IND vs ENG: ಆಂಗ್ಲರಿಗೆ ನಿದ್ದೆಯಲ್ಲೂ ಕಾಡುವ ಸೋಲಿನಿಂದಿಗೆ ಓವಲ್​ನಲ್ಲಿ ಭಾರತ ಮಾಡಿದ 10 ದಾಖಲೆಗಳಿವು

IND vs ENG: ಓವಲ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್‌ಗಳಿಂದ ಅದ್ಭುತ ಜಯ ದಾಖಲಿಸಿದೆ. ಇದರೊಂದಿಗೆ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಅತಿ ದೊಡ್ಡ ಗೆಲುವಿನ ದಾಖಲೆಯನ್ನೂ ಮಾಡಿದೆ.

IND vs ENG: ಆಂಗ್ಲರಿಗೆ ನಿದ್ದೆಯಲ್ಲೂ ಕಾಡುವ ಸೋಲಿನಿಂದಿಗೆ ಓವಲ್​ನಲ್ಲಿ ಭಾರತ ಮಾಡಿದ 10 ದಾಖಲೆಗಳಿವು
ಇದಕ್ಕೆ ಉತ್ತರವಾಗಿ ಭಾರತದ ಆರಂಭಿಕರಾದ ರೋಹಿತ್ ಶರ್ಮಾ-ಶಿಖರ್ ಧವನ್ 18.4 ಓವರ್‌ಗಳಲ್ಲಿ 114 ರನ್ ಗಳಿಸಿ ಟೀಂ ಇಂಡಿಯಾಗೆ ಜಯ ತಂದುಕೊಟ್ಟರು. ರೋಹಿತ್ ಶರ್ಮಾ 58 ಎಸೆತಗಳಲ್ಲಿ 76 ರನ್ ಮತ್ತು ಶಿಖರ್ ಧವನ್ 54 ಎಸೆತಗಳಲ್ಲಿ 31 ರನ್ ಗಳಿಸಿದರು.
Follow us
TV9 Web
| Updated By: ಪೃಥ್ವಿಶಂಕರ

Updated on:Jul 13, 2022 | 3:49 PM

ರೋಹಿತ್ ಶರ್ಮಾ (Rohit Sharma) ಟೀಂ ಇಂಡಿಯಾದ ಪೂರ್ಣಾವಧಿ ನಾಯಕರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಮೈದಾನದಲ್ಲಿ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ. ಸತತ ಟಿ20 ಗೆಲುವಿನ ದಾಖಲೆ ಈಗಾಗಲೇ ನಾಯಕ ರೋಹಿತ್ ಹೆಸರಿನಲ್ಲಿದೆ. ಇದೀಗ ಏಕದಿನ ಕ್ರಿಕೆಟ್‌ನಲ್ಲೂ ಆರಂಭವಾಗಿದೆ. ಮಂಗಳವಾರ, ಜುಲೈ 12 ರಂದು ಓವಲ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್‌ಗಳಿಂದ ಅದ್ಭುತ ಜಯ ದಾಖಲಿಸಿದೆ. ಇದರೊಂದಿಗೆ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಅತಿ ದೊಡ್ಡ ಗೆಲುವಿನ ದಾಖಲೆಯನ್ನೂ ಮಾಡಿದೆ. ಜಸ್ಪ್ರೀತ್ ಬುಮ್ರಾ ಅವರಿಂದ ನಾಯಕ ರೋಹಿತ್ ಶರ್ಮಾವರೆಗೆ (Jasprit Bumrah to captain Rohit Sharma), ತಂಡದ ಈ ಯಶಸ್ಸಿನಲ್ಲಿ ದೊಡ್ಡ ಕೊಡುಗೆ ಇದೆ, ಅವರು ಸ್ವತಃ ಕೆಲವು ವೈಯಕ್ತಿಕ ಸಾಧನೆಗಳನ್ನು ಮಾಡಿದ್ದಾರೆ. ಅಂತಹ ಕೆಲವು ದಾಖಲೆಗಳು ಮತ್ತು ಅಂಕಿಅಂಶಗಳನ್ನು ನೋಡೋಣ-

