AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: ನೀವು ಹೀಗೆ ಮಾಡಿದ್ರೆ ನನಗೆ ಹೃದಯಾಘಾತ ಆಗುತ್ತೆ: ಟೀಮ್ ಇಂಡಿಯಾ ಬೌಲರುಗಳಿಗೆ ಎಚ್ಚರಿಕೆ ನೀಡಿದ ಅಂಪೈರ್

India vs South Africa: ದಕ್ಷಿಣ ಆಫ್ರಿಕಾದ ಎರಡನೇ ಇನ್ನಿಂಗ್ಸ್‌ನ 10 ನೇ ಓವರ್‌ನಲ್ಲಿ ಶಾರ್ದೂಲ್ ಠಾಕೂರ್ ಒಂದೇ ಓವರ್‌ನಲ್ಲಿ ಎರಡು ಬಾರಿ ಸತತವಾಗಿ ಮನವಿ ಮಾಡಿದರು.

IND vs SA: ನೀವು ಹೀಗೆ ಮಾಡಿದ್ರೆ ನನಗೆ ಹೃದಯಾಘಾತ ಆಗುತ್ತೆ: ಟೀಮ್ ಇಂಡಿಯಾ ಬೌಲರುಗಳಿಗೆ ಎಚ್ಚರಿಕೆ ನೀಡಿದ ಅಂಪೈರ್
IND vs SA
TV9 Web
| Edited By: |

Updated on: Jan 06, 2022 | 5:23 PM

Share

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್​​ ಸರಣಿಯ ಎರಡನೇ ಪಂದ್ಯದ ಮೂರನೇ ದಿನ ಹಲವು ರೋಚಕ ಘಟನೆಗಳಿಗೆ ಸಾಕ್ಷಿಯಾಗಿತ್ತು. ಒಂದೆಡೆ ರಸ್ಸಿ ವಂಡೆರ್ ಡುಸ್ಸೆನ್ ರಿಷಭ್ ಪಂತ್ ಅವರನ್ನು ಕೆಣಕಿ ಮುನ್ನುಗ್ಗಿ ಹೊಡೆಯಲು ಪ್ರೇರೇಪಿಸಿ ವಿಕೆಟ್ ಪಡೆದರೆ, ಔಟಾದ ಬಳಿಕ ಪಂತ್ ತಪ್ಪಿ ದಕ್ಷಿಣ ಆಫ್ರಿಕಾ ಡ್ರೆಸಿಂಗ್ ರೂಮ್​ಗೆ ತೆರಳಿದ್ದರು. ಹಾಗೆಯೇ ಮಾರ್ಕೊ ಜಾನ್ಸೆನ್ ಹಾಗೂ ಜಸ್​ಪ್ರೀತ್ ಬುಮ್ರಾ ನಡುವೆ ಮೈದಾನದಲ್ಲೇ ವಾಗ್ವಾದ ಕೂಡ ನಡೆಯಿತು. ಇನ್ನೊಂದೆಡೆ 2ನೇ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ 240 ರನ್​ಗಳ ಟಾರ್ಗೆಟ್ ನೀಡಿ ವಿಕೆಟ್​ಗಾಗಿ ಹರಸಾಹಸ ನಡೆಸಿದರು. ಈ ವೇಳೆ ಟೀಮ್ ಇಂಡಿಯಾ ಬೌಲರುಗಳ ಸತತ ಪ್ರಯತ್ನದಿಂದ ಇಕ್ಕಟಿಗೆ ಸಿಲುಕಿದ್ದು ಫೀಲ್ಡ್​ ಅಂಪೈರ್ ಎಂಬುದು ವಿಶೇಷ.

