IND vs SA: ಭಾರತ ವಿರುದ್ದ ಸರಣಿಯಿಂದ ದಕ್ಷಿಣ ಆಫ್ರಿಕಾ ಸ್ಟಾರ್ ಆಟಗಾರ ಔಟ್..!
India vs South Africa: ಈ ವರ್ಷ ಅನ್ರಿಕ್ ನೋಕಿಯಾ ಅತ್ಯುತ್ತಮ ಪ್ರದರ್ಶನ ನೀಡಿದ್ದರು. 2021ರಲ್ಲಿ ಐದು ಟೆಸ್ಟ್ ಪಂದ್ಯಗಳನ್ನಾಡಿರುವ ನೋಕಿಯಾ 20.76 ಸರಾಸರಿಯಲ್ಲಿ 25 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

ಭಾರತ ವಿರುದ್ಧದ (India vs South Africa) ಮೂರು ಪಂದ್ಯಗಳ ಟೆಸ್ಟ್ ಸರಣಿಯಿಂದ ದಕ್ಷಿಣ ಆಫ್ರಿಕಾ ವೇಗದ ಬೌಲರ್ ಅನ್ರಿಕ್ ನೋಕಿಯಾ ಹೊರಗುಳಿದಿದ್ದಾರೆ. ಗಾಯದಿಂದ ಬಳಲುತ್ತಿರುವ ಕಾರಣ 3 ಪಂದ್ಯಗಳ ಸರಣಿಯಿಂದ ಅನ್ರಿಕ್ ಹೊರುಗಳಿಯಲು ನಿರ್ಧರಿಸಿದ್ದಾರೆ ಎಂದು ಕ್ರಿಕೆಟ್ ಸೌತ್ ಆಫ್ರಿಕಾ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಭಾರತ-ದಕ್ಷಿಣ ಆಫ್ರಿಕಾ ನಡುವಣ ಟೆಸ್ಟ್ ಸರಣಿಯು ಡಿಸೆಂಬರ್ 26 ರಿಂದ ಶುರುವಾಗಲಿದ್ದು, ಪಂದ್ಯ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ನೋಕಿಯಾ ಹೊರಗುಳಿದಿರುವುದು ಆತೀಥೆಯರಿಗೆ ಹಿನ್ನಡೆಯುಂಟು ಮಾಡಲಿದೆ.
ಕಳೆದ ಕೆಲ ವರ್ಷಗಳಿಂದ ದಕ್ಷಿಣ ಆಫ್ರಿಕಾ ತಂಡದ ಖಾಯಂ ಸದಸ್ಯರಾಗಿರುವ ಅನ್ರಿಕ್ ನೋಕಿಯಾ, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ ಜತೆಗೂಡಿ ಪ್ರೋಟಿಯಸ್ ತಂಡಕ್ಕೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು. ಅದರಲ್ಲೂ 150 ಕಿಲೋಮೀಟರ್ ವೇಗದಲ್ಲಿ ನಿರಂತರವಾಗಿ ಚೆಂಡನ್ನು ಎಸೆಯುವ ಸಾಮರ್ಥ್ಯವನ್ನು ಹೊಂದಿರುವ ನೋಕಿಯಾ ಟೀಮ್ ಇಂಡಿಯಾ ಪಾಲಿಗೆ ಕಂಟಕವಾಗಲಿದ್ದಾರೆ ಎನ್ನಲಾಗಿತ್ತು. ಆದರೀಗ ದಕ್ಷಿಣ ಆಫ್ರಿಕಾ ತಂಡದಿಂದ ಪ್ರಮುಖ ವೇಗಿ ಹೊರಗುಳಿದಿರುವುದು ಭಾರತದ ಬ್ಯಾಟರ್ಗಳಿಗೆ ವರದಾನವಾಗಲಿದೆ.