ಓವಲ್‌ನಲ್ಲಿ ಟೀಂ ಇಂಡಿಯಾ ದಾಖಲೆಯ ಪ್ರದರ್ಶನ

  1. ಮೊದಲ ಏಕದಿನ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳಿಂದ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿದೆ. ಇದು ಇಂಗ್ಲೆಂಡ್ ವಿರುದ್ಧದ ಭಾರತದ ODI ಇತಿಹಾಸದಲ್ಲಿ (ವಿಕೆಟ್‌ಗಳ ವಿಷಯದಲ್ಲಿ) ಅತಿ ದೊಡ್ಡ ಗೆಲುವಾಗಿದೆ. ಇದೇ ಮೊದಲ ಬಾರಿಗೆ ಭಾರತ 10 ವಿಕೆಟ್‌ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿದೆ.
  2. ಇದು ವಿಕೆಟ್‌ಗಳ ವಿಷಯದಲ್ಲಿ ಮಾತ್ರವಲ್ಲ, ಉಳಿದಿರುವ ಚೆಂಡುಗಳ ವಿಷಯದಲ್ಲಿಯೂ ದೊಡ್ಡ ಗೆಲುವು. ತಂಡವು ಕೇವಲ 18.4 ಓವರ್‌ಗಳಲ್ಲಿ ಅಂದರೆ 112 ಎಸೆತಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿತು. ಈ ಮೂಲಕ ಭಾರತ 188 ಎಸೆತಗಳು ಬಾಕಿ ಇರುವಾಗಲೇ ಪಂದ್ಯ ಮುಗಿಸಿದ್ದು, ಇಂಗ್ಲೆಂಡ್ ವಿರುದ್ಧದ ಅತಿ ದೊಡ್ಡ ಗೆಲುವಾಗಿದೆ.
  3. ಇದನ್ನೂ ಓದಿ
    Image
    CWG 2022: ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಪದಕಕ್ಕಾಗಿ ಸೆಣಸಾಡಲಿದ್ದಾರೆ ಭಾರತದ ಈ 215 ಕ್ರೀಡಾಪಟುಗಳು
    Image
    ‘ನನಗೆ ಟೆನಿಸ್ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ’; ನಿವೃತ್ತಿಯ ಮುನ್ಸೂಚನೆ ನೀಡಿದ ಟೆನಿಸ್ ಸ್ಟಾರ್ ರೋಜರ್ ಫೆಡರರ್!
  4. ಭಾರತವು ಇಂಗ್ಲೆಂಡ್ ಅನ್ನು 110 ರನ್‌ಗಳಿಗೆ ಆಲೌಟ್ ಮಾಡಿತು. ಇದು ಭಾರತ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್‌ನ ಅತ್ಯಂತ ಕಡಿಮೆ ಸ್ಕೋರ್ ಆಗಿದೆ. ಇದಕ್ಕೂ ಮೊದಲು 125 ರನ್ ಗಳಿಸಿದ್ದು ಕಡಿಮೆ ಸ್ಕೋರ್ ಆಗಿತ್ತು.
  5. ಟೀಂ ಇಂಡಿಯಾ ಕೇವಲ 25.2 ಓವರ್‌ಗಳಲ್ಲಿ ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡಿತು. ನಂತರ 18.4 ಓವರ್‌ಗಳಲ್ಲಿ ಗುರಿ ತಲುಪಿತು. ಅಂದರೆ, ಒಟ್ಟು 44 ಓವರ್‌ಗಳಲ್ಲಿ ಆಟ ಮುಗಿದಿದೆ. ನಿಗದಿತ 100 ಓವರ್‌ಗಳ ಪಂದ್ಯದಲ್ಲಿ, ಮೊದಲ ಬಾರಿಗೆ, ಭಾರತವು ಇಡೀ ಪಂದ್ಯವನ್ನು ಕೆಲವೇ ಓವರ್‌ಗಳಲ್ಲಿ ಮುಗಿಸಿತು.