ಏಕೆಂದರೆ ಮೈದಾನದಲ್ಲಿ ಆಟಗಾರರ ಸ್ಲೆಡ್ಜಿಂಗ್ ಹಾಗೂ ಕಾಲೆಳೆಯುವಿಕೆಯನ್ನು ನಿಯಂತ್ರಿಸುವುದು ಅಂಪೈರ್​ಗೆ ಹೊಸ ಸವಾಲಾಗಿ ಮಾರ್ಪಟ್ಟಿತ್ತು. ಅದರಲ್ಲೂ ಕೆಲವೊಮ್ಮೆ ಬೌಲರ್‌ಗಳು ಅಂಪೈರ್ ಮೇಲೆ ಒತ್ತಡ ಹೇರುತ್ತಿರುವುದು ಕೂಡ ಕಂಡು ಬಂತು. ನಿರಂತರವಾಗಿ ಅಪೀಲ್ ಸಲ್ಲಿಸುವ ಮೂಲಕ ವಿಕೆಟ್​ಗಾಗಿ ಟೀಮ್ ಇಂಡಿಯಾ ಬೌಲರುಗಳು ಮನವಿ ಮಾಡಿದ್ದರು. ಒಂದಷ್ಟು ಹೊತ್ತು ಸಹಿಸಿಕೊಂಡ ಅಂಪೈರ್ ಮರಿಯಾಸ್ ಎರಾಸ್ಮಸ್ ಆ ಬಳಿಕ ಅಸಮಾಧಾನ ಹೊರಹಾಕಿದರು.

ದಕ್ಷಿಣ ಆಫ್ರಿಕಾದ ಎರಡನೇ ಇನ್ನಿಂಗ್ಸ್‌ನ 10 ನೇ ಓವರ್‌ನಲ್ಲಿ ಶಾರ್ದೂಲ್ ಠಾಕೂರ್ ಒಂದೇ ಓವರ್‌ನಲ್ಲಿ ಎರಡು ಬಾರಿ ಸತತವಾಗಿ ಮನವಿ ಮಾಡಿದರು. ಓವರ್‌ನ ನಂತರ, ಆಟಗಾರರು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿರುವಾಗ, ಎರಾಸ್ಮಸ್ ಸ್ಟಂಪ್ ಮೈಕ್‌ನಲ್ಲಿ, ‘ನೀವು ಪ್ರತಿ ಓವರ್‌ನಲ್ಲೂ ನನಗೆ ಹೃದಯಾಘಾತವನ್ನು ನೀಡುತ್ತಿದ್ದೀರಿ’ ಎಂದು ಹೇಳಿದ್ದಾರೆ. ಅಂಪೈರ್ ಹೇಳಿದ ಈ ಮಾತು ಸ್ಟಂಪ್ ಮೈಕ್​ನಲ್ಲಿ ಸ್ಪಷ್ಟವಾಗಿ ರೆಕಾರ್ಡ್ ಆಗಿದೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 202 ರನ್​ಗಳಿಸಿದರೆ, 2ನೇ ಇನಿಂಗ್ಸ್​ನಲ್ಲಿ 266 ರನ್​ ಕಲೆಹಾಕಿತು. ಇತ್ತ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್​ನಲ್ಲಿ 229 ರನ್ ಬಾರಿಸಿ ಮುನ್ನಡೆ ಸಾಧಿಸಿತ್ತು. ಇದೀಗ 240 ರನ್​ಗಳ ಟಾರ್ಗೆಟ್​ನೊಂದಿಗೆ 2ನೇ ಇನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾ 2 ವಿಕೆಟ್ ನಷ್ಟಕ್ಕೆ 118 ರನ್​ಗಳಿಸಿದೆ. ದಕ್ಷಿಣ ಆಫ್ರಿಕಾಗೆ ಗೆಲ್ಲಲು ಇನ್ನೂ 122 ರನ್​ಗಳ ಅವಶ್ಯಕತೆಯಿದೆ. ಅತ್ತ ಟೀಮ್ ಇಂಡಿಯಾ 8 ವಿಕೆಟ್ ಕಬಳಿಸಿದರೆ ಜಯ ತನ್ನದಾಗಿಸಿಕೊಳ್ಳಬಹುದು.

ಇದನ್ನೂ ಓದಿ:  Virat Kohli: ವಿರಾಟ್ ಕೊಹ್ಲಿಯ ಗಾಯ, ರಾಹುಲ್ ದ್ರಾವಿಡ್ ಹೇಳಿಕೆ ಮತ್ತು 100ನೇ ಟೆಸ್ಟ್​..!

ಇದನ್ನೂ ಓದಿ:  Sachin Tendulkar: ಆಲ್‌ ಟೈಮ್ ಬೆಸ್ಟ್‌ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: Rohit Sharma: ಫಿಟ್​ನೆಸ್​ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(IND vs SA: Marais Erasmus said ‘you guys are giving me a bloody heart-attack’)

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್