದ ಗುಂಪು ಹಂತದಲ್ಲಿ ಎರಡು ತಂಡಗಳ ನಡುವೆ ಪೈಪೋಟಿ ಏರ್ಪಡಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಪಂದ್ಯ ಅಕ್ಟೋಬರ್ 3 ರಂದು ಭಾರತೀಯ ಕಾಲಮಾನ ಮಧ್ಯಾಹ್ನ 3.30 ಕ್ಕೆ ನಡೆಯಲಿದೆ. ಎರಡೂ ತಂಡಗಳು ದುಬೈನಲ್ಲಿ ಮುಖಾಮುಖಿಯಾಗಲಿವೆ. ಇತ್ತೀಚೆಗಷ್ಟೇ ಏಷ್ಯಾಕಪ್‌ನಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದವು, ಇಲ್ಲಿ ಟೀಂ ಇಂಡಿಯಾ ಸುಲಭ ಜಯ ಸಾಧಿಸಿತ್ತು.

ದಿನಾಂಕ

ಮುಖಾಮುಖಿ

ಸ್ಥಳ

ಸಮಯ

ಅಕ್ಟೋಬರ್ 3 ಬಾಂಗ್ಲಾದೇಶ vs ಸ್ಕಾಟ್ಲೆಂಡ್ ಶಾರ್ಜಾ ಮಧ್ಯಾಹ್ನ 2 ಗಂಟೆಗೆ
ಅಕ್ಟೋಬರ್ 3 ಪಾಕಿಸ್ತಾನ vs ಶ್ರೀಲಂಕಾ ಶಾರ್ಜಾ ಸಂಜೆ 6 ಗಂಟೆಗೆ
ಅಕ್ಟೋಬರ್ 4 ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ ದುಬೈ, ಮಧ್ಯಾಹ್ನ 2 ಗಂಟೆಗೆ
ಅಕ್ಟೋಬರ್ 4 ಭಾರತ vs ನ್ಯೂಜಿಲೆಂಡ್ ದುಬೈ ಸಂಜೆ 6 ಗಂಟೆಗೆ
ಅಕ್ಟೋಬರ್ 5 ಬಾಂಗ್ಲಾದೇಶ vs ಇಂಗ್ಲೆಂಡ್ ಶಾರ್ಜಾ ಮಧ್ಯಾಹ್ನ 2 ಗಂಟೆಗೆ
ಅಕ್ಟೋಬರ್ 5 ಆಸ್ಟ್ರೇಲಿಯಾ vs ಶ್ರೀಲಂಕಾ ಶಾರ್ಜಾ ಸಂಜೆ 6 ಗಂಟೆಗೆ
ಅಕ್ಟೋಬರ್ 6 ಭಾರತ vs ಪಾಕಿಸ್ತಾನ ದುಬೈ ಮಧ್ಯಾಹ್ನ 2 ಗಂಟೆಗೆ
ಅಕ್ಟೋಬರ್ 6 ವೆಸ್ಟ್ ಇಂಡೀಸ್ vs ಸ್ಕಾಟ್ಲೆಂಡ್ ದುಬೈ ಸಂಜೆ 6 ಗಂಟೆಗೆ
ಅಕ್ಟೋಬರ್ 7 ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ ಶಾರ್ಜಾ ಸಂಜೆ 6 ಗಂಟೆಗೆ
ಅಕ್ಟೋಬರ್ 8 ಆಸ್ಟ್ರೇಲಿಯಾ vs ನ್ಯೂಜಿಲೆಂಡ್ ಶಾರ್ಜಾ ಸಂಜೆ 6 ಗಂಟೆಗೆ
ಅಕ್ಟೋಬರ್ 9 ದಕ್ಷಿಣ ಆಫ್ರಿಕಾ vs ಸ್ಕಾಟ್ಲೆಂಡ್ ದುಬೈ ಮಧ್ಯಾಹ್ನ 2 ಗಂಟೆಗೆ
ಅಕ್ಟೋಬರ್ 9 ಭಾರತ vs ಶ್ರೀಲಂಕಾ ದುಬೈ ಸಂಜೆ 6 ಗಂಟೆಗೆ
ಅಕ್ಟೋಬರ್ 10 ಬಾಂಗ್ಲಾದೇಶ vs ವೆಸ್ಟ್ ಇಂಡೀಸ್ ಶಾರ್ಜಾ ಸಂಜೆ 6 ಗಂಟೆಗೆ
ಅಕ್ಟೋಬರ್ 11 ಆಸ್ಟ್ರೇಲಿಯಾ vs ಪಾಕಿಸ್ತಾನ ದುಬೈ ಸಂಜೆ 6 ಗಂಟೆಗೆ
ಅಕ್ಟೋಬರ್ 12 ನ್ಯೂಜಿಲೆಂಡ್ vs ಶ್ರೀಲಂಕಾ ಶಾರ್ಜಾ ಮಧ್ಯಾಹ್ನ 2 ಗಂಟೆಗೆ
ಅಕ್ಟೋಬರ್ 12 ಬಾಂಗ್ಲಾದೇಶ vs ದಕ್ಷಿಣ ಆಫ್ರಿಕಾ ದುಬೈ ಸಂಜೆ 6 ಗಂಟೆಗೆ
ಅಕ್ಟೋಬರ್ 13 ಇಂಗ್ಲೆಂಡ್ vs ಸ್ಕಾಟ್ಲೆಂಡ್ ಶಾರ್ಜಾ ಮಧ್ಯಾಹ್ನ 2 ಗಂಟೆಗೆ
ಅಕ್ಟೋಬರ್ 13 ಭಾರತ vs ಆಸ್ಟ್ರೇಲಿಯಾ ಶಾರ್ಜಾ ಸಂಜೆ 6 ಗಂಟೆಗೆ
ಅಕ್ಟೋಬರ್ 14 ಪಾಕಿಸ್ತಾನ vs ನ್ಯೂಜಿಲೆಂಡ್ ದುಬೈ ಸಂಜೆ 6 ಗಂಟೆಗೆ
ಅಕ್ಟೋಬರ್ 15 ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ದುಬೈ ಸಂಜೆ 6 ಗಂಟೆಗೆ
ಅಕ್ಟೋಬರ್ 17 ಸೆಮಿಫೈನಲ್ 1 ದುಬೈ ಸಂಜೆ 6 ಗಂಟೆಗೆ
ಅಕ್ಟೋಬರ್ 18 ಸೆಮಿಫೈನಲ್ 2 ಶಾರ್ಜಾ ಸಂಜೆ 6 ಗಂಟೆಗೆ
20 ಅಕ್ಟೋಬರ್ ಫೈನಲ್ ದುಬೈ ಸಂಜೆ 6 ಗಂಟೆಗೆ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:39 pm, Mon, 26 August 24