  6. ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾ ಗೆಲುವಿಗೆ ಅಡಿಪಾಯ ಹಾಕಿದರು. ಭಾರತದ ಸ್ಟಾರ್ ವೇಗಿ 7.2 ಓವರ್‌ಗಳಲ್ಲಿ ಕೇವಲ 19 ರನ್ ನೀಡಿ 6 ವಿಕೆಟ್ ಪಡೆದರು. ಇದು ಇಂಗ್ಲೆಂಡ್ ವಿರುದ್ಧ ಯಾವುದೇ ಭಾರತೀಯ ಬೌಲರ್‌ನ ಅತ್ಯುತ್ತಮ ಪ್ರದರ್ಶನವಾಗಿದೆ. ಇದರೊಂದಿಗೆ ಬುಮ್ರಾ, ಆಶಿಶ್ ನೆಹ್ರಾ (6/23) ಅವರ 2003 ರ ವಿಶ್ವಕಪ್ ದಾಖಲೆಯನ್ನು ಮುರಿದರು.
  7. ಅಷ್ಟೇ ಅಲ್ಲ, ಇಂಗ್ಲೆಂಡ್‌ನಲ್ಲಿ ಭಾರತದ ಪರ ಇನ್ನಿಂಗ್ಸ್‌ವೊಂದರಲ್ಲಿ 6 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೂ ಬುಮ್ರಾ ಪಾತ್ರರಾಗಿದ್ದಾರೆ.
  8. ಈ ಪಂದ್ಯದಲ್ಲಿ ಮೊಹಮ್ಮದ್ ಶಮಿ ಕೂಡ 3 ವಿಕೆಟ್ ಪಡೆದರು ಮತ್ತು ಇದರೊಂದಿಗೆ ಅವರು 150 ಏಕದಿನ ವಿಕೆಟ್‌ಗಳನ್ನು ಪಡೆದ ಭಾರತೀಯ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಶಮಿ, ಕೇವಲ 80 ಪಂದ್ಯಗಳಲ್ಲಿ ಈ ಸಾಧನೆ ಮಾಡಿದರು ಮತ್ತು ಮಿಚೆಲ್ ಸ್ಟಾರ್ಕ್ ಮತ್ತು ರಶೀದ್ ಖಾನ್ ನಂತರ ಜಂಟಿ ಮೂರನೇ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಇದುವರೆಗೆ ಭಾರತದ ಪರ ಈ ದಾಖಲೆ ಅಜಿತ್ ಅಗರ್ಕರ್ (97 ಪಂದ್ಯಗಳು) ಹೆಸರಿನಲ್ಲಿತ್ತು.
  9. ಈ ಪಂದ್ಯದಲ್ಲಿ ಮತ್ತೊಮ್ಮೆ ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಶತಕದ ಜೊತೆಯಾಟವಾಡಿದರು. ಇದು ಇಬ್ಬರ ನಡುವಿನ 18ನೇ ಜೊತೆಯಾಟವಾಗಿದ್ದು, ಈ ಜೋಡಿ ರೋಹಿತ್ ಮತ್ತು ವಿರಾಟ್ ಕೊಹ್ಲಿ ಜೋಡಿ ಮಾಡಿದ್ದ ದಾಖಲೆಯನ್ನು ಸರಿಗಟ್ಟಿತು.
  10. ಇಂಗ್ಲೆಂಡ್‌ನಲ್ಲಿ ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿದೇಶಿ ಆಟಗಾರ ಎಂಬ ದಾಖಲೆಯಲ್ಲಿ ರೋಹಿತ್ ಶರ್ಮಾ ಅಗ್ರಸ್ಥಾನಕ್ಕೇರಿದ್ದಾರೆ. ರೋಹಿತ್ 76 ರನ್‌ಗಳ ಇನ್ನಿಂಗ್ಸ್‌ನೊಂದಿಗೆ 1411 ರನ್‌ಗಳನ್ನು ಬಾರಿಸಿದ್ದಾರೆ. ಜೊತೆಗೆ ಈ ಮೂಲಕ ರೋಹಿತ್, ಕೇನ್ ವಿಲಿಯಮ್ಸನ್ (1393) ಅವರನ್ನು ಹಿಂದಿಕ್ಕಿದ್ದಾರೆ.
  11. ಇಷ್ಟೇ ಅಲ್ಲ, ರೋಹಿತ್ ಶರ್ಮಾ ತನ್ನ ಇನ್ನಿಂಗ್ಸ್‌ನಲ್ಲಿ 5 ಸಿಕ್ಸರ್‌ಗಳನ್ನು ಹೊಡೆದರು. ಈ ಮೂಲಕ ODI ಕ್ರಿಕೆಟ್‌ನಲ್ಲಿ ಅವರ 250 ಸಿಕ್ಸರ್‌ಗಳನ್ನು ಪೂರೈಸಿದರು. ಜೊತೆಗೆ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ಬ್ಯಾಟ್ಸ್‌ಮನ್ ಮತ್ತು ಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾದರು.

Published On - 2:32 pm, Wed, 13 July 22