ಏಕೆಂದರೆ ಈ ವರ್ಷ ಅನ್ರಿಕ್ ನೋಕಿಯಾ ಅತ್ಯುತ್ತಮ ಪ್ರದರ್ಶನ ನೀಡಿದ್ದರು. 2021ರಲ್ಲಿ ಐದು ಟೆಸ್ಟ್ ಪಂದ್ಯಗಳನ್ನಾಡಿರುವ ನೋಕಿಯಾ 20.76 ಸರಾಸರಿಯಲ್ಲಿ 25 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಈ ವೇಳೆ ಎರಡು ಬಾರಿ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ. 28ರ ಹರೆಯದ ನೋಕಿಯಾ ಇದುವರೆಗೆ 12 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ ಈವರೆಗೆ 47 ವಿಕೆಟ್ ಪಡೆದಿದ್ದಾರೆ. ಅಂದಹಾಗೆ 2019 ರಲ್ಲಿ ಅನ್ರಿಕ್ ನೋಕಿಯಾ ಭಾರತ ವಿರುದ್ಧ ಪುಣೆ ಟೆಸ್ಟ್‌ನಲ್ಲಿ ಪಾದಾರ್ಪಣೆ ಮಾಡಿದರು. ಇದೀಗ ಟೀಮ್ ಇಂಡಿಯಾ ವಿರುದ್ದ ತವರಿನಲ್ಲಿ ಬೌಲಿಂಗ್ ಸಾಮರ್ಥ್ಯವನ್ನು ತೋರಿಸುವ ಅವಕಾಶ ನೋಕಿಯಾ ಕೈತಪ್ಪಿದೆ.
ದಕ್ಷಿಣ ಆಫ್ರಿಕಾ ಮತ್ತು ಭಾರತ ಕ್ರಿಕೆಟ್ ಸರಣಿ ವೇಳಾಪಟ್ಟಿ ಹೀಗಿದೆ:
ಟೆಸ್ಟ್ ಸರಣಿ: ಮೊದಲ ಟೆಸ್ಟ್ ಪಂದ್ಯ- ಡಿಸೆಂಬರ್. 26-30: ಸೂಪರ್ ಸ್ಪೋರ್ಟ್ ಪಾರ್ಕ್, ಸೆಂಚೂರಿಯನ್ 2ನೇ ಟೆಸ್ಟ್ ಪಂದ್ಯ- ಜನವರಿ 3-7: ವಾಂಡರರ್ಸ್, ಜೋಹಾನ್ಸ್ಬರ್ಗ್ 3ನೇ ಟೆಸ್ಟ್ ಪಂದ್ಯ- ಜನವರಿ 11-15: ನ್ಯೂಲ್ಯಾಂಡ್ಸ್, ಕೇಪ್ ಟೌನ್
ಏಕದಿನ ಸರಣಿ: ಮೊದಲ ಪಂದ್ಯ- ಜನವರಿ 19: ಬೋಲ್ಯಾಂಡ್ ಪಾರ್ಕ್, ಪಾರ್ಲ್ 2ನೇ ಪಂದ್ಯ ಜನವರಿ 21: ಬೋಲ್ಯಾಂಡ್ ಪಾರ್ಕ್, ಪಾರ್ಲ್ 3ನೇ ಪಂದ್ಯ ಜನವರಿ 23: ನ್ಯೂಲೆಂಡ್ಸ್, ಕೇಪ್ ಟೌನ್
ಭಾರತದ ಟೆಸ್ಟ್ ತಂಡ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್.ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಪ್ರಿಯಾಂಕ್ ಪಾಂಚಾಲ್
ಇದನ್ನೂ ಓದಿ: PKL 2021: ಪ್ರೋ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್ ತಂಡದ ಸಂಪೂರ್ಣ ವೇಳಾಪಟ್ಟಿ ಹೀಗಿದೆ
ಇದನ್ನೂ ಓದಿ: IPL 2022: ಬರೋಬ್ಬರಿ 13 ನಾಯಕರನ್ನು ಬದಲಿಸಿದ ಐಪಿಎಲ್ ತಂಡ ಯಾವುದು ಗೊತ್ತಾ?
ಇದನ್ನೂ ಓದಿ: India vs south africa: ಟೀಮ್ ಇಂಡಿಯಾದಲ್ಲಿ ದ್ರಾವಿಡ್ ಇರುವುದೇ ದಕ್ಷಿಣ ಆಫ್ರಿಕಾದ ದೊಡ್ಡ ಚಿಂತೆ
(IND vs SA anrich nortje ruled out india south africa test series)