Follow Us
'ತಮಿಳುನಾಡಿಗೆ ಇನ್ನೂ ನೀರು ಹರಿಸಿಲ್ಲ': ಡಿಕೆ ಶಿವಕುಮಾರ್
'ತಮಿಳುನಾಡಿಗೆ ಇನ್ನೂ ನೀರು ಹರಿಸಿಲ್ಲ': ಡಿಕೆ ಶಿವಕುಮಾರ್
ಮೋದಿ ಭೇಟಿ ಹಿನ್ನೆಲೆ ಮೈಸೂರಿನಲ್ಲಿ ಬಿಗಿ ಬಂದೋಬಸ್ತ್: ಭದ್ರತೆ ಹೇಗಿದೆ ನೋಡಿ
ಮೋದಿ ಭೇಟಿ ಹಿನ್ನೆಲೆ ಮೈಸೂರಿನಲ್ಲಿ ಬಿಗಿ ಬಂದೋಬಸ್ತ್: ಭದ್ರತೆ ಹೇಗಿದೆ ನೋಡಿ
ಎಲ್ಲರೂ ಸೇರಿದ್ರೆ ಸಿನಿಮಾ, ನಿರ್ದೇಶಕರಿಗೆ ಹಲವು ಆಯ್ಕೆ ಇರುತ್ತೆ; ಗುರುದತ್
ಎಲ್ಲರೂ ಸೇರಿದ್ರೆ ಸಿನಿಮಾ, ನಿರ್ದೇಶಕರಿಗೆ ಹಲವು ಆಯ್ಕೆ ಇರುತ್ತೆ; ಗುರುದತ್
ರವಿ ಕರ್ಕಾಟಕ, ಚಂದ್ರ ಕುಂಭರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ರವಿ ಕರ್ಕಾಟಕ, ಚಂದ್ರ ಕುಂಭರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಪರಪ್ಪನ ಅಗ್ರಹಾರ ಜೈಲಿನಿಂದ ನಗುನಗುತ್ತಲೇ ಹೊರ ಬಂದ ವಿನಯ್ ಕುಲಕರ್ಣಿ
ಪರಪ್ಪನ ಅಗ್ರಹಾರ ಜೈಲಿನಿಂದ ನಗುನಗುತ್ತಲೇ ಹೊರ ಬಂದ ವಿನಯ್ ಕುಲಕರ್ಣಿ
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ
ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ
ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